AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ಕೊಡುಗೆಗಳು ಅಂತಿಮವಲ್ಲ ಎಂದ ಬರಗೂರು ರಾಮಚಂದ್ರಪ್ಪ; ಏನಿದರ ಮರ್ಮ?

ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಿರುವ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದು, ಇದು ತಾತ್ಕಾಲಿಕವಾಗಿರಬೇಕು ಎಂದು ಹೇಳಿದ್ದಾರೆ.

ಉಚಿತ ಕೊಡುಗೆಗಳು ಅಂತಿಮವಲ್ಲ ಎಂದ ಬರಗೂರು ರಾಮಚಂದ್ರಪ್ಪ; ಏನಿದರ ಮರ್ಮ?
ಬರಗೂರು ರಾಮಚಂದ್ರಪ್ಪ
Ganapathi Sharma
|

Updated on: May 04, 2023 | 6:49 PM

Share

ಬೆಂಗಳೂರು: ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಿರುವ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪ (Baraguru Ramachandrappa) ಪ್ರತಿಕ್ರಿಯಿಸಿದ್ದು, ಇದು ತಾತ್ಕಾಲಿಕವಾಗಿರಬೇಕು ಎಂದು ಹೇಳಿದ್ದಾರೆ. ಉಚಿತ ಕೊಡುಗೆಗಳು ಅನುಚಿತವಲ್ಲ, ಹಾಗೆಂದು ಅವುಗಳೇ ಅಂತಿಮ ಆಗಬಾರದು. ಜನರು ತಮ್ಮ ಅನ್ನವನ್ನು ತಾವೇ ಪಡೆದುಕೊಳ್ಳುವಂತಹ ಸ್ವಾವಲಂಬಿ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಗ್ಯಾರಂಟಿಗಳು, ಬಿಜೆಪಿಯ ಉಚಿತ ಸಿಲಿಂಡರ್, ಹಾಲು ಭರವಸೆ ಇತ್ಯಾದಿಗಳು ವ್ಯಾಪಕ ಚರ್ಚೆಗೀಡಾಗುತ್ತಿರುವ ಸಂದರ್ಭದಲ್ಲಿ ಆ ಕುರಿತು ಬರಗೂರು ರಾಮಚಂದ್ರಪ್ಪ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿವಿಧ ಪಕ್ಷ ಹಾಗೂ ಸರ್ಕಾರಗಳು ಜನರಿಗೆ ಉಚಿತ ಕೊಡುಗೆಗಳನ್ನು ನೀಡುವ ಕುರಿತು ರಾಜ್ಯ ಮತ್ತು ದೇಶದಲ್ಲಿ ಚರ್ಚೆಯಾಗುತ್ತಿದೆ. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವುದಾಗಿ ವಾದಿಸಲಾಗುತ್ತಿದೆ. ಸ್ವತಃ ಪ್ರಧಾನಿಯವರೇ ಈ ವಾದವನ್ನು ಮಂಡಿಸಿದ್ದರೂ ರಾಜ್ಯ ಬಿಜೆಪಿಯು ಉಚಿತ ಕೊಡುಗೆಗಳ ಭರವಸೆ ನೀಡಿರುವುದು ದ್ವಂದ್ವ ನೀತಿಯಾಗಿದ್ದರೆ, ಕಾಂಗ್ರೆಸ್‌ ಪಕ್ಷವಂತೂ ಯಾವುದೇ ದ್ವಂದ್ವವಿಲ್ಲದೆ ಭರಪೂರ ಭರವಸೆಗಳನ್ನು ನೀಡಿದೆ. ಜನರಿಗೆ ಹೀಗೆ ಕೊಡುಗೆಗಳನ್ನು ನೀಡುವ ಪರಿಪಾಠವನ್ನು ಪುಕ್ಕಟೆ ಕೊಡುಗೆಯೆಂದೊ ಬಿಟ್ಟಿ ಭಾಗ್ಯವೆಂದೊ ಕರೆಯುವುದು ಜನರಿಗೆ ಮಾಡುವ ಅವಮಾನ. ಯಾಕೆಂದರೆ ಯಾವ ನೇತಾರರೂ ತಮ್ಮ ಜೇಬಿನಿಂದ ಈ ಕೊಡುಗೆಗಳಿಗಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಜನರೇ ಕೊಟ್ಟ ತೆರಿಗೆ ಹಣವನ್ನು ಕೊಡುಗೆಗಳ ಮೂಲಕ ಬಡವರಿಗೆ ವಾಪಸ್‌ ಕೊಡುತ್ತಾರೆ. ಇದು ಕೆರೆಯ ನೀರನು ಕೆರೆಗೆ ಚೆಲ್ಲುವ ಕೊಡುಗೆ. ಬಡವರಿಗೆ ಕೊಡುವ ಕೊಡುಗೆಗಳನ್ನು ಬಿಟ್ಟಿ ಎನ್ನುವ ಬದಲು ಬಂಡವಾಳ ಶಾಹಿಗಳ ಲಕ್ಷಾಂತರ ರೂಪಾಯಿ ಸಾಲ ಮತ್ತು ತೆರಿಗೆ ಮನ್ನಾ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಬೇಕು ಎಂದು ರಾಮಚಂದ್ರಪ್ಪ ಹೇಳಿದ್ದಾರೆ.

ಉಚಿತ ಕೊಡುಗೆಗಳು ಈಗ ಮಾತ್ರ ಪ್ರಾರಂಭವಾಗಿಲ್ಲ. ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ವಿಧವಾ ಮಾಸಾಶನ, ವೃದ್ಧಾಪ್ಯ ಮಾಸಾಶನ, ಬಣ ಪರಿಹಾರ ಕಾಯಿದೆ ಮುಂತಾದ ‘ಕೊಡುಗೆ’ಗಳನ್ನು ನೀಡಿದ್ದರೂ ಆರ್ಥಿಕ ಶಕ್ತಿ ಕುಂದಿಲ್ಲವೆಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದರು. ತಮಿಳುನಾಡಿನಲ್ಲಿ ಸಾಕಷ್ಟು ಉಚಿತ ಕೊಡುಗೆಗಳು ಜಾರಿಯಾಗಿದ್ದರೂ ಆರ್ಥಿಕ ಹಿಂಜರಿತ ಆಗಿಲ್ಲ. ನಮ್ಮ ರಾಜ್ಯದ ಎಲ್ಲ ಪಕ್ಷಗಳ ಸರ್ಕಾರಗಳೂ ಉಚಿತ ಕೊಡುಗೆಗಳಿಗೆ ಹೊರತಾಗಿಲ್ಲ. ಕೇಂದ್ರ ಸರ್ಕಾರವು ರೈತರ ಖಾತೆಗೆ 6 ಸಾವಿರ ಹಣ ಹಾಕಿದ್ದು ಉಚಿತ ಕೊಡುಗೆಯೇ ಆಗಿದೆ ಆದರೆ ಕೇಂದ್ರವೇ ಉಚಿತ ಕೊಡುಗೆ ವಿರುದ್ಧ ವಾದಿಸುತ್ತಿರುವುದು ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಾವು ಹನುಮಂತನ ಭಕ್ತರು, ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಬಡಜನತೆಯ ಬದುಕಿಗೆ ಭದ್ರತೆ ಒದಗಿಸುವ ಯಾವುದೇ ಉಚಿತ ಕೊಡುಗೆಗಳು ಅನುಚಿತವಲ್ಲ. ಅಂತೆಯೇ ಉಚಿತ ಕೊಡುಗೆಗಳು ಅಂತಿಮವೂ ಅಲ್ಲ. ಉಚಿತ ಕೊಡುಗೆಗಳನ್ನು ತತ್ಕಾಲೀನ ಕ್ರಮಗಳೆಂದು ಪರಿಗಣಿಸಿ ಅಂತಿಮವಾಗಿ ಜನರು ತಮ್ಮ ಅನ್ನವನ್ನು ತಾವೇ ಪಡೆದುಕೊಳ್ಳುವಂತಹ ಸ್ವಾವಲಂಬಿ ಯೋಜನೆಗಳನ್ನು ರೂಪಿಸಬೇಕು. ದೂರಗಾಮಿ ಪರಿಣಾಮದ ಶಾಶ್ವತ ಯೋಜನೆಗಳು ಸಾಕಾರಗೊಳ್ಳುವವರೆಗೆ ಉಚಿತ ಕೊಡುಗೆಗಳು ಇರಬೇಕು. ಗ್ರಾಮೀಣ ಮತ್ತು ನಗರ ಆರ್ಥಿಕ ನೀತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ, ಗ್ರಾಮೀಣ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಕೃಷಿ, ಕೈಗಾರಿಕೆ, ಉದ್ಯೋಗಾವಕಾಶಗಳೇ ಮುಂತಾದ ಅಂಶಗಳ ಆರ್ಥಿಕ ನೀತಿ ರೂಪಿಸಬೇಕು. ಜನರ ಕೈಗೆ ಕೆಲಸ, ಹೊಟ್ಟೆಗೆ ಆಹಾರ ಕೊಡುವ ದೂರಗಾಮಿ ಆರ್ಥಿಕ ನೀತಿ ಜಾರಿಯಾಗಬೇಕು. ಅಲ್ಲೀವರೆಗೆ ಉಚಿತ ಕೊಡುಗೆಗಳು ಅನುಚಿತವಲ್ಲ, ಹಾಗೆಂದು ಅಂತಿಮವೂ ಅಲ್ಲ ಎಂದು ಅವರು ಹೇಳಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯ ಪರ ಬಹಿರಂಗವಾಗಿ ಹಲವು ಬಾರಿ ಅಭಿಪ್ರಾಯ ವ್ಯಕ್ತಪಡಿಸಿದ ಸಾಹಿತಿ, ಶಿಕ್ಷಣ ತಜ್ಞರಲ್ಲಿ ಬರಗೂರು ಕೂಡ ಒಬ್ಬರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!