AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕಾಡೆ ಮಲಗಿದ ಬಸವರಾಜ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರುಗಳು!

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಕೆಲವು ಸಚಿವರು ಹೀನಾಯ ಸೋಲು ಅನುಭವಿಸಿದ್ದಾರೆ.

ಮಕಾಡೆ ಮಲಗಿದ ಬಸವರಾಜ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರುಗಳು!
ರಮೇಶ್ ಬಿ. ಜವಳಗೇರಾ
|

Updated on:May 13, 2023 | 1:54 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಕಂಡಿದ್ದಾರೆ. ಬಿಜೆಪಿಯ ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ. ಹಾಗೂ ಸಚಿವರಾಗಿ ಅವರ ಕಾರ್ಯವೈಖರಿ ಬಗ್ಗೆ ಕೂಡ ಅಸಮಾಧಾನ ಇದ್ದಂತೆ ಈ ಫಲಿತಾಂಶವನ್ನು ವ್ಯಾಖ್ಯಾನಿಸಬಹುದು. 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ. ಹಾಗಾದ್ರೆ, ಸಚಿವರಲ್ಲಿ ಯಾರೆಲ್ಲ ಸೋತಿದ್ದಾರೆ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: Karnataka Election Results and Winner 2023 LIVE: ಸುದ್ದಿಗೋಷ್ಠಿಯಲ್ಲಿ ಗಳ ಗಳನೆ ಅತ್ತ ಡಿಕೆ ಶಿವಕುಮಾರ್​

ಗೋವಿಂದ್​ ಕಾರಜೋಳಗೆ ಸೋಲು

ಬಾಗಲಕೋಟೆ ಜಿಲ್ಲೆಯ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಮುಧೋಳದಲ್ಲಿ ಹಳೆ ಹುರಿಯಾಳುಗಳ ಕಾದಾಟದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಆರ್.ಬಿ ತಿಮ್ಮಾಪೂರ ಗೆಲುವು ಸಾಧಿಸಿದ್ದಾರೆ. ತಿಮ್ಮಾಪೂರ ಹಾಗೂ ಕಾರಜೋಳ ನಡುವೆ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್‌ಬಿ ತಿಮ್ಮಾಪೂರ ಅವರು 70,478 ಮತಗಳನ್ನು ಪಡೆದು, ಗೋವಿಂದ್ ಕಾರಜೋಳ ಅವರನ್ನು 16,396ಮತಗಳ ಅಂತರದಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಗೋವಿಂದ್ ಕಾರಜೋ:ಳ ಅವರು 54,082 ಮತಗಳನ್ನು ಪಡೆದಿದ್ದಾರೆ.

ಸೋತ  ಸಚಿವರು

  • ಡಾ ಕೆ ಸುಧಾಕರ್- ಚಿಕ್ಕಬಳ್ಳಾಪುರ
  • ಬಿ. ಶ್ರೀರಾಮುಲು-ಬಳ್ಳಾರಿ ಗ್ರಾಮಾಂತರ
  • ನಾರಾಯಣಗೌಡ-ಕೆಆರ್ ಪೇಟೆ
  • ಗೋವಿಂದ್ ಕಾರಜೋಳ- ಮುಧೋಳ್
  • ವಿ. ಸೋಮಣ್ಣ- ಚಾಮರಾಜನಗರ, ವರುಣಾ
  • ಮುರುಗೇಶ್ ನಿರಾಣಿ- ಬೀಳಗಿ
  • ಜೆಸಿ ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ
  • ಆರ್.ಅಶೋಕ್-ಕನಕಪುರ
  • ಬಿಸಿ ಪಾಟೀಲ್-ಹಿರೀಕೆರೂರು
  • ಎಂಟಿಬಿ ನಾಗರಾಜ್-ಹೊಸಕೋಟೆ
  • ಹಾಲಪ್ಪ ಆಚಾರ್-ಯಲಬುರ್ಗ

ಮತ ಎಣಿಕೆ ಕಾರ್ಯ ಇನ್ನು ಮುಂದುವರಿದಿದ್ದು, ಇನ್ನು ಯಾರೆಲ್ಲ ಗೆಲ್ಲಲಿದ್ದಾರೆ? ಯಾರೆಲ್ಲ ಸೋಲಲಿದ್ದಾರೆ ಎನ್ನುವ ಕ್ಷಣ ಕ್ಷಣದ ಮಾಹಿತಿ ನೋಡುತ್ತಿರಿ.

Published On - 1:30 pm, Sat, 13 May 23