ಸಿಎಂ ಆಯ್ಕೆ ಮಧ್ಯೆ ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ಧ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

|

Updated on: May 16, 2023 | 9:39 AM

ಕರ್ನಾಟಕದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಸರ್ಕಾರ ರಚನೆಗೆ ಸಿದ್ಧವಾಗಿದೆ. ಆದ್ರೆ, ಸಿಎಂ ಆಯ್ಕೆ ಕಗ್ಗಂಟು ಮುಂದುವರೆದಿದೆ. ಇನ್ನು ಇದರ ಮಧ್ಯೆ ನೂತನ ಸಚಿವ ಶಾರ್ಟ್ ಲಿಸ್ಟ್ ಸಿದ್ಧವಾಗಿದೆ.

ಸಿಎಂ ಆಯ್ಕೆ ಮಧ್ಯೆ ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ಧ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ
Follow us on

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿನ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಶುರುವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗಳಿಗೆ ಪರೇಡ್‌ ನಡೆಸಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ನೂತನ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕೆಲ ಸೂತ್ರಗಳನ್ನು ಸಿದ್ಧಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್‌ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದಿನ ‘ಅದಕ್ಷ ಸಚಿವ’ರಿಗೆ ಸ್ಥಾನವಿಲ್ಲ, ಯುವ ಶಾಸಕರಿಗೆ ಹೆಚ್ಚಿನ ಅವಕಾಶ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಂಪುಟ ರಚನೆ, ಪ್ರಣಾಳಿಕೆ ಸಮರ್ಥವಾಗಿ ಜಾರಿ ಮಾಡುವವರಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಹಾಗಾದ್ರೆ ಶಾರ್ಟ್​ ಲಿಸ್ಟ್​ನಲ್ಲಿ ಯಾರೆಲ್ಲ ಇದ್ದಾರೆ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ.

ಇದನ್ನೂ ಓದಿ: ಸಿಎಂ ಹುದ್ದೆ ತಿಕ್ಕಾಟ ನಡುವೆಯೇ ಸಚಿವ ಸ್ಥಾನಕ್ಕಾಗಿ ಭರ್ಜರಿ ಲಾಬಿ: ಹೊಸ ಸಿಎಂಗೆ ಸಂಪುಟ ರಚನೆ ದೊಡ್ಡ ಸವಾಲ್‌

ಸಂಭಾವ್ಯ ಸಚಿವರ ಪಟ್ಟಿ

  • ಬೆಳಗಾವಿ – ಲಕ್ಷ್ಮಣ್ ಸವಧಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ
  • ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
  • ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್
  • ಕಲಬುರಗಿ – ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್, ಶರಣ ಪ್ರಕಾಶ್ ಪಾಟೀಲ್
  • ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ
  • ಯಾದಗಿರಿ – ಶರಣಪ್ಪ ದರ್ಶನಾಪುರ್
  • ಬೀದರ್ – ರಹೀಮ್‌ ಖಾನ್, ಈಶ್ವರ್‌ ಖಂಡ್ರೆ
  • ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
  • ಗದಗ – ಹೆಚ್‌.ಕೆ. ಪಾಟೀಲ್
  • ಧಾರವಾಡ – ವಿನಯ್‌ ಕುಲಕರ್ಣಿ, ಪ್ರಸಾದ್‌ ಅಬ್ಬಯ್ಯ/ಸಂತೋಷ್ ಲಾಡ್
  • ಉತ್ತರ ಕನ್ನಡ – ಭೀಮಣ್ಣ ನಾಯಕ್
  • ಹಾವೇರಿ – ರುದ್ರಪ್ಪ ಲಮಾಣಿ
  • ಬಳ್ಳಾರಿ – ತುಕಾರಾಮ್‌, ನಾಗೇಂದ್ರ
  • ಚಿತ್ರದುರ್ಗ – ರಘುಮೂರ್ತಿ
  • ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್​ಎಸ್​ ಮಲ್ಲಿಕಾರ್ಜುನ
  • ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್
  • ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ
  • ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ
  • ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ
  • ಕೋಲಾರ- ರೂಪ ಶಶೀಧರ್​/ನಾರಾಯಣ ಸ್ವಾಮೀ
  • ಬೆಂಗಳೂರು- ಕೆಜೆ ಜಾರ್ಜ್​/ ರಾಮಲಿಂಗಾ ರೆಡ್ಡಿ, ಹ್ಯಾರಿಸ್​, ಎಂ. ಕೃಷ್ಣಪ್ಪ, ದಿನೇಶ್​ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
  • ಮಂಡ್ಯ- ಎನ್​​ ಚೆಲುವರಾಯ ಸ್ವಾಮಿ
  • ದೆಹಲಿ ವಿಶೇಷ ಪ್ರತಿನಿಥಿ: ಪಿ ಎಂ. ನರೇಂದ್ರ ಸ್ವಾಮಿ
  • ಮಂಗಳೂರು- ಯುಟಿ ಖಾದರ್
  • ಮೈಸೂರು-ಎಚ್​ಸಿ ಮಾಹದೇವಪ್ಪ/ ತನ್ವೀರ್​ ಸೇಠ್​
    ಚಾಮರಾಜನಗರ- ಪುಟ್ಟರಂಗಶೆಟ್ಟಿ
  • ಕೊಡಗು- ಎಎಸ್​ ಪೊನ್ನಣ್ಣ
  • ಬೆಂಗಳೂರು ಗ್ರಾಮಾಂತರ. ಕೆಚ್​​ ಮುನಿಯಪ್ಪ

ವಿಧಾನ ಪರಿಷತ್‌ನಿಂದ ಸಂಪುಟಕ್ಕೆ ಸಂಭಾವ್ಯ ಅಭ್ಯರ್ಥಿಗಳು

  • ಬಿ.ಕೆ. ಹರಿಪ್ರಸಾದ್
  • ಸಲೀಂ ಅಹಮದ್
  • ನಜೀರ್‌ ಅಹಮದ್
  • ಮಂಜುನಾಥ್‌ ಬಂಡಾರಿ
  • ದಿನೇಶ್‌ ಗೂಳಿಗೌಡ
  • ಎಸ್. ರವಿ

ಪ್ರದೇಶವಾರು, ಜಾತಿವಾರು, ಯುವಕರು, ಪಕ್ಷನಿಷ್ಠೆ, ಕಾರ್ಯದಕ್ಷತೆ, ವಯೋಮಾನವನ್ನು ಮಾನದಂಡವಾಗಿ ಪರಿಗಣಿಸಲಾಗಿದೆ. ಸಚಿವರಾಗಿ ನೇಮಕವಾಗುವವರು ಈ ಹಿಂದೆ ಬಿಜೆಪಿ ಸರ್ಕಾರದ ಸಚಿವರ ಬಳಿ ಕೆಲಸ ಮಾಡಿದ ಸಿಬ್ಬಂದಿ, ಆಪ್ತ ಕಾರ್ಯದರ್ಶಿಗಳನ್ನು ತಮ್ಮ ಕಚೇರಿಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಬೆಂಬಲಿಗ ಶಾಸಕರು ಎನ್ನುವುದನ್ನು ಬಿಟ್ಟು ಪಕ್ಷಕ್ಕೆ ಅನುಕೂಲವಾಗುವ, ಪಕ್ಷ ಸಂಘಟನೆಗೆ ಒತ್ತು ನೀಡುವವರಿಗೆ ಆದ್ಯತೆ ನೀಡಲಾಗುವುದು ಮತ್ತು ಹಿಂಬಾಲಕರಿಗೆ ಮಣೆ ಹಾಕುವುದು ಬೇಡ ಎಂದು ಹೈಕಮಾಂಡ್‌ ತೀರ್ಮಾನಿಸಿದೆ.

ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿರುವ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ಸೇರಲು ಅರ್ಹತೆ ಹಾಗೂ ಲಾಬಿ ನಡೆಸಲು ಸಜ್ಜಾಗಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರು. ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಪ್ರಭಾವಶಾಲಿಯಾಗಿದ್ದ ಹಲವರು ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ, ಹಿರಿತನ ಹಾಗೂ ಅನುಭವ ಇರುವ ಘಟಾನುಘಟಿಗಳು ಸಹ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೊಸ ಮುಖ್ಯಮಂತ್ರಿಗೆ ದೊಡ್ಡ ಸವಾಲಾಗಲಿದೆ.

ಒಟ್ಟಿನಲ್ಲಿ ಸಿಎಂ ಆಯ್ಕೆ ಬೆನ್ನಲ್ಲೇ ಸಚಿವ ಸಂಪುಟ ರಚನೆ ದೊಡ್ಡ ಸವಾಲ್​ ಆಗಿದ್ದು, ಯಾವ ರೀತಿಯಾಗಿ ಸಚಿವ ಸ್ಥಾನ ಹಂಚಿಕೆ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.