ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದೆ(Karnataka Assembly Elections 2023). ಹೊಸ ಸರ್ಕಾರ ರಚನೆಗಾಗಿ ಭಾರೀ ಕಸರತ್ತುಗಳು ನಡೆಯುತ್ತಿವೆ. ಆದ್ರೆ ಯಾರಾಗ್ತಾರೆ ಸಿಎಂ ಎಂಬುವುದು ಈಗ ಕರುನಾಡಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ (Who is Next CM). ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷಸ ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಸಿಎಂ ಯಾರು ಅನ್ನೋದರ ಬಗ್ಗೆ ಚರ್ಚೆಗಳು ನಡೆದಿವೆ. ಶಾಸಕರ ಅಭಿಪ್ರಾಯ ಪಡೆಯಲಿರುವ ಹೈಕಮಾಂಡ್ ಸಿಎಂ ಯಾರು ಅನ್ನೋದನ್ನ ಘೋಷಣೆ ಮಾಡಲಿದೆ. ಹೀಗಾಗಿ ಇಂದು ಕಾಂಗ್ರೆಸ್ ನಾಯಕರು ದೆಹಲಿಯತ್ತ ಹಾರಲಿದ್ದಾರೆ. ಇನ್ನು ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆ ಶಿವಕುಮಾರ್(DK Shivakumar) ನಡುವೆ ಭಾರೀ ಪೈಪೋಟಿ ಇದ್ದು ಮತ್ತೊಂದೆಡೆ ಸಿಎಂ ರೇಸ್‌ನಲ್ಲಿ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿಬರುತ್ತಿದೆ. ಸದ್ಯ ಸಿಎಂ ಯಾರಾಗುತ್ತಾರೆ ಎಂಬುವುದು ಇಂದು ಸಂಜೆಯೊಳಗೆ ತೀರ್ಮಾನವಾಗಲಿದೆ. ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ದೆಹಲಿ: ಹೈಕಮಾಂಡ್ ತೀರ್ಮಾನದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ಭೇಟಿಯ ಬಳಿಕ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಯಾರಿಗೆ ಶಾಸಕರ ಬೆಂಬಲ ಇದೆಯೆಂಬುದು ಮುಖ್ಯವಲ್ಲ ಎಂದು ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ನನ್ನ ಅಧ್ಯಕ್ಷತೆಯಲ್ಲಿ 135 ಶಾಸಕರು ಆಯ್ಕೆಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಆರೋಗ್ಯ ಸಮಸ್ಯೆಯಾಗಿದೆ, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಬೆಳಗಾವಿ: ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಸುಮಾರು 34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಜನಸಂಖ್ಯೆ, ಸಂಖ್ಯಾಬಲ ದೃಷ್ಟಿಯಿಂದ ಲಿಂಗಾಯತರಿಗೆ ಸಿಎಂ ಹುದ್ದೆ ನೀಡಬೇಕು ಎಂಬುದು ನಮ್ಮ ಬೇಡಿಕೆ. ಎಂ.ಬಿ ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೀಡಿದ ಹಲವು ಹುದ್ದೆಗಳನ್ನು ಎಂ.ಬಿ. ಪಾಟೀಲ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಬೆಂಗಳೂರು: ಡಿಕೆ ಶಿವಕುಮಾರ್ ಆರೋಗ್ಯ ಸಮಸ್ಯೆ ವಿಚಾರವಾಗಿ ವೈದ್ಯ ಡಾ. ಶಂಕರ್ ಗುಹಾ ಮಾತನಾಡಿ, ಬಿಪಿ ಚೆಕ್ ಮಾಡಲಾಗಿದೆ. ಬೇಸಿಕ್ ಮೆಡಿಸಿನ್ ನೀಡಲಾಗಿದೆ. ರಿಸಲ್ಟ್ ಬಂದಾಗಿನಿಂದ ಸತತವಾಗಿ ಓಡಾದಿದ್ದಾರೆ. ರೆಸ್ಟ್ ಮಾಡಿ ಮೂರು ಗಂಟೆ ಎಂದು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಟ್ರಾವೆಲ್ ಬೇಡ ಎಂದು ಸೂಚನೆ ನೀಡಲಾಗಿದೆ. ಹೊಟ್ಟೆ ಇನ್ಫೆಕ್ಷನ್ನಿಂದ ಲೂಸ್ ಮೋಷನ್ ರೀತಿ ಆಗಿದೆ. ಟ್ರಾವೆಲ್ ಎಷ್ಟು ಮುಖ್ಯನೋ ಅವರ ಆರೋಗ್ಯ ಕೂಡ ಅಷ್ಟೇ ಮುಖ್ಯ. ನಾಳೆ ಮುಂಜಾನೆ ಕೂಡ ಬಂದು ತಪಾಸಣೆ ಮಾಡಲಾಗುತ್ತದೆ. ಸದ್ಯಕ್ಕೆ ಮೂರು ಗಂಟೆಗಳ ಕಾಲ ರೆಸ್ಟ್ ಮಾಡಲು ಹೇಳಿದ್ದೇವೆ ಎಂದರು.
ಬೆಳಗಾವಿ: ಒಕ್ಕಲಿಗ ಆಯ್ತು, ಕುರುಬ ಆಯ್ತು, ಕಾಂಗ್ರೆಸ್ ಹೈಕಮಾಂಡ್‌ಗೆ ಈಗ ಲಿಂಗಾಯತ ಸ್ವಾಮೀಜಿ ಒತ್ತಡ ಹಾಕಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವಂತೆ ಎಂ.ಬಿ.ಪಾಟೀಲ್ ಪರ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಡಿಕೆ ಶಿವಕುಮಾರ್ ಅನಾರೋಗ್ಯ ಹಿನ್ನೆಲೆ ವೈದ್ಯ ಭಗವಾನ್ ಎಂಬುವವರಿಂದ ತಪಾಸಣೆ ಮಾಡಲಾಗಿದೆ. ಬಿಪಿ ಚೆಕ್ ಮಾಡಿರುವ ವೈದ್ಯರು, 140 ಬಿಪಿಯಿದೆ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ್ದು, ಹೊಟ್ಟೆ ನೋವಿಗೆ ಮಾತ್ರೆ ನೀಡಿದ್ದಾರೆ.
ಚಿಕ್ಕಮಗಳೂರು: ಕಾಫಿನಾಡಲ್ಲಿ ದಲಿತ ಸಿ.ಎಂ. ಕೂಗು ಹೆಚ್ಚಾಗಿದೆ. ದಲಿತ ನಾಯಕರಿಗೆ ಸಿಎಂ ಸ್ಥಾನಕ್ಕೆ ಆಗ್ರಹಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ಗೆ ನೀಡುವಂತೆ ಒತ್ತಾಯಿಸಿದ್ದಾರೆ. 70 ವರ್ಷದಲ್ಲಿ ಕಾಂಗ್ರೆಸ್ ದಲಿತರಿಗೆ ಸಿಎಂ ಸ್ಥಾನ ನೀಡಿಲ್ಲ. ಈ ಬಾರಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಪ್ರತಿಭಟನೆ ಮಾಡಲಾಗಿದೆ.
ಬೆಂಗಳೂರು: ಸೋಮವಾರ ಸಂಜೆ 5.30ರ ವಿಸ್ತಾರ ವಿಮಾನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೆಹಲಿಗೆ ತೆರಳಿದ್ದಾರೆ.
ಬೆಂಗಳೂರು: ನಾನು ಪೂಜೆ ಪುನಸ್ಕಾರ ಎಲ್ಲಾ ಮಾಡಬೇಕಿದೆ. ನನ್ನ ಯಾವ ಶಾಸಕರನ್ನೂ ಕರೆದುಕೊಂಡು ಹೋಗಲ್ಲ. ನನಗೆ ಯಾರ ಬೆಂಬಲವು ಬೇಡ. ನನ್ನ ಕರ್ತವ್ಯ ನಾನು ಮಾಡಿದ್ದೀನಿ. ನನ್ನನ್ನ ಬಂಡೆ ಎಂದು ಕರೆದಿದ್ದೀರಾ. ಆಕೃತಿಯಾದ್ರು ಮಾಡಿ, ವಿಧಾನಸೌಧಕ್ಕೆ ಚಪ್ಪಡಿಯಾದ್ರು ಮಾಡಿ, ಮರಳಾದ್ರು ಮಾಡಿ ಗರುಡು ಗಂಬವಾದ್ರು ಮಾಡಿ ಎಂದರು.
ಬೆಂಗಳೂರು: ನನ್ನ ಜೊತೆ ಯಾವ ಶಾಸಕರು ಇಲ್ಲ, ನನಗೆ ಯಾರ ಬೆಂಬಲ ಬೇಡ. ಯಾರು ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನನ್ನ ಬಳಿ 135 ಶಾಸಕರು ಇದ್ದಾರೆ, ಎಲ್ಲರೂ ಕಾಂಗ್ರೆಸ್ ಶಾಸಕರು. ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ವೇಳೆ ಹೇಳಿಕೆ ನೀಡಿದ್ದೆ. ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದೀರಿ. ನನ್ನನ್ನು ಚಪ್ಪಡಿ ಬೇಕಾದರೂ ಮಾಡಿಕೊಳ್ಳಿ, ದಿಂಡು ಮಾಡಿಕೊಳ್ಳಿ. ಜಲ್ಲಿ ಬೇಕಾದರೂ ಮಾಡಿಕೊಳ್ಳಿ ಎಂದರು.
ಬೆಂಗಳೂರು: ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಕೆಐಎಬಿಯಿಂದ ಇಂದು ಸಂಜೆ 7.30ರ ದೆಹಲಿಗೆ ತೆರಳಬೇಕಿತ್ತು. ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ ಆಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ದೆಹಲಿ ಭೇಟಿ ರದ್ದಾಗಿದೆ.
ಬೆಂಗಳೂರು: ಮೇ 17 ಅಥವಾ 18ರಂದು ನೂತನ ಸಿಎಂ ಜೊತೆ ಕೆಲ ಸಚಿವರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೊದಲಿಗೆ ಕೆಲ ಹಿರಿಯರನ್ನು ಒಳಗೊಂಡ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು, ನಾಲ್ವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ.
ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ನಾಯಕರ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಕೆ.ಸಿ ವೇಣುಗೋಪಾಲ್, ಸುರ್ಜೇವಾಲ ಭಾಗಿಯಾಗಿದ್ದಾರೆ. ಸಿಎಲ್ಪಿ ಸಭೆಯ ವರದಿಯನ್ನು ವೀಕ್ಷಕರು ಒಪ್ಪಿಸುತ್ತಿದ್ದಾರೆ.
ದೇವನಹಳ್ಳಿ: ಅನುಭವಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರೆ ಉತ್ತಮ ಎಂದು ಏರ್ಪೋರ್ಟ್ನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಸಿದ್ದರಾಮಯ್ಯನವರೂ ಉತ್ತಮ ಆಡಳಿತ ಕೊಡುತ್ತಾರೆ. ಹಾಗೆಯೇ ಡಿಕೆ ಶಿವಕುಮಾರ್ ಅವರಿಗೆ ಕೊಟ್ಟರೂ ಸಹ ಉತ್ತಮ ಆಡಳಿತ ನೀಡುತ್ತಾರೆ. ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಇಬ್ಬರಲ್ಲೆ ಸಿಎಂ ಆಗುತ್ತಾರೆ. ಅವರಿಬ್ಬರನ್ನ ಹೊರತು ಪಡಿಸಿ ಬೇರೆ ಯಾರು ಸಿಎಂ ಆಗಲ್ಲ ಎಂದರು.
ಬೆಂಗಳೂರು: ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ವಾಪಸ್ ಪಡೆದಿದೆ. ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ಕಾಂಗ್ರೆಸ್‌ನಿಂದ ರೆಡ್ಡಿ ಸಮುದಾಯದ 12 ಶಾಸಕರು ಆಯ್ಕೆಯಾಗಿದ್ದಾರೆ. ಸಂಪುಟದಲ್ಲಿ ರೆಡ್ಡಿ ಸಮುದಾಯದ ಶಾಸಕರಿಗೆ ಹೆಚ್ಚಿನ ಸ್ಥಾನ ನೀಡುವಂತೆ ಕರ್ನಾಟಕ ರೆಡ್ಡಿ ಜನಸಂಘದಿಂದ ಆಗ್ರಹಿಸಲಾಗಿದೆ.
ಬೆಂಗಳೂರು: ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಬೇಕು. ಇಲ್ಲದಿದ್ರೆ ಶೋಷಿತ ಸಮುದಾಯ ಕಾಂಗ್ರೆಸ್ಗೆ ಬೆಂಬಲಿಸಲ್ಲ ಎಂದು ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಹೇಳಿದರು. ಮುಂದಿನ ದಿನಗಳಲ್ಲಿ ಬೆಂಬಲ ನೀಡುವ ಸಾಧ್ಯತೆ ಕಡಿಮೆ ಇದೆ. ನಾವು ಯಾವುದೇ ಜಾಥಾ ಮಾಡಲ್ಲ ಎಂದು ಹೇಳಿದರು.
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ ಫ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಂಡಿದ್ದ ಜಾಥಾವನ್ನು ರದ್ದು ಮಾಡಲಾಗಿದೆ ಎಂದು ಕಿಮ್ಸ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದರು.
ಬೆಂಗಳೂರು: ಡಿಕೆ ಶಿವಕುಮಾರ್ ಅವರು ಶ್ರಮದಿಂದ ಹಾಗೂ ಕೆಲವು ಮುಖಂಡರಿಂದ ಕಾಂಗ್ರೆಸ್ ಪಾರ್ಟಿ ಗೆದ್ದಿದೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ ಫ್ರೀಡಂ ಪಾರ್ಕ್ ವರೆಗೂ ಜಾಥಾ ಹಮ್ಮಿಕೊಳ್ಳಲಾಗಿದೆ
ನವದೆಹಲಿ ತಲುಪಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಜೊತೆಗೆ ಡಾ. ಯತೀಂದ್ರ, ಜಮೀರ್ ಅಹ್ಮದ್ ಕೂಡ ತೆರಳಿದ್ದಾರೆ.
ತುಮಕೂರು: ಬಿಜೆಪಿ ಸೋಲಿಗೆ ಕಟೀಲು, ಬಿ.ಎಲ್.ಸಂತೋಷ್ ಹೊಣೆಗಾರರಲ್ಲ ಎಂದು ಸಿದ್ಧಗಂಗಾ ಮಠದಲ್ಲಿ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಬಿಎಸ್ವೈ ಗಟ್ಟಿಯಿದ್ದಾರೆ ಪಕ್ಷವನ್ನು ಮತ್ತೆ ಸಂಘಟನೆ ಮಾಡಲಿದ್ದಾರೆ. ಬಿಜೆಪಿ ನಾಯಕರು ಸೋಲಿನ ಬಗ್ಗೆ ಅವಲೋಕನ ಮಾಡಲಿದ್ದಾರೆ. ಪಕ್ಷದ ಹಿನ್ನಡೆಗೆ ಸಾಕಷ್ಟು ಕಾರಣಗಳಿವೆ, ಇದರ ಬಗ್ಗೆ ಚರ್ಚಿಸುತ್ತೇವೆ ಎಂದರು.
ಸಿಎಂ ಹುದ್ದೆಗೆ ಎಲ್ಲರೂ ಆಸೆ ಪಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ನಾವು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದೇವೆ. ಸಿಎಲ್ಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ಯಾವ ಶಾಸಕರು ಏನು ಮಾಡಿದ್ದರೋ ನನಗೆ ಗೊತ್ತಿಲ್ಲ. ನನ್ನ ಬಳಿ 135 ಶಾಸಕರು ಇದ್ದಾರೆ. ಕಾಂಗ್ರೆಸ್ನಲ್ಲಿ ನಾನು ಸೇರಿದಂತೆ 135 ಶಾಸಕರು ಇದ್ದೇವೆ. 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇವೆ ಎಂದರು.
ಬೆಂಗಳೂರು: ನಾನು ಎಂಎಎಲ್ ಆಗಿದ್ದೇನೆ. ಖುಷಿ ಇದೆ. ಒಂದೇ ರೆಸ್ಯುಲ್ಯೂಷನ್ ಕಳಿಸಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ.ಈಗ ಸಿದ್ದರಾಮಯ್ಯ ಜೊತೆ ದೆಹಲಿಗೆ ಹೋಗುತ್ತಿದ್ದೇವೆ. ನೋಡೋಣ ಯಾವ ಬೆಳವಣಿಗೆಯೂ ಇಲ್ಲ. ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ. ಶಾಸಕ ಸ್ಥಾನ ಸಿಕ್ಕ ಖುಷಿ ಇದೆ ಎಂದು ಕೆಜೆ ಜಾರ್ಜ್ ಹೇಳಿದರು.
ಚಿತ್ರದುರ್ಗದಲ್ಲಿ ಅಹಿಂದ ಮುಖಂಡರು ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ನೀಲಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡಬೇಕೆಂದು ಅಹಿಂದ ಮುಖಂಡರು ಆಗ್ರಹಿಸಿದ್ದಾರೆ. ನಾಲ್ಕು ಜಿಲ್ಲೆಗೆ ಸೀಮಿತರಾದವರಿಗೆ ಸಿಎಂ ಮಾಡದಂತೆ ಪಟ್ಟು ಹಿಡಿದಿದ್ದಾರೆ.
ಚಿತ್ರದುರ್ಗದ ಜಾಲಿಕಟ್ಟೆಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್ ಗೆ ಗ್ರಾಮಸ್ಥರು ಆವಾಜ್ ಹಾಕಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ, ಬೆಸ್ಕಾಂ ಮೀಟರ್ ರೀಡರ್ಗೆ ಆವಾಜ್, ವಿಡಿಯೋ ವೈರಲ್@INCKarnataka @siddaramaiah @DKShivakumar #karnatakaelection2023 #Karnataka #electricitybills https://t.co/exFeFBmash
— TV9 Kannada (@tv9kannada) May 15, 2023
ಡಿಕೆ ಶಿವಕುಮಾರ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ. ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ.
ಸಿಎಂ ಸ್ಥಾನ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇನೆ, ಸಿಎಂ ಸ್ಥಾನ ಇಲ್ಲದಿದ್ದರೆ ಯಾವುದೇ ಖಾತೆಯೂ ಬೇಡವೂ ಬೇಡ. ಸಂಪುಟದಲ್ಲೂ ಸೇರ್ಪಡೆ ಆಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಯಾವುದೇ ಸಚಿವ ಸ್ಥಾನವೂ ತನಗೆ ಬೇಡವೇ ಬೇಡ. ಸಿಎಂ ಸ್ಥಾನ ಮಾತ್ರ ತನಗೆ ಬೇಕು ಎಂದು ಡಿಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದಾರೆ.
BSY ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗುತ್ತೆ ಎಂದಿದ್ದೆ. ಇವತ್ತು ಭಾರತೀಯ ಜನತಾ ಪಕ್ಷದ ನಾಯಕರಿಗೆ ಅರಿವಾಗಿದೆ ಎಂದು ಹುಬ್ಬಳ್ಳಿ ನಗರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅಧಿಕಾರ ಬಂದ ಸಂದರ್ಭದಲ್ಲಿ ನಿರ್ಲಕ್ಷಿಸಿದ್ರೆ ಪೆಟ್ಟು ತಿಂತಾರೆ. ನಾನು ಈ ಹಿಂದೆ ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತಾಡಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಎಲ್ಲರಿಗೆ ಬೇಕಾದ ನಾಯಕರು. ಎಲ್ಲ ಸಮಾಜದ ನಾಯಕರು ಮುಂದುವರಿಸಿಬೇಕು ಎಂದಿದ್ದರು. ಯಾವುದೋ ಕೆಟ್ಟ ಉದ್ದೇಶ, ಸ್ವಾರ್ಥಕ್ಕೆ ನಿರ್ಣಯ ತಗೊಂಡರು. ಅಂದು ತೆಗೆದುಕೊಂಡ ನಿರ್ಣಯ ಹೀನಾಯ ಪರಸ್ಥಿತಿಗೆ ಕಾರಣ. ಬಿಎಸ್ವೈರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೆ ಈ ಸ್ಥಿತಿಗೆ ಕಾರಣ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿಯ ಸೋಲಿಗೆ ಕಾರಣ ನೀಡಿದ್ದಾರೆ.
ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರ ದಂಡೇ ಹರಿದು ಬರುತ್ತಿದೆ. ಕೆಎನ್ ರಾಜಣ್ಣ, ಹೆಚ್.ಸಿ.ಮಹದೇವಪ್ಪ, ಶಿವಲಿಂಗೆಗೌಡ, ರುದ್ರಪ್ಪ ಲಮಾಣಿ, ನಂಜೇಗೌಡ ಅವರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ.
ಈ ಬಾರಿಯ ಚುನಾವಣೆ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ ಎಂದು ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಬಿಜೆಪಿ ನಾಯಕ ಸಿ.ಟಿ.ರವಿ ನಿರಾಸೆ ಹೊರ ಹಾಕಿದ್ರು. ನಾವು ಸೈದ್ಧಾಂತಿಕ ಹೋರಾಟ ಮುಂದುವರಿಸುತ್ತೇವೆ. ಜೆಡಿಎಸ್ನವರು ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡಿದ್ದಾರೆ. ಕಾಂಗ್ರೆಸ್ ಒಳ್ಳೆಯ ಆಡಳಿತ ಕೊಡಲಿ ಎಂಬುದು ನಮ್ಮ ಅಪೇಕ್ಷೆ. 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಹಣ, 10 ಕೆಜಿ ಅಕ್ಕಿ ಕೊಡೋದು ಒಳ್ಳೆಯದಲ್ವಾ. ಈಗಲೇ ಪ್ರತಿಕ್ರಿಯೆ ನೀಡುವುದು ಬೇಡ, ಕಾದು ನೋಡೋಣ ಎಂದರು.
ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ಕೊಡಬೇಕು ಅಂತಾ ಬ್ಯಾನರ್ ಹಿಡಿದು ಸಿದ್ದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಸಿದ್ದು ಸರ್ಕಾರಿ ನಿವಾಸದ ಮುಂದೆ ಘೋಷಣೆ ಕೂಗಿದ್ದಾರೆ. ಇನ್ನು ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಅಧ್ಯಕ್ಷ ವಿಶ್ವನಾಥ್ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಸಿಎಂ ಆಗಲೇಬೇಕು. ಸಿದ್ದರಾಮಯ್ಯ ಒಂದು ಸಮುದಾಯದ ನಾಯಕ ಅಲ್ಲ. ಎಲ್ಲಾ ವರ್ಗದ ನಾಯಕರು. ತಾಯಿ ಚಾಮುಂಡಿ ಆಶೀರ್ವಾದ ಅವರ ಮೇಲಿದೆ. ಅವರು ತಾಯಿ ಆಶೀರ್ವಾದದಿಂದ ಸಿಎಂ ಆಗೇ ಆಗ್ತಾರೆ ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಲಮಂಗಲದ ವಾದಕುಂಟೆ ಗ್ರಾಮದ ಶ್ರೀರಾಮ ಮಂದಿರದಲ್ಲಿ ಅಭಿಮಾನಿಗಳು 1001 ತೆಂಗಿನಕಾಯಿ ಹೀಡುಗಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್‌ಗೆ ಜೈಕಾರ ಹಾಕಿ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ. ಸಿಎಂ ಅಂದ್ರೆ ಡಿಕೆ ಶಿವಕುಮಾರ್ ಎಂದು ಕೂಗುತ್ತ ಸಂಭ್ರಮಿಸುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.
ಬಜರಂಗದಳವನ್ನು ಅಲ್ ಖೈದಾ ಸಂಘಟನೆಗೆ ಹೋಲಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್ ಸಮನ್ಸ್ ನೀಡಿದೆ.
ಬಜರಂಗದಳವನ್ನು ಅಲ್ ಖೈದಾ ಸಂಘಟನೆಗೆ ಹೋಲಿಕೆ ಆರೋಪ: ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್ ಸಮನ್ಸ್#bajarangdal #MallikarjunKharge #AlQaeda #summonshttps://t.co/RHRMloUSb9
— TV9 Kannada (@tv9kannada) May 15, 2023
ಸಿದ್ದರಾಮಯ್ಯ ಜೊತೆಗೆ ಜಮೀರ್ ಅಹ್ಮದ್ ಖಾನ್ ಕೂಡ ದೆಹಲಿಗೆ ತೆರಳಲಿದ್ದಾರೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಹೆಚ್ಚಿನ ಮೊರೆ ಹೋಗುವ ಸಾಧ್ಯತೆ ಇದೆ. ನಿನ್ನೆ ಲಿಖಿತ ರೂಪದಲ್ಲಿ ಬಹುತೇಕರಿಂದ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ನಮೂದು ಮಾಡಲಾಗಿತ್ತು. ಶೇ.40 ಕ್ಕಿಂತ ಹೆಚ್ಚು ಮಂದಿ ಶಾಸಕರಿಂದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ನಮೂದು ಮಾಡಲಾಗಿದೆ. ಹೀಗಾಗಿ ಸಿಎಂ ಸ್ಥಾನಕ್ಕಾಗಿ ವಿಶೇಷ ವಿಮಾನದ ಮೂಲಕ ಎಚ್ಎಎಲ್ ನಿಂದ ಸಿದ್ದರಾಮಯ್ಯ ದೆಹಲಿಗೆ ಹಾರಲಿದ್ದಾರೆ.
ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದೇ ನಾನು. ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು. ಆದರೆ ಸಿ.ಟಿ.ರವಿಯನ್ನು ಕ್ಷೇತ್ರದಿಂದಲೇ ಜನ ಹೊರಕಳಿಸಿದ್ದಾರೆ. ಚಿಕ್ಕಮಗಳೂರು ಇನ್ಮುಂದೆ ವೀರಶೈವ-ಲಿಂಗಾಯತರ ಕ್ಷೇತ್ರ ಎಂದು ಎಂ.ಪಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಿಟಿ ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು, ಈಗ ಜನ ಅವರನ್ನು ಕ್ಷೇತ್ರದಿಂದಲೇ ಹೊರಕಳಿಸಿದ್ದಾರೆ: ಎಂಪಿ ಕುಮಾರಸ್ವಾಮಿ ವ್ಯಂಗ್ಯ#CTRavi #MPKumaraswamy #chikmagalur #karnatakaassemblyelection2023https://t.co/v2tmtoZ8yM
— TV9 Kannada (@tv9kannada) May 15, 2023
ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆ ನಡುವೆ ಸಚಿವ ಸ್ಥಾನಕ್ಕೆ ಲಾಭಿ ಶುರುವಾಗಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಮೇಲೆ ಕೆ.ಹೆಚ್.ಮುನಿಯಪ್ಪ ಕಣ್ಣಿಟ್ಟಿದ್ದಾರೆ. ಎಡಗೈ ಸಮುದಾಯದ ಹಿರಿಯ ನಾಯಕ ಕೋಟಾದಲ್ಲಿ ಸಚಿವ ಸ್ಥಾನ ಬಹುತೇಕ ಖಚಿತ ಹಿನ್ನಲೆ, ಕೋಲಾರ ಜಿಲ್ಲಾ ಉಸ್ತುವಾರಿ ಮೇಲೂ ಕೆ.ಹೆಚ್.ಮುನಿಯಪ್ಪ ಕಣ್ಣಿಟ್ಟಿದ್ದಾರೆ. ತಮ್ಮ ಪಕ್ಷದ ಎದುರಾಳಿಗಳಿಗೆ ಟಕ್ಕರ್ ಕೊಡಲು ಸ್ಕೆಚ್ ಹಾಕಿದ್ದಾರೆ.
ಇಂದು ಬೆಳಗಿನ ಜಾವದ ತನಕವೂ ಅಭಿಪ್ರಾಯ ಸಂಗ್ರಹಿಸಿ ಇಂದು ನವದೆಹಲಿಗೆ ಎಐಸಿಸಿ ವೀಕ್ಷಕರು ಹಿಂದಿರುಗಲಿದ್ದಾರೆ. ಸಂಗ್ರಹಿಸಿದ ಅಭಿಪ್ರಾಯ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ. ಹಲವು ಶಾಸಕರಿಂದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವೆಂದು ನಮೂದು ಮಾಡಲಾಗಿದ್ದು ಬಹುತೇಕ ಶಾಸಕರು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಹೆಸರು ನಮೂದಿಸದೇ ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಅಭಿಪ್ರಾಯ ಸಂಗ್ರಹದ ವರದಿ ನೋಡಿ ಹೈಕಮಾಂಡ್ ತೀರ್ಮಾನ ಮಾಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದಲ್ಲಿ ಶುಭಾಶಯಗಳ ಬ್ಯಾನರ್, ಫ್ಲೆಕ್ಸ್ ಜೊತೆಗೆ LED ಪರದೆ ಆಳವಡಿಸಲಾಗಿದೆ. ಕೇಕ್, ಹೂವಿನಹಾರ ಹಿಡಿದು ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮನ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ಕೈ ನಾಯಕರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯಾಹ್ನ 1 ಗಂಟೆ ಬಳಿಕ ದೆಹಲಿಗೆ ತೆರಳಿದ್ದಾರೆ. ಬಹುತೇಕ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಮೊರೆ ಹೋಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಧಿಕಾರ ಹಂಚಿಕೆ ಸೂತ್ರ ಪಾಲನೆಗೆ ಹೆಚ್ಚಿನ ಒತ್ತು ಕೊಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನೂ ಕೂರಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ.
ಒಂದು ಕಡೆ ಸಿಎಂ ಹುದ್ದೆ ಪೈಪೋಟಿ ನಡೆಯುತ್ತಿದ್ದರೆ. ಮತ್ತೊಂದು ಕಡೆ ಡಿಸಿಎಂ ಹುದ್ದೆಯ ರೇಸ್‌ನಲ್ಲಿ ಡಾ ಹೆಚ್ ಸಿ ಮಹದೇವಪ್ಪ ಹೆಸರು ಕೇಳಿ ಬಂದಿದೆ. ದಲಿತ ಸಿಎಂ ಮಾಡುವ ನಿರ್ಧಾರ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಒಂದು ವೇಳೆ ದಲಿತ ಸಿಎಂ ಆಗದಿದ್ದರೆ ದಲಿತ ಡಿಸಿಎಂ ಪಕ್ಕಾ. ಈ ಹಿನ್ನೆಲೆ ಕೈ ನಾಯಕರಲ್ಲಿ ಡಿಸಿಎಂ ಹುದ್ದೆಗೆ ಪೈಪೋಟಿ ನಡೆದಿದೆ. ರೇಸ್‌ನ ಮಂಚೂಣಿಯಲ್ಲಿ ಡಾ ಹೆಚ್ ಸಿ ಮಹದೇವಪ್ಪರಿದ್ದಾರೆ.
Published On - 9:05 am, Mon, 15 May 23