Election Result 2023: ಈ ಬಾರಿ ಇವಿಎಂ ಮತ ಎಣಿಕೆ ಮೊದಲ ಚಿತ್ರಣ ತುಸು ನಿಧಾನ, ಇನ್ನು ಇವಿಎಂ ಮತ ಎಣಿಕೆ ಇನ್ನೂ ನಿಧಾನ: ಸದ್ಯದ ಪರಿಸ್ಥಿತಿ ಏನು?

Election Result 2023: ಈ ಹಿನ್ನೆಲೆಯಲ್ಲಿ ಮೊದಲು ಅಂಚೆ ಮತ ಯಂತ್ರ ಆ ಬಳಿಕ, ಹಿರಿಯರ ಮತ ಎಣಿಕೆ ಕಾರ್ಯ ನಡೆಯಲಿದೆ. ಸದ್ಯಕ್ಕೆ ಅಂಚೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಹಿರಿಯರ ಮತ ಎಣಿಕೆ ಶುರುವಾಗಬೇಕಿದೆ.

Election Result 2023: ಈ ಬಾರಿ ಇವಿಎಂ ಮತ ಎಣಿಕೆ ಮೊದಲ ಚಿತ್ರಣ ತುಸು ನಿಧಾನ, ಇನ್ನು ಇವಿಎಂ ಮತ ಎಣಿಕೆ ಇನ್ನೂ ನಿಧಾನ: ಸದ್ಯದ ಪರಿಸ್ಥಿತಿ ಏನು?
ಈ ಬಾರಿ ಇವಿಎಂ ಮತ ಎಣಿಕೆ ಮೊದಲ ಚಿತ್ರಣ ತುಸು ನಿಧಾನ

Updated on: May 13, 2023 | 8:47 AM

ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ. ಈ ಹಿಂದೆ ಮತ ಎಣಿಕೆ ಕಾರ್ಯವು ಅಂಚೆ ಮತಗಳ ಎಣಿಕೆ (Election Result 2023) ಮೂಲಕ ಆರಂಭವಾಗುತ್ತಿತ್ತು. ಹಾಗಾಗಿ 9 ಗಂಟೆ ವೇಳೆಗೆ ಮತದಾರರ ನಾಡಿ ಮಿಡಿತಕ್ಕೆ ಒಂದಷ್ಟು ಸ್ಪಷ್ಟ ದಿಕ್ಕು ಸಿಗುತ್ತಿತ್ತು. ಅದಾದ ಮೇಲೆ ಇವಿಎಂ ಮತಯಂತ್ರಗಳಲ್ಲಿನ ಮತಗಳ ಎಣಿಕೆ ಶುರುವಾಗುತ್ತಿತ್ತು. ಆದರೆ ಈ ಬಾರಿ ವೃದ್ಧರೂ ಸಹ ಮತದಾನದಲ್ಲಿ ಪಾಲ್ಗೊಳ್ಳಲಿ ಎಂಬ ಆಶಯದೊಂದಿಗೆ ಚುನಾವಣೆ ಆಯೋಗವು ಅಂತಹವರಿಗೆ ಅನುಕೂಲವಾಗುವಂತೆ ಮಹಾ ಮತದಾನಕ್ಕೂ ಮುನ್ನವೇ ಅವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Karnataka Election Results 2023 Live: 

ಈ ಹಿನ್ನೆಲೆಯಲ್ಲಿ ಮೊದಲು ಅಂಚೆ ಮತ ಯಂತ್ರ ಆ ಬಳಿಕ, ಹಿರಿಯರ ಮತ ಎಣಿಕೆ ಕಾರ್ಯ ನಡೆಯಲಿದೆ. ಸದ್ಯಕ್ಕೆ ಅಂಚೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಹಿರಿಯರ ಮತ ಎಣಿಕೆ ಶುರುವಾಗಬೇಕಿದೆ. ಅದಾದ ಮೇಲಷ್ಟೆ ಇವಿಎಂ ಮತ ಯಂತ್ರ ಣಿಕೆ ಶುರು.

ಸದ್ಯಕ್ಕೆ ಪ್ರಮುಖ ಮೂರು ಪಕ್ಷಗಳು ಸಾಧಿಸಿರುವ ಮುನ್ನಡೆ ಹೀಗಿದೆ:
BJP 90
Congress 113
JDS 14
Others 2

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 8:37 am, Sat, 13 May 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us