ಟಿಕೆಟ್​ ಹಂಚಿಕೆ ವಿಚಾರವಾಗಿ ಕಾಂಗ್ರೆಸ್​, ಜೆಡಿಎಸ್​ ಮಲತಾಯಿ ಧೋರಣೆ ಮಾಡಿದೆ: ವಕ್ಫ್ ಬೋರ್ಡ್

116 ಸೀಟ್​ಗಳಲ್ಲಿ 11 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್, ಜೆಡಿಎಸ್​ನ ಈ ಮಲತಾಯಿ ಧೋರಣೆಯನ್ನ ಖಂಡಿಸ್ತೀವಿ ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.

ಟಿಕೆಟ್​ ಹಂಚಿಕೆ ವಿಚಾರವಾಗಿ ಕಾಂಗ್ರೆಸ್​, ಜೆಡಿಎಸ್​ ಮಲತಾಯಿ ಧೋರಣೆ ಮಾಡಿದೆ: ವಕ್ಫ್ ಬೋರ್ಡ್
ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ
Follow us
ವಿವೇಕ ಬಿರಾದಾರ
|

Updated on:Apr 09, 2023 | 3:10 PM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ (Karnataka Assembly Election) ಟಿಕೆಟ್ ಘೋಷಣೆ ವಿಚಾರವಾಗಿ ಕಾಂಗ್ರೆಸ್ (Congress)​ ಮತ್ತು ಜೆಡಿಎಸ್ (JDS)​ ಪಕ್ಷಗಳ ವಿರುದ್ಧ ಕರ್ನಾಟಕ ವಕ್ಫ್ ಬೋರ್ಡ್ (Karnataka Waqf Board) ಅಸಮಾಧಾನಗೊಂಡಿದೆ. ಎರಡು ಪಕ್ಷದ 116 ಸೀಟ್​ಗಳಲ್ಲಿ 11 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್, ಜೆಡಿಎಸ್​ನ ಈ ಮಲತಾಯಿ ಧೋರಣೆಯನ್ನ ಖಂಡಿಸ್ತೀವಿ ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ. ಪ್ರಮುಖವಾಗಿ ರಾಜ್ಯದಲ್ಲಿ ಶೇಕಡವಾರು ಅನುಗುಣವಾಗಿ ನೋಡುವುದಾರೇ 116 ಮುಸ್ಲಿಂರಿಗೆ ಟಿಕೆಟ್ ಸಿಗಬೇಕಿತ್ತು. ಆದರೆ ಕೇವಲ 11 ಜನರಿಗೆ ಮಾತ್ರ ಕಾಂಗ್ರೆಸ್​ನಿಂದ ಟಿಕೆಟ್ ಘೋಷಣೆ ಆಗಿದೆ. ಟಿಕೆಟ್ ಮಾತ್ರ ಕೊಡೋದಲ್ಲ, ಆ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕಾಂಗ್ರೆಸ್, ಜೆಡಿಎಸ್ ಮುಖಂಡರು ಈ ಕೆಲಸ ಮಾಡಬೇಕಿದೆ. 23 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬೆಂಗಳೂರಲ್ಲಿ ರಾಜ್ಯ ವರ್ಕ್ಫ್ ಬೋರ್ಡ್ ಸಭೆ ನಡೆಯಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವರ್ಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮುಸ್ಲಿಂರು ಹೆಚ್ಚಾಗಿ ಇರುವ ಕಡೆ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ. ಚಿಕ್ಕಪೇಟೆಯಲ್ಲಿ ನೂರಾರು ಕೋಟಿ ಖರ್ಚು ಮಾಡುತ್ತೇನೆ ಅಂದರೂ ಟಿಕೆಟ್ ಕೊಡುತ್ತಿಲ್ಲ. ಜಾತಿ ನೋಡಿ, ಟಿಕೆಟ್ ಕೊಡುತ್ತಿಲ್ವಾ…? ಎರಡು ಪಕ್ಷಗಳನ್ನು ನಾವು ಟಿಕೆಟ್​ಗಾಗಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು 70 ಟಿಕೆಟ್ ಕಾಂಗ್ರೆಸ್ ಘೋಷಣೆ ಮಾಡುವುದು ಬಾಕಿ‌ ಇದೆ. ಮೂರನೇ ಪಟ್ಟಿಯಲ್ಲಿ ಮುಸ್ಲಿಂ ಸಮೂದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಅಖಂಡ ಶ್ರೀನಿವಾಸ್​ಗೆ ಟಿಕೆಟ್ ನೀಡದಂತೆ ಮುಸ್ಲಿಂ ಸಮುದಾಯ ಮನವಿ

ಅಖಂಡ ಶ್ರೀನಿವಾಸ್​ ಅವರಿಗೆ ಟಿಕೆಟ್ ಕೊಡದಂತೆ ಸುನ್ನಿ ಉಲ್ಲಾ ಬೋರ್ಡ್ ಕಾಂಗ್ರೆಸ್ ರಾಜ್ಯ ನಾಯಕರಿಗೆ ಮನವಿ ಮಾಡಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಶಾಸಕರೇ ಕಾರಣ. ಮುಸ್ಲಿಂ ಪ್ರವಾದಿಗಳ ವಿರುದ್ಧ ಪೋಸ್ಟ್ ಹಬ್ಬಿಸಿದ್ದೇ ಶಾಸಕರ ಸಂಬಂಧಿಕರು. ಇದರಿಂದ ಮುಸ್ಲಿಮರ ಭಾವನೆಗೆ ದಕ್ಕೆಯುಂಟಾಗಿ ದೊಡ್ಡ ಗಲಭೆಯೇ ಉಂಟಾಯ್ತು. ಈಗಲೂ ಎಷ್ಟೋ ಮುಸ್ಲಿಂ ಯುವಕರು ಜೈಲಿನಲ್ಲಿ ಇದ್ದಾರೆ. ಪುಲಕೇಶಿನಗರಕ್ಕೆ ಟಿಕೆಟ್ ಕೊಡುವಾಗ ಯೋಚನೆ ಮಾಡಬೇಕು. ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ಒತ್ತಾಯ ಮಾಡಿದರು.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:09 pm, Sun, 9 April 23