Madikeri Election 2023 Winner: ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್​ಗೆ ಸೋಲುನುಣಿಸಿದ ಕಾಂಗ್ರೆಸ್​ನ ಡಾ. ಮಂಥರ್ ಗೌಡ

Dr. Manthar Gowda: ರಾಜ್ಯ ವಿಧಾನಸಭಾ ಚುನಾವಣೆ 2023 ಫಲಿತಾಂಶ ಪ್ರಕಟವಾಗಿದ್ದು ಮಡಿಕೇರಿ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ಬಿಜೆಪಿಯ ಅಪ್ಪಚ್ಚು ರಂಜನ್ ಎಂ.ಪಿ. ವಿರುದ್ಧ ಡಾ. ಮಂಥರ್ ಗೌಡ 4 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Madikeri Election 2023 Winner: ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್​ಗೆ ಸೋಲುನುಣಿಸಿದ ಕಾಂಗ್ರೆಸ್​ನ ಡಾ. ಮಂಥರ್ ಗೌಡ
ಡಾ. ಮಂಥರ್ ಗೌಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2023 | 1:09 PM

Madikeri Assembly Election Results 2023: ಬಿಜೆಪಿಯ ಭದ್ರಕೋಟೆಯಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರ (Madikeri Assembly Constituency) ಕೈ ಪಾಲಾಗಿದೆ. ಐದು ಬಾರಿ ಶಾಸಕರಾಗಿದ್ದ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಕಾಂಗ್ರೆಸ್​ನ ಡಾ. ಮಂಥರ್ ಗೌಡ ಸೋಲಿಸಿದ್ದಾರೆ. ಆದರೆ, ಗೆಲುವಿನ ಅಂತರ 5 ಸಾವಿರ ಮತಗಳಿಗೂ ಕಡಿಮೆ ಇದೆ. ಜೆಡಿಎಸ್​ನಿಂದ ನಾಪಂಡ ಮುತ್ತಪ್ಪ ಸ್ಪರ್ಧಿಸಿ ತ್ರಿಕೋನ ಫೈಟ್ ನಡೆಯುವ ನಿರೀಕ್ಷೆ ಇತ್ತಾದರೂ ಅಂತಿಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತ್ರವೇ ಹಣಾಹಣಿ ನಡೆದಿದೆ.

ಡಾ. ಮಂಥರ್ ಗೌಡ 53,767 ಮತಗಳನ್ನು ಪಡೆದರೆ ಅಪ್ಪಚ್ಚು ರಂಜನ್ 48,975 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಉಳಿದ ಎಲ್ಲಾ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ. ಮೂರನೇ ಶಕ್ತಿ ಎನಿಸಿದ್ದ ಜೆಡಿಎಸ್​ನ ನಾಪಂಡ ಮುತ್ತಪ್ಪ ಕೇವಲ 4,642 ಮತಗಳನ್ನು ಪಡೆದಿದ್ದಾರೆ. ಉಳಿದ ಬೇರೆ ಅಭ್ಯರ್ಥಿಗಳು ಪಡೆದ ಮತ 1 ಸಾವಿರ ಗಡಿ ದಾಟಿಲ್ಲ.

ಮಡಿಕೇರಿ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ:

  • ಕಾಂಗ್ರೆಸ್: ಡಾ. ಮಂಥರ್ ಗೌಡ– 53,767 ಮತಗಳು
  • ಬಿಜೆಪಿ: ಡಾ. ಅಪ್ಪಚ್ಚುರಂಜನ್– 48,975 ಮತಗಳು
  • ಜೆಡಿಎಸ್: ನಾಪಂಡ ಮುತ್ತಪ್ಪ– 4,642 ಮತಗಳು

ಡಾ. ಮಂಥರ್ ಗೌಡ ಈ ಕ್ಷೇತ್ರದಲ್ಲಿ ಯುವ ಮುಖವಾಗಿ ಕಾಣಿಸಿಕೊಂಡಿದ್ದರು. ಮಾಜಿ ಸಚಿವ ಎ ಮಂಜು ಅವರ ಮಗ ಡಾ. ಮಂಥರ್ ಗೌಡಗೆ ಈ ಅಂಶ ವರದಾನವಾಗಿದೆ. ಮೇಲಾಗಿ, ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಸಾಕಷ್ಟು ಇರುವುದು ಮಂಥರ್ ಗೌಡರ ಗೆಲುವಿಗೆ ಸಹಕಾರಿ ಆಗಿದೆ. ಸತತವಾಗಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರ ವಿರೋಧಿ ಅಲೆ ಕ್ಷೇತ್ರದಲ್ಲಿ ಕಂಡುಬಂದಿತ್ತು. ಅಲ್ಲದೇ ಇಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆಯದೇ ಇದ್ದದ್ದೂ ಕೂಡ ಅಪ್ಪಚ್ಚು ರಂಜನ್ ಗೆಲುವಿನ ಓಟಕ್ಕೆ ಹಿನ್ನಡೆ ತಂದಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಇದೇ ವೇಳೆ ಕೊಡಗಿನ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಸ್ವೀಪ್ ಮಾಡಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ