Malleshwaram Election Results: ಮಲ್ಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗೆಲುವು
Malleshwaram Assembly Election Result 2023 Live Counting Updates: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗೆಲುವು ಕಂಡಿದ್ದಾರೆ.
Malleshwaram Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಮಲ್ಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗೆಲುವು ಸಾಧಿಸಿದ್ದಾರೆ. ಮೇ 10 ರಂದು ನಡೆದ ಮತದಾನದಲ್ಲಿ ಮಲ್ಲೇಶ್ವರ ಕ್ಷೇತ್ರದಲ್ಲಿ (ಮಲ್ಲೇಶ್ವರ -Malleshwaram Assembly Elections 2023) ಶೇ. 52.93 ರಷ್ಟು ಮತದಾನವಾಗಿತ್ತು. ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಮಲ್ಲೇಶ್ವರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಮೂಲ ಬೆಂಗಳೂರಿನವರೇ ಹೆಚ್ಚಾಗಿರುವ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿಯ ಡಾ. ಸಿ.ಎನ್ . ಅಶ್ವತ್ಥನಾರಾಯಣ, ಕಾಂಗ್ರೆಸ್ ನಿಂದ ಅನೂಪ್ ಅಯ್ಯಂಗಾರ್, ಜೆಡಿಎಸ್ ನಿಂದ ಉತ್ಕರ್ಷ್ ಸೇರಿದಂತೆ ವಿವಿಧ ಪಕ್ಷಗಳಿಂದ 12 ಅಭ್ಯರ್ಥಿಗಳು ಸ್ಪರ್ಧಿ ಸಿದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಬಿಜೆಪಿ- ಕಾಂಗ್ರೆಸ್‌ಗೆ ಸ್ಪರ್ಧೆ ನೀಡುವಷ್ಟು ಜೆಡಿಎಸ್ ಪ್ರಬಲವಾಗಿಲ್ಲವಾದರೂ ಎರಡೂ ಪಕ್ಷಗಳ ಸ್ಪರ್ಧೆಯ ಲಾಭ ಪಡೆಯಲು ಹವಣಿಸುತ್ತಿದೆ.
2.16 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಬ್ರಾಹ್ಮಣರು ಮತ್ತು ಒಕ್ಕಲಿಗರ ಮತಗಳೇ ನಿರ್ಣಾಯಕ. ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚಿದ್ದು, ಅಶ್ವತ್ಥನಾರಾಯಣ ಒಕ್ಕಲಿಗ ಅಭ್ಯರ್ಥಿಯಾದರೂ ಇಲ್ಲಿನ ಮತದಾರರು ಬಿಜೆಪಿಯ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಇದನ್ನು ಭೇದಿಸಲು ಬೇರೆ ಪಕ್ಷಗಳು ರಣತಂತ್ರ ರೂಪಿಸಿದರೂ ಪ್ರಯೋಜನವಾಗುತ್ತಿಲ್ಲ ಎಂಬುದನ್ನು ಕಳೆದ ಮೂರು ಚುನಾವಣೆಯ ಫಲಿತಾಂಶ ತಿಳಿಸುತ್ತಿದೆ. ಆದರೂ, ಕಾಂಗ್ರೆಸ್ ಭರ್ಜರಿ ರೋಡ್ ಶೋ ಮೂಲಕ ಸೆಳೆಯಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್’ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಇದು ಮತ ಗಳಿಕೆಗೆ ಹೊಡೆತ ನೀಡುತ್ತಿದೆ.
2004 ರಲ್ಲಿ ಕಾಂಗ್ರೆಸ್‌ನಿಂದ ಎಂ.ಆರ್. ಸೀತಾರಾಂ 47,029 ಮತ ಪಡೆಯುವ ಮೂಲಕ ವಿಜೇತರಾಗಿದ್ದರು. ಆ ವೇಳೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ 37,252 ಮತ ದೊರೆತು ಸೋತಿದ್ದರು. 2008ರಲ್ಲಿ ಇಬ್ಬರಿಗೂ ಪೈಪೋಟಿ ಏರ್ಪಟ್ಟಿತ್ತು . ಫಲಿತಾಂಶ ಉಲ್ಟಾ ಆಯಿತು. 53,609 ಮತ ಪಡೆಯುವ ಮೂಲಕ ಡಾ. ಅಶ್ವತ್ಥ ನಾರಾಯಣ ಗೆದ್ದರೆ, ಸೀತಾರಾಂ ಸೋತರು.
ಹ್ಯಾಟ್ರಿಕ್ ಗೆಲುವು ಕಂಡಿರುವ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ಅವರು ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕಿಳಿಯುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಆನಂತರ ಐಟಿ-ಬಿಟಿ, ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವರಾಗಿ ಕೆಲಸ ಮಾ ಡಿದ್ದಾರೆ. ಅವರ ಅವಧಿಯಲ್ಲಿ ಮಾಡಿರುವ ಬದಲಾವಣೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಓದು ಮಲ್ಲೇಶ್ವರ’, ‘ಆರೋಗ್ಯ ಮಲ್ಲೇಶ್ವರ, ‘ಸೌಕರ್ಯ ಮಲ್ಲೇಶ್ವರ’, ‘ಆಡು ಮಲ್ಲೇಶ್ವರ ಪರಿಕಲ್ಪನೆಗಳಡಿ ಕ್ಷೇತ್ರದ ಸರ್ವಾಂಗೀಣ ‘ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ತಾವು ಮಾಡಿರುವ ಕೆಲಸಗಳನ್ನು ಪ್ರಸ್ತಾಪಿಸಿ ಮತ್ತೊಮ್ಮೆ ಜನರ ಆಶೀರ್ವಾದ ಕೋರುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್, ಕಾಂಗಸ್ ಪ್ರಕಟಸಿರುವ ಗ್ಯಾರೆಂಟಿ ಸ್ಕೀಮ್‌ಗಳು, ಬಿಜೆಪಿ ಸರಕಾರದಲ್ಲಿ ನಡೆದಿದೆ ಎನ್ನಲಾದ ಶೇ. 40 , ಕಮಿಷನ್ ಮುಖ್ಯ ಉಪ ವಸ್ತುವನ್ನಾಗಿಟ್ಟುಕೊಂಡಿದ್ದಾರೆ. ಜತೆಗೆ ಸ್ಯಾಂಕಿ ಟ್ಯಾಂಕ್ ಅವ್ಯವಸ್ಥೆ, ಇತರೆ ಕೆಲವು ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಅಸ್ತ್ರವಾಗಿಟ್ಟುಕೊಂಡು ಮತ ಕೇಳಲು ಮುಂದಾಗಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಉತ್ಕರ್ಷ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರದ ದುರಾಚಾರ, ಭ್ರಷ್ಟಾಚಾರ ವಿಷಯಗಳನ್ನು ಜನರ ಮುಂದಿಟ್ಟು ಮತಯಾಚಿಸಿದ್ದಾರೆ.
Published On - 3:06 am, Sat, 13 May 23