Mangalore South Election 2023 Winner: ಡಿ. ವೇದವ್ಯಾಸ ಕಾಮತ್ ಭರ್ಜರಿ ಗೆಲುವು

ಕಾಂಗ್ರೆಸ್​​ ಮತ್ತು ಬಿಜೆಪಿಗೆ ಈ ಬಾರಿ ಪೈಪೋಟಿ ನಡೆದಿದ್ದು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಇದೆ, ಡಿ. ವೇದವ್ಯಾಸ ಕಾಮತ್ ಅವರು ಗೆಲುವು ಸಾಧಿಸಿದ್ದಾರೆ.

Mangalore South Election 2023 Winner: ಡಿ. ವೇದವ್ಯಾಸ ಕಾಮತ್ ಭರ್ಜರಿ ಗೆಲುವು
ಡಿ. ವೇದವ್ಯಾಸ ಕಾಮತ್
Follow us
ಅಕ್ಷಯ್​ ಪಲ್ಲಮಜಲು​​
|

Updated on: May 13, 2023 | 6:31 PM

ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ (Mangalore South Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿಗೆ ಈ ಬಾರಿ ಪೈಪೋಟಿ ನಡೆದಿದ್ದು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಇದೆ, ಡಿ. ವೇದವ್ಯಾಸ ಕಾಮತ್ ಅವರು ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲೂ ಭಾರೀ ಬಹುಮತದಲ್ಲಿ ವಿಜಯ ಸಾಧಿಸಿದ್ದಾರೆ. ಈ ಭಾಗದಲ್ಲಿ ಡಿ. ವೇದವ್ಯಾಸ ಕಾಮತ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ, ಇದರ ಜತೆಗೆ ಡಿ. ವೇದವ್ಯಾಸ ಕಾಮತ್ ಅವರು ಯಾವುದೇ ತಾರತಾಮ್ಯ ಇಲ್ಲಿದೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿ ಮತ್ತೆ ಗೆಲುವು ಸಾಧಿಸಿದ್ದಾರೆ.

ಇನ್ನೂ ಡಿ. ವೇದವ್ಯಾಸ ಕಾಮತ್ ಅವರಿಗೆ ಕಾಂಗ್ರೆಸ್​​ನಿಂದ ಮಾಜಿ ಶಾಸಕ ಜೆಆರ್​ ಲೋಬೋ ಪೈಪೋಟಿ ನೀಡಿದ್ದು, ಭಾರೀ ಅಂತರದಿಂದ ಸೋತಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿ. ವೇದವ್ಯಾಸ ಕಾಮತ್ ಮುಂದೆ ಸೋತಿದ್ದರು, ಆದರೆ ಈ ಬಾರಿ ಮತ್ತೆ ಸೋತಿದ್ದಾರೆ. ಜೆಆರ್​ ಲೋಬೋ ಅವರು ಚುನಾವಣೆ ಸಮಯದಲ್ಲಿ ಮಾತ್ರ ಜನರ ಬಳಿ ಬರುತ್ತಾರೆ ಎಂಬ ಮಾತು ಕೂಡ ಇದೆ. ಈ ಕಾರಣಕ್ಕೆ ಅವರು ಸೋತಿರಬಹುದು.

ಇನ್ನೂ ಆಪ್​​ನಿಂದ ಸಂತೋಷ್​​ ಕಾಮತ್ ಸೋತಿದ್ದರು. ಕೆಆರ್​ಎಸ್​​ ಪಕ್ಷದಿಂದ ವಿನ್ನಿ ಪಿಂಟೋ ಸ್ಪರ್ಧಿಸಿ ಸೋತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ