ಮೈಸೂರು: ರಾಜ್ಯ ಬಿಜೆಪಿ (BJP) ಪಡಸಾಲೆಯಲ್ಲಿ ಮಹತ್ತರವಾದ ಬೆಳವಣಿಗೆಯಾಗುತ್ತಿದೆ. ಈ ಬಾರಿ ಹೈಕಮಾಂಡ್ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಹಲವು ಹೊಸ ಪ್ರಯೋಗಗಳನ್ನು ಮಾಡಿದೆ. ಸಚಿವ ವಿ.ಸೋಮಣ್ಣ (V Somanna) ಅವರಿಗೆ ತವರು ಕ್ಷೇತ್ರ ಗೋವಿಂದರಾಜ ನಗರ (Govindraj Nagar) ಕ್ಷೇತ್ರದ ಟಿಕೆಟ್ ಕೈ ತಪ್ಪಿದೆ. ಆದರೆ ಹೈ ವೋಲ್ಟೇಜ್ ಕ್ಷೇತ್ರ ವರುಣಾ (Varuna) ಮತ್ತು ಚಾಮರಾಜನಗರ (Chamrajnagar) ಕ್ಷೇತ್ರದ ಟಿಕೆಟ್ ಲಭಿಸಿದೆ. ಈ ಹಿನ್ನೆಲೆ ಇಂದು (ಏ.14) ವಿ ಸೋಮಣ್ಣ ವರುಣಾ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಗೆಲ್ಲಲು ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂಪರಪ್ಪ (BS Yediyurappa) ಅವರ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿಯವರನ್ನು (KaPu Siddalingaswamy) ಭೇಟಿಯಾಗಿ ಅರ್ಧಗಂಟೆಗು ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಮಾತನಾಡಿದ ವಿ ಸೋಮಣ್ಣ ಅವರು ಕಾಪು ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಯಾವುದೊ ಜನ್ಮದಲ್ಲಿ ಅಣ್ಣನ್ನಾಗಿಯೋ, ತಮ್ಮನಾಗಿಯೂ ಹುಟ್ಟಿದ್ದೆವು ಅನಿಸುತ್ತೆ. ಸಿದ್ದಲಿಂಗಸ್ವಾಮಿಯವರಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ಇಂದಿನಿಂದ ವರುಣದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣಾವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಇಂದು ಎಂಎಲ್ಸಿ ಸ್ಥಾನಕ್ಕೆ ಲಕ್ಷ್ಮಣ ಸವದಿ ರಾಜಿನಾಮೆ, ಕಾಂಗ್ರೆಸ್ ಸೇರ್ಪಡೆ? ಬೆಳಗಾವಿ ರಾಜಕಾರಣದಲ್ಲಿ ಹೊಸ ಅಲೆ
ನಿನ್ನ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ. ಎಂದು ಕಾ.ಪು ಸಿದ್ದಲಿಂಗಸ್ವಾಮಿಯವರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ವಿ. ಸೋಮಣ್ಣ ಎಂದು ಘೋಷಣೆ ಕೂಗಿದ್ದಾರೆ.
ದಂಡಿಕೆರೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಪ್ರಚಾರ ಕಾರ್ಯ ಆಂಭಿಸಿದ್ದು, ವರುಣಾ ಕ್ಷೇತ್ರದ ಹೊಸಕೋಟೆ, ಹದಿನಾರು, ಹದಿನಾರು ಮೊಳೆ, ಸುತ್ತೂರು, ಬಿಳಿಗಲಿ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ವಿ. ಸೋಮಣ್ಣ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಬಿಜೆಪಿ ಮುಖಂಡ ಕಾ.ಪು ಸಿದ್ದಲಿಂಗಸ್ವಾಮಿ ಮೈಸೂರು ಪ್ರಾಂತ್ಯದ ವೀರಶೈವ-ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. 2013 ರಲ್ಲಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯಿಂದ ಹೊರನಡೆದು ಕೆಜೆಪಿ ಸೇರಿ, ವರುಣಾ ವಿಧಾನಸಭಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಪರಾಭವ ಹೊಂದಿದರು. ಯಡಿಯೂರಪ್ಪ ಅವರ ಹಿಂದೆ ಕೆಜೆಪಿ ಸೇರಿದ್ದ ಸಿದ್ದಲಿಂಗ ಸ್ವಾಮಿ, ಮತ್ತೆ ಯಡಿಯೂರಪ್ಪ ಅವರ ಜೊತೆಗೆನೇ ಮಾತೃಪಕ್ಷಕ್ಕೆ ಮರಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Fri, 14 April 23