Karnataka Assembly Elections 2023: ವರುಣ ರಣರಂಗದಲ್ಲಿ ಸೋಮಣ್ಣ ಎಂಟ್ರಿ, ಎದುರಾಗಿದೆ ನೂರೆಂಟು ಸವಾಲು

ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಕೆ ಹಿನ್ನೆಲೆ ವರುಣ ಕ್ಷೇತ್ರದ ಗ್ರಾಮಗಳಿಗೆ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಬೆಂಬಲಿಗರ ಪಡೆ ಸಜ್ಜುಗೊಳಿಸುತ್ತಿದ್ದಾರೆ.

Karnataka Assembly Elections 2023: ವರುಣ ರಣರಂಗದಲ್ಲಿ ಸೋಮಣ್ಣ ಎಂಟ್ರಿ, ಎದುರಾಗಿದೆ ನೂರೆಂಟು ಸವಾಲು
ವಿ.ಸೋಮಣ್ಣ
Follow us
ಆಯೇಷಾ ಬಾನು
|

Updated on:Apr 14, 2023 | 9:32 AM

ಮೈಸೂರು: ವರುಣ ರಾಜ್ಯದ ನಂಬರ್ 1 ಹೈ ವೋಲ್ಟೇಜ್ ಕ್ಷೇತ್ರವಾಗಿದೆ(Varuna Constituency) . ವರುಣ ಸಿದ್ದರಾಮಯ್ಯ(Siddaramaiah) ಹಾಗೂ ಸೋಮಣ್ಣ(V somanna) ನಡುವಿನೆ ಸ್ಪರ್ಧೆಗೆ ವೇದಿಕೆಯಾಗಿದೆ. ಇತ್ತ ಟಿಕೆಟ್ ಘೋಷಣೆ ಬೆನ್ನಲ್ಲೇ ಸೋಮಣ್ಣ ಮೈಸೂರು ಕಡೆ ಮುಖ ಮಾಡಿದ್ರು. ಸಿದ್ದರಾಮಯ್ಯ ಸಹಾ ಅಲರ್ಟ್ ಆಗಿ ತವರು ಜಿಲ್ಲೆಯತ್ತ ದೌಡಾಯಿಸಿದ್ದಾರೆ. ಕಾಂಗ್ರೆಸ್​​ ಕಲಿ ಸಿದ್ದರಾಮಯ್ಯರನ್ನ ಕಟ್ಟಿಹಾಕಲು, ಬಿಜೆಪಿ ಪಡೆ ಸಚಿವ ಸೋಮಣ್ಣರನ್ನ ಅಖಾಡಕ್ಕೆ ಇಳಿಸಿದೆ. ಹೀಗಾಗಿ ಕೊನೆ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಅಸಲಿ ಸವಾಲ್ ಎದುರಾಗಿದ್ದು, ಕ್ಷೇತ್ರವೂ ಕೂಡ ರಂಗೇರಿದೆ. ಇಂದಿನಿಂದ ವರುಣ ರಣರಂಗದಲ್ಲಿ ಸೋಮಣ್ಣ ಸಂಚಾರ ನಡೆಸಲಿದ್ದಾರೆ.

ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಕೆ ಹಿನ್ನೆಲೆ ವರುಣ ಕ್ಷೇತ್ರದ ಗ್ರಾಮಗಳಿಗೆ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಬೆಂಬಲಿಗರ ಪಡೆ ಸಜ್ಜುಗೊಳಿಸುತ್ತಿದ್ದಾರೆ. ಕ್ಷೇತ್ರದ ಸ್ಥಳೀಯ ನಾಯಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಕಾಪು ಸಿದ್ದವೀರಪ್ಪ ಮನೆಗೆ ಭೇಟಿ ನೀಡಿ ದಂಡಿಕೆರೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ವರುಣ ಪ್ರವಾಸ ಆರಂಭ ಮಾಡಲಿದ್ದಾರೆ. ನಂತರ ಹೊಸಕೋಟೆ, ಹದಿನಾರು, ಹದಿನಾರು ಮೊಳೆ, ಸುತ್ತೂರು, ಬಿಳಿಗಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮಣ್ಣ ಸಂಚಾರ ನಡೆಸಲಿದ್ದಾರೆ.

ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣಗೆ ನೂರೆಂಟು ಸವಾಲು

ಜಾತಿ ಲೆಕ್ಕಾಚಾರದ ಮೇಲೆ ವರುಣ ಕ್ಷೇತ್ರಕ್ಕೆ ಬಂದಿರುವ ವಿ.ಸೋಮಣ್ಣನವರಿಗೆ BS ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಪ್ತರು ಕೈಹಿಡಿಯುತ್ತಾರಾ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ವಿ.ಸೋಮಣ್ಣ ಎಂಟ್ರಿಯಿಂದ ಸ್ಥಳೀಯ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾಗಿದೆ. ವಿ.ಸೋಮಣ್ಣ ಹೊರಗಿನವರು ಎಂದು ಸ್ಥಳೀಯವಾಗಿ ಚರ್ಚೆ ಆರಂಭವಾಗಿದೆ. ಇದೆಲ್ಲವನ್ನ ಹೇಗೆ ಸಂಬಾಳಿಸುತ್ತಾರೆ ಎಂಬುದು ಕುತೂಹಲಕರವಾಗಿದೆ. ಮತ್ತೊಂದೆಡೆ ವರುಣಾ ಸಿದ್ದರಾಮಯ್ಯ ಲಕ್ಕಿ ಕ್ಷೇತ್ರ ಎನಿಸಿಕೊಂಡಿದೆ. ವರುಣಾದಿಂದ ಗೆದ್ದು ಸಿದ್ದರಾಮಯ್ಯ ಸಿಎಂ ಆಗಿದ್ದರು. ಜೊತೆಗೆ ಸಿದ್ದರಾಮಯ್ಯ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವತಃ ಸಿದ್ದು ಪುತ್ರನೆ ಅಪ್ಪನ ಪರ‌ ನಿಂತು ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯರಿಗೆ ಸ್ಥಳೀಯರ ಬೆಂಬಲ ಕೂಡ ಇದೆ.

ಇದನ್ನೂ ಓದಿ: Karnataka Assembly Elections 2023: ಪದ್ಮನಾಭನಗರದಲ್ಲಿ ಆರ್ ಅಶೋಕ್ ಸೋಲಿಸಲು ಡಿಕೆ ಶಿವಕುಮಾರ್ ಸರ್ವ ತಂತ್ರ

ವರುಣಾ ಎಂಟ್ರಿ ಮೊದಲ ದಿನವೇ ಸೋಮಣ್ಣಗೆ ಬಂಡಾಯದ ಬಿಸಿ

ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ವರುಣಾದಿಂದ ಸ್ಪರ್ದಿಸಿದ್ದ ತೋಟದಪ್ಪ ಬಸವರಾಜು ಅವರು ಈ ಬಾರಿಯು ವರುಣ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಸೋಮಣ್ಣಗೆ ವರುಣಾ ಟಿಕೆಟ್ ನೀಡಿದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 1980ರಿಂದಲೂ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೇನೆ. 2018ರಲ್ಲಿ ವ್ಯಾಪಕ ವಿರೋಧವಿದ್ದರೂ ವರುಣಾದಿಂದ ಸ್ಪರ್ಧೆ ಮಾಡಿ 37,819ಮತ ಪಡೆದೆ. ವಿರೋಧದ ನಡುವೆಯು ಜನರು ಮತ ನೀಡಿದ್ದಕ್ಕೆ ಚಿರಋಣಿಯಾಗಿದ್ದೇನೆ. ನನಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ವರುಣದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರಲ್ಲಿ ಯಾರಿಗಾದರೂ ಸಹ ಟಿಕೆಟ್ ನೀಡಬಹುದಿತ್ತು. ಮುಂದೆ ನಾನು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸೋಮಣ್ಣಗೆ ಬಂಡಾಯದ ಬಿಸಿ ತಟ್ಟಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:32 am, Fri, 14 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ