ಬೀಳಗಿಯಲ್ಲಿ ನಾಮಪತ್ರ ಸಲ್ಲಿಸಿದ ಮುರುಗೇಶ್ ನಿರಾಣಿ ಹೊಂದಿರುವ ಆಸ್ತಿ ಎಷ್ಟು ಗೊತ್ತಾ?

ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಇಂದು ಬೀಳಗಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಚಿವ ನಿರಾಣಿ 27.22 ಕೋಟಿ ಚರಾಸ್ತಿ, 8.60 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ಬೀಳಗಿಯಲ್ಲಿ ನಾಮಪತ್ರ ಸಲ್ಲಿಸಿದ ಮುರುಗೇಶ್ ನಿರಾಣಿ ಹೊಂದಿರುವ ಆಸ್ತಿ ಎಷ್ಟು ಗೊತ್ತಾ?
ನಾಮಪತ್ರ ಸಲ್ಲಿಸಿದ ಸಚಿವ ಮುರುಗೇಶ್ ನಿರಾಣಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 13, 2023 | 7:44 PM

ಬಾಗಲಕೋಟೆ: ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರು ಸಾಂಕೇತಿಕವಾಗಿ  ಜಿಲ್ಲೆಯ ಬೀಳಗಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಬೀಳಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಬೀಳಗಿ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿ ಕಾರಿಯಾಗಿರುವ ತಹಸೀಲ್ದಾರ್​ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಬೀಳಗಿ ಪಟ್ಟಣದ ಪ್ರಸಿದ್ದ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದರು. ನಿರಾಣಿಗೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿರುವ ಸಚಿವ ಮುರುಗೇಶ್ ನಿರಾಣಿ 27.22 ಕೋಟಿ ಚರಾಸ್ತಿ, 8.60 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಹೊಂದಿರುವ ಆಸ್ತಿ ವಿವರ ಹೀಗಿದೆ

ಚರಾಸ್ತಿ: 27.22 ಕೋಟಿ ರೂ.

ಸ್ಥಿರಾಸ್ತಿ: 8.60 ಕೋಟಿ ರೂ.

ಚರಾಸ್ತಿ (ಪತ್ನಿ ಕಮಲಾ ನಿರಾಣಿ ಹೆಸರಲ್ಲಿ): 38.35 ಕೋಟಿ ರೂ.

ಸ್ಥಿರಾಸ್ತಿ (ಪತ್ನಿ ಕಮಲಾ ನಿರಾಣಿ ಹೆಸರಲ್ಲಿ): 23.85 ಕೋಟಿ ರೂ.

ಸಾಲ (ಮುರುಗೇಶ್ ನಿರಾಣಿ ಹೆಸರಿನಲ್ಲಿ): 22.62 ಕೋಟಿ ರೂ.

ಸಾಲ (ಪತ್ನಿ ಕಮಲಾ ನಿರಾಣಿ ಹೆಸರಿನಲ್ಲಿ): 47.56 ಕೋಟಿ ರೂ.

ಕಾರು: ಮುರುಗೇಶ್​ ಹೆಸರಲ್ಲಿ ಮೂರು, ಪತ್ನಿ ಹೆಸರಲ್ಲಿ ಒಂದು

ಚಿನ್ನಾಭರಣ: ಮುರುಗೇಶ್ ನಿರಾಣಿ ಬಳಿ 350 ಗ್ರಾಂ, ಪತ್ನಿ ಬಳಿ 1150 ಗ್ರಾಂ ಚಿನ್ನಾಭರಣ

ನನಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ‌: ಮುರುಗೇಶ್ ನಿರಾಣಿ

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಈಗ ಐದನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲ ಹಿರಿಯರು, ಕಾರ್ಯಕರ್ತರನ್ನು ಕರೆದುಕೊಂಡು ಎಪ್ರಿಲ್ 18 ರಂದು ಮತ್ತೊಮೆ ಸಲ್ಲಿಸುತ್ತೇನೆ. ನಾವು ಮಾಡಿರುವ ಕೆಲಸ ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನೋಡಿದರೆ, ಕಾಂಗ್ರೆಸ್​​, ಜೆಡಿಎಸ್ ತೊರೆದು ಹತ್ತಾರು ಸಾವಿರ ಜನರು ಬಿಜೆಪಿ ಸೇರಿದ್ದಾರೆ. ನನಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ‌ ಎಂದರು.

ಇದನ್ನೂ ಓದಿ: ಪದ್ಮನಾಭನಗರ ಅಭ್ಯರ್ಥಿಗೆ ಬಿ ಫಾರಂ ನೀಡದ ಡಿಕೆ ಶಿವಕುಮಾರ್ ನಡೆಯ ಹಿಂದಿನ ಮರ್ಮವೇನು?

ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಂದರ್ಭ ಇದೆ. ಬಸವಪ್ರಭು ಸರನಾಡಗೌಡ ನಾನು ಒಳ್ಳೆಯ ಸ್ನೇಹಿತರು. ಅವರು ಕಾಂಗ್ರೆಸ್​ನಲ್ಲಿ ಇದ್ದರೂ ಸಹಿತ ಒಳ್ಳೆಯ ಸ್ನೇಹಿತರು. ಅವರು ಎರಡು ಬಾರಿ ಅಖಾಡದಲ್ಲಿದ್ದರು. ಈಗ ಅವರು ನಮಗೆ ಬೆಂಬಲ ನೀಡಬಹುದು. ಅಥವಾ ನಮ್ಮ ಪಕ್ಷ ಸೇರುವ ವಿಶ್ವಾಸವಿದೆ. ಎಸ್​ಆರ್​ ಪಾಟಿಲ್ ದೇವರಹಿಪ್ಪರಗಿ ಟಿಕೆಟ್​ಗಾಗಿ ಕಾಯುತ್ತಿದ್ದಾರೆ. ನಂತರ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.

ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್​ನವರು ತಾಂಡಾ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದರು. ಮೀಸಲಾತಿಯನ್ನೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಹೇಳಿದ್ದರು. ತಿಳುವಳಿಕೆ ಕೊರತೆ ಕಾರಣ ಅವರು ವಿರೋಧ ಮಾಡಿದ್ದರು. ಆದರೆ ಈಗ ಎಲ್ಲರಿಗೂ ಮನವರಿಕೆ ಮಾಡಲಾಗಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ಬಾರಿ ಕಳೆದ ಚುನಾವಣೆಗಿಂತ ಹದಿನೈದು ಪ್ರತಿಶತ ಮತಗಳು ತಾಂಡಾದಲ್ಲಿ ಹೆಚ್ಚು ಬೀಳಲಿವೆ ಎಂದು ಹೇಳಿದರು.

ಇದನ್ನೂ ಓದಿ: YSV Datta: ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ; ಕಡೂರು ಟಿಕೆಟ್ ಫಿಕ್ಸ್

ಏನು ಜವಾಬ್ದಾರಿ ಕೊಡುತ್ತಾರೆ ವರಿಷ್ಟರಿಗೆ ಬಿಟ್ಟಿದ್ದು

ಸಿಎಂ ರೇಸ್​ನಲ್ಲಿ ಹೆಸರು ಬಂದ ಹಿನ್ನೆಲೆ ಗೆಲುವು ಎಷ್ಟು ಸವಾಲು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ಚುನಾವಣೆ ಬಹಳ ಸರಳವಿದೆ. ನಿಶ್ಚಿತವಾಗಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ. ಮುಂದೆ ಏನು ಜವಾಬ್ದಾರಿ ಕೊಡುತ್ತಾರೆ ವರಿಷ್ಟರಿಗೆ ಬಿಟ್ಟಿದ್ದು. ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ. ಚುನಾವಣೆಯಲ್ಲಿ ಗೆದ್ದವರು ಎಲ್ಲರೂ ಸಿಎಂ ರೇಸ್​ನಲ್ಲಿರುತ್ತಾರೆ. ಸಿಎಂ ಆಗಲಿಕ್ಕೆ ಯೋಗ್ಯ ಇರುವಂತವರಿಗೆ ಟಿಕೆಟ್ ಕೊಟ್ಟಿರುತ್ತಾರೆ. ಸಿಎಂ ಹುದ್ದೆಗೆ ಯಾರನ್ನು ಆಯ್ಕೆ ಮಾಡ್ತಾರೆ, ಅವರು ಅದನ್ನು ನಿಭಾಯಿಸುತ್ತಾರೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:44 pm, Thu, 13 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್