Karnataka Election Result: ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು, ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ

|

Updated on: May 14, 2023 | 12:43 PM

ಕರ್ನಾಟಕದಲ್ಲಿ ಕಾಂಗ್ರೆಸ್​ ಭಾರಿ ಗೆಲುವು ಸಾಧಿಸುತ್ತಿದ್ದಂತೆಯೇ ಮೈಲಾರಲಿಂಗನ ಭವಿಷ್ಯವಾಣಿ ಮುನ್ನೆಲೆಗೆ ಬಂದಿದೆ. ಹಾಗಾದ್ರೆ, ಮೈಲಾರಲಿಂಗನ ಭವಿಷ್ಯವಾಣಿಯಲ್ಲಿ ಏನಿದೆ? ಎನ್ನುವ ವಿವರ ಇಲ್ಲಿದೆ ನೋಡಿ.

Karnataka Election Result: ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು, ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ
Follow us on

ಬೆಂಗಳೂರು: ಚುನಾವಣಾ ಸಮೀಕ್ಷೆಗಳ ವರದಿಯನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್​ ಭಾರಿ ಗೆಲುವು ಸಾಧಿಸಿದೆ. . 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್​​ 135 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ ಪಡೆ ಬರೀ 66 ಸ್ಥಾನದಲ್ಲಿ ಗೆಲುವಲ್ಲಿ ಮಾತ್ರ ಶಕ್ತವಾಗಿದೆ. ಇನ್ನು ನಾನೇ ಕಿಂಗ್ ಮೇಕರ್ ಎಂದು ವಿಶ್ವಾಸದಲ್ಲಿ ಜೆಡಿಎಸ್​ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕೆಲ ಸ್ವಾಮೀಜಿಗಳು ನುಡಿದ್ದ ರಾಜಕೀಯ ಭವಿಷ್ಯ ಭಾರೀ ವೈರಲ್ ಆಗುತ್ತಿದೆ. ಹೌದು..ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಆಡಳಿತಕ್ಕೆ ಬರಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದು, ಅದು ಇದೀಗ ಸತ್ಯವಾಗಿದೆ. ಇನ್ನು ಮೈಲಾರಲಿಂಗನ ಭವಿಷ್ಯವಾಣಿ ನಿಜವಾಗಿದೆ. ಹಾಗಾದ್ರೆ, ಮೈಲಾರಲಿಂಗನ ಭವಿಷ್ಯವಾಣಿಯಲ್ಲಿ ಏನಿದೆ? ಎನ್ನುವ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ: ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್’; ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ವಾಣಿ ಅರ್ಥವೇನು? ಇಲ್ಲಿದೆ ವಿಶ್ಲೇಷಣೆ

ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತಂತೆ ಈ ಹಿಂದೆ ಐತಿಹಾಸಿಕ ಮೈಲಾರಲಿಂಗೇಶ್ವರ ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಕಾರ್ಣಿಕೋತ್ಸವ ಜರುಗಿತ್ತು. 14 ಅಡಿ ಎತ್ತರದ ಬಿಲ್ಲನ್ನೇರಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ವರ್ಷದ ಕಾರ್ಣಿಕ ಭವಿಷ್ಯವನ್ನು ಗೊರವಯ್ಯ ರಾಮಪ್ಪ ನುಡಿದಿದ್ದರು. ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾನೆ ಎಂದು ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಲಾಗಿತ್ತು. ಇದೀಗ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು, ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದ ಬೆನ್ನಲ್ಲೇ ಭವಿಷ್ಯವಾಣಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಜಕೀಯವಾಗಿ ವಿಶ್ಲೇಷಣೆ

ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಎಂದರೆ “ಈ ಹಿಂದೆಯೂ ಕಾರಣಿಕ ಆಗಿದ್ದು, ಈಗ ಮತ್ತೆ ಆಗಿದೆ ಎಂದು ವಿಶ್ಲೇಷಣೆ ಮಾಡಿದ್ದರು. ಈ ಕಾರಣಿಕವನ್ನು ಜನರು ತಮ್ಮ ಭಾವಕ್ಕೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ನುಡಿಯನ್ನು ರಾಜಕೀಯವಾಗಿ, ಸಾಮಾಜಿಕವಾಗಿ ವಿವಿಧ ಅರ್ಥಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ ಎಂದು ರಾಜಕೀಯವಾಗಿ ಈ ಕಾರಣಿಕದ ನುಡಿಯನ್ನು ವಿಶ್ಲೇಷಿಸಲಾಗಿತ್ತು. ಹೀಗಾಗಿ ಮೂರು ಪಕ್ಷದಲ್ಲಿ ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿ ಯಾರು? ಎನ್ನುವುದೇ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ನಿಜವಾಯ್ತು ಕೋಡಿಮಠದ ಶ್ರೀ ನುಡಿದಿದ್ದ ರಾಜಕೀಯ ಭವಿಷ್ಯ; ಸುಳ್ಳಾಯ್ತು ಸಮೀಕ್ಷೆಗಳು

ಇನ್ನು ಕೋಡಿಶ್ರೀ ಸಹ ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಜಯನಗರದಲ್ಲಿ ಕಳೆದ ಮೂರು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಕಾಂಗ್ರೆಸ್​ ಬಹುಮತ ಪಡೆದುಕೊಂಡಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ