ಸುರಪುರದಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಸೋಲು: ತೀವ್ರ ಆಘಾತಕ್ಕೆ ಒಳಗಾದ ಅಭಿಮಾನಿ ಆಸ್ಪತ್ರೆಗೆ ದಾಖಲು
ಮೇ.10 ರಂದು ನಡೆದಿದ್ದ ವಿಧಾನಸಭೆ ಚುನಾವಣಾ ಮತದಾನದ ಫಲಿತಾಂಶ ನಿನ್ನೆ(ಮೇ.13)ಹೊರಬಂದಿದ್ದು, ಸುರಪುರ ಕ್ಷೇತ್ರದಲ್ಲಿ ರಾಜುಗೌಡ ಪರಾಭವಗೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಯೊಬ್ಬರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಯಾದಗಿರಿ: ಮೇ.10 ರಂದು ನಡೆದಿದ್ದ ವಿಧಾನಸಭೆ ಚುನಾವಣಾ ಮತದಾನದ ಫಲಿತಾಂಶ(Karnataka Assembly Elections 2023 Result) ನಿನ್ನೆ (ಮೇ.13) ಹೊರಬಂದಿದ್ದು, ಸುರಪುರ (Surapur) ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು ಗೆದ್ದು, ಬಿಜೆಪಿ ಅಭ್ಯರ್ಥಿ ರಾಜುಗೌಡ(rajugowda) ಪರಾಭವಗೊಂಡಿದ್ದರು. ಈ ವಿಷಯ ತಿಳಿದು ರಾಜುಗೌಡ ಅಭಿಮಾನಿಯೊಬ್ಬರು ಆಘಾತಕ್ಕೆ ಒಳಗಾಗಿದ್ದಾರೆ. ಆಘಾತಕ್ಕೆ ಒಳಗಾದ ರಾಜುಗೌಡ ಅಭಿಮಾನಿ ಗದ್ದೆಪ್ಪ ಪೂಜಾರಿ. ಇನ್ನು ತೀವ್ರ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡಿರುವ ಗದ್ದೆಪ್ಪ ಪೂಜಾರಿಯವರನ್ನ ಕೂಡಲೇ ಬಾಗಲಕೋಟ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಭಿಮಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವ ಸುದ್ದಿ ತಿಳಿದ ಕೂಡಲೇ ಮಾಜಿ ಶಾಸಕ ರಾಜುಗೌಡ ಅವರು ಹೋಗಿ ಭೇಟಿಯಾಗಿದ್ದಾರೆ.
ಇನ್ನು ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ 2004 ರಿಂದಲೂ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರ ನಡುವೆ ನೇರಾನೇರ ಹಣಾಹಣಿ ನಡೆಯುತ್ತಾ ಬಂದಿದೆ. 2000 ದಲ್ಲಿ ರಾಜುಗೌಡ ಕೆಎನ್ಡಿಪಿಯಿಂದ, 2008 ರಲ್ಲಿ ಬಿಜೆಪಿಯಿಂದ ಗೆದ್ದಿದ್ದು, 2013 ರಲ್ಲಿ ಕಾಂಗ್ರೆಸ್ನಿಂದ ವೆಂಕಟಪ್ಪ ನಾಯಕ ಗೆದ್ದಿದ್ದರು. ಬಳಿಕ 2018 ರಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ 22568 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಈ ಮೂಲಕ ಮೂರನೇ ಬಾರಿ ಶಾಸಕರಾಗಿದ್ದರು.
ಇದನ್ನೂ ಓದಿ: Yadgir Assembly Election Result: ಮನೆಯಲ್ಲಿ ಸಾವಾದರೂ ಮತ ಎಣಿಕೆ ಕೇಂದ್ರಕ್ಕೆ ಬಂದ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ
16 ಕಿ.ಮೀ ದೀರ್ಘದಂಡ ನಮಸ್ಕಾರ ಹಾಕಿದ್ದ ಅಭಿಮಾನಿಗಳು
ಹೌದು ಹೇಗಾದರೂ ರಾಜುಗೌಡ ಅವರನ್ನೇ ಗೆಲ್ಲಿಸು ಎಂದು ಸುಡುವ ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳಿಬ್ಬರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ್ದರು. ಸುರಪುರ ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತೊಮ್ಮೆ ಗೆದ್ದು ಬರಲಿ ಎಂದು ಕರ್ನಾಳ ಗ್ರಾಮದ ಮಲ್ಲನಗೌಡ ಹಾಗೂ ಭೀಮಣ್ಣ ಎಂಬ ಇಬ್ಬರು ಅಭಿಮಾನಿಗಳು ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿಕೊಂಡು ಬಂದಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Sun, 14 May 23