ಬೆಂಗಳೂರಿನಲ್ಲಿಂದು ಪ್ರಧಾನಿ ನರೇಂದ್ರ ಮೋದಿ 2ನೇ ದಿನದ ರೋಡ್​ ಶೋ; ಈ ರಸ್ತೆಗಳಲ್ಲಿ ಸಂಚಾರ ಬಂದ್

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೂಡ ಬೆಂಗಳೂರಿನಲ್ಲಿ 2ನೇ ಸುತ್ತಿನ ರೋಡ್​ ಶೋ ನಡೆಸಲಿದ್ದು ಪೊಲೀಸರು ಮೋದಿ ಸಂಚರಿಸುವ ರಸ್ತೆ ಮಾರ್ಗಗಳನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಬಂದ್ ಮಾಡಲಿದ್ದಾರೆ.

ಬೆಂಗಳೂರಿನಲ್ಲಿಂದು ಪ್ರಧಾನಿ ನರೇಂದ್ರ ಮೋದಿ 2ನೇ ದಿನದ ರೋಡ್​ ಶೋ; ಈ ರಸ್ತೆಗಳಲ್ಲಿ ಸಂಚಾರ ಬಂದ್
ಮೋದಿ 2ನೇ ದಿನದ ರೋಡ್ ಶೋ​
Follow us
ಆಯೇಷಾ ಬಾನು
|

Updated on:May 07, 2023 | 7:20 AM

ಬೆಂಗಳೂರು: ಮೇ 06ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ 26 ಕಿಲೋ ಮೀಟರ್‌ ರೋಡ್‌ ಶೋ ನಡೆಸಿರೋ ಪ್ರಧಾನಿ ನರೇಂದ್ರ ಮೋದಿ(Narendra Modi), ಇಂದು ಕೂಡ ಬೆಂಗಳೂರಿನ ರಸ್ತೆಗೆ ಇಳಿಯಲಿದ್ದಾರೆ. 6 ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು 6 ಕಿಲೋ ಮೀಟರ್‌ ಸವಾರಿ ಮಾಡಲಿದ್ದಾರೆ. ರೋಡ್‌ ಶೋ ಮೂಲಕವೇ ಮತಬೇಟೆಯಾಡಲಿದ್ದಾರೆ. ಅಷ್ಟಕ್ಕೂ ಇಂದು ಮೋದಿ ಸಾಗೋ ಮಾರ್ಗ ಯಾವುದು? ಎಲ್ಲೆಲ್ಲಿ ರಸ್ತೆಗಳು ಬಂದ್‌ ಆಗಲಿವೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಪ್ರಧಾನಿ 6 ಕಿಲೋ ಮೀಟರ್‌ ರೋಡ್‌ ಶೋ

ನಿನ್ನೆ ಬೆಂಗಳೂರಿನಲ್ಲಿ ಸಕ್ಸಸ್‌ ಫುಲ್ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ಮತ್ತೊಂದು ಸುತ್ತಿನ ರೋಡ್ ಶೋಗೆ ಸಜ್ಜಾಗಿದ್ದಾರೆ. ಇಂದು(ಮೇ 07) ಬೆಳಗ್ಗೆ 10 ಗಂಟೆಯಿಂದ ಬೆಳಗ್ಗೆ 11:30 ರವರೆಗೆ ಪ್ರಧಾನಿ ರೋಡ್‌ ಶೋ ಮೂಲಕವೇ ಮತಬೇಟೆ ನಡೆಸಲಿದ್ದಾರೆ. ಸಿವಿರಾಮನ್ ನಗರ ವಿಧಾನಸಭೆ ಕ್ಷೇತ್ರದ ಸುರಂಜನ್ ದಾಸ್ ರಸ್ತೆಯ ಬೆಮೆಲ್ ಸರ್ಕಲ್‌ನಿಂದ ಶುರುವಾಗುವ ಮೋದಿ ರೋಡ್ ಶೋ, ಟ್ರಿನಿಟಿ ಜಂಕ್ಷನ್‌ನಲ್ಲಿ ಕೊನೆಯಾಗಲಿದೆ. ರಾಜಭವನದಲ್ಲಿ ವಾಸ್ತವ್ಯ ಹೂಡಿರೋ ಪ್ರಧಾನಿ, ಬೆಳಗ್ಗೆ 10 ಗಂಟೆಗೆ ಬೆಮೆಲ್ ಸರ್ಕಲ್‌ನಿಂದ ರೋಡ್ ಶೋ ಆರಂಭಿಸಲಿದ್ದಾರೆ.

ಮೋದಿ ರೂಟ್‌ ಮ್ಯಾಪ್‌

ಬೆಮೆಲ್‌ಸರ್ಕಲ್ ನಿಂದ ರೋಡ್ ಶೋ ಪ್ರಾರಂಭ ಆಗಲಿದ್ದು, ನ್ಯೂ ತಿಪ್ಪಸಂದ್ರ ರಸ್ತೆ ಮೂಲಕ 80 ಫೀಟ್ ರೋಡ್‌ನಲ್ಲಿ ಸಾಗಲಿದೆ . ನಂತ್ರ ಇಂದಿರಾನಗರ 12 ನೇ ಮುಖ್ಯರಸ್ತೆ ಮಾರ್ಗವಾಗಿ 100 ಫೀಟ್ ರೋಡ್‌ಗೆ ಬರಲಿದೆ. ಬಳಿಕ ಸಿಎಂಹೆಚ್ ರೋಡ್, ಎಸ್.ವಿ ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆ ಸಾಗಲಿದೆ. ಅಲ್ಲಿಂದ ಸಾಗಿ ಟ್ರಿನಿಟಿ ಜಂಕ್ಷನ್‌ನಲ್ಲಿ ರೋಡ್ ಶೋ ಕೊನೆಗೊಳ್ಳಲಿದೆ.

ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ

ಇಂದಿನ ರೋಡ್‌ಶೋ ಭದ್ರತೆಗೆ ಒಟ್ಟು ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನು ಪ್ರಧಾನಿ ರೋಡ್ ಶೋ ಹಿನ್ನಲೆಯಲ್ಲಿ ಸಂಚಾರಿ ಪೋಲಿಸರು ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ರ ವರೆಗೆ ರೋಡ್ ಶೋ ನಡೆಯುವ ರಸ್ತೆಗಳೂ ಸೇರಿದಂತೆ ಪ್ರಧಾನಿ ಸಂಚರಿಸುವ ರಸ್ತೆಗಳಾದ, ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣಮಹರ್ಷಿ ರಸ್ತೆ, ಓಲ್ಡ್ ಏರ್ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ್‌ನಗರ ಕ್ರಾಸ್, ಬಿಇಎಂಎಲ್ ಜಂಕ್ಷನ್, ಜೀವನ್ ಭೀಮಾನಗರ ಮುಖ್ಯ ರಸ್ತೆ, ಇಂದಿರಾನಗರ 80 ಅಡಿ ರಸ್ತೆ, ಇಂದಿರಾನಗರ 12ನೇ ಮುಖ್ಯ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಸಿಎಂಹೆಚ್ ರಸ್ತೆ, 17ನೇ F ಕ್ರಾಸ್, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ, ಟ್ರಿನಿಟಿ ಜಂಕ್ಷನ್‌ ಸೇರಿದಂತೆ ಹಲವೆಡೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:15 am, Sun, 7 May 23

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ