Padmanabhanagar Election Results: ಪದ್ಮನಾಭ ನಗರ ಕ್ಷೇತ್ರದಲ್ಲಿ ಆರ್​ ಅಶೋಕ್​ಗೆ ಗೆಲುವು

Padmanabhanagar Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯಲ್ಲಿ ಪದ್ಮನಾಭ ನಗರ ಕ್ಷೇತ್ರದಲ್ಲಿ ಆರ್​ ಅಶೋಕ್​ಗೆ ಗೆಲುವು ಕಂಡಿದ್ದಾರೆ.

Padmanabhanagar Election Results: ಪದ್ಮನಾಭ ನಗರ ಕ್ಷೇತ್ರದಲ್ಲಿ ಆರ್​ ಅಶೋಕ್​ಗೆ ಗೆಲುವು
ಪದ್ಮನಾಭ ನಗರ ಕ್ಷೇತ್ರದಲ್ಲಿ ಆರ್​ ಅಶೋಕ್​ಗೆ ಗೆಲುವು
Follow us
ಸಾಧು ಶ್ರೀನಾಥ್​
|

Updated on:May 13, 2023 | 3:03 PM

Padmanabhanagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಪದ್ಮನಾಭ ನಗರ ಕ್ಷೇತ್ರದಲ್ಲಿ ಆರ್​ ಅಶೋಕ್​ಗೆ ಗೆಲುವು ಕಂಡಿದ್ದಾರೆ. ಇನ್ನು ಕನಕಪುರದಿಂದಲೂ ಸ್ಪರ್ಧಿಸಿದ್ದ ಅಶೋಕ್ ಅವರು ಡಿಕೆ ಶಿವಕುಮಾರ್​ ವಿರುದ್ಧ ಭಾರಿ ಅಪಜಯ ಅನುಭವಿಸಿದ್ದಾರೆ.  ಮೇ 10 ರಂದು ನಡೆದ ಮತದಾನದಲ್ಲಿ ಪದ್ಮನಾಭ ನಗರ ಕ್ಷೇತ್ರದಲ್ಲಿ (Padmanabhanagar Assembly Elections 2023) ಶೇ. 51.4ರಷ್ಟು ಮತದಾನವಾಗಿತ್ತು. ಪ್ರತಿ ಬಾರಿಯೂ ಮತ ಗಳಿಕೆ ಪ್ರಮಾಣದಲ್ಲಿ ಹೆಚ್ಚಳವನ್ನೇ ಕಾಣುತ್ತಿರುವ ಆರ್. ಅಶೋಕ್ ಈ ಬಾರಿಯೂ ಗೆಲುವು ಕಂಡಿದ್ದಾರೆ. ಪದ್ಮನಾಭ ನಗರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೀಗಿದೆ – ಮುಸ್ಲಿಮರು : 42000, ಹಿಂದುಳಿದ ವರ್ಗ: 53000, ಪರಿಶಿಷ್ಟ ಜಾತಿ : 42000, ಬ್ರಾಹ್ಮಣ : 56000, ಒಕ್ಕಲಿಗ 51000, ಕಮ್ಮ ನಾಯ್ಡು : 14000, ರೆಡ್ಡಿ : 2000, ಲಿಂಗಾಯತ: 7500, ಉತ್ತರ ಭಾರತೀಯರು : 13500, ತಮಿಳು ಭಾಷಿಕರು : 14800, ವಿಶ್ವ ಕರ್ಮ: 9700, ಮರಾಠಿಗರು : 3000, ಭಂಟರು : 7345, ವೈಶ್ಯರು 5789.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಸೋಲು ಕಾಣದೇ ಹ್ಯಾಟ್ರಿಕ್‌ ಸಾಧಿಸಿರುವ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಈ ಬಾರಿ ಕನಕಪುರ ಕ್ಷೇತ್ರದಲ್ಲೂ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಡಬಲ್ ಧಮಾಕಾ ನೀಡಿತ್ತು.  ಆದರೆ ಒಂದರಲ್ಲಿ ಸೋತು ಮತ್ತೊಂದರಲ್ಲಿ ಗೆಲುವು ಕಂಡಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟ ಪದ್ಮನಾಭನಗರ ಪ್ರಶಾಂತ ಜೀವನ ಪದ್ಧತಿಯ ಪ್ರದೇಶವಾಗಿದೆ. ಪ್ರತಿ ಬಾರಿಯಂತೆ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಪ್ರಯೋಗವನ್ನು ಕಾಂಗ್ರೆಸ್‌ ಪಕ್ಷವನ್ನು ಮುಂದುವರಿಸಿದ್ದು ಕಮ್ಮ ನಾಯ್ಡು ಸಮುದಾಯಕ್ಕೆ ಸೇರಿದ ರಘುನಾಥ ನಾಯ್ಡುಗೆ ಟಿಕೆಟ್ ನೀಡಿದೆ. ಈ ಸಮುದಾಯಕ್ಕೆ ಸೇರಿದವರೂ ಸೇರಿದಂತೆ 75,000ಕ್ಕೂ ಮೇಲ್ಪಟ್ಟು ಹಿಂದುಳಿದ ವರ್ಗದವರು ಈ ಕ್ಷೇತ್ರದಲ್ಲಿ ಇರುವ ಕಾರಣಕ್ಕೆ ಒಕ್ಕಲಿಗರ ಬದಲು ರಘುನಾಥ ನಾಯ್ಡು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದೆ.

2008ರ ಪುನರ್ ವಿಂಗಡಣೆಯ ಬಳಿಕ ಆ‌. ಅಶೋಕ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಒಕ್ಕಲಿಗ, ಬಾಹ್ಯಣ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ವರ್ಗದಲ್ಲಿ ಸಂಖ್ಯೆಯಲ್ಲಿರುವ ಈ ಕ್ಷೇತ್ರದ ಒಂದೆರಡು ಭಾಗದಲ್ಲಿ ಮಾತ್ರ ಮುಸ್ಲಿಂ ಬಾಹುಳ್ಯವಿದೆ. ಪ್ರತಿ ಚುನಾವಣೆಯಲ್ಲೂ ಮತ ಗಳಿಕೆಯ ಪ್ರಮಾಣದಲ್ಲಿ ಹೆಚ್ಚಳವನ್ನೇ ಕಾಣುತ್ತಿರುವ ಆರ್. ಅಶೋಕ್, ಕ್ಷೇತ್ರದಲ್ಲಿ ಜಾತಿ, ಮತ, ಭಾಷೆಯ ದೃಷ್ಟಿಯಿಂದ ಯಾವುದೇ ವಿವಾದ ಸೃಷ್ಟಿಯಾಗದಂತೆ ನೋಡಿಕೊಂಡಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 4:12 am, Sat, 13 May 23