ಪ್ರಧಾನಿ ಮೋದಿ ಕಾಲಿಗೆ ಬೀಳಬಾರದು, ಯಾಕೆ ಗೊತ್ತಾ? ಯತ್ನಾಳ್ ನೀಡಿದ ಕಾರಣ ಇಲ್ಲಿದೆ

|

Updated on: May 01, 2023 | 10:14 PM

ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಅವರ ಕಾಲಿಗೆ ಬೀಳದೆ ನಮಸ್ಕಾರ ಮಾಡಿ ನಿಲ್ಲಬೇಕು. ಆದ್ದರಿಂದಲೇ ನಾನು ನರೇಂದ್ರ ಮೋದಿ ಕಾಲಿಗೆ ಬೀಳುವುದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕಾಲಿಗೆ ಬೀಳಬಾರದು, ಯಾಕೆ ಗೊತ್ತಾ? ಯತ್ನಾಳ್ ನೀಡಿದ ಕಾರಣ ಇಲ್ಲಿದೆ
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಯತ್ನಾಳ್
Image Credit source: Facebook
Follow us on

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾಲಿಗೆ ಬೀಳಬಾರದು. ಒಂದು ವೇಳೆ ಕಾಲಿಗೆ ಬಿದ್ದರೆ ಟಿಕೆಟ್ ಸಿಗಲಾರದು!’ ಹೀಗೆ ಹೇಳಿದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal)​ ಹೇಳಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ಏನು ಗೊತ್ತಾ? ಪ್ರಧಾನಿ ಮೋದಿ ಅವರು ಬಹಳ ಸರಳ ವ್ಯಕ್ತಿ ಎಂಬುದು. ಹೌದು, ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಅವರ ಕಾಲಿಗೆ ಬೀಳದೆ ನಮಸ್ಕಾರ ಮಾಡಿ ನಿಲ್ಲಬೇಕು. ಆದ್ದರಿಂದಲೇ ನಾನು ನರೇಂದ್ರ ಮೋದಿ ಕಾಲಿಗೆ ಬೀಳುವುದಿಲ್ಲ. ಮೋದಿಯವರು ಅಷ್ಟು ಸರಳ ವ್ಯಕ್ತಿಯಾಗಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಇಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಐಟಿ ದಾಳಿಗಳಾಗಲಿವೆ ಅಂತ ಬೆಳಗಾವಿ ಶಾಸಕರೊಬ್ಬರು ಹೇಳಿದ್ದಾರೆ. ಐವತ್ತು ಕಡೆ ಆಗುತ್ತದೆ ಎಂದಿದ್ದಾರೆ. ಮತ್ತ ಅಕ್ರಮವಾಗಿ ದುಡ್ಡು ಯಾಕೆ ಕೂಡಿ ಇಟ್ಟಿದ್ದೀರಾ? ಅಂಥ ರೊಕ್ಕ ಇದರೆ ಸರ್ಕಾರಕ್ಕೆ ಕೊಟ್ಟು ಬಿಡಿ. ಸಿಕ್ಕಾಪಟ್ಟೆ ಲೂಟಿ ಮಾಡಿದ್ದಾರೆ. ಇನ್ನು ಬಹಳ ಜನರದ್ದು ಹೊರಗೆ ಬರುವುದು ಇದೆ ಎಂದು ಯತ್ನಾಳ್ ಗುಡುಗಿದರು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅವರು, ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಮತ ಯಾಚಿಸಿದರು.

ಇದನ್ನೂ ಓದಿ: Karnataka Polls: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಈ ಆರು ಪ್ರದೇಶಗಳು ನಿರ್ಣಾಯಕ

ನಾನು ಹಿಂದೊಮ್ಮೆ ಧಾರವಾಡಕ್ಕೆ ಬಂದಿದ್ದೆ. ಆಗ ಪತ್ರಕರ್ತರು ದೇಸಾಯಿ ಪರ ಪ್ರಚಾರಕ್ಕೆ ಬರ್ತಿರಾ ಅಂತಾ ಕೇಳಿದ್ದರು. ಬರ್ತೇನೆ ಅಂತಾ ಹೇಳಿದ್ದೆ. ಅಂದು ನುಡಿದಂತೆ ಇಂದು ನಡೆದಿದ್ದೇನೆ. ಇಲ್ಲಿಗೆ ಬಂದಿದ್ದೇನೆ. ನುಡಿದಂತೆ ನಡೆಯುವ ಗೌಡ ನಾನು ಹೊರತು ಬೋಗಸ್ ಹೇಳುವ ಗೌಡ ಅಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಾನೂ ಇದ್ದೆ. ಈಗ ಆ ಹೋರಾಟ ಮುಗಿದಿದೆ. ಅದು ಮುಗಿದು ಹೋಗಿದೆ. ನಮ್ಮ ಹೋರಾಟದ ಫಲವಾಗಿ ವಿವಿಧ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿದೆ. ಮೀಸಲಾತಿ ಕೊಟ್ಟ ಮೇಲೆ ಅದರ ಗೆಜೆಟ್ ಪ್ರತಿಗೆ ಕಾಂಗ್ರೆಸ್ ಬೆಂಕಿ ಹಚ್ಚಿತ್ತು. ನಾವು ಅದನ್ನು ಪೂಜೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಅದನ್ನು ಸುಡುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರಿಗೆ ತಾಕತ್ ಇದ್ದರೆ ಮೀಸಲಾತಿ ರದ್ದು ಮಾಡಿ ನೋಡಲಿ ಎಂದು ಸವಾಲೆಸೆದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ