ವಾಹನ ಸವಾರರ ಗಮನಕ್ಕೆ: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಂಚಾರ ದಟ್ಟಣೆ ಸಾಧ್ಯತೆ

|

Updated on: Apr 26, 2023 | 1:25 PM

ರಸ್ತೆ, ರಸ್ತೆಯಲ್ಲೂ ಕೇಸರಿ ಬಾವುಟ ಹಾರಾಡುತ್ತಿದೆ. ಹೂಗಳ ಸುರಿಮಳೆಯಾಗುತ್ತಿದೆ. ಬಿಜೆಪಿ ಪರ ಘೋಷಣೆಗಳು ಮೊಳಗುತ್ತಿವೆ. ಇದರ ನಡುವೆ ಈಗ ಸಿಂಹ ಘರ್ಜನೆಯೊಂದಿಗೆ ಮೋದಿ ಕೂಡ ಕರ್ನಾಟಕ್ಕೆ ಕಾಲಿಡುತ್ತಿದ್ದಾರೆ.

ವಾಹನ ಸವಾರರ ಗಮನಕ್ಕೆ: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಂಚಾರ ದಟ್ಟಣೆ ಸಾಧ್ಯತೆ
ನರೇಂದ್ರ ಮೋದಿ
Follow us on

ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿದ್ದು ರಾಜಕೀಯ ರಣಕಣ ರಂಗೇರಿದೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಲು ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಈ ಹಿನ್ನೆಲೆ ಪ್ರಭಾವಿ ಕೇಂದ್ರ ಸಚಿವರು ರಾಜ್ಯದತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ಪದೇ ಪದೇ ರಾಜ್ಯಕ್ಕೆ ಆಗಮಿಸಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಶಿವಮೊಗ್ಗ ಏರ್ಪೋರ್ಟ್, ಕೆಆರ್ ಪುರಂ ವೈಟ್ ಫೀಲ್ಡ್ ಮೆಟ್ರೋ ಸೇರಿದಂತೆ ಮಹತ್ವದ ಯೋಜನೆಗಳನ್ನು ಉದ್ಘಾಟಿಸಿ ಜನರಿಗೆ ಹತ್ತಿರವಾದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಏಪ್ರಿಲ್ 29ರಿಂದ ಮೇ 7ರ ವರೆಗೆ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇನ್ನು ಟ್ರಾಫಿಕ್​ ಸಮಸ್ಯೆಗೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಏ.29ರ ಸಂಜೆ 6.15ಕ್ಕೆ 45 ನಿಮಿಷ ಮೋದಿ ರೋಡ್ ​ಶೋ ನಡೆಯಲಿದೆ. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು ರೋಡ್ ಶೋ ಇರುವ ದಿನ ಸವಾರರು ಬೇರೆ ರಸ್ತೆ ಮಾರ್ಗ ಬಳಸುವುದು ಸೂಕ್ತ.

ಉರಿ ಬಿಸಿಲಲ್ಲಿ ಮೋದಿ ಪ್ರಚಾರ, ವಾಹನ ಸವಾರರಿಗೆ ಎದುರಾಗಲಿದೆ ಟ್ರಾಫಿಕ್ ಸಮಸ್ಯೆ

ಏ.29ರ ಸಂಜೆ 6.15ಕ್ಕೆ ಬೆಂಗಳೂರಿನಲ್ಲಿ 45 ನಿಮಿಷ ಮೋದಿ ರೋಡ್ ​ಶೋ ನಡೆಯಲಿದೆ. ನೈಸ್ ರೋಡ್ ಜಂಕ್ಷನ್​​ನಿಂದ ಸುಮನಹಳ್ಳಿವರೆಗೆ ರೋಡ್ ಶೋ ನಡೆಯಲಿದೆ. ಹಾಗೂ ಏಪ್ರಿಲ್ 30ರಂದು ಮೈಸೂರಿನಲ್ಲಿ ಸಂಜೆ 5.45ಕ್ಕೆ ವಿದ್ಯಾಪೀಠ ವೃತ್ತದಿಂದ ಎಲ್​​ಐಸಿ ಸರ್ಕಲ್​​ವರೆಗೆ ರೋಡ್ ಶೋ ನಡೆಯಲಿದೆ. ಇದರಿಂದ ವಾಹನ ಸವಾರರು ಅಂದೊಂದು ದಿನ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ಬದಲಿ ಮಾರ್ಗದ ಮೂಲಕ ಸಂಚರಿಸುವುದು ಸೂಕ್ತ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ದಿಗ್ಗಜರ ವೇಳಾಪಟ್ಟಿ

ಈಗಾಗಲೇ ಚುನಾವಣಾ ಚಾಣಕ್ಯ, ಕೇಂದ್ರ ಸಚಿವ ಅಮಿತ್​ ಶಾ, ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡ್ನಾವಿಸ್, ಅರುಣ್ ಸಿಂಗ್, ಯೋಗಿ ಆದಿತ್ಯನಾಥ ಕರುನಾಡು ಕುರುಕ್ಷೇತ್ರದಲ್ಲಿ ಗೆಲ್ಲಲು ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ನಟ ಸುದೀಪ್ ಕೂಡ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಸ್ತೆ, ರಸ್ತೆಯಲ್ಲೂ ಕೇಸರಿ ಬಾವುಟ ಹಾರಾಡುತ್ತಿದೆ. ಹೂಗಳ ಸುರಿಮಳೆಯಾಗುತ್ತಿದೆ. ಬಿಜೆಪಿ ಪರ ಘೋಷಣೆಗಳು ಮೊಳಗುತ್ತಿವೆ. ಇದರ ನಡುವೆ ಈಗ ಸಿಂಹ ಘರ್ಜನೆಯೊಂದಿಗೆ ಮೋದಿ ಕೂಡ ಕರ್ನಾಟಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಬಿಜೆಪಿ ಬಾವುಟ ಹಾರಿಸಲು ಪಣ ತೊಟ್ಟಿರುವ ಮೋದಿ ರಾಜ್ಯದಲ್ಲಿ ಏಪ್ರಿಲ್ 29ರಿಂದ ಮೇ 7ರ ವರೆಗೆ ಅಲೆ ಹಬ್ಬಿಸಲಿದ್ದಾರೆ. ಇದು ಬಿಜೆಪಿ ಗೆಲುವಿಗೆ ಮತ್ತಷ್ಟು ಸಹಾಯ ಆಗಲಿದೆ.

ಏ.29ರಿಂದ ಮೇ 7ರವರೆಗೆ ನಮೋ ಕ್ಯಾಂಪೇನ್

ಏಪ್ರಿಲ್ 29ರಿಂದ ಮೇ 7ರವರೆಗೆ 6 ದಿನ ಮೋದಿ ಪ್ರಚಾರ ಮಾಡಲಿದ್ದಾರೆ. 3 ಬಾರಿ ರಾಜ್ಯಕ್ಕೆ ಬರಲಿರುವ ಮೋದಿ 2 ದಿನ ರಾಜ್ಯದಲ್ಲೇ ಠಿಕಾಣಿ ಹೂಡಲಿದ್ದಾರೆ. 6 ದಿನಗಳಲ್ಲಿ ಮೋದಿ 21 ಱಲಿಗಳನ್ನ ನಡೆಸಲಿದ್ದು, 180 ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರುವಂತೆ ಪ್ಲ್ಯಾನ್ ಮಾಡಲಾಗಿದೆ. ಇನ್ನು 1 ಱಲಿಯ ವೇಳೆ 10 ಕ್ಷೇತ್ರಗಳನ್ನ ಕವರ್ ಮಾಡುವ ತಂತ್ರ ಹೆಣೆಯಲಾಗ್ತಿದೆ. ಮೋದಿ ಱಲಿಗೆ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸುಮಾರು 15ಕ್ಕೂ ಹೆಚ್ಚು ಸಂಭಾವ್ಯ ಸ್ಥಳಗಳ ಪಟ್ಟಿ ನೀಡಿದೆ. ಬಿಜೆಪಿ ವಾರ್ ರೂಂ ಬೇಡಿಕೆಗೆ ಅನುಗುಣವಾಗಿ ಪ್ರಧಾನಿ ಕಾರ್ಯಾಲಯ ಸ್ಥಳ ನಿಗದಿಪಡಿಸಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:20 pm, Wed, 26 April 23