AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಮೈಲಾರಿ ಹೋಟೆಲ್​ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ, ನಂತರ ತಾವೊಂದು ತಿಂದು ಮತ್ತೊಂದು ಡಿಕೆ ಶಿವಕುಮಾರ್​​ ತಟ್ಟೆಗೆ ಹಾಕಿದರು!

ತಾನು ಇಂದಿರಾ ಗಾಂಧಿ ಕುಟುಂಬದ ಕುಡಿ ಎಂಬ ಹಮ್ಮುಬಿಮ್ಮ ಬಿಟ್ಟು, ಅಪ್ಪಟ ಗೃಹಿಣಿಯಂತೆ ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ನಲ್ಲಿ ದೋಸೆ ಹಾಕಿದ್ದಾರೆ. ಜೊತೆಗೆ ಡಯಟ್​​ ಅಂತಾ ತಾವು ಒಂದೇ ದೋಸೆ ತಿಂದು, ಅಲ್ಲಿದ್ದ ಕಾಂಗ್ರೆಸ್​​ ನಾಯಕರಿಗೂ ದೋಸೆ ತಿನ್ನಿಸಿದ್ದಾರೆ. ಹೋಟೆಲಿಂದ ಹೊರಡು ಮುನ್ನ ಹೋಟೆಲ್​ ಮಾಲೀಕರ ಕುಟುಂಬಸ್ಥರನ್ನೆಲ್ಲ ಬಾಯ್ತುಂಬಾ ಮಾತನಾಡಿಸಿದ್ದಾರೆ.

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 26, 2023 | 12:13 PM

Share
ಮೈಸೂರು: ರಾಜ್ಯದಲ್ಲಿ ಈಗ ಎರಡು ವಿಷಯಗಳದ್ದೇ ಹಂಗಾಮ. ಒಂದು, ಐಪಿಎಲ್ ಹಂಗಾಮ (IPL 2023) ಮತ್ತೊಂದು ಅಸೆಂಬ್ಲಿ ಚುನಾವಣೆ (Karnataka Assembly Elections 2023) ಎಂಬ ಪ್ರಜಾಪ್ರಭುತ್ವದ ಮಹಾಹಬ್ಬ.  ಐಪಿಎಲ್ ಹಂಗಾಮದಲ್ಲಿ ತಾರಾ ಜೋಡಿಯೊಂದು ಮಲ್ಲೇಶ್ವರದಲ್ಲಿ ಗರಿ ಗರಿ ದೋಸೆ (Dosa) ಮುರಿದಿದ್ದಾರೆ.

1 / 7
ಟಿವಿ9 ಜೊತೆ ಮಾತನಾಡುತ್ತಾ ಪ್ರಿಯಾಂಕಾ ಅವರು ಮೈಲಾರಿ ದೋಸೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಒಂದು ದೋಸೆ ತಿಂದರು. ಮತ್ತೊಂದು ತಿನ್ನುವ ಆಸೆ ಇತ್ತು. ಆದರೆ ಡಯಟ್ ಕಾರಣ ತಿನ್ನಲಿಲ್ಲ. ಅದನ್ನು ಡಿ ಕೆ ಶಿವಕುಮಾರ್ ಅವರಿಗೆ ಹಾಕಿಸಿದರು. ಮುಂದಿನ ಬಾರಿ ಮಗಳನ್ನೂ ಕರೆದುಕೊಂಡು ಬರುತ್ತೇನೆ ಅಂತಾನೂ ಹೇಳಿದರು ಎಂದು ಹೋಟಲ್ ಮಾಲೀಕರಾದ ಶೃತಿ‌ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

2 / 7
ನನ್ನ ಬಳಿ ದೋಸೆ ಹಾಕುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೋಡ ನೋಡುತ್ತಿದ್ದಂತೆ ಅವರೇ ದೋಸೆ ಹಾಕಿಬಿಟ್ಟರು ಎಂದು ಮಾಲೀಕರಾದ ಲೋಕೇಶ್ ಸಹ ಖುಷಿಪಟ್ಟರು. ಅವರೇ ಒಟ್ಟು ನಾಲ್ಕು ದೋಸೆ ಹಾಕಿದರು. ಖುಷಿ ಖುಷಿಯಿಂದ ದೋಸೆ ಹಾಕಿದರು. ದೋಸೆ ಹಾಕುವ ಒಲೆ ಸೌದೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇದು ನಾವು ಎಂದಿಗೂ ಮರೆಯಲಾಗದ ಕ್ಷಣ ಎಂದು ಲೋಕೇಶ್ ತಿಳಿಸಿದರು.

3 / 7
ಇನ್ನು ಈ ಕಡೆ ನಮ್ಮ ಮೈಸೂರು ಕಡೆ ಬಂದರೆ ಚುನಾವಣೆ ಪ್ರಚಾರಾರ್ಥವಾಗಿ (Campaign) ರಾಜ್ಯಕ್ಕೆ ಆಗಮಿಸಿರುವ ಇಂದಿರಾ ಗಾಂಧಿ ಮೊಮ್ಮಗಳು ಥೇಟ್ ಅವರ ಅಜ್ಜಿಯಂತೆ ಮಿಂಚುಹರಿಸಿದ್ದಾರೆ. ಅರಮನೆ ನಗರಿಯ ಸುಪ್ರಸಿದ್ದ ಮೈಲಾರಿ ಹೋಟೆಲ್ (Mylari Hotel) ಗೆ ಭೇಟಿ ನೀಡಿ ದೋಸೆ ಹೊಯ್ದಿದ್ದಾರೆ.

4 / 7
ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪಾರ್ವತಿ, ಪುತ್ರಿ ಅವರುಗಳ ಜೊತೆ ಒಂದು ಫೋಟೋ ತೆಗೆಸಿಕೊಂಡಿದ್ದಾರೆ. 
ಈ ಮಧ್ಯೆ, ನನ್ನ ವಿದ್ಯಾಭ್ಯಾದ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಹಿತಿ ಪಡೆದುಕೊಂಡರು ಎಂದು ಟಿವಿ9ಗೆ ಮೈಲಾರಿ ಹೋಟೆಲ್‌ ಮಾಲೀಕರ ಮಗಳು ಪಾರ್ವತಿ ಹೇಳಿದರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ನನಗಂತೂ ತುಂಬಾ ಖುಷಿಯಾಯ್ತು ಎಂದರು.

ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪಾರ್ವತಿ, ಪುತ್ರಿ ಅವರುಗಳ ಜೊತೆ ಒಂದು ಫೋಟೋ ತೆಗೆಸಿಕೊಂಡಿದ್ದಾರೆ. ಈ ಮಧ್ಯೆ, ನನ್ನ ವಿದ್ಯಾಭ್ಯಾದ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಹಿತಿ ಪಡೆದುಕೊಂಡರು ಎಂದು ಟಿವಿ9ಗೆ ಮೈಲಾರಿ ಹೋಟೆಲ್‌ ಮಾಲೀಕರ ಮಗಳು ಪಾರ್ವತಿ ಹೇಳಿದರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ನನಗಂತೂ ತುಂಬಾ ಖುಷಿಯಾಯ್ತು ಎಂದರು.

5 / 7
ಇದರಿಂದ ನಿಜಕ್ಕೂ ಖುಷಿಗೊಂಡ ಹೋಟಲ್ ಮಾಲೀಕರಾದ ಶೃತಿ ಅವರು ನಮ್ಮ ಹೋಟೆಲ್​ಗೆ ಬರೋರೆಲ್ಲಾ ದೋಸೆ ತಿಂದು ಹೋಗುವವರೇ! ಆದರೆ ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಅಂತಹ ದೊಡ್ಡ ನಾಯಕಿ ಹೋಟೆಲಿಗೆ ಬಂದು ದೋಸೆ ಹಾಕಿದ್ದಾರೆ ಎಂದು ಸಂತಸಗೊಂಡಿದ್ದಾರೆ.

6 / 7
 ವರ್ಚಸ್ವಿ ನಾಯಕಿ ಪ್ರಿಯಾಂಕಾ ಗಾಂಧಿ ಬಂದಿದ್ದು ನಮಗೆ ಖುಷಿ ತಂದಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನೇ ಅತಿಥಿಯಂತೆ ನೋಡಿಕೊಂಡರು! ಎಂದು ಮೈಸೂರಿನ ಅಗ್ರಹಾರದಲ್ಲಿರುವ 80 ವರ್ಷ ಹಳೆಯದಾದ ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಟಿವಿ9ಗೆ ಹೇಳಿದ್ದಾರೆ.

7 / 7
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ