ಕೈ-ತೆನೆ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಕಮಲ ಕಲಿಗಳ 10 ತಂತ್ರ: ಏ.30 ರಂದು ಕೋಲಾರಕ್ಕೆ ಪ್ರಧಾನಿ ಮೋದಿ ಭೇಟಿ

|

Updated on: Apr 29, 2023 | 8:40 AM

ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಏ.30) ಚಿನ್ನದನಾಡು ಕೋಲಾರ ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ.

ಕೈ-ತೆನೆ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಕಮಲ ಕಲಿಗಳ 10 ತಂತ್ರ: ಏ.30 ರಂದು ಕೋಲಾರಕ್ಕೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ
Follow us on

ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ರಣರಂಗ ಸಜ್ಜಾಗಿದ್ದು, ಕದನ ಕಲಿಗಳು ಮೈಕೊಡವಿ ಅಖಾಡಕ್ಕೆ ಇಳಿದಿದ್ದಾರೆ. ಪ್ರಮುಖ ಮೂರು ಪಕ್ಷಗಳು ಅಬ್ಬರ ನಡೆಸುತ್ತಿವೆ. ಪ್ರಚಾರದ ವೇಳೆ ನಾಯಕರ ತೂಕವಿಲ್ಲದ ಮಾತುಗಳು ಸಾಕಷ್ಟು ಸದ್ದು ಮಾಡುತ್ತಿವೆ. ಈ ಬಾರಿ ಕರ್ನಾಟಕದ ವಿಜಯಮಾಲೆ ತಮ್ಮ ಕೊರಳಿಗೆ ಬೀಳಬೇಕೆಂದು ಬಿಜೆಪಿ (BJP), ಕಾಂಗ್ರೆಸ್​ (Congress) ಮತ್ತು ಜೆಡಿಎಸ್ (JDS)​ ರಣತಂತ್ರ ರೂಪಿಸಿವೆ. ಇದರ ಭಾಗವಾಗಿ ಬಿಜೆಪಿಯ ಬ್ರ್ಯಾಂಡ್​​ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಳೆ (ಏ.30) ಚಿನ್ನದನಾಡು ಬಯಲುಸೀಮೆ ಕೋಲಾರ (Kolar) ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ.
ಈ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರನ್ನ ಸೇರಿಸಿ ಬೃಹತ್ ಸಮಾವೇಶ ಮಾಡಿ ಕನಿಷ್ಠ 8 ಕ್ಷೇತ್ರ ಗೆಲ್ಲುವ ಗೇಮ್ ಪ್ಲಾನ್ ಬಿಜೆಪಿಯದ್ದಾಗಿದೆ. ಕೋಲಾರ 6, ಚಿಕ್ಕಬಳ್ಳಾಪುರ 5, ಬೆಂಗಳೂರು ಗ್ರಾಮಾಂತರ 4 ಸೇರಿ ಒಟ್ಟು 15 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ. ಇದರ ಜೊತೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್​​ ಭದ್ರಕೋಟೆ ಛಿದ್ರ ಮಾಡುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಬಿಜೆಪಿ-ಕಾಂಗ್ರೆಸ್ ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ, ಕಂಪ್ಲೀಟ್ ಮಾಹಿತಿ ಇಲ್ಲಿದೆ

ಕೋಲಾರದಲ್ಲಿ ಬಿಜೆಪಿಯ 10 ತಂತ್ರಗಾರಿಕೆ

1) ಪ್ರಧಾನಿ ಮೋದಿಯವ ಪ್ರಚಾರದಿಂದ ಹೆಚ್ಚು ಮತಗಳ ಕ್ರೋಢೀಕರಿಸುವುದು ಪ್ರಮುಖವಾಗಿ ಹಿಂದೂ ಮತಗಳ ಕ್ರೋಢೀಕರಣ.

2) ಶತಾಯಗತಾಯ ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ 6-8 ಸ್ಥಾನಗಳನ್ನು ಗೆಲ್ಲಲೇ ಬೇಕೆನ್ನುವ ಅಜೆಂಡಾ.

3) 2008 ರ ನಂತರ ಕೋಲಾರದಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆದ್ದಿಲ್ಲ ಹೀಗಾಗಿ ಸಂಘಟನೆ ಬಲಗೊಳಿಸುವ ಸಾಧ್ಯತೆ.

4) ಕಳೆದ ಬಾರಿ ಗೆದ್ದಿರುವ ಎರಡು ಲೋಕಸಭಾ ಸ್ಥಾನಗಳನ್ನು ಈ ಬಾರಿ ಉಳಿಸಿಕೊಳ್ಳಲು, ಈ ಭಾಗದಲ್ಲಿ ಒಂದಷ್ಟು ಶಾಸಕರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ.

5) ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕೆಲವೊಂದು ಮಹತ್ವದ ಆಶ್ವಾಸನೆ ನೀಡುವ ಸಾಧ್ಯತೆ.

6) ಕೆಜಿಎಫ್ ಚಿನ್ನದ ಗಣಿ ಪುನರಾರಂಭ, ಕೆಜಿಎಫ್ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಸೇರಿದಂತೆ ಮಹತ್ವದ ಘೋಷಣೆ ಸಾಧ್ಯತೆ ಈ ಮೂಲಕ ಆ ಭಾಗದ ಜನರನ್ನು ಸೆಳೆಯುವ ಪ್ಲಾನ್ ಮಾಡಲಾಗಿದೆಯಂತೆ.

7) ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ತರಕಾರಿ ಹಣ್ಣುಗಳನ್ನು ಸರಬರಾಜು ಮಾಡಲು ಅಂತರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿ ಅಥವಾ ಹೊಸ‌ ರೈಲು ಮಾರ್ಗದ ಭರವಸೆ ನೀಡುವ ಸಾಧ್ಯತೆ ಇದೆ.

8) ಬಿಇಎಂಎಲ್ ಖಾಸಗೀಕರಣ ಹಿಂಪಡೆಯುವ ಮೂಲಕ ಮತದಾರರನ್ನ ಸೆಳೆಯುವ ಚಿಂತನೆ.

9) ನದಿ ಜೋಡಣೆ ಮೂಲಕ ಬಯಲು ಸೀಮೆ ಹಸಿರಾಗಿಸಿ ಜನರನ್ನ ಹಸನಾಗಿಸುವ ಸಾಧ್ಯತೆ.

10) ಅಮೃತ ಸರೋವರ, ಜಲ ಜೀವನ್‌ನಂತಹ ಕೇಂದ್ರದ ಅಭಿವೃದ್ದಿ ಯೋಜನೆಗಳಲ್ಲಿ ವಿಶೇಷ ಆದ್ಯತೆ‌ ನೀಡಿದ್ದ ಜಿಲ್ಲೆಯಲ್ಲಿ ಬಿಜೆಪಿ ಪರವಾದ ಅಲೆ ನಿರ್ಮಿಸುವುದು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 am, Sat, 29 April 23