Ramanagara Election 2023 Winner: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲು, ಕಾಂಗ್ರೆಸ್ ಇಕ್ಬಾಲ್​ಗೆ ಗೆಲುವು

| Updated By: ಆಯೇಷಾ ಬಾನು

Updated on: May 13, 2023 | 1:39 PM

Nikhil Kumaraswamy: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದು, ಕಾಂಗ್ರೆಸ್​ ಇಕ್ಬಾಲ್ ಹುಸೇನ್ ಗೆಲುವಿನ ನಗೆ ಬೀರಿದ್ದಾರೆ.

Ramanagara Election 2023 Winner: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲು, ಕಾಂಗ್ರೆಸ್ ಇಕ್ಬಾಲ್​ಗೆ ಗೆಲುವು
ನಿಖಿಲ್ ಕುಮಾರಸ್ವಾಮಿ
Follow us on

ರಾಮನಗರ: ರಾಮನಗರ ವಿಧಾನಸಭೆಯ ಫಲಿತಾಂಶ ಹೊರಬಿದ್ದಿದ್ದು(Ramanagara Election 2023) ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಸೋಲುಂಡಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್( Iqbal Hussain) ಜಯ ಭಾರಿಸಿದ್ದಾರೆ. ಜೆಡಿಎಸ್‌ನ ಭದ್ರಕೋಟೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರವಾಗಿದ್ದ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅನಿತಾ ಕುಮಾರಸ್ವಾಮಿ ಅವರು ಮಗನಿಗಾಗಿ ಪಕ್ಷ ಬಿಟ್ಟುಕೊಟ್ಟರೆ, ಮೊಮ್ಮಗನನ್ನು ಗೆಲ್ಲಿಸಲು ಸ್ವತಃ ಹೆಚ್​ಡಿ ದೇವೇಗೌಡರೇ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕ್ಷೇತ್ರ ಸಂಚಾರ ನಡೆಸಿ ಮತಯಾಚಿಸಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಸೋಲು ಕಂಡಿದ್ದಾರೆ.

ರಾಮನಗರದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್‌ ಗೆದ್ದುಬೀಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಇಕ್ಬಾಲ್ ಹುಸೇನ್ ಬೆನ್ನಿಗೆ ನಿಂತಿದ್ದು ಇಕ್ಬಾಲ್ ಗೆಲುವಿಗೆ ಸಹಾಯ ಆಗಿದೆ. ಇನ್ನು ರಾಮನಗರದಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕ. ಇಕ್ಬಾಲ್ ಹುಸೇನ್‌ ಅಲ್ಪಸಂಖ್ಯಾತ ಅಭ್ಯರ್ಥಿಯಾದ ಕಾರಣ ಗೆಲುವಿಗೆ ಪ್ಲೆಸ್ ಆಗಿದೆ.

ಇದನ್ನೂ ಓದಿ: Ramanagara Assembly Election: ರಾಮನಗರದಲ್ಲಿ ಜೆಡಿಎಸ್​ಯೇ ಅಧಿಪತಿ, ಅದೃಷ್ಟ ಪರೀಕ್ಷೆಗಿಳಿದ ನಿಖಿಲ್ ಕುಮಾರಸ್ವಾಮಿ

2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿ ಗೆಲುವು ಸವಿಯುವ ನಿರೀಕ್ಷೆಯಲ್ಲಿದ್ದರು. ಅಲ್ಲದೆ ಈ ಹಿಂದೆ ರಾಮನಗರದಿಂದ ಸ್ಪರ್ಧಿಸಿ ನಿಖಿಲ್ ತಂದೆ ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್‌ಡಿ ದೇವೇಗೌಡರು ಗೆದ್ದು ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ನಿಖಿಲ್ ಕೂಡ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಗಳು ಹೆಚ್ಚಿದ್ದವು. ಆದ್ರೆ ಫಲಿತಾಂಶ ನಿರೀಕ್ಷೆಯನ್ನು ಸುಳ್ಳು ಮಾಡಿದೆ.

1994ರಿಂದ ರಾಮನಗರ ಕ್ಷೇತ್ರ ದೇವೇಗೌಡ ಕುಟುಂದ ಭದ್ರಕೋಟೆ. 1994ರಲ್ಲಿ ದೇವೇಗೌಡರು ರಾಮನಗರದಿಂದಲೇ ಸ್ವರ್ಧೆ ಮಾಡಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಸಹಾ ಆಗಿದ್ದರು. ನಂತರ ಇಲ್ಲಿಂದಲೇ ಪಿಎಂ ಸಹಾ ಆಗಿದ್ದರು. ಬಳಿಕ 1999ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ 2004ರಿಂದ ನಿರಂತರವಾಗಿ ಜೆಡಿಎಸ್ ಗೆಲವು ಸಾಧಿಸುತ್ತಾ ಬಂದಿದೆ. 2004 ರಲ್ಲಿ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ 2006ರಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ರು. ನಂತರ 2018ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹೆಚ್ ಡಿ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲೂ ಗೆಲವು ಸಾಧಿಸಿ, ನಂತರ ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಂಡು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ನಂತರ ಸಿಎಂ ಆಗಿದ್ದರು. ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ವರ್ಧೆ ಮಾಡಿದ್ದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:13 pm, Sat, 13 May 23