ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್

|

Updated on: Apr 26, 2023 | 7:54 AM

ಲಕ್ಷ್ಮಣ ಸವದಿ ಅವರನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂದು ಪಣತೊಟ್ಟಿರುವ ರಮೇಶ್ ಜಾರಕಿಹೊಳಿ ಮೊದಲಿಗೆ ಡಿಸಿಸಿ ಬ್ಯಾಂಕ್​​ಗೆ ನಿರ್ದೇಶ ಸ್ಥಾನಕ್ಕೆ ಕೈ ಹಾಕಿದ್ದಾರೆ.

ಲಕ್ಷ್ಮಣ  ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್
ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ
Follow us on

ಬೆಳಗಾವಿ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ರಂಗೇರಿದೆ. ಅದರಲ್ಲೂ ಬೆಳಗಾವಿ ರಾಜಕಾರಣ ಮತ್ತಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಇದು ರಮೇಶ್  ಜಾರಕಿಹೊಳಿ(Ramesh Jarkiholi) ಹಾಗೂ ಸವದಿ(Laxman Savadi) ನಡುವಿನ ನೇರ ಯುದ್ಧವಾಗಿ ಮಾರ್ಪಟ್ಟಿದೆ. ಅಥಣಿ ಟಿಕೆಟ್​ ಅನ್ನು ಲಕ್ಷ್ಮಣ ಸವದಿಗೆ ತಪ್ಪಿಸಿದ್ದಲ್ಲದೇ ಇದೀಗ ಅವರಿಂದ ಮತ್ತೊಂದು ಸ್ಥಾನ ಕಿತ್ತಿಕೊಳ್ಳಲು ರಮೇಶ್ ಜಾರಕಿಹೊಳಿ ತಂತ್ರ ರೂಪಿಸಿದ್ದು, ಸವದಿ ರಾಜಕೀಯ ಜೀವನ ಅಂತ್ಯಗೊಳಿಸುವುದು ನನ್ನ ಗುರಿ ಎಂದು ಸವಾಲು ಹಾಕಿದ್ದಾರೆ. ಬೆಳಗಾವಿ ಜಿಲ್ಲಾ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹಿಂದಿನ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು, ಇದೀಗ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಡಿಸಿಸಿ ಬ್ಯಾಂಕ್ ರಾಜಕೀಯ ಮುನ್ನೆಲೆಗೆ ಬಂದಿದ್ದು, ಲಕ್ಷ್ಮಣ ಸವದಿ ಅವರನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂದು ಪಣತೊಟ್ಟಿರುವ ಜಾರಕಿಹೊಳಿ ಮೊದಲಿಗೆ ಡಿಸಿಸಿ ಬ್ಯಾಂಕ್​​ಗೆ ಕೈ ಹಾಕಿದ್ದಾರೆ.

ಮಂಗಳವಾರ ಅಥಣಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಸ್ಥಳೀಯ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ರಮೇಶ್ ಜಾರಕೊಹೊಳಿ, ಸವದಿ ಯಡಿಯೂರಪ್ಪನವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ ನಂತರ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು. ಈಗ, ಸವದಿ ಅವರನ್ನು ಅಥಣಿಯಲ್ಲಿ ಸೋಲಿಸಿ ಮನೆಗೆ ಕಳುಹಿಸಲು ಸಿದ್ಧನಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮತ್ತು ನಾವು ಅಧಿಕಾರಕ್ಕೆ ಬಂದ ನಂತರ, ಬೆಳಗಾವಿಯ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯಿಂದ ಮತ್ತು ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಸಮಿತಿಯಿಂದ ಅವರನ್ನು ಮತ್ತು ಅವರ ಬೆಂಬಲಿಗರನ್ನು ತೆಗೆದುಹಾಕುವ ಕೆಲಸವನ್ನು ಪ್ರಾರಂಭಿಸುತ್ತೇನೆ. ಸವದಿ ರಾಜಕೀಯ ಜೀವನ ಅಂತ್ಯಗೊಳಿಸುವುದು ನನ್ನ ಗುರಿ ಎಂದರು.

ಚುನಾವಣೆ ಮುಗಿದ ಮೇಲೆ ಮೊದಲು ಡಿಸಿಸಿ ಬ್ಯಾಂಕ್‌ನಲ್ಲಿ ಮುಗಿಸುತ್ತೇವೆ. ಡಿಸಿಸಿ ಬ್ಯಾಂಕ್‌‌ನಲ್ಲಿ ಎಲ್ಲರಿಗೂ ರಾಜೀನಾಮೆ ಕೊಡಿಸುತ್ತೇವೆ. ಡಿಸಿಸಿ ಬ್ಯಾಂಕ್‌ನಲ್ಲಿ ಜಾರಕಿಹೊಳಿ ಕುಟುಂಬ ಬೆಂಬಲದ 7 ಸ್ಥಾನ, ಕತ್ತಿ ಕುಟುಂಬದ 3, ನಾಲ್ಕು ಬಿಜೆಪಿ ಇವೆ. 12 ಜನ ರಾಜೀನಾಮೆ ನೀಡಿದ್ರೆ ಸಾಕಲ್ಲ. ಈ ಬಗ್ಗೆ ಯಡಿಯೂರಪ್ಪರ ಮುಂದೆ ಹೇಳುತ್ತೇವೆ. ಡಿಸಿಸಿ ಬ್ಯಾಂಕ್​‌ಗೆ ರಾಜೀನಾಮೆ ನೀಡಿದ ಬಳಿಕ ಆಟೋಮೆಟಿಕ್ ಖಾಲಿ ಆಗುತ್ತದೆ ಇಲ್ವೋ ಎಂದು ಲಕ್ಷ್ಮಣ್ ಸವದಿಯನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುವುದಾಗಿ ಸವಾಲು ಹಾಕಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ