Karnataka Election Daily Highlights: ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು; ಇಂದಿನ ಹೈಲೈಟ್ಸ್ ಇಲ್ಲಿದೆ
Breaking News Today Live Updates: ರಾಜ್ಯ ವಿಧಾನಸಭೆ ಚುನಾವಣೆಗೆ 14 ದಿನ ಬಾಕಿ ಉಳಿದಿದ್ದು, ಮೇ 10 ಮತದಾನ ನಡೆಯಲಿದ್ದು 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ದಿನ ಎಣಿಕೆ ಆರಂಭವಾಗಿತ್ತಿದ್ದಂತೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರ ಪ್ರಚಾರ ಜೋರಾಗಿ ನಡೆಯುತ್ತಿದೆ. ರಾಜ್ಯ ರಾಜಕೀಯ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ...
Karnataka Assembly Elections 2023 Live News Updates: ರಾಜ್ಯ ವಿಧಾನಸಭೆ ಚುನಾವಣೆಗೆ 14 ದಿನ ಬಾಕಿ ಉಳಿದಿದ್ದು, ಮೇ 10 ಮತದಾನ ನಡೆಯಲಿದ್ದು 13 ರಂದು ಮತ ಎಣಿಕೆ ಆರಂಭವಾಗಲಿದೆ. ಚುನಾವಣೆಗೆ ದಿನ ಎಣಿಕೆ ಆರಂಭವಾಗಿತ್ತಿದ್ದಂತೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರ ವಾಹನಗಳ ಸದ್ದು ಜೋರಾಗಿಯೇ ಕೇಳುತ್ತಿದೆ. ಹೌದು ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರು ಸರಣಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ಪಾಳಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದಿಯಾಗಿ ಹಲವು ನಾಯಕರು ಕರುನಾಡಿಗೆ ಭೇಟಿ ನೀಡಿ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ನಲ್ಲಿ ನಾಯಕ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಉತ್ತರ ಕರ್ನಾಟಕ ಮತ್ತು ಮೈಸೂರು, ಚಿಕ್ಕಮಗಳೂರಲ್ಲಿ ಪ್ರಾಚಾರ ಮಾಡುತ್ತಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕರಾವಳಿ ಮೇಲೆ ಕಣ್ಣಿಟ್ಟಿದ್ದು, ಅಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಗುರಿ ಇಟ್ಟುಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ ನಾನೇನು ಕಮ್ಮಿ ಇಲ್ಲ ಎನ್ನುತ್ತಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್. ಡಿ ಕುಮಾರಸ್ವಾಮಿ ಅವರು ತಮ್ಮ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಜಂಟಿಯಾಗಿ ಮತದಬೇಟೆ ಶುರುಮಾಡಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್..
LIVE NEWS & UPDATES
-
Karnataka Election Live: ನರಗುಂದ ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ ಶಿಕಾರಿ
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಭ್ಯರ್ಥಿ ಸಿಸಿ ಪಾಟೀಲ್ ಪರ ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದರು. 25 ವರ್ಷದ ಹಿಂದೆ ಇದೇ ಜಾಗದಲ್ಲಿ ನಿಂತು ಮಾತನಾಡಿದ ನೆನಪು ಬರುತ್ತೆ. ರಸ್ತೆ ಚಿಕ್ಕದಾಗಿತ್ತು ಹೋರಾಟದ ಕಿಚ್ಚು ಜೋರಾಗಿತ್ತು ಎಂದು ಅಂದಿನ ಕಳಸಾ ಬಂಡೂರಿ ಹೋರಾಟದ ನೆನಪು ಮೆಲಕು ಹಾಕಿದರು.
-
Karnataka Election Live: ಕೃಷ್ಣಾ ನದಿಗೆ ಬಿಡಲು ಮಹಾರಾಷ್ಟ್ರ ಡಿಸಿಎಂ ಒಪ್ಪಿದ್ದಾರೆ; ಬೊಮ್ಮಾಯಿ
ಕೃಷ್ಣಾ ನದಿಗೆ 3 ಟಿಎಂಸಿ ನೀರು ಬಿಡಲು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಒಪ್ಪಿದ್ದಾರೆ. ಈ ಬಗ್ಗೆ ಅವರ ಜತೆ ಮಾತನಾಡಿದ್ದೆವು ಎಂದು ನವಲಿಹಾಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
-
Karnataka Election Live: ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ; ಯೋಗಿ ಆದಿತ್ಯನಾಥ್
ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ. ಭಾರತ ಪ್ರಜಾಪ್ರಭುತ್ವದ ತಾಯಿ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗ್ತಿದೆ. 1000 ವರ್ಷಗಳ ಹಿಂದಿನಿಂದ ಕರ್ನಾಟಕ-ಯುಪಿ ನಡುವೆ ಬಾಂಧವ್ಯವಿದೆ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ. ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಪ್ರತಿ ನಾಗರಿಕನ ಸಶಕ್ತಿಕರಣಗೊಳಿಸುವುದು ನಮ್ಮ ಉದ್ದೇಶ. ದೇಶದ ಸಂತರು, ಸಾಧುಗಳ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಭಾರತ ಅಭಿವೃದ್ಧಿ ಆಗುತ್ತಿದೆ. ಭಾರತ ವಿಶ್ವದ ಶಕ್ತಿಯುತವಾದ ರಾಷ್ಟ್ರವಾಗಿದೆ. ವಿಶ್ವದ ಪ್ರಬಲ ಜಿ-20 ರಾಷ್ಟ್ರಗಳ ನೇತೃತ್ವವನ್ನು ಭಾರತ ವಹಿಸುತ್ತಿದೆ. ಕರ್ನಾಟಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ವೈದ್ಯಕೀಯ ಪರೀಕ್ಷೆ ಕನ್ನಡದಲ್ಲಿ ಬರೆಯಲು ಸರ್ಕಾರ ಅವಕಾಶ ನೀಡಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಗೂಂಡಾಗಳನ್ನು ಮಟ್ಟಹಾಕಿದ್ದೇವೆ. ರಾಮ, ಕೃಷ್ಣನ ಜನಸ್ಥಳದಲ್ಲಿ ಪಾಪದ ಕೆಲಸಗಳನ್ನ ಮಾಡಲು ಬಿಡಲ್ಲ ಎಂದು ಯೋಗಿ ಹೇಳಿದರು.
Karnataka Election Live: ಜಗದೀಶ್ ಶೆಟ್ಟರ್ ಮನೆಗೆ ಕಳುಹಿಸಬೇಕೆಂದು ಹೊರಟ್ಟಿದ್ದೇನೆ; ಯಡಿಯೂರಪ್ಪ
ಜಗದೀಶ್ ಶೆಟ್ಟರ್ ಅವರನ್ನು ಮನೆಗೆ ಕಳುಹಿಸಬೇಕೆಂದು ಹೊರಟ್ಟಿದ್ದೇನೆ. ಪಕ್ಷಕ್ಕೆ ದ್ರೋಹ ಮಾಡಿದ ಶೆಟ್ಟರ್ರನ್ನು ಮನೆಗೆ ಕಳುಹಿಸಬೇಕು ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಲಕ್ಷ್ಮಣ ಸಂಗಪ್ಪ ಸವದಿಯನ್ನೂ ಮನೆಗೆ ಕಳುಹಿಸುವುದು ನಿಶ್ಚಿತ. ಸವದಿಯನ್ನು ಸೋಲಿಸಲು ಈ ಭಾಗದ ಜನ ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
Karnataka Election Live: 80 ಸಾವಿರಕ್ಕೂ ಹೆಚ್ಚು ಮಂದಿಗೆ ವೋಟ್ ಫ್ರಂ ಹೋಮ್ ಅವಕಾಶ
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಫ್ರಂ ಹೋಮ್ ಅವಕಾಶ ಪಡೆಯಲಿದ್ದಾರೆ. ಈ ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬುಧವಾರ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಿದರು.
ಪೂರ್ಣ ವಿವರ ಓದಲು; Karnataka Polls: ರಾಜ್ಯದಲ್ಲೆಷ್ಟಿದ್ದಾರೆ ಹೊಸ ಮತದಾರರು? ಎಷ್ಟು ಮಂದಿಗೆ ವೋಟ್ ಫ್ರಂ ಹೋಮ್? ಇಲ್ಲಿದೆ ವಿವರ
Karnataka Election Live: ನಾಗರಬಾವಿ ಅಪೂರ್ವ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ
2007ರಿಂದ ರಸ್ತೆಗೆ ಡಾಂಬರು ಹಾಕಿಸದ್ದರಿಂದ ಬೇಸತ್ತಿರುವ ಬೆಂಗಳೂರಿನ ನಾಗರಭಾವಿ ಅಪೂರ್ವ ಲೇಔಟ್ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಕಾಸಾ ಬೆಲ್ಲ, ಪಾರ್ವಿ ಗೋಲ್ಡನ್ ನೆಸ್ಟ್ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ.
Karnataka Election Live: ಜಗದೀಶ್ ಶೆಟ್ಟರ್ನ್ನ ಸೋಲಿಸುವ ಜವಾಬ್ದಾರಿ ನಂದು, ಲಕ್ಷ್ಮಣ ಸವದಿಯನ್ನ ಸೋಲಿಸುವ ಜವಾಬ್ದಾರಿ ನಿಮ್ದು: ಯಡಿಯೂರಪ್ಪ
ಬೆಳಗಾವಿ: ಜಗದೀಶ್ ಶೆಟ್ಟರ್ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಲಕ್ಷ್ಮಣ ಸವದಿಯವರನ್ನು ಸೋಲಿಸುವ ಜವಾಬ್ದಾರಿ ಕ್ಷೇತ್ರದ ಜನ ತೆಗೆದುಕೊಳ್ಳಿ ಎಂದು ಅಥಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
Karnataka Election Live: ಕಾಂಗ್ರೆಸ್ ಪಕ್ಷದು 85 ಪರ್ಸೆಂಟ್ ಭ್ರಷ್ಟಾಚಾರ: ಸಿಎಂ ಬೊಮ್ಮಾಯಿ
ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗಾಂಧಿಯಂತ ಪ್ರಧಾನಿ ಇದ್ದರು. 100 ರೂ ದೆಹಲಿಯಿಂದ ಬಿಡುಗಡೆ ಮಾಡಿದರೇ ಹಳ್ಳಿಗೆ 15 ರೂ. ಮುಟ್ಟುತ್ತದೆ. ಹಾಗಾದ್ರೆ ಕಾಂಗ್ರೆಸ್ ಪಕ್ಷದು 85 ಪರ್ಸೆಂಟ್ ಭ್ರಷ್ಟಾಚಾರ, ಅವರ ಪ್ರಧಾನಿಯೇ ಹೇಳಿದ್ದಾರೆ. ಕಾಂಗ್ರೆಸ್ ಅವಿಭಾಜ್ಯ ಅಂಗ ಭ್ರಷ್ಟಾಚಾರ. ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿತ್ತು. ಎಸ್ ಸಿ ಎಸ್ ಟಿ ಮಕ್ಕಳ ದಿಂಬು ಹಾಸಿಗೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ನಾಚಿಕೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಮಾತನಾಡಿದ ಅವರು ಸಾಮಾಜಿಕ ನ್ಯಾಯ ಭಾಷಣ ಮಾಡತಾರೆ ಯಾರಿಗೆ ಸಿಕ್ಕಿದೆ ಸಾಮಾಜಿಕ ನ್ಯಾಯ. ಹಿಂದುಳಿದ ವರ್ಗದವರನ್ನು ಅಲ್ಲೇ ಬಿಟ್ಟು ಇವರು ಸಿಎಂ ಆದರು. ನಿಜವಾದ ಸಾಮಾಜಿಕ ನ್ಯಾಯ ಮಾಡಿಕೊಟ್ಟಿದ್ದು ಬಿಜೆಪಿ ಪಕ್ಷ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.
Karnataka Election Live: ಮಂಡ್ಯ ಹಾಗೂ ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದ ಇದೆ
ಮಂಡ್ಯ: ಆದಿ ಚುಂಚನಗಿರಿಗೆ ನನ್ನ ನಮಸ್ಕಾರಗಳು. ಮಂಡ್ಯದ ಉತ್ಸಾಹಿ ಕಾರ್ಯಕರ್ತರಿಗೆ ಉತ್ತರ ಪ್ರದೇಶದವನಾದ ನಾನು ನಮಸ್ಕರಿಸುತ್ತೇನೆ. ಇಂದು ಮಂಡ್ಯದಲ್ಲಿ ನಾನು ಬಂದಿರುವುದು ಸಂತಸ ತಂದಿದೆ ನಿಮ್ಮ ಬಂದು ದರ್ಶನ ಮಾಡಲು, ಮಾತನಾಡಲು ಬಂದಿರುವೆ. ಮಂಡ್ಯ ಹಾಗೂ ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದ ಒಂದಕ್ಕೊಂದು ಸಂಬಂಧವಿದೆ. ಮರ್ಯಾದಾ ಪುರಷೋತ್ತಮ ಶ್ರೀರಾಮ ಹಾಗೂ ಆಂಜನೆಯ ವನವಾಸದ ಕುರುಹುಗಳು ಮಂಡ್ಯದಲ್ಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಮಂಡ್ಯದ ಸ್ವಿಲ್ವರ್ ಜ್ಯುಬಲಿ ಪಾರ್ಕ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡದಲ್ಲೇ ಭಾಷಣವನ್ನು ಶುರು ಮಾಡಿದರು. ಈ ವೇಳೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು.
Karnataka Election Live: ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಪರೋಕ್ಷ ವಾಗ್ದಾಳಿ
ಮಂಡ್ಯ: ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಕಳೆದ ಬಾರಿ ಚುನಾವಣೆಯಲ್ಲಿ 7 ಕ್ಕೆ 7 ಶಾಸಕರನ್ನ ಆಯ್ಕೆ ಮಾಡಿದ್ರಿ. ಅವರೆಲ್ಲಾ ಯಾವ ಕೆಲಸ ಮಾಡಿದ್ದಾರೆ ಒಂದನ್ನ ತೋರಿಸಿ. ಯಾರೊ ಕನಸು ಕಾಣುತ್ತಿದ್ದಾರೆ ಅತಂತ್ರ ಪರಿಸ್ಥಿತಿ ಬರಲಿ ಅಂತ. ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಉತ್ತರಪ್ರದೇಶ ಗೂಂಡಾ ರಾಜ್ಯ ಎಂದು ಕುಖ್ಯಾತಿಯಾಗಿತ್ತು. ಯೋಗಿಯವರು ಬಂದ ಮೇಲೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನ ತಾವು ಸಂಪಾದಿಸಿದ ಹಣವನ್ನು ರೌಡಿಗಳಿಗೆ ಹಫ್ತಾ ನೀಡಬೇಕಿತ್ತು. ಯೋಗಿ ಸರ್ಕಾರ ಬಂದ ಮೇಲೆ ರೌಡಿಗಳು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಜನರು ಈಗ ನಿರ್ಭಯವಾಗಿ ಒಡಾಡುತ್ತಿದ್ದಾರೆ ಎಂದು ಹೇಳಿದರು.
Karnataka Election Live: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ ಆರಂಭ
ಮಂಡ್ಯ: ಮಂಡ್ಯದಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೋಡ್ಶೋ ಆರಂಭಿಸಿದ್ದಾರೆ. ರೋಡ್ಶೋನಲ್ಲಿ ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸೇರಿ ಹಲವರು ಭಾಗಿಯಾಗಿದ್ದಾರೆ. ಸಂಜಯ್ ವೃತ್ತದಿಂದ ಮಹಾವೀರ ಥಿಯೇಟರ್ವರೆಗೆ ರೋಡ್ಶೋ ನಡೆಯಲಿದೆ.
#WATCH | Uttar Pradesh CM & BJP leader Yogi Adityanath holds a roadshow in Mandya district of Karnataka ahead of Assembly elections. He will also address a public rally here. pic.twitter.com/fC33HO5UH8
— ANI (@ANI) April 26, 2023
Karnataka Election Live: ಮೋಸಗಾರ ಯಡಿಯೂರಪ್ಪ ಅಥಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ
ಬೆಳಗಾವಿ: ಜಿಲ್ಲೆಯ ಆಥಣಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ಇನ್ನೂ 10 ಸಲ ಅಥಣಿಗೆ ಬಂರೂ ಲಕ್ಷ್ಮ ಸವದಿ ಗೆಲ್ಲುತ್ತಾರೆ. ಮೋಸಗಾರ ಯಡಿಯೂರಪ್ಪ ಎಂದು ಘೋಷಣೆ ಕೂಗಿದ್ದಾರೆ.
Karnataka Election Live: ಮೊಳಕಾಲ್ಮೂರಿನಲ್ಲಿ ನಟ ಸುದೀಪ್ ಅಬ್ಬರದ ಪ್ರಚಾರ
ಚಿತ್ರದುರ್ಗ: ಕಿಚ್ಚ ಸುದೀಪ್ ಇಂದಿನಿಂದ ಚುನಾವಣಾ ಪ್ರಚಾರದ ಅಕಾಡಕ್ಕಿಳಿದಿದ್ದು, ಇಂದು ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕ್ಯಾಂಪೇನ್ ಮಾಡಲಿದ್ದಾರೆ. ಮೊದಲನೆಯದಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಟ ಸುದೀಪ್ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಿದ್ದಾರೆ.
Karnataka Election Live: ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ
ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮೈಸೂರಿನ ಅಗ್ರಹಾರದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ದೋಸೆ ಸವಿದಿದ್ದಾರೆ. ಮೈಲಾರಿ ಹೋಟೆಲ್ನಲ್ಲಿ ದೋಸೆ ಹಾಕಿದ್ದಾರೆ.
Karnataka Election Live: ಲಕ್ಷ್ಮಣ ಸವದಿ ಪಂಚಾಯಿತಿಗೂ ಲಾಯಕ್ ಇಲ್ಲ: ರಮೇಶ್ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ: ಒಳ್ಳೆಯ ಉದ್ದೇಶಕ್ಕಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಡಿಸಿಎಂ ಮಾಡಿದ್ದರು. ಆತ ಪಂಚಾಯಿತಿಗೂ ಲಾಯಕ್ ಇಲ್ಲ ಅಂತಾ ಅವರಿಗೆ ಗೊತ್ತಿರಲಿಲ್ಲ. ಉದ್ದ ಅಂಗಿ ಹಾಕೊಂಡು ಬರುತ್ತಿದ್ದಕ್ಕೆ ದೊಡ್ಡವನು ಅಂತಾ ತಿಳಿದಿದ್ದರು. ಬಿಜೆಪಿ ನಾಯಕರಿಗೂ ಲಕ್ಷ್ಮಣ ಸವದಿ ಮೋಸ ಮಾಡಿದ್ದಾನೆ ಎಂದು ಜಿಲ್ಲೆಯ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ವಾಗ್ದಾಳಿ ಮಾಡಿದ್ದಾರೆ.
Karnataka Election Live: ಏ.27 ರಿಂದ ರಾಹುಲ್ ಗಾಂಧಿ ಎರಡು ದಿನ ರಾಜ್ಯ ಪ್ರವಾಸ
ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ನಾಳೆಯಿಂದ ಎರಡು ದಿನ (ಏ.27, 28) ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಉಡುಪಿ ಜಿಲ್ಲಗೆ ಭೇಟಿ ನೀಡಲಿದ್ದಾರೆ ಬೆಳಗ್ಗೆ 11 ಗಂಟೆಗೆ ಕೊಲ್ಲೂರು ಮೂಕಾಂಬಿಕಾದೇವಿ ದರ್ಶನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಕಾಪು ಕ್ಷೇತ್ರದಲ್ಲಿ ಮೀನುಗಾರರ ಜತೆ ಸಭೆ ನಡೆಸಲಿದ್ದಾರೆ.
Karnataka Election Live: ಲಕ್ಷ್ಮಣ ಸವದಿ ವಿರುದ್ಧ ಮಹೇಶ್ ಕುಮಟಳ್ಳಿ ವಾಗ್ದಾಳಿ
ಬೆಳಗಾವಿ: ಕಾಂಗ್ರೆಸ್ ನಾಯಕ, ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಸವದಿ ವಿರಿದ್ಧ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಾಗ್ದಾಳಿ ಮಾಡಿದ್ದಾರೆ. ನಿಮ್ಮ ಉಪಕಾರ ನಮ್ಮ ಮೇಲಿಲ್ಲ ನಾವು ಘಂಟಾಘೋಷವಾಗಿ ಹೇಳಬೇಕಾಗುತ್ತೆ. ನಮ್ಮಿಂದ ನೀವು ಇವತ್ತು ಎಂಎಲ್‌ಸಿ ಆದ್ರಿ, ರಾಜ್ಯದ ಡಿಸಿಎಂ ಆದ್ರಿ. 50 ಕೋಟಿ ರೂ. ಕೊಟ್ಟಿದ್ದು ನಿಜವಾಗಿದ್ದರೇ ಯಾವ ಸಮಯ ಕೊಡುತ್ತಾರೆ ಕೊಡಲಿ. ಸಿದ್ದೇಶ್ವರ ದೇವಸ್ಥಾನಕ್ಕೆ ಬರಲು ನಾನು ತಯಾರಿದ್ದೇನೆ. ನೀವು ಬರದಿದ್ದರೇ ವೈಯಕ್ತಿಕವಾಗಿ ನಾನು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಕಾಲುಬಿದ್ದು ಬರುವೆ ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿ ಅವರಿಗೆ ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ.
Karnataka Election Live: ಹುಬ್ಬಳ್ಳಿಗೆ ಇಂದು ಮಲ್ಲಿಕಾರ್ಜುನ್ ಖರ್ಗೆ ಭೇಟಿ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಇಂದು (ಏ.26) ಸಾಯಂಕಾಲ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರ ಸಭೆ ನಡೆಸುವ ಸಾಧ್ಯತೆ ಇದೆ.
Karnataka Election Live: ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿಗೆ 9 ಪ್ರಶ್ನೆಗಳನ್ನು ಕೇಳಿದ ಸುರ್ಜೆವಾಲ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ 9 ಪ್ರಶ್ನೆಗಳನ್ನು ಕೇಳಿದ್ದಾರೆ.
1. ನೀವು ಲಿಂಗಾಯತರು, ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿಗಳ ಮೇಲೆ “ಮೀಸಲಾತಿಯ ವಂಚನೆ ಆಟ ಏಕೆ ಆಡಿದ್ದೀರಿ?
2. ನೀವು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿಯನ್ನು ಏಕೆ ಸಮರ್ಥಿಸಲಿಲ್ಲ ?
3. ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ಏಕೆ ವಿಫಲವಾಯಿತು ?
4. ಮಾರ್ಚ್ 14, 2023 ರಂದು ಸಂಸತ್ತಿನಲ್ಲಿ ಎಸ್‌ಸಿ-ಎಸ್ಟಿಗಳಿಗೆ ಹೆಚ್ಚಿದ ಮೀಸಲಾತಿಯನ್ನು ಮೋದಿ ಸರ್ಕಾರ ಏಕೆ ತಿರಸ್ಕರಿಸಿತು ?
5. ಎಸ್‌ಸಿ-ಎಸ್ಟಿಗಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ IX ನೇ ಶೆಡ್ಯೂಲ್‌ನಲ್ಲಿ ಏಕೆ ಹಾಕಲಿಲ್ಲ ?
6. ಎಸ್‌ಸಿ, ಎಸ್‌ಟಿಗಳ ಆಕಾಂಕ್ಷೆಗಳನ್ನು ಪೂರೈಸಲು ನೀವು ಮೀಸಲಾತಿಯ ಶೇ 50 ಸೀಲಿಂಗ್ ಅನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ ?
7. ಧ್ರುವೀಕರಣಕ್ಕಾಗಿ ನೀವು ಏಕೆ ಅನ್ಯಾಯವಾಗಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಗುರಿಯಾಗಿಸಿಕೊಂಡಿದ್ದೀರಿ?
8. ಬೊಮ್ಮಾಯಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಮೀಸಲಾತಿ ಕುರಿತಾದ ತನ್ನದೆ ಆದ ಸರ್ಕಾರಿ ಆದೇಶವನ್ನು ಏಕೆ ತಡೆಹಿಡಿದಿದೆ ?
9. ಪ್ರಧಾನಮಂತ್ರಿಯವರು SC, ST ಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರಾ ? ಲಿಂಗಾಯತರು, ಒಕ್ಕಲಿಗರು ಮತ್ತು ಇತರರು ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಮಾಡಿದ ದ್ರೋಹಕ್ಕಾಗಿ?
Karnataka Election Live: ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ: ಸುರ್ಜೇವಾಲ
ಮೈಸೂರು: ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು. ಒಕ್ಕಲಿಗ ಮತ್ತು ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದು ಸುಪ್ರೀಂಕೋರ್ಟ್‌ನಲ್ಲಿ ಬಯಲಾಗಿದೆ ಎಂಧು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ವಾಗ್ದಾಳಿ ಮಾಡಿದ್ದಾರೆ.
Karnataka Election Live: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ -ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ
ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೋಸದಾಟ ಬಯಲಾಗಿದೆ ಎಂದು ಮೈಸೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದರು. ಮೀಸಲಾತಿ ಪರಿಷ್ಕರಣೆ ಹೆಸರಿನಲ್ಲಿ ಬಿಜೆಪಿ ವಂಚನೆ ಮಾಡುತ್ತಿದೆ. ಮೀಸಲಾತಿ ಪರಿಷ್ಕರಣೆ ಸಂಬಂಧ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಲು ಏಕೆ ಸಾಧ್ಯವಾಗಲಿಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಏಕೆ ಮೋಸದಾಟ ಆಡಿದ್ದಾರೆ. 40 ಪರ್ಸೆಂಟ್ ಬಿಜೆಪಿ ಸರ್ಕಾರ 40 ಸ್ಥಾನಗಳಿಗೆ ಕುಸಿಯಲಿದೆ ಎಂದು ವಾಗ್ದಾಳಿ ನಡೆಸಿದರು.
Karnataka Assembly Election Live: ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಜಂಟಿ ಸುದ್ದಿಗೋಷ್ಠಿ
ಮೈಸೂರು: ಮೈಸೂರಿನ ಖಾಸಗಿ ಹೋಟೆಲ್ನಲ್ಲಿಇಂದು (ಏ.26) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಜಂಟಿ ಸುದ್ದಿಗೋಷ್ಠಿ ಮಾಡಲಿದ್ದಾರೆ.
Karnataka Assembly Election Live: ಇಂದು ಮಂಡ್ಯ, ವಿಜಯಪುರ ಜಿಲ್ಲೆಗಳಿಗೆ ಯೋಗಿ ಆದಿತ್ಯನಾಥ್ ಭೇಟಿ
ಬೆಂಗಳೂರು: ಇಂದು (ಏ.25) ಮಂಡ್ಯ ಮತ್ತು ವಿಜಯಪುರ ಜಿಲ್ಲೆಗೆ ಹಿಂದೂ ಫೈಯರ್ ಬ್ರ್ಯಾಂಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ. ಬೆಳಗ್ಗೆ ಲಖನೌನಿಂದ ಮೈಸೂರಿಗೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್ ಅವರು, 11 ಗಂಟೆಗೆ ಮಂಡ್ಯದಲ್ಲಿ ನಡೆಯುವ ರೋಡ್ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ 2.40ಕ್ಕೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರರ ದರ್ಶನ ಪಡೆದು ಮಧ್ಯಾಹ್ನ 3.05ಕ್ಕೆ ಬಸವನಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಪರ ಪ್ರಚಾರ ಮಾಡಲಿದ್ದಾರೆ.
ಇದಾದ ನಂತರ ಸಂಜೆ 4.50ಕ್ಕೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡು ಇಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಪರ ಮತಯಾಚಿಸಲಿದ್ದಾರೆ. ಸಮಾವೇಶ ಮುಗಿದ ಬಳಿಕ ಉತ್ತರ ಪ್ರದೇಶದ ಲಖನೌಗೆ ನಿರ್ಗಮಿಸುತ್ತಾರೆ.
ಹಿಂದೂ ಫೈಯರ್ ಬ್ರ್ಯಾಂಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ಪ್ರವಾಸ#karnatakaassemblyelection2023 #bjpkarnataka #YogiAdityanathhttps://t.co/uaTYrnZYm7
— TV9 Kannada (@tv9kannada) April 26, 2023
Karnataka Assembly Election Live: ಇಂದು ಚಿಕ್ಕಮಗಳೂರಿಗೆ ಪ್ರಿಯಾಂಕಾ ಗಾಂಧಿ ಭೇಟಿ
ಚಿಕ್ಕಮಗಳೂರು: ಇಂದು (ಏ.26) ಮಾಜಿ ಪ್ರಧಾನಿ ದಿವಂತ ಇಂದಿರಾಗಾಂಧಿ (Indira Gandhi) ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು 1998 ರಿಂದ ಈಚೆಗೆ ಕಮಲ ಅರಳಿದೆ. ಈಗ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಲು ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಲಗ್ಗೆ ಇಡುತ್ತಿದ್ದಾರೆ.
Published On - Apr 26,2023 8:33 AM