Sandur Election 2023 Winner: ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ 35390 ಮತಗಳ ಅಂತರದಿಂದ ಭರ್ಜರಿ ಗೆಲುವು
E Tukaram: ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ 35390 ಮತಗಳ ಅಂತರದಿಂದ ಭರ್ಜರಿ ಗೆಲುವು
Sandur Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ (Sandur Assembly Constituency) ಜೆಡಿಎಸ್‌ನಿಂದ ಸೋಮಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದ ಇ.ತುಕಾರಾಂ ಹಾಗು ಬಿಜೆಪಿಯಿಂದ ಶಿಲ್ಪಾ ರಾಘವೇಂದ್ರ ಕಣಕ್ಕಿಳಿದಿದ್ದಾರೆ. ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ 35390 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
84839 ಮತಗಳಿಂದ ಕಾಂಗ್ರೆಸ್ ಪಕ್ಷದ ಈ ತುಕಾರಾಂ ಗೆಲುವು ಸಾಧಿಸಿದರೆ, ಇತ್ತ ಬಿಜೆಪಿ ಪಕ್ಷದ ಶಿಲ್ಪಾ ರಾಘವೇಂದ್ರ 49449 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. KRPP ಪಕ್ಷದ ಕೆಎಸ್ ದಿವಾಕರ್ 31299 ಮತಗಳನ್ನು ಪಡೆದಿದ್ದಾರೆ.
ಸಂಡೂರು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. 2018 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಇ ತುಕಾರಾಂ ಅವರು ಭಾರತೀಯ ಜನತಾ ಪಕ್ಷದ ಡಿ ರಾಘವೇಂದ್ರ ಅವರನ್ನು 14010 ಮತಗಳ ಅಂತರದಿಂದ ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಇದು, ಬಳಿಕ ಎಸ್‌ಟಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಇವರೇ ಬಹುಸಂಖ್ಯಾತರು. ಇವರ ಬಳಿಕ ದಲಿತ ಸಮುದಾಯ, ಮುಸಲ್ಮಾನ, ಈಡಿಗ, ಕುರುಬ ಸಮುದಾಯಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
2008 ರಲ್ಲಿ ಸಂಡೂರು ಕಾಂಗ್ರೆಸ್ ಪಾಲಾಯಿತು. ಕೈ ಅಭ್ಯರ್ಥಿಯಾಗಿದ್ದ ಇ ತುಕಾರಾಂ ಈ ಸ್ಥಾನದಿಂದ ಗೆದ್ದು ಶಾಸಕರಾದರು. 2013ರಲ್ಲೂ ತುಕಾರಾಂ ಇಲ್ಲಿನ ಶಾಸಕರಾದರು ಈ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಧನಂಜಯ ಆರ್ ಎದುರು 34631 ಮತಗಳಿಂದ ಗೆದಿದ್ದರು. 2018 ರಲ್ಲಿ ತುಕಾರಾಂ ಗೆಲುವಿನ ಹ್ಯಾಟ್ರಿಕ್ ದಾಖಲಿಸಿದರು.