ಸಾರಾ ಮಹೇಶ್ ಸೋಲು; ಮನನೊಂದ ಅಭಿಮಾನಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ 2023 ಪ್ರಕಟಗೊಂಡಿದ್ದು, ಜೆಡಿಎಸ್​ ಪಕ್ಷದ ಸಾರಾ ಮಹೇಶ್ ಅವರು ಸೋಲು ಅನುಭಿವಿಸಿದ್ದಾರೆ. ಇದರಿಂದ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಾರಾ ಮಹೇಶ್ ಸೋಲು; ಮನನೊಂದ ಅಭಿಮಾನಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ
ಸಾರಾ ಮಹೇಶ್ ಸೋಲಿನಿಂದ ಮನನೊಂದ ಅಭಿಮಾನಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ
Follow us
Rakesh Nayak Manchi
|

Updated on: May 14, 2023 | 10:34 PM

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಜೆಡಿಎಸ್ ಪಕ್ಷದ ಅಭ್ಯರ್ಥಿ ಸಾರಾ ಮಹೇಶ್ (Sa Ra Mahesh) ಅವರು ಸೋಲು ಅನುಭಿಸಿದ ಹಿನ್ನೆಲೆ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ (KR Nagar) ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾ ರಾ ಮಹೇಶ್ ಸೋಲಿನಿಂದ ವೆಂಕಟೇಶ್ ಆಘಾತಕ್ಕೆ ಒಳಗಾಗಿದ್ದ. ಫಲಿತಾಂಶ ಪ್ರಕಟಗೊಂಡ ನಂತರದಿಂದ ಸರಿಯಾಗಿ ಊಟ ಮಾಡಿರಲಿಲ್ಲವಂತೆ. ಯಾರ ಜೊತೆಯೂ ಮಾತನಾಡಿರಲಿಲ್ಲವಂತೆ. ಇಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.