ಸಿಟಿ ರವಿ ದುರಹಂಕಾರವೇ ಅವರ ಸೋಲಿಗೆ ಕಾರಣ: HD ತಮ್ಮಯ್ಯ ಕಿಡಿ
ಹಣ ಬಲದ ನಡುವೆ ಇಂದು ಜನ ಬಲ ಗೆದ್ದಿದೆ. ಸಿಟಿ ರವಿ ದುರಹಂಕಾರವೇ ಅವರ ಸೋಲಿಗೆ ಕಾರಣ ಎಂದು ನೂತನ ಶಾಸಕ ಹೆಚ್ಡಿ ತಮ್ಮಯ್ಯ ಕಿಡಿಕಾರಿದರು.
ಬೆಂಗಳೂರು: ಹಣ ಬಲದ ನಡುವೆ ಇಂದು ಜನ ಬಲ ಗೆದ್ದಿದೆ. ಸಿಟಿ ರವಿ (CT Ravi) ದುರಹಂಕಾರವೇ ಅವರ ಸೋಲಿಗೆ ಕಾರಣ ಎಂದು ನೂತನ ಶಾಸಕ ಹೆಚ್ಡಿ ತಮ್ಮಯ್ಯ ಕಿಡಿಕಾರಿದರು. ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, HD ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಅದನ್ನೆಲ್ಲ ನೋಡಿಯೇ ನಾವು ಸಿಟಿ ರವಿಯಿಂದ ದೂರ ಬಂದಿದ್ದು. ಪತ್ನಿ, ಮಕ್ಕಳ ಸಮೇತ ಚುನಾವಣಾ ಪ್ರಚಾರ ಮಾಡಿದ್ದರು. ಸಿ.ಟಿ.ರವಿ ದೊಡ್ಡ ಅಭ್ಯರ್ಥಿಯಾಗಿ ಕಾಣಿಸಲೇ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ: ಹೆಚ್ಡಿ ತಮ್ಮಯ್ಯ
ನಾನು ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಯಾವುದೇ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ. ಆ ಪ್ರಶ್ನೆಯೇ ಉದ್ಭವಿಸುದಿಲ್ಲ. ಸಿಎಂ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಇದನ್ನೂ ಓದಿ: ಈ ಬಾರಿ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದ ನಿರ್ಮಲಾನಂದನಾಥಶ್ರೀ, ನಂಜಾವಧೂತಶ್ರೀ
ಗೆದ್ದ ಅಮಲಿನಲ್ಲಿ ಮಾತಾಡ್ತಿದ್ದಾರೆ: ತಮ್ಮಯ್ಯ ವಿರುದ್ಧ ಸಿಟಿ ರವಿ ಕಿಡಿ
ಸಿಟಿ ರವಿ ದುರಹಂಕಾರವೇ ಸೋಲಿಗೆ ಕಾರಣ ಎಂಬ ಹೆಚ್. ಡಿ. ತಮ್ಮಯ್ಯ ಹೇಳಿಕೆಗೆ ಮಾಜಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದು, ಗೆದ್ದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ. ಆ ಅಮಲು ಎಷ್ಟು ದಿನ ಇರುತ್ತೆ, ಒಂದಲ್ಲ ಒಂದು ದಿನ ಇಳಿಯಲೇಬೇಕು. ಅವರು ನನ್ನ ಬಳಿಯೇ ಬಂದು ಸಹಿ ಮಾಡಿಸಿಕೊಂಡು ಹೋಗುತ್ತಿದ್ದರು. ನನ್ನ ಬಳಿ ಸಹಿ ಮಾಡಿಸಿಕೊಂಡು ಹೋಗುತ್ತಿದ್ದನ್ನು ಮರೆಯಬಾರದು ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಭಟ್ಕಳದಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
ನಾನು ಯಾರ ಮೇಲೂ ಬೊಟ್ಟು ಮಾಡುವುದಿಲ್ಲ: ಸಿ.ಟಿ.ರವಿ
ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಲು ಬರಲ್ಲ. ಜವಾಬ್ದಾರಿ ಸಿಕ್ಕಿದ ಮೇಲೆ ಕ್ಷೇತ್ರದ ಓಡಾಟ ಕಡಿಮೆ ಆಯ್ತು. ನಾನು ಯಾರ ಮೇಲೂ ಬೊಟ್ಟು ಮಾಡುವುದಿಲ್ಲ. ನಿರಂತರವಾಗಿ ಗೆಲ್ಲುವುದೊಂದೇ ನಾಯಕನ ಲಕ್ಷಣ ಅಲ್ಲ. ನನಗೆ ಸಿದ್ಧಾಂತ, ಪಕ್ಷ ಮುಖ್ಯ, ವೈಯಕ್ತಿಕ ಹಿತಾಸಕ್ತಿ ಅಲ್ಲ. ಸೋಲನ್ನು ನಾನು ವಿನಮ್ರವಾಗಿ ತೆಗೆದುಕೊಂಡಿದ್ದೇನೆ. ಸೋಲಿಗೆ ಅನೇಕ ಕಾರಣವಿದೆ, ಪಕ್ಷದ ಒಳಗಡೆ ಮಾತಾಡುತ್ತೇವೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Sun, 14 May 23