ಬ್ಯಾಗ್ ಕಳ್ಳತನವಾಗಿದ್ದಕ್ಕೆ ಪತ್ನಿ ಕಣ್ಣೀರು: ಎಂಟಿಬಿ ನಾಗರಾಜ್​ ವ್ಯಂಗ್ಯಕ್ಕೆ ಶರತ್ ಬಚ್ಚೇಗೌಡ ಕೆಂಡಾಮಂಡಲ

|

Updated on: May 02, 2023 | 11:36 AM

ಅದು ಹೇಳಿ ಕೇಳಿ ರಾಜಕೀಯ ಜಿದ್ದಾ ಜಿದ್ದಿಗೆ ಹೆಸರು ವಾಸಿಯಾಗಿರುವ ಕ್ಷೇತ್ರ. ಪ್ರತಿಭಾರಿ ಪ್ರೋಟೋಕಾಲ್ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಸಮರವೇ ನಡೆಯುತ್ತಿತ್ತು. ಆದ್ರೆ, ಇದೀಗ ಕಾರಿನಲ್ಲಿದ್ದ ಬ್ಯಾಗ್ ಕಳ್ಳತನ ವಿಚಾರಕ್ಕೂ ರಾಜಕೀಯ ಕೆಸರು ಅಂಟಿಕೊಂಡಿದ್ದು, ಪರಸ್ಪರ ಇಬ್ಬರು ನಾಯಕರು ಮಾತಿನಲ್ಲೆ ಬೆಂಕಿ ಉಗುಳುವ ಮೂಲಕ ಮತ್ತೊಂದು ಸಮರಕ್ಕೆ ನಾಂದಿ ಹಾಡಿದ್ದಾರೆ.

ಬ್ಯಾಗ್ ಕಳ್ಳತನವಾಗಿದ್ದಕ್ಕೆ ಪತ್ನಿ ಕಣ್ಣೀರು:  ಎಂಟಿಬಿ ನಾಗರಾಜ್​ ವ್ಯಂಗ್ಯಕ್ಕೆ ಶರತ್ ಬಚ್ಚೇಗೌಡ ಕೆಂಡಾಮಂಡಲ
ಎಂಟಿಬಿ, ಶರತ್​ ಬಚ್ಚೇಗೌಡ
Follow us on

ಬೆಂಗಳೂರು ಗ್ರಾಮಾಂತರ: ವಿಧಾನಸಭೆ ಚುನಾವಣೆ(Karnataka Assembly Elction) ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದರಂತೆ ಕಳೆದ ಏಪ್ರಿಲ್ 26 ರಂದು ಜಿಲ್ಲೆಯ ಹೊಸಕೋಟೆ(Hoskote) ನಗರದ ಪಾರ್ವತಿಪುರದಲ್ಲಿ ಹಾಲಿ ಶಾಸಕ ಕೈ ಅಭ್ಯರ್ಥಿ ಶರತ್ ಬಚ್ಚೇಗೌಡ(Sharath Bache Gowda)ಪರವಾಗಿ ಮತಯಾಚನೆಗೆ ಶರತ್ ಪತ್ನಿ ಪ್ರತಿಭಾ ಶರತ್ ತೆರಳಿದ್ರು. ಈ ವೇಳೆ ಬ್ಯಾಗ್ ಮತ್ತು ಮೊಬೈಲ್​ನ್ನು ಕಾರಿನಲ್ಲೆ ಬಿಟ್ಟು ಹೋಗಿದ್ದು, ಅದನ್ನ ನೋಡಿದ ಅಪರಿಚಿತನೊಬ್ಬ ಕಾರಿನ ಗ್ಲಾಸ್ ಹೊಡೆದು ಬ್ಯಾಗ್ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಆದ್ರೆ, ಈ ವೇಳೆ ನಮ್ಮ ಕಾರಿನ ಗ್ಲಾಸ್ ಅನ್ನ ರಾಜಕೀಯ ವಿರೋಧಿಗಳು ಕುತಂತ್ರದಿಂದ ಹೊಡೆಸಿರಬಹುದು ಎಂದು ಘಟನೆ ಬಗ್ಗೆ ಬಹಿರಂಗವಾಗಿಯೇ ಶಾಸಕ ಶರತ್ ಪತ್ನಿ ಪ್ರತಿಭಾ ಶರತ್ ನೆನೆದು ಕಣ್ಣೀರಾಕಿದ್ದರು. ಹೀಗಾಗಿ ಇದೇ ವಿಚಾರವನ್ನೆ ಇಟ್ಟುಕೊಂಡು ಪ್ರಚಾರಕ್ಕಿಳಿದ ಸಚಿವ ಎಂಟಿಬಿ ನಾಗರಾಜ್(M T B Nagaraj) ನಿನ್ನೆ(ಏ.30) ಕ್ಯಾಂಪೇನ್ ಮಾಡುವ ವೇಳೆ ಕಳ್ಳತನವನ್ನು ರಾಜಕೀಯಗಾಳವಾಗಿ ಬಳಸಿಕೊಂಡು ಶಾಸಕರ ಪತ್ನಿ ಕಣ್ಣೀರಾಕಿ ಡ್ರಾಮ ಮಾಡುತ್ತಿದ್ದಾರೆ ಎಂದು ಅಣಕಿಸಿ ತೋರಿಸಿದ್ರು. ಸಚಿವರ ಈ ಒಂದು ವಿಡಿಯೋಗೆ ನೆರೆದಿದ್ದವರು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದು, ಇದೀಗ ಈ ವಿಡಿಯೋ ಕ್ಷೇತ್ರದಲ್ಲಿ ವೈರಲ್ ಆಗಿದೆ.

ಎಂಟಿಬಿ ನಾಗರಾಜ್ ವಿರುದ್ದ ಮಾತಿನಲ್ಲೆ ಕೆಂಡ ಉಗುಳಿದ ಶಾಸಕ ಶರತ್

ಸಚಿವರ ಈ ವಿಡಿಯೋ ಕ್ಷೇತ್ರದ ಜನರ ಮೊಬೈಲ್​ಗಳಲ್ಲಿ ಹರಿದಾಡುತ್ತಿದ್ದಂತೆ ಶಾಸಕ ಶರತ್ ಬಚ್ಚೇಗೌಡ ಸಚಿವ ಎಂಟಿಬಿ ನಾಗರಾಜ್ ವಿರುದ್ದ ಮಾತಿನ ಯುದ್ದವನ್ನೆ ನಡೆಸಿದ್ದಾರೆ. ಒರ್ವ ಹೆಣ್ಣು ಮಗಳು ನಡೆದ ಘಟನೆಯಿಂದ ಗಾಬರಿಯಾಗಿ ಕಣ್ಣೀರಾಕಿದ್ರೆ, ಅದನ್ನ ಅಣಕಿಸಿ ಪುಂಡರ ನಡುವೆ ಮನಃರಂಜನೆ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಿರುದ್ದ ಕಿಡಿಕಾಡಿದ್ದಾರೆ. ಅಲ್ಲದೆ ನಿಮ್ಮ ಮನೆಯ ಹೆಣ್ಣು ಮಗಳಿಗೆ ಈ ರೀತಿ ಆಗಿದ್ರೆ, ಕೇಸ್​ಗಳನ್ನ ಹಾಕಿಸುತ್ತಿದ್ರಿ, ಆದ್ರೆ, ಇದೀಗ ಪುಂಡರನ್ನ ಸೇರಿಸಿ ನಗುತ್ತಿದ್ದೀರಾ. 70 ವರ್ಷವಾಗಿ, ರಾಜ್ಯದ ಮಂತ್ರಿಯಾಗಿದ್ರು ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ:Shiva Rajkumar: ‘ನಾನು ರಾಜಕೀಯಕ್ಕೆ ಬರಲ್ಲ’; ನೇರವಾಗಿ ಹೇಳಿದ ಶಿವರಾಜ್​ಕುಮಾರ್

ಅಲ್ಲದೆ ಎಷ್ಟೆ ಹಣ, ಅಂತಸ್ಥು ಐಶ್ವರ್ಯವಿದ್ರು, ಸಂಸ್ಕಾರ ಮತ್ತು ಸೌಜನ್ಯ ಎನ್ನುವುದು ಇರಬೇಕು ಅದನ್ನ ಹಣದಿಂದ ಗಳಿಸಲು ಆಗಲ್ಲ ಎಂದು ಎಂಟಿಬಿ ನಾಗರಾಜ್ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಾರೆ ಅಭಿವೃದ್ದಿ ಕಾರ್ಯಗಳನ್ನ ಹೇಳಿಕೊಂಡು ಮುಂದಿನ ಸಮಸ್ಯೆಗಳ ಬಗ್ಗೆ ತಿಳಿದು ಮತಯಾಚನೆ ಮಾಡಬೇಕಿದ್ದ ನಾಯಕರು ಇದೀಗ ಕಳ್ಳತನ ಪ್ರಕರಣವನ್ನ ರಾಜಕೀಯ ಗಾಳವಾಗಿ ಬಳಸಿಕೊಂಡು ಮಾತಿನ ಸಮರಕ್ಕಿಳಿದಿರುವುದು ನಿಜಕ್ಕೂ ದುರಂತವೆ ಸರಿ.

ನವೀನ್ ಟಿವಿನೈನ್ ದೇವನಹಳ್ಳಿ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:32 am, Tue, 2 May 23