ಒಂದು ಟೈಮ್ನಲ್ಲಿ ಸಖತ್ ಸುದ್ದಿಯಾಗಿದ್ದ ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಒಂದು ಟೈಮ್ನಲ್ಲಿ ಸಖತ್ ಸುದ್ದಿಯಾಗಿದ್ದ ಯುವರಾಜ್ ಸ್ವಾಮಿ ವಿರುದ್ಧ ಇದೀಗ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಹೌದು ವಂಚನೆ ಕೇಸ್ನಲ್ಲಿ ಜೈಲಿಗೆ ಹೋಗಿದ್ದ ಸ್ವಾಮಿಜಿ ವಿರುದ್ದ ಗೋವಿಂದಯ್ಯ ಎಂಬುವರು ಸದಾಶಿವನಗರ ಠಾಣೆಗೆ 30ಲಕ್ಷ ಚೀಟೀಂಗ್ ಕೇಸ್ ದಾಖಲಿಸಿದ್ದಾರೆ.
ಬೆಂಗಳೂರು: ಒಂದು ಟೈಮ್ನಲ್ಲಿ ಸಖತ್ ಸುದ್ದಿಯಾಗಿದ್ದ ಯುವರಾಜ್ ಸ್ವಾಮಿ(Yuvaraj Swamy) ವಿರುದ್ಧ ಇದೀಗ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಹೌದು ವಂಚನೆ ಕೇಸ್ನಲ್ಲಿ ಜೈಲಿಗೆ ಹೋಗಿದ್ದ ಯುವರಾಜ್ ಸ್ವಾಮಿಜಿ ವಿರುದ್ದ ಗೋವಿಂದಯ್ಯ ಎಂಬುವರು ಸದಾಶಿವನಗರ ಠಾಣೆಗೆ 30ಲಕ್ಷ ಚೀಟೀಂಗ್ ಕೇಸ್ ದಾಖಲಿಸಿದ್ದಾರೆ. ಗೋವಿಂದಯ್ಯ ಅವರ ಅಳಿಯನಿಗೆ ಕೆಲಸ ಕೊಡಿಸುತ್ತೀನಿ ಎಂದು ಯುವರಾಜ್ ಸ್ವಾಮೀಜಿ 30ಲಕ್ಷ ತೆಗೆದುಕೊಂಡಿದ್ದನಂತೆ. ಆದ್ರೆ, ಕೆಲಸ ಕೊಡಿಸದೆ ಹಣವೂ ಕೊಡದೆ ವಂಚಿಸಿದ್ದು, ಈ ಸಂಬಂಧ ಈ ಹಿಂದೆ ಜ್ಞಾನಭಾರತಿ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಕೇಸ್ ಕೂಡ ನ್ಯಾಯಾಯದಲ್ಲಿ ವಿಚಾರಣೆ ಆಗುತ್ತಿತ್ತು.
ಆದ್ರೆ, ಯುವರಾಜ್ ಸ್ವಾಮಿ ಈ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಗೋವಿಂದಯ್ಯನನ್ನ ಕಾಂಟ್ಯಾಕ್ಟ್ ಮಾಡಿದ್ದು, ಕಾಂಪ್ರೋಮೈಸ್ ಮಾಡಿಕೊಳ್ಳೋಣ ಎಂದಿದ್ದನಂತೆ. ತೆಗೆದುಕೊಂಡ30ಲಕ್ಷ ಹಣ ಕೊಡುತ್ತೇನೆ ಎಂದು ಕೋರ್ಟ್ ಬಳಿ 5ಲಕ್ಷ ರೂ. ಮತ್ತು 10 ಲಕ್ಷದ ಎರಡು ಚೆಕ್ ಕೊಟ್ಟು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ದನಂತೆ. ಆದ್ರೆ, ಕೆಲ ದಿನಗಳ ನಂತರ ಎರಡೂ ಚೆಕ್ ಬೌನ್ಸ್ ಆಗಿದ್ದು, ಈಗ ಮತ್ತೆ ಯುವರಾಜ್ ಸ್ವಾಮೀಜಿ ಹಣ ಕೊಡದೆ ಆಟ ಆಡಿಸುತ್ತಿದ್ದಾನೆ ಎಂದು ಗೋವಿಂದಯ್ಯ ಸದ್ಯ ಯುವರಾಜ್ ವಿರುದ್ದ ಮತ್ತೆ ಸದಾಶಿವನಗರ ಠಾಣೆಗೆ ದೂರ ನೀಡಿದ್ದು, ಸದಾಶಿವನಗರ ಠಾಣೆಯಲ್ಲಿ ಚೀಟಿಂಗ್ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ವಿರುದ್ಧ 1.10 ಕೋಟಿ ರೂಪಾಯಿ ವಂಚನೆ ಆರೋಪ; ಕೇಸ್ ದಾಖಲು
2021ರಲ್ಲಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಯುವರಾಜ್ ಸ್ವಾಮಿ
2021ರಲ್ಲಿ ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ನ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿತ್ತು. ಈ ಬಗ್ಗೆ ಎಲ್ಲ ಪಿನ್ ಟು ಪಿನ್ ದಾಖಲೆಗಳನ್ನು ಪೊಲೀಸರು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಸ್ವಾಮಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸು ಹೊರಗಡೆ ಬಂದಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 am, Tue, 2 May 23