ಬೆಂಗಳೂರಿನಲ್ಲಿ ಇಂದು ಅಮಿತ್ ಶಾ ರೋಡ್ ಶೋ; ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ನಗರದ ಆಡುಗೋಡಿ ಸಿಗ್ನಲ್‌ನಿಂದ ಹೊಸೂರು ರಸ್ತೆಯ ಟೋಟಲ್ ಮಾಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು(ಮಂಗಳವಾರ) ನಗರದ ಆಡುಗೋಡಿ ಸಿಗ್ನಲ್‌ನಿಂದ ಹೊಸೂರು ರಸ್ತೆಯ ಟೋಟಲ್ ಮಾಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ. ಮರಿಗೌಡ ರಸ್ತೆಯಿಂದ ಮಡಿವಾಳ ಕಡೆ ಬರುವ ವಾಹನಗಳು ಡೇರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆ ಮೂಲಕ ಸಂಚರಿಸಬೇಕು. ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಬರುವ ವಾಹನಗಳು ವೀರಸಂದ್ರ ಬಳಿ ನೈಸ್ ರಸ್ತೆ ಮೂಲಕ ಬನ್ನೇರುಘಟ್ಟ ರಸ್ತೆ ಮೂಲಕ ಸಂಚಾರ ಮಾಡಬೇಕು ಎಂದು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ಪರ್ಯಾಯ ಮಾರ್ಗಗಳ ವಿವರ
- ಹೊಸೂರು ಲಷ್ಕರ್ ರಸ್ತೆಯಿಂದ ಬರುವ ವಾಹನಗಳು ಅನೆಪಾಳ್ಯ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಪ್ರವೇಶಿಸಬೇಕು.
- ಮಾರತ್ತಹಳ್ಳಿ ಕಡೆಯಿಂದ ಬರುವ ವಾಹನಗಳು ಹೆಚ್ಎಸ್ಆರ್ ಲೇಔಟ್ 14 ನೇ ಮೈನ್ ಮೂಲಕ ಹೊಸೂರು ರಸ್ತೆ ಪ್ರವೇಶಿಸಬೇಕು.
- ಬಿಟಿಎಂ ಲೇಔಟ್ ಕಡೆಯಿಂದ ಬರುವ ವಾಹನಗಳು ಜಯದೇವ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಪ್ರವೇಶಿಸಬಹುದು.
- ಬೇಗೂರು, ದೇವರ ಚಿಕ್ಕನಹಳ್ಳಿಯಿಂದ ಬರುವ ವಾಹನಗಳು ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಹೆಚ್ಎಸ್ಆರ್ ಲೇಔಟ್ ತಲುಪುವುದು.
ಇನ್ನೂ ಕೆಲವು ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ
ಕಬ್ಬನ್ ರಸ್ತೆ, ಟ್ರಿನಿಟಿ ವೃತ್ತ, ಬೈಯ್ಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ, ಹೆಚ್ಎಎಲ್, ಹಳೇ ಮದ್ರಾಸ್ ರಸ್ತೆ ಬದಲಿಗೆ ಪರ್ಯಾಯ ರಸ್ತೆ ಬಳಸಲು ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Amit Shah: ಶಿವಮೊಗ್ಗದಲ್ಲಿ ಅಮಿತ್ ಶಾ ರೋಡ್ ಶೋ, ದಾರಿಯುದ್ದಕ್ಕೂ ಜನವೋ ಜನ
ಅಮಿತ್ ಶಾ ಅವರು ಇಂದು (ಸೋಮವಾರ) ತಿಪಟೂರು, ರಾಣೆಬೆನ್ನೂರು, ಗುಬ್ಬಿ, ಶಿವಮೊಗ್ಗಗಳಲ್ಲಿ ರೋಡ್ ಶೋ ನಡೆಸಿದ್ದು, ನಾಳೆ ಬೆಂಗಳೂರು, ಹನೂರು, ಕೊಳ್ಳೆಗಾಲ ಹಾಗೂ ವರುಣಾದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 pm, Mon, 1 May 23