AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking incident: ರಾಜಧಾನಿ ಬೆಂಗಳೂರಿನಲ್ಲಿ ಆತಂಕಕಾರಿ ಘಟನೆ: ಟೆಕ್ಕಿ ಕಾರನ್ನು ಚೇಸ್ ಮಾಡಿ, ಹೆಲ್ಮೆಟ್‌ನಿಂದ ಗಾಜುಗಳ ಪುಡಿ ಪುಡಿ

Bengaluru Techie: ಬಿಇಎಂಎಲ್ ವೃತ್ತದಲ್ಲಿ ಸಂಚಾರಿ ಪೊಲೀಸರು ಕಂಡುಬಂದಾಗ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ ಎಂದು 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಸಲಗಾಂವ್ಕರ್ ಹೇಳಿದರು.

Shocking incident: ರಾಜಧಾನಿ ಬೆಂಗಳೂರಿನಲ್ಲಿ ಆತಂಕಕಾರಿ ಘಟನೆ: ಟೆಕ್ಕಿ ಕಾರನ್ನು ಚೇಸ್ ಮಾಡಿ, ಹೆಲ್ಮೆಟ್‌ನಿಂದ ಗಾಜುಗಳ ಪುಡಿ ಪುಡಿ
ರಾಜಧಾನಿ ಬೆಂಗಳೂರಿನಲ್ಲಿ ಆತಂಕಕಾರಿ ಘಟನೆ
ಸಾಧು ಶ್ರೀನಾಥ್​
|

Updated on: May 01, 2023 | 5:48 PM

Share

ಬೆಂಗಳೂರು: ಹಾಡಹಗಲೇ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ವಾಹನ ಸವಾರರು ತಮ್ಮ ಕಾರನ್ನು ನಿಲ್ಲಿಸುವಂತೆ ಧಮ್ಕಿ ಹಾಕಿ, ಹೆಲ್ಮೆಟ್‌ನಿಂದ ಕಾರಿನ ಗಾಜುಗಳಿಗೆ ಹೊಡೆದು ಹಿಂಬಾಲಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಕಳೆದ ವಾರಾಂತ್ಯ ಶನಿವಾರದಂದು (ಏಪ್ರಿಲ್ 29) ಈ ಘಟನೆ ಸಂಭವಿಸಿದ್ದು, ಬಾಧಿತ ವ್ಯಕ್ತಿ ಮತ್ತು ಅವರ ಕುಟುಂಬವು ಸುರಂಜನ್ ದಾಸ್ ರಸ್ತೆಯಲ್ಲಿ (Bengaluru) ಹಳೆ ಮದ್ರಾಸ್ ರಸ್ತೆಯ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ (Techie) ನೀಲೇಶ್ ಸಲಗಾಂವ್ಕರ್ (Neelesh Salgaonkar) ಅವರು ತಮ್ಮ ಪತ್ನಿ (43) ಮತ್ತು 17 ವರ್ಷದ ಮಗಳು ಹೆಚ್‌ಎಸ್‌ಆರ್ ಲೇಔಟ್‌ನಿಂದ ಹಳೆ ಮದ್ರಾಸ್ ರಸ್ತೆಗೆ ಪ್ರಯಾಣಿಸುತ್ತಿದ್ದರು. ಸುರಂಜನ್ ದಾಸ್ ರಸ್ತೆಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ (biker) ಕಾರಿನ (Car) ಸಮೀಪ ಬಂದು ಸನ್ನೆ ಮಾಡತೊಡಗಿದ.

“ನಮಗೆ ಇದು ವಿಚಿತ್ರವೆನಿಸಿತು. ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು ಮತ್ತು ನಂತರ ಇದ್ದಕ್ಕಿದ್ದಂತೆ ಅವರು ನಮ್ಮ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಮತ್ತು ನಮ್ಮ ಬಲಭಾಗಕ್ಕೆ ಚಲಿಸಲು ಪ್ರಾರಂಭಿಸಿದರು. ಅದರಿಂದ ಅವರು ಕಾರಿನತ್ತ ನುಗ್ಗಲು ಪ್ರಾರಂಭಿಸಿದರು. ನಾನು ಏನೋ ಆಗಬಾರದ್ದು ಆಗುತ್ತಿದೆ ಎಂದು ಶಂಕಿಸಿ ಕಾರನ್ನು ವೇಗವಾಗಿ ಓಡಿಸಿದೆ. ಇದೇ ವೇಳೆ ಆ ಬೈಕ್ ಸವಾರ ಎರಡು- ಮೂರು ನಿಮಿಷಗಳ ನಂತರ, ಅವನ ಸಹಚರನಂತೆ ಕಂಡ ಇನ್ನೊಬ್ಬ ವ್ಯಕ್ತಿ ಅವನೊಂದಿಗೆ ಸೇರಿಕೊಂಡರು. ಅವರಿಬ್ಬರೂ ಆಗ ನಮ್ಮ ಕಾರನ್ನು ನಿಲ್ಲಿಸುವಂತೆ ಬಲವಂತಪಡಿಸಿದ. ನಮ್ಮ ಕಾರಿನ ಮುಂದೆಯೇ ಹಾದುಹೋದರು. ಅವರು ಬೆದರಿಕೆಯ ಸನ್ನೆಗಳನ್ನು ಮಾಡತೊಡಗಿದರು. ಮತ್ತೊಬ್ಬ ವ್ಯಕ್ತಿ ಸಿಗ್ನಲ್ ಮಾಡುತ್ತಾ ಬಾನೆಟ್ ಮೇಲೆ ಕೈಯಿಟ್ಟ. ಈ ಬೆಳವಣಿಗೆಯಿಂದ ನಾವು ಧೃತಿಗೆಟ್ಟೆವು. ಆದರೂ ಅವರು ಹೇಳಿದಂತೆ ಆ ಜಾಗದಿಂದ ಕದುವುದಿಲ್ಲ ಎಂದೆವು ಎಂದು 49 ರ ಸಲಗಾಂವ್ಕರ್ ನ್ಯೂಸ್ 9 ಗೆ ತಿಳಿಸಿದ್ದಾರೆ.

ಆದರೂ ಆಘಾತಕ್ಕೊಳಗಾದ ಸಲ್ಗಾಂವ್ಕರ್ ಸಹಜವಾಗಿಯೇ ಕಾರನ್ನು ರಿವರ್ಸ್ ಗೇರ್‌ನಲ್ಲಿ ಹಾಕಿ ಎಡ ತಿರುವು ತೆಗೆದುಕೊಂಡು ಅಲ್ಲಿಂದ ತೆರಳಿದರು. “ನನ್ನ ಹೆಂಡತಿ 100 ಡಯಲ್ ಮಾಡಿದಳು. ಆದರೆ ಪೊಲೀಸರನ್ನು ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ರಸ್ತೆಯು ನಿರ್ಜನವಾಗಿತ್ತು. ನಾವು ದೂರ ಹೋಗಲಾರಂಭಿಸಿದಾಗ ಆ ಆಗುಂತಕರಿಬ್ಬರೂ ತಮ್ಮ ಹೆಲ್ಮೆಟ್‌ಗಳನ್ನು ಬಳಸಿ ಕಾರಿನ ಕಿಟಕಿಗಳಿಗೆ ಬಡಿಯಲು ಪ್ರಾರಂಭಿಸಿದರು. ಅವರು BEML ವೃತ್ತದ ವರೆಗೆ ನಮ್ಮನ್ನು ತಮ್ಮ ಮೋಟಾರ್‌ಸೈಕಲ್‌ಗಳಲ್ಲಿ ಹಿಂಬಾಲಿಸಿದರು.

ಬಿಇಎಂಎಲ್ ವೃತ್ತದಲ್ಲಿ ಸಂಚಾರಿ ಪೊಲೀಸರು ಕಂಡುಬಂದಾಗ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ. ನಾವು ತಕ್ಷಣ ಟ್ರಾಫಿಕ್ ಪೊಲೀಸರೊಂದಿಗೆ ಮಾತನಾಡಿ ಘಟನೆಯನ್ನು ವಿವರಿಸಿದೆವು. ವಿಚಿತ್ರವೆಂದರೆ ಪೊಲೀಸರು ನಮ್ಮನ್ನು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ (area jurisdiction) ಹೋಗುವಂತೆ ಸೂಚಿಸಿದರು ಎಂದು 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಸಲಗಾಂವ್ಕರ್ ಹೇಳಿದರು.

ಆಗಲೇ ಮಧ್ಯಾಹ್ನ 3.30-4 ಗಂಟೆಯಾಗಿತ್ತು, ನಮಗೆ ಸುಸ್ತಾಗಿತ್ತು. ಗಾಬರಿಯೂ ಆಗಿ ಮನೆಗೆ ಹೋದೆವು ಎಂದು ಸಲಗಾಂವ್ಕರ್ ಹೇಳಿದರು. ನಾವು ಔಪಚಾರಿಕವಾಗಿ ಪೊಲೀಸರಿಗೇನೂ ದೂರು ದಾಖಲಿಸಲಿಲ್ಲ. ಘಟನೆಯು ನಮಗೆ ತುಂಬಾ ಭಯಾನಕವಾಗಿದೆ ಎಂದು ಸಲಗಾಂವ್ಕರ್ ಆತಂಕದ ಧ್ವನಿಯಲ್ಲಿ ಹೇಳಿದ್ದಾರೆ.

ಇಡಿ ವೃತ್ತಾಂತವನ್ನು ಸಲಗಾಂವ್ಕರ್ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿವರಿಸಿದ್ದಾರೆ. ಆದರೆ ಬೆಂಗಳೂರು ಪೊಲೀಸರು ಇನ್ನೂ ಸಲಗಾಂವ್ಕರ್‌ ಅವರನ್ನು ಭೇಟಿಯಾಗಿಲ್ಲ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು ಪೂರ್ವದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಡಾ ಭೀಮಾಶಂಕರ್ ಎಸ್ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ