Shravanabelagola Election Results: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್​ನ ಸಿಎನ್ ಬಾಲಕೃಷ್ಣ ಗೆಲುವು; ಕಾಂಗ್ರೆಸ್​ನ ಎಂಎ ಗೋಪಾಲಸ್ವಾಮಿ ವೀರೋಚಿತ ಹೋರಾಟ

|

Updated on: May 13, 2023 | 4:35 PM

Shravanabelagola Assembly Election Result 2023 Live Counting Updates: ಹಾಸನ ಜಿಲ್ಲೆಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಸಿಎನ್ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

Shravanabelagola Election Results: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್​ನ ಸಿಎನ್ ಬಾಲಕೃಷ್ಣ ಗೆಲುವು; ಕಾಂಗ್ರೆಸ್​ನ ಎಂಎ ಗೋಪಾಲಸ್ವಾಮಿ ವೀರೋಚಿತ ಹೋರಾಟ
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಚುನಾವಣೆ
Follow us on

Shravanabelagola Assembly Election Result 2023: ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇರುವ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ (Shravanabelagola Assembly Election Result) ಮತ ಎಣಿಕೆಗೆ ನಡೆಯುತ್ತಿದ್ದು, ಜೆಡಿಎಸ್​ನ ಸಿಎನ್ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವಿನತ್ತ ಸಾಗಿದ್ದಾರೆ. ಆದರೆ, ಮೊದಲ ಸುತ್ತಿನಿಂದಲೂ ಹೊಯ್ದಾಟದಲ್ಲಿದ್ದು, ಬಾಲಣ್ಣ ಅಲ್ಪ ಮತಗಳಿಂದ ಮಾತ್ರ ಮುಂದಿದ್ದಾರೆ. ಆರಂಭದ ಒಂದೆರಡು ಸುತ್ತುಗಳಲ್ಲಿ ಕಾಂಗ್ರೆಸ್​ನ ಎಂಎ ಗೋಪಾಲಸ್ವಾಮಿ ಮುನ್ನಡೆ ಸಾಧಿಸಿ, ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸುವ ಸುಳಿವು ನೀಡಿದ್ದರು. ಆದರೆ, ಮುಂದಿನ ಸುತ್ತುಗಳಲ್ಲಿ ಬಾಲಕೃಷ್ಣ ಮುನ್ನಡೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಫಲಿತಾಂಶ

  • ಜೆಡಿಎಸ್: ಸಿಎನ್ ಬಾಲಕೃಷ್ಣ – ಮುನ್ನಡೆ
  • ಕಾಂಗ್ರೆಸ್: ಎಂಎ ಗೋಪಾಲಸ್ವಾಮಿ
  • ಬಿಜೆಪಿ: ಸಿಆರ್ ಚಿದಾನಂದ

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಟ್ಟು 1,98,966 ಮತದಾರರು ಇದ್ದಾರೆ. ಇಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚು ಇದೆ. ಇಲ್ಲಿ ಚುನಾವಣೆಗಳಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ ಎನಿಸುತ್ತವೆ. ಹಾಸನ ಜಿಲ್ಲೆಯ 7 ವಿಧಾಸನಭಾ ಕ್ಷೇತ್ರಗಳಲ್ಲೊಂದಾದ ಶ್ರವಣಬೆಳಗೊಳ ಇತ್ತೀಚಿನ ಕೆಲ ವರ್ಷಗಲ್ಲಿ ಜಾತ್ಯತೀತ ಜನತಾ ದಳದ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಇಲ್ಲಿ ಜೆಡಿಎಸ್​ಗೆ ಪೈಪೋಟಿ ನೀಡಬಲ್ಲ ಪಕ್ಷ ಕಾಂಗ್ರೆಸ್ ಮಾತ್ರವೇ. ಬಿಜೆಪಿ ಇಲ್ಲಿ ಬೇರೂರಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಮಾತ್ರವೇ ನೇರ ಪೈಪೋಟಿ ಇತ್ತು. ಉಳಿದ ಯಾವ ಪಕ್ಷಗಳು ಅಥವಾ ಅಭ್ಯರ್ಥಿಗಳು ಠೇವಣಿ ಪಡೆಯುವ ಅವಕಾಶವೂ ಇಲ್ಲ. ಒಂದು ಕಾಲದಲ್ಲಿ ಎಚ್​ಡಿ ದೇವೇಗೌಡರ ರಾಜಕೀಯ ವೈರಿಗಳಾಗಿದ್ದ ಎಚ್​ಸಿ ಶ್ರೀಕಂಠಯ್ಯ ಮತ್ತು ಪುಟ್ಟಸ್ವಾಮಿಗೌಡ ನಿಧನರಾದ ಬಳಿಕ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ತುಸು ಪೇಲವಗೊಂಡಿದೆ. ಇದು ಜೆಡಿಎಸ್​ಗೆ ಅನುಕೂಲ ಮಾಡಿಕೊಟ್ಟಿದೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲ್ಲೋದು ಜೆಡಿಎಸ್ ಪಕ್ಷವೇ ಎಂಬಂತಾಗಿದೆ. 2008ರಲ್ಲಿ ಜೆಡಿಎಸ್ ಪಕ್ಷದ ಟಿಕೆಟ್​ನಲ್ಲಿ ಗೆದ್ದಿದ್ದ ಸಿ.ಎಸ್. ಪುಟ್ಟೇಗೌಡ ಕಾಂಗ್ರೆಸ್​ಗೆ ಪಕ್ಷಾಂತರಗೊಂಡು 2013 ಮತ್ತು 2018ರಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಪುಟ್ಟೇಗೌಡರ ವೈಯಕ್ತಿಕ ವರ್ಚಸ್ಸಿನಿಂದ ಶ್ರವಣಬೆಳಗೊಳದಲ್ಲಿ ಗೆಲ್ಲಬಹುದು ಎಂಬ ಸಣ್ಣ ನಿರೀಕ್ಷೆ ಹುಸಿಯಾಗಿಹೋಗಿತ್ತು. ಸಿಎನ್ ಬಾಲಕೃಷ್ಣ ವಿರುದ್ಧದ ಅಲೆ ಶ್ರವಣಬೆಳಗೊಳದಲ್ಲಿ ಇದ್ದಂತೆ ಮೇಲ್ನೋಟಕ್ಕೆ ತೋರಿದರೂ ಅವರು ಗೆಲುವಿನತ್ತ ಮುನ್ನಡೆದಿರುವುದು ಅಚ್ಚರಿಯೂ ಹೌದು, ನಿರೀಕ್ಷಿತವೂ ಹೌದು.

 

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:19 am, Sat, 13 May 23