AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ನೇರ ಕಾರಣ: ಮಾಜಿ ಶಾಸಕ ವಾಸು ಗಂಭೀರ ಆರೋಪ

ಮೈಸೂರಿನಲ್ಲಿ ಕಾಂಗ್ರೆಸ್​ ಟಿಕೆಟ್ ವಂಚಿತ ವಾಸು ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಜಾತಿ ರಾಜಕಾರಣವನ್ನು ನಾನು ವಿರೋಧಿಸುವೆ. 2018ರಲ್ಲಿ ನನ್ನನ್ನು ಸೋಲಿಸಿದ್ದು ಸಿದ್ದರಾಮಯ್ಯ ಬೆಂಬಲಿಗರು ಎಂದಿದ್ದಾರೆ.

ನನಗೆ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ನೇರ ಕಾರಣ: ಮಾಜಿ ಶಾಸಕ ವಾಸು ಗಂಭೀರ ಆರೋಪ
ಮಾಜಿ ಶಾಸಕ ವಾಸು, ಸಿದ್ದರಾಮಯ್ಯ
ಆಯೇಷಾ ಬಾನು
|

Updated on:Apr 16, 2023 | 2:14 PM

Share

ಮೈಸೂರು: ನನಗೆ ಚಾಮರಾಜ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಮೈಸೂರಿನಲ್ಲಿ ಕಾಂಗ್ರೆಸ್​ ಟಿಕೆಟ್ ವಂಚಿತ ವಾಸು ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಜಾತಿ ರಾಜಕಾರಣವನ್ನು ನಾನು ವಿರೋಧಿಸುವೆ. 2018ರಲ್ಲಿ ನನ್ನನ್ನು ಸೋಲಿಸಿದ್ದು ಸಿದ್ದರಾಮಯ್ಯ ಬೆಂಬಲಿಗರು. ಹುಲಿ ಬಾಯಿಗೆ ಮಗು ಸಿಕ್ಕಿ ಹಾಕಿಕೊಂಡಿದೆ. ಜೋಪಾನವಾಗಿ ಮಗುವನ್ನು ಬಿಡಿಸಿಕೊಳ್ಳಬೇಕು ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಹುಲಿಗೆ, ಪಕ್ಷವನ್ನ ಮಗುವಿಗೆ ಹೋಲಿಸಿ ಮಾಜಿ ಶಾಸಕ ವಾಸು ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಇನ್ನು ಎರಡು ದಿನದಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಸಿದ್ದರಾಮಯ್ಯ ಜಾತಿ ರಾಜಕಾರಣವನ್ನ ನಾನು ವಿರೋಧಿಸಿದೆ. ಸಂಪೂರ್ಣ 5 ವರ್ಷ ಅಧಿಕಾರ ನಡಸಿದ ಕಾಂಗ್ರೆಸ್ 2018 ರಲ್ಲಿ ಸೋಲು ಕಂಡಿತು. ಇದಕ್ಕೆ ಜಾತಿ ರಾಜಕಾರಣ ಕಾರಣವಾಯ್ತು. 2018ರಲ್ಲಿ ನನ್ನ ಸೋಲಿಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಕಡೆ ಇದ್ದವರೆಲ್ಲ ನನ್ನ ವಿರುದ್ದ ಕೆಲಸ ಮಾಡಿದರು. ಆದರೆ ಪಕ್ಷದಲ್ಲಿ ಇದಕ್ಕೆ‌ ಯಾವುದೇ ಕ್ರಮ ಆಗಲಿಲ್ಲ. ಆದರೆ ಎನ್‌ಆರ್‌ ಕ್ಷೇತ್ರದಲ್ಲಿ ಸತ್ಯ ಮಾತನಾಡಿದ ಶಾಹಿದ್ ನನ್ನ ತೆಗೆದು ಹಾಕಿದರು. ಹುಲಿ ಬಾಯಿಗೆ ಮಗು ಸಿಕ್ಕಿ ಹಾಕಿಕೊಂಡಿದೆ. ಜೋಪಾನವಾಗಿ ಮಗುವನ್ನು ಬಿಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Karnataka Assembly Election: ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ: ಅಶ್ವತ್ಥ್ ನಾರಾಯಣ್ ಗೌಡ

ಯಾರ ವೈಯುಕ್ತಿಕ ಹಠನೋ, ಚಟನೋ ಗೊತ್ತಿಲ್ಲ? ನನಗೆ ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಮಿಸ್ ಆಗಿದ್ದಕ್ಕೆ ನನಗೆ ಬೇಸರ ಇಲ್ಲ. ಸೋತಾಗಲೂ ನಾನು ಕುಗ್ಗಿಲ್ಲ. ನನಗಿದ್ದ ವಿಶನ್ ಈಡೇರಿಸಲು ಆಗಲಿಲ್ಲ ಅನೋ ಬೇಸರ‌ ಇದೆ. ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದ ವಿವಾದಗಳು ನಡಿತಾ ಇದ್ದವ. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ರೆ ನಾನು ನಿವೃತ್ತಿಗೆ ರೆಡಿ, ಡಂಡ ಕಟ್ಟಲು ರೆಡಿ. ನನಗೆ ಟಿಕೆಟ್ ತಪ್ಪಿಸಿದ್ದವರಿಗೆ ದೇವರು ಸನ್ಮಾರ್ಗ ಕೊಡಲಿ. ನನಗೆ ಈವರೆಗೆ ಅವಕಾಶ ಕೊಟ್ಟ ಪಕ್ಷವನ್ನು ನಾನು ದೂರುವುದಿಲ್ಲ. ನನಗೆ ಬಹಳ ಒತ್ತಡ ಇದೆ ನಮ್ಮ ಪಕ್ಷಕ್ಕೆ ಬನ್ನಿ ಅಂತ ಹಲವರು ಕರೆಯುತ್ತಿದ್ದಾರೆ. ಎರಡು ದಿನಗಳಲ್ಲಿ ತಿರ್ಮಾನ ಮಾಡುತ್ತೇನೆ. ಪಕ್ಷ ಬಿಡುವುದರಿಂದ ನನ್ನ‌ ಜೊತೆ ಬಂದವರಿಗೆ ಅನ್ಯಾಯ ಆಗುತ್ತದೆ. ಪಕ್ಷದಲ್ಲಿ ನನಗೆ ಸಪೋರ್ಟ್ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾನು ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವರನ್ನು ಖಂಡಿಸೋದು ದ್ವೇಷಿಸೋದು ನಿಜ. ಸೀಟ್ ತಪ್ಪಿಸುವುದರಿಂದ ನನ್ನ ವಾಯ್ಸ್ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:14 pm, Sun, 16 April 23