ಬೆಂಗಳೂರು: ಕರ್ನಾಟಕ ಸಚಿವ ಸಂಪುಟದ ಮೊದಲ ಕಂತಿನ ರಚನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯ ಕಾರಣ ಎನ್ನಲಾದ ಸಮುದಾಯಗಳಿಗೆ ಗೌರವ ಸಲ್ಲಿಸಲಾಗಿದೆ. ಒಟ್ಟು 10 ಸದಸ್ಯರಲ್ಲಿ (ಸಿಎಂ, ಡಿಸಿಎಂ ಸೇರಿ) ಮೂವರು ಎಸ್‌ಸಿ, 1 ಎಸ್‌ಟಿ, 2 ಒಕ್ಕಲಿಗರು, 1 ಒಬಿಸಿ, 2 ಅಲ್ಪಸಂಖ್ಯಾತರು ಮತ್ತು ಒಬ್ಬರು ಲಿಂಗಾಯತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಬಿಸಿ (ಕುರುಬ) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಕ್ಕಲಿಗ, ಜೊತೆಗೆ ರಾಮಲಿಂಗಾ ರೆಡ್ಡಿ ಕೂಡ ಒಕ್ಕಲಿಗರಾಗಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮೂವರು ಸಚಿವರಿದ್ದಾರೆ. ಅವರೆಂದರೆ, ಡಾ ಜಿ ಪರಮೇಶ್ವರ, ಕೆಎಚ್ ಮುನಿಯಪ್ಪ ಮತ್ತು ಪ್ರಿಯಾಂಕ್ ಖರ್ಗೆ. ಸಚಿವ ಸಂಪುಟದಲ್ಲಿ ಇಬ್ಬರು ಅಲ್ಪಸಂಖ್ಯಾತರು (ಕೆಜೆ ಜಾರ್ಜ್ ಮತ್ತು ಜಮೀರ್ ಅಹಮದ್ ಖಾನ್) ಸೇರಿದ್ದಾರೆ. ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಮತ್ತು ಲಿಂಗಾಯತ ನಾಯಕ ಎಂಬಿ ಪಾಟೀಲ್ಗೆ ಅವಕಾಶ ನೀಡಲಾಗಿದೆ.
ಪ್ರಾದೇಶಿಕವಾರು ನೋಡಿದರೆ, ಬೆಂಗಳೂರಿನಿಂದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಬೆಂಗಳೂರು ಮತ್ತು ಹಳೇ ಮೈಸೂರಿಗೆ (ಸಿದ್ದರಾಮಯ್ಯ, ಶಿವಕುಮಾರ್ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಕೆ.ಎಚ್. ಮುನಿಯಪ್ಪ ಮತ್ತು ಜಿ. ಪರಮೇಶ್ವರ್) ಸಿಂಹಪಾಲು ಪ್ರಾಸ್ತ್ಯ ದೊರೆತರೆ, ಉಳಿದಂತೆ ಉತ್ತರ ಕರ್ನಾಟಕದ ಮೂವರು (ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ.ಪಾಟೀಲ್) ಎಂ.ಬಿ. ಪಾಟೀಲ್ ಕಲ್ಯಾಣ ಕರ್ನಾಟಕದವರಾಗಿದ್ದಾರೆ. ಮಧ್ಯ ಕರ್ನಾಟಕ ಅಥವಾ ಕರಾವಳಿ ಕರ್ನಾಟಕದಿಂದ ಯಾವುದೇ ಪ್ರಾತಿನಿಧ್ಯವಿಲ್ಲ.
ಮೇಲ್ನೋಟಕ್ಕೆ, ಸಮುದಾಯಗಳ ಪ್ರಾತಿನಿಧ್ಯ ಹಾಗೂ ರಾಜ್ಯದ ವಿವಿಧ ಪ್ರದೇಶಗಳ ಪ್ರಾತಿನಿಧ್ಯದ ವಿಷಯದಲ್ಲಿ ಸಚಿವ ಸಂಪುಟದಲ್ಲಿ ಎಡವಟ್ಟು ಕಾಣುತ್ತಿದೆ. ಇದು ಕ್ಯಾಬಿನೆಟ್‌ನ ಮೊದಲ ಕಂತು, ಮತ್ತು ಪ್ರಾತಿನಿಧ್ಯದ ಅಸಮಾನತೆಯನ್ನು ಪರಿಹರಿಸಲು ಕನಿಷ್ಠ ಒಂದು ಅಥವಾ ಎರಡು ವಿಸ್ತರಣೆಗಳಾಗಬಹುದು. ಕಾನೂನಿನಿಂದ ಅನುಮತಿಸಲಾದ ಗರಿಷ್ಠ ಸಂಖ್ಯೆಯ 30 ರ ಸಂಪೂರ್ಣ ಶಕ್ತಿಯನ್ನು ಸಾಧಿಸಬಹುದು ಎಂದು ಭಾವಿಸಲಾಗಿದೆ.
ಇದನ್ನೂ ಓದಿ: Karnataka CM Oath Taking: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ
ಪ್ರಾದೇಶಿಕ ಅಸಮಾನತೆಯನ್ನು ಸರಿದೂಗಿಸುವ ಅಗತ್ಯವನ್ನು ಅವಲಂಬಿಸಿ ಕಾಂಗ್ರೆಸ್ ಮೊದಲ ಕಂತಿನಲ್ಲಿ ಅನುಭವಿಗಳಿಗೆ ಮಣೆ ಹಾಕಿದೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ವಿಸ್ತರಣೆಗಳಲ್ಲಿ, ಕರಾವಳಿ ಕೋಟಾದಿಂದ ಯುಟಿ ಖಾದರ್ ಮತ್ತು ಆರ್‌ವಿ ದೇಶಪಾಂಡೆ ಅವರಿಗೆ ಅವಕಾಶ ಕಲ್ಪಿಸುವುದು ಬಹುತೇಕ ಖಚಿತವಾಗಿದೆ. ಉತ್ತರ ಕರ್ನಾಟಕದಲ್ಲಿ ವಿಜಯ ಗಳಿಸಲು ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟ ಹೆಚ್ಚಿನ ಲಿಂಗಾಯತರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್‌ಗೆ ದೃಢವಾದ ಪ್ರಯತ್ನ ಸಹಾಯ ಮಾಡಿದ ಲಕ್ಷ್ಮಣ ಸವದಿ (ಅಥಣಿ) ಕೂಡ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಮಹಿಳೆಯರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ) ಗೆ ಅವಕಾಶ ಸಿಗಬಹುದು ಎಂದು ‘ನ್ಯೂಸ್9’ ವರದಿ ಮಾಡಿದೆ.
ಉತ್ತರ ಕರ್ನಾಟಕದ ಇತರ ಲಿಂಗಾಯತ ನಾಯಕರ ಪೈಕಿ ಹಿರಿಯ ನಾಯಕ ಕೆ.ಎಚ್.ಪಾಟೀಲ್ (ಗದಗ), ಶಿವಾನಂದ ಪಾಟೀಲ (ಬಸವನ ಬಾಗೇವಾಡಿ), ಯಶವಂತ ರಾಯಗೌಡ ಪಾಟೀಲ್ (ಇಂಡಿ), ಶರಣಪ್ರಕಾಶ ಪಾಟೀಲ್ (ಸೇಡಂ) ಮತ್ತು ಬಿಆರ್ ಪಾಟೀಲ್ (ಆಳಂದ್) ಸೇರಿದ್ದಾರೆ. ಒಬಿಸಿ ಕೋಟಾದಿಂದ, ನಾರಾಯಣ ಸ್ವಾಮಿ (ಬಂಗಾರಪೇಟೆ) ಅಜಯ್ ಸಿಂಗ್ (ಜೇವರ್ಗಿ), ರುದ್ರಪ್ಪ ಲಮಾಣಿ (ಹಾವೇರಿ) ಭೀಮಣ್ಣ ನಾಯ್ಕ್ (ಸಿರ್ಸಿ), ಆರ್‌ಬಿ ತಿಮ್ಮಾಪುರ (ಮುಧೋಳ) ಮತ್ತು ರಘುಮೂರ್ತಿ (ಚಳ್ಳಕೆರೆ) ಸೇರ್ಪಡೆಯಾಗಬಹುದು.
ಇದನ್ನೂ ಓದಿ: ಸಿಇಟಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಟ್ರಾಫಿಕ್ ಬಿಸಿ; ನೆರವಾದ ಪೊಲೀಸರು
ಎಂ ಕೃಷ್ಣಪ್ಪ (ಬೆಂಗಳೂರಿನ ವಿಜಯನಗರ), ಎಂ ಚಲುವರಾಯಸ್ವಾಮಿ (ನಾಗಮಂಗಲ), ಬಸನಗೌಡ ತುರುವಿಹಾಳ (ಮಾಸ್ಕಿ), ಕೆಎನ್ ರಾಜಣ್ಣ (ಮಧುಗಿರಿ), ಎಸ್‌ಆರ್ ಶ್ರೀನಿವಾಸ್ (ಗುಬ್ಬಿ) ಇತರ ಆಶಾವಾದಿಗಳಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ