ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ

|

Updated on: Apr 14, 2023 | 10:42 PM

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಚುನಾವಣಾ ಭತ್ಯೆ (allowance) ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಡಿಎಸ್​ಪಿ ದರ್ಜೆ ಮತ್ತು ಮೇಲ್ಮಟ್ಟದ ಅಧಿಕಾರಿಗಳಿಗೆ 7000 ರೂ. ಪೊಲೀಸ್ ಇನ್ಸ್ಪೆಕ್ಟರ್​ಗಳಿಗೆ 700 ರೂ. ಪಿಎಸ್​ಐ, ಎಎಸ್​ಐ, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ ಟೇಬಲ್​ಗಳಿಗೆ 500 ರೂ. ಹೋಮ್ ಗಾರ್ಡ್ಸ್, ಫಾರೆಸ್ಟ್ ಗಾರ್ಡ್ಸ್, ಗ್ರಾಮ ರಕ್ಷಕ ದಳ, ಎಸ್​ಸಿಸಿ ಕೆಡೆಟ್ಸ್ , ಎಕ್ಸ್ ಆರ್ಮಿ 350 ರೂ. ಭತ್ಯೆ ನಿಗದಿಪಡಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಏ.13 ರಿಂದ ಪ್ರಾರಂಭವಾಗಿದ್ದು ಏಪ್ರಿಲ್​ 20ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನಿನ್ನೆ ಮೊದಲ ದಿನ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ 27 ಅಭ್ಯರ್ಥಿಗಳು, ಕಾಂಗ್ರೆಸ್​ನ 26, ಎಎಪಿ 10, ಜೆಡಿಎಸ್​ 12, 45 ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.5 ಕೆಜಿ ಚಿನ್ನಾಭರಣ ಜಪ್ತಿ, ಬೆಳಗಾವಿಯಲ್ಲಿ 9 ಲಕ್ಷ ವಶಕ್ಕೆ

ಚೆಕ್​ಪೋಸ್ಟ್​ಗಳಲ್ಲಿ ಹದ್ದಿನ ಕಣ್ಣು

ಪಾರದರ್ಶಕ ಚುನಾವಣೆಗಾಗಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಅಲ್ಲಲ್ಲಿ ಚೆಕ್​ಪೋಸ್ಟ್​ಗಳನ್ನು ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿರುವ ನಗದು ಚಿನ್ನಾಭರಣ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಅದರಂತೆ ಮಾರ್ಚ್ 29ರಿಂದ ಈವರೆಗೆ ಬೆಂಗಳೂರಲ್ಲಿ 53.83 ಕೋಟಿ ರೂಪಾಯಿಗೂ ಅಧಿಕ ಹಣ, ಮದ್ಯ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Karnataka Polls: ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ; ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಲಕ್ಷ್ಮಣ ಸವದಿ

ನೀತಿ ಸಂಹಿತೆ ಜಾರಿಯಾದ ಬಳಿಕ ಬರೋಬ್ಬರಿ 1187 ಎಫ್​ಐಆರ್​ ದಾಖಲಾಗಿವೆ. 8.26 ಕೋಟಿ ರೂ. ನಗದು, 22.16 ಕೋಟಿ ರೂ. ಮೌಲ್ಯದ ಮದ್ಯ, 9.51 ಕೋಟಿ ರೂ. ಮೌಲ್ಯದ ಡ್ರಗ್ಸ್, 4.73 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಕೋಟಿ ರೂ. ಮೌಲ್ಯದ ಉಡುಗೊರೆ ಮತ್ತು 4.27 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:29 pm, Fri, 14 April 23