ಹಾಸನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ; ಅಮೆರಿಕ, ರಷ್ಯಾ ಅಧ್ಯಕ್ಷರನ್ನೂ ಕರೆದುಕೊಂಡು ಬರಲಿ ಎಂದು H.D.ರೇವಣ್ಣ ಟಾಂಗ್

ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಅದರಂತೆ ಇಂದು(ಏ.24) ಮಧ್ಯಾಹ್ನ 2.25ಕ್ಕೆ ಜಿಲ್ಲೆಯ ಆಲೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್​ ಶೋ ನಡೆಸಲಿದ್ದಾರೆ. ಈ ವಿಚಾರವಾಗಿ ‘​ಅಮೆರಿಕ, ರಷ್ಯಾ ಅಧ್ಯಕ್ಷರನ್ನೂ ಕರೆದುಕೊಂಡು ಬರಲಿ. ನಮಗೆ ದೇವೇಗೌಡರು, ಕುಮಾರಣ್ಣ ಸಾಕು, ಇನ್ಯಾರು ಬೇಡ. ಜನರೇ ನಮಗೆ ಚಾಣಕ್ಯ ಎನ್ನುವ ಮೂಲಕ ಹೆಚ್​ಡಿ ರೇವಣ್ಣ ಟಾಂಗ್​ ಕೊಟ್ಟಿದ್ದಾರೆ.

ಹಾಸನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ; ಅಮೆರಿಕ, ರಷ್ಯಾ ಅಧ್ಯಕ್ಷರನ್ನೂ ಕರೆದುಕೊಂಡು ಬರಲಿ ಎಂದು H.D.ರೇವಣ್ಣ ಟಾಂಗ್
ಹೆಚ್​.ಡಿ ರೇವಣ್ಣ
Follow us
|

Updated on: Apr 24, 2023 | 9:05 AM

ಹಾಸನ:ವಿಧಾನಸಭೆ ಚುನಾವಣಾ(Karnataka Assembly Election) ಕಣ ರಂಗೇರಿದ್ದು, ಅದರಂತೆ ಇಂದು(ಏ.24) ಮಧ್ಯಾಹ್ನ 2.25ಕ್ಕೆ ಜಿಲ್ಲೆಯ ಆಲೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ರೋಡ್​ ಶೋ ನಡೆಸಲಿದ್ದಾರೆ. ಈ ವಿಚಾರವಾಗಿ ‘​ಅಮೆರಿಕ, ರಷ್ಯಾ ಅಧ್ಯಕ್ಷರನ್ನೂ ಕರೆದುಕೊಂಡು ಬರಲಿ. ನಮಗೆ ದೇವೇಗೌಡರು, ಕುಮಾರಣ್ಣ ಸಾಕು, ಇನ್ಯಾರು ಬೇಡ. ಜನರೇ ನಮಗೆ ಚಾಣಕ್ಯ. ಜನರ ಆಶೀರ್ವಾದ ಇರುವವರೆಗೂ ನಮಗೇನು ತೊಂದರೆ ಇಲ್ಲ ಎನ್ನುವ ಮೂಲಕ ಮಾಜಿ ಸಚಿವ H.D.ರೇವಣ್ಣ(H.D Revanna) ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಬೇಲೂರಿನಲ್ಲಿ ಮಾಧ್ಯಮ ಪ್ರತನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ H.D.ರೇವಣ್ಣ ‘ಜನ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಸ್ವಲ್ಪ ದಿನ ರೆಸ್ಟ್​​ಗೆ ಕಳಿಸಲು ತೀರ್ಮಾನಿಸಿದ್ದಾರೆ. ನಮಗೆ ಜನ ಉಳಿಯಬೇಕು, ರಾಜ್ಯ ಉಳಿಯಬೇಕು ಎಂದರು. ನಾವು 123 ಟಾರ್ಗೆಟ್ ಇಟ್ಟಿದ್ದೀವಿ, ಒಂದು ಭಾರಿ ಬಹುಮತ ಕೊಡಿ. ದೇವೇಗೌಡರು ಸಾಮಾನ್ಯ ರೈತನ ಮಗ, ಕುಮಾರಣ್ಣನ ಶಿಕ್ಷಣ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ ಎಂದರು.

ಇದನ್ನೂ ಓದಿ:Karnataka Legislative Council: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಭರಾಟೆಯಲ್ಲಿ ಖಾಲಿಯಾಗುತ್ತಿದೆ ಕರ್ನಾಟಕದ ಮೇಲ್ಮನೆ!

ಹಾಸನದಲ್ಲಿ ದಿವಂಗತ ಎಚ್.ಎಸ್.ಪ್ರಕಾಶ್ ಅವರ ಮಗ ಸ್ವರೂಪ್​ನನ್ನ ನಿಲ್ಲಿಸಿದ್ದೇವೆ. ಭವಾನಿ ಅವರೇ ಕೈ ಎತ್ತಿ ಹೇಳಿದ್ದಾರಲ್ಲ, ಇನ್ನೇನು ಬೇಕು. ನಮಗೆ ಬೇಕಿರುವುದು ಪಕ್ಷ, ಜನ ಉಳಿಯಬೇಕು, ರಾಜ್ಯ ಉಳಿಯಬೇಕು. ಇದೇ ವೇಳೆ ಪ್ರೀತಂಗೌಡ ಸೈಲೆಂಟ್ ಆಗಿರುವ ವಿಚಾರ ‘ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ನನಗೆ ಮಾತನಾಡುವ ಶಕ್ತಿ ಇಲ್ಲ. ಅವರು ದೊಡ್ಡವರಿರುವಾಗ ಆ ಲೆವೆಲ್‌ಗೆ ನಾವು ಬೆಳೆದಿಲ್ಲ ಎಂದು ಪರೋಕ್ಷವಾಗಿ ಟೀಕೆ ಮಾಡಿದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ