ಪ್ರಚಾರದ ಮತ್ತೊಂದು ಮುಖ: ಚುನಾವಣಾ ಆಯೋಗಕ್ಕೆ ಹರಿದು ಬರುತ್ತಿವೆ ಪಕ್ಷಗಳ ಕಿರುಚಿತ್ರ​ಗಳು, ಪ್ರತಿದಿನ 100 ವಿಡಿಯೋ ಪರಿಶೀಲನೆ

ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಾಧನೆಗಳ ಬಗ್ಗೆ ಕಿರುಚಿತ್ರಗಳನ್ನು ತಯಾರಿಸಿ ಪೋಸ್ಟ್​​ ಮಾಡುತ್ತಿದ್ದಾರೆ. ಈ ರೀತಿಯಾದ ಪ್ರಚಾರಕ್ಕೂ ಚುನಾವಣಾ ಆಯೋಗದ ಅನುಮತಿ ಅಗತ್ಯವಿದ್ದು, ಪ್ರತಿದಿನ ಸಾಕಷ್ಟು ವಿಡಿಯೋಗಳು ಆಯೋಗದ ಅಂಗಳ ತಲಪುತ್ತಿವೆ.

ಪ್ರಚಾರದ ಮತ್ತೊಂದು ಮುಖ: ಚುನಾವಣಾ ಆಯೋಗಕ್ಕೆ ಹರಿದು ಬರುತ್ತಿವೆ ಪಕ್ಷಗಳ ಕಿರುಚಿತ್ರ​ಗಳು, ಪ್ರತಿದಿನ 100 ವಿಡಿಯೋ ಪರಿಶೀಲನೆ
ಬಿಜೆಪಿಯ ಮೋದಿ ಮೋದಿ ಹಾಡು
Follow us
|

Updated on: Apr 24, 2023 | 8:38 AM

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಇಷ್ಟು ವರ್ಷಗಳ ಕಾಲ ಬಹಿರಂಗ ಸಮಾವೇಶ, ರೋಡ್​ ಶೋ, ನಾಯಕರ ಮನೆ ಮನೆ ಭೇಟಿ ಮತ್ತು ಗೌಪ್ಯ ಪ್ರಚಾರವನ್ನು ನೋಡುತ್ತಿದ್ದೇವು. ಆದರೆ ಈಗ ಹೊಸ ರೀತಿಯ ಪ್ರಚಾರವೊಂದು ಹುಟ್ಟಿಕೊಂಡಿದೆ. ಹೌದು ಬಹುತೇಕ ಮತದಾರರು (Voters) ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯರಾಗಿದ್ದು, ಅದರ ಮೂಲಕವೇ ಎಲ್ಲ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾರೆ. ಇದನ್ನೇ ಸದುಪಯೋಗ ಪಡಿಸಿಕೊಳ್ಳಲು ಪಕ್ಷಗಳು ಮುಂದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಾಧನೆಗಳ ಬಗ್ಗೆ ಕಿರುಚಿತ್ರಗಳನ್ನು (Short Video) ತಯಾರಿಸಿ ಪೋಸ್ಟ್​​ ಮಾಡುತ್ತಿವೆ. ಈ ರೀತಿಯಾದ ಪ್ರಚಾರಕ್ಕೂ ಚುನಾವಣಾ ಆಯೋಗದ (Election Commission) ಅನುಮತಿ ಅಗತ್ಯವಿದ್ದು, ಪ್ರತಿದಿನ ಸಾಕಷ್ಟು ವಿಡಿಯೋಗಳು ಆಯೋಗದ ಅಂಗಳ ತಲಪುತ್ತಿವೆ.

ಪಕ್ಷಗಳು ಗ್ರಾಫಿಕ್ಸ್​​, ಫ್ಲ್ಯಾಷ್​​ ವಿಡಿಯೋಗಳು ಮತ್ತು ಅನಿಮೇಡ್​​ ಮೂಲಕ 2 ರಿಂದ 10 ನಿಮಿಷಗಳ ವಿಡಿಯೋ ತುಣಕುಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿವೆ. ಇದಕ್ಕೆ ಚುನಾವಣಾ ಆಯೋಗದ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಚುನಾವಣಾ ಆಯೋಗ ಪ್ರತಿದಿನ 100 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದು, ಆಕ್ಷೇಪಣಾ ವಿಚಾರಗಳು ಕಂಡುಬಂದರೇ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿಗೆ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡಿನ ಲಿರಿಕ್ಸ್​​ನ್ನು ಬದಲಾಯಿಸಿ ಅದೇ ಟೋನ್​​ನಲ್ಲಿ ಬಿಜೆಪಿಯವರು ಮೋದಿ ಮೋದಿ ಎಂದು ಹಾಡು ತಯಾರಿಸಿದ್ದರು. ಹಾಗೇ ಕಾಂಗ್ರೆಸ್​ನವರು ಕೂಡ 40 ಪರ್ಸೆಂಟ್​ ಸರ್ಕಾರ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಈ ಎರಡು ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದವು.

ಇದನ್ನೂ ಓದಿ: Modi and first time voters: ಕರ್ನಾಟಕದ ಯುವ ಮತದಾರರಲ್ಲಿ ಬ್ರಾಂಡ್​ ಮೋದಿ ಸೆಳೆತ

ಈ ವಿಧಾನಸಭೆ ಚುನಾವಣೆಯನ್ನು ಕಿರು ವಿಡಿಯೋಗಳ ಸಂಖ್ಯೆ ಏರಿಕೆಯಾಗಿವೆ. ಕಳೆದ ಚುನಾವಣೆಗಳಲ್ಲಿ ನಾವು ಪ್ರತಿದಿನ ನಾವು 20 ರಿಂದು 30 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವು. ಆದರೆ ಈ ಚುನಾವಣೆಯಲ್ಲಿ ಪ್ರತಿದಿನ 80 ರಿಂದ 100 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್​ ಕುಮಾರ್​ ಅವರು ಹೇಳಿದ್ದಾರೆ.

ಮತದಾರರು ಇತ್ತೀಚಿಗೆ ಯೂಟ್ಯೂಬ್​, ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​​ನಲ್ಲಿಯೇ ಹೆಚ್ಚು ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದು, ಟಿವಿ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಜನರು ರಾಜಕೀಯ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಿಂದಲೇ ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾದ ವಿವಿಧ ಪಕ್ಷಗಳನ್ನು ಹೆಚ್ಚಿನ ಪ್ರಚಾರಕ್ಕಾಗಿ ಈ ಮಾರ್ಗವನ್ನು ಅನುಸರಿಸುತ್ತಿವೆ ಎಂದು ವೆಂಕಟೇಶ್​ ಕುಮಾರ್​ ಅವರು ಹೇಳಿದರು.

ದ್ವೇಷದ ಮಾತು, ವಾಸ್ತವಿಕತೆಯನ್ನು ತಿರುಚುವುದು, ಹಿಂಸೆಯನ್ನು ಪ್ರಚೋದಿಸುವ, ಜಾತಿ, ವರ್ಣ ಮತ್ತು ಧರ್ಮದ ಕುರಿತು ಟೀಕೆ ಮತ್ತು ವಿವಾದಾತ್ಮ ಸಂದೇಶವನ್ನು ರವಾನಿಸುವ ಆಕ್ಷೇಪಾರ್ಹ ಸಂದೇಶಗಳಿದ್ದರೇ ಆ ಭಾಗವನ್ನು ತೆಗೆದುಹಾಕಲು ಅಥವಾ ಅಳಿಸಲು ಪಕ್ಷಗಳಿಗೆ ತಿಳಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಾಕ್ಷ್ಯಚಿತ್ರ ವೀಡಿಯೊಗಳು, ಪ್ರೊಫೈಲ್ ವೀಡಿಯೊಗಳು ಅಥವಾ ಸಂದರ್ಶನಗಳು ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿವೆ. ಆರಂಭದಲ್ಲಿ, ಪಕ್ಷಗಳು ಅನುಮೋದನೆಗಾಗಿ ದೀರ್ಘಾವಧಿಯ ಕ್ಲಿಪ್​ಗಳನ್ನು ಆಯೋಗಕ್ಕೆ ಸಲ್ಲಿಸುತ್ತಾರೆ. ನಂತರ ಆ ವಿಡಿಯೋವನ್ನು ಪಕ್ಷಗಳು ಸಣ್ಣ ಸಣ್ಣ ಕ್ಲಿಪ್​​ಗಳನ್ನಾಗಿ ಮಾಡಿ ಹರಿಬಿಡುತ್ತಾರೆ. ಸದ್ಯ ಒಂದು ಅಥವಾ ಎರಡು ನಿಮಿಷಗಳ ವೀಡಿಯೊಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದರಿಂದ ಯುವ ಮತದಾರರನ್ನು ಸುಲಭವಾಗಿ ಆಕರ್ಶಿಸಿಕೊಳ್ಳಬಹುದಾಗಿದೆ ಎಂದು ವೆಂಕಟೇಶ್ ಕುಮಾರ್ ಹೇಳಿದರು.

ವೈಯಕ್ತಿಕ ಹ್ಯಾಂಡಲ್‌ಗಳ ಮೂಲಕ ವಿಡಿಯೋಗಳನ್ನು ಪೋಸ್ಟ್ ಮಾಡಿದರೇ, ಹೆಚ್ಚಿನ ಮತದಾರರನ್ನು ತಲುಪಲು ಸಾಧ್ಯವಿಲ್ಲ. ಹೀಗಾಗಿ ಮಾನಿಟರಿಂಗ್​ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವರ ಮೂಲಕ ತಮ್ಮ ವಿಡಿಯೋಗಳು ಹೆಚ್ಚಿನ ಜನರಿಗೆ ತಲುಪುವಂತೆ ಮಾಡುತ್ತಾರೆ ಎಂದು ಮಾನಿಟರಿಂಗ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ