Karnataka Assembly Elections 2023: ಚುನಾವಣೆಗೆ ಮತದಾರರು ಗಮನ ಸೆಳೆದ ವಿಷಯಗಳೇನು?

ರಾಜಕೀಯ ಪಕ್ಷಗಳಿಗೆ ಜಾತಿ, ಕುಟುಂಬ ರಾಜಕಾರಣ ಮತ್ತು ಹಣಕಾಸಿನ ಬಲ ಮುಖ್ಯ ಚುನಾವಣಾ ವಿಷಯಗಳಾಗಿದ್ದರೆ, ಮತದಾರರಿಗೆ ಮೂಲಭೂತ ಸೌಕರ್ಯ, ಸೇವೆ ಮತ್ತು ಅಗತ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ.

Karnataka Assembly Elections 2023: ಚುನಾವಣೆಗೆ ಮತದಾರರು ಗಮನ ಸೆಳೆದ ವಿಷಯಗಳೇನು?
ಸಾಂದರ್ಭಿಕ ಚಿತ್ರImage Credit source: News9
Follow us
TV9 Web
| Updated By: Ganapathi Sharma

Updated on:Apr 20, 2023 | 3:26 PM

ಭಾವನಾತ್ಮಕ ದಾಳ ಉರುಳಿಸುವುದು, ನೈಜ ಅಥವಾ ಕಲ್ಪಿತ ಅನ್ಯಾಯದ ಭಾವನಾತ್ಮಕ ಹೇಳಿಕೆಗಳನ್ನು ತೇಲಿಬಿಡುವ ಮೂಲಕ ಮತದಾರರನ್ನು ಓಲೈಸುವ ತಂತ್ರಗಾರಿಕೆಗೆ ರಾಜಕೀಯ ಪಕ್ಷಗಳು ಚುನಾವಣೆ (Karnataka Assembly Elections 2023) ಸಂದರ್ಭದಲ್ಲಿ ಮುಂದಾಗುವುದು ಸಹಜ. ಅವಾಸ್ತವಿಕ ಭರವಸೆಗಳ ಮೂಲಕ ಮತದಾರರನ್ನು ಆಕರ್ಷಿಸುವುದು, ಹಣ, ಲಂಚ ನೀಡುವುದು ಮತ್ತು ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಕೊನೆಯ ಕ್ಷಣದಲ್ಲಿ ಉದ್ಘಾಟನೆ ಮಾಡುವುದು ಚುನಾವಣಾ ಸಮಯದ ನಾಟಕಗಳಾಗಿವೆ.

ಆದರೆ ಮತದಾರರಿಗೆ ನಿಜವಾಗಿಯೂ ಯಾವುದು ಮುಖ್ಯವೆನಿಸುತ್ತದೆ? 2018 ರಲ್ಲಿ ಎಡಿಆರ್-ದಕ್ಷ್ ನಡೆಸಿದ್ದ ಸಮೀಕ್ಷೆಯು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಗೊಳಿಸಿದೆ. ನಗರ ಮತ್ತು ಗ್ರಾಮೀಣ ಮತದಾರರು ಉಲ್ಲೇಖಿಸುವ ಪ್ರಮುಖವಾದ ಹತ್ತು ವಿಷಯ ಅಥವಾ ಸಮಸ್ಯೆಗಳನ್ನು ಸಮೀಕ್ಷೆಯು ಗುರುತಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಸಮಾನವಾಗಿ ಕಾಡುವ ಪ್ರಮುಖ ವಿಷಯವೆಂದರೆ ‘ನೀರು ಪೂರೈಕೆ ಮತ್ತು ಗುಣಮಟ್ಟ’ ಎಂದು ಸಮೀಕ್ಷಾ ವರದಿ ತಿಳಿಸಿದೆ.

ನಗರ ಕರ್ನಾಟಕದ ಮತದಾರರು ಉಲ್ಲೇಖಿಸಿದ ಪ್ರಮುಖ ಸಮಸ್ಯೆಗಳು (10ರಲ್ಲಿ ಅಂಕ ನೀಡಲಾಗಿದೆ)

ನೀರು ಸರಬರಾಜು ಮತ್ತು ಗುಣಮಟ್ಟ – 8.02 ಉತ್ತಮ ವಿದ್ಯುತ್ ಪೂರೈಕೆ – 7.97 ಉತ್ತಮ ಶಾಲೆಗಳು – 7.94 ಉತ್ತಮ ರಸ್ತೆಗಳು – 7.81 ಪರಿಸರ ಸಂರಕ್ಷಣೆ – 7.8 ಆಸ್ಪತ್ರೆಗಳು ಮತ್ತು ಪಿಎಚ್​​ಸಿಗಳು – 7.78 ಒಳಚರಂಡಿ ವ್ಯವಸ್ಥೆ – 7.78 ಆಹಾರ ವಿತರಣೆ ಸಬ್ಸಿಡಿ – 7.7 ಸಾರ್ವಜನಿಕ ಸೌಲಭ್ಯಗಳಾದ ಪಾರ್ಕ್, ಸಾರ್ವಜನಿಕ ಶೌಚಾಲಯ, ಫುಟ್​ಪಾತ್ – 7.64 ಉತ್ತಮ ಉದ್ಯೋಗಾವಕಾಶ – 7.64

ಕರ್ನಾಟಕವು ಸಾಫ್ಟ್‌ವೇರ್ ರಫ್ತಿನಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ರಾಜ್ಯವು ಯಾವುದೇ ದೀರ್ಘಕಾಲಿಕ ನೀರು ಸರಬರಾಜು ಯೋಜನೆಗಳಿಗೆ ಪೂರಕವಾಗಿರುವಂಥ ನದಿಗಳನ್ನು ಹೊಂದಿಲ್ಲ. ಆದರೆ ಇದು 36,000 ಕೆರೆಗಳು ಅಥವಾ ಸರೋವರಗಳನ್ನು ಹೊಂದಿದೆ. ಇವುಗಳು ಶತಮಾನಗಳಿಂದ ಜನಸಂಖ್ಯೆಯ ಜೀವನೋಪಾಯದ ಮೂಲಗಳಾಗಿವೆ. ಆದರೆ, ಇವುಗಳನ್ನು ನಿರ್ಲಕ್ಷಿಸಲಾಗಿದೆ.

ಗ್ರಾಮೀಣ ಕರ್ನಾಟಕದ ಮತದಾರರು ಉಲ್ಲೇಖಿಸಿದ ಪ್ರಮುಖ ಸಮಸ್ಯೆಗಳು (10ರಲ್ಲಿ ಅಂಕ ನೀಡಲಾಗಿದೆ)

ನೀರು ಸರಬರಾಜು ಮತ್ತು ಗುಣಮಟ್ಟ – 8.06 ಉತ್ತಮ ಶಾಲೆಗಳು – 8.03 ಉತ್ತಮ ರಸ್ತೆಗಳು – 7.99 ಉತ್ತಮ ವಿದ್ಯುತ್ ಪೂರೈಕೆ – 7.96 ಆಸ್ಪತ್ರೆಗಳು ಮತ್ತು ಪಿಎಚ್​​ಸಿಗಳು – 7.92 ಕೃಷಿಗೆ ಉತ್ತಮ ವಿದ್ಯುತ್ ಪೂರೈಕೆ – 7.91 ಕೃಷಿ ಸಾಲದ ಲಭ್ಯತೆ – 7.91 ಬೀಜ ಮತ್ತು ರಸಗೊಬ್ಬರ ಸಬ್ಸಿಡಿ – 7.89 ಕೃಷಿ ಉತ್ಪಾದನೆಗೆ ಹೆಚ್ಚಿನ ಬೆಲೆ – 7.88 ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ – 7.86

ಇದನ್ನೂ ಓದಿ: ರಾಹುಲ್ ಗಾಂಧಿಗೆ ಧಮ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ; ಸಿಎಂ ಬಸವರಾಜ ಬೊಮ್ಮಾಯಿ ಸವಾಲು

ನೀರನ್ನು ಹೊರತುಪಡಿಸಿ ನಗರ ಮತ್ತು ಗ್ರಾಮೀಣ ಮತದಾರರು ಉಲ್ಲೇಖಿಸುವ ಪ್ರಮುಖ ನಾಲ್ಕು ಸಾಮಾನ್ಯ ಸಮಸ್ಯೆಗಳೆಂದರೆ ಉತ್ತಮ ವಿದ್ಯುತ್ ಪೂರೈಕೆ, ಉತ್ತಮ ಶಾಲೆಗಳು, ಉತ್ತಮ ರಸ್ತೆಗಳು, ಜೊತೆಗೆ ಹೆಚ್ಚಿನ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC). ಕರ್ನಾಟಕದ ರಸ್ತೆಗಳು ದೇಶದಲ್ಲೇ ಉತ್ತಮವಾಗಿಲ್ಲ ಮತ್ತು ರಾಜಧಾನಿ ನಗರದಲ್ಲಿನ ರಸ್ತೆಗಳು ಟ್ರಾಫಿಕ್ ಹೊರೆಯನ್ನು ನಿಭಾಯಿಸಲು ಅಸಮರ್ಪಕವಾಗಿವೆ. ಇವು ವಿಶ್ವದಲ್ಲೇ ಕುಖ್ಯಾತಿ ಗಳಿಸಿವೆ.

– ಕೆವಿ ರಮೇಶ್

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:21 pm, Thu, 20 April 23

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ