ಸುಳ್ಳೇ ಕಾಂಗ್ರೆಸ್​ನವರ ಮನೆ ದೇವರು ಎಂದ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ

|

Updated on: May 05, 2023 | 4:20 PM

ಕಾಂಗ್ರೆಸ್​ನವರು ಇಡೀ ಜೀವನ ಭ್ರಷ್ಟಾಚಾರಕ್ಕೆ‌ ಮುಡುಪಾಗಿಟ್ಟಿದ್ದಾರೆ. ಸುಳ್ಳೇ ಕಾಂಗ್ರೆಸ್​ನನವರ ಮನೆ ದೇವರು ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಹರಿಹಾಯ್ದಿದ್ದಾರೆ.

ಗದಗ: ಕಾಂಗ್ರೆಸ್​ನವರು ಇಡೀ ಜೀವನ ಭ್ರಷ್ಟಾಚಾರಕ್ಕೆ‌ ಮುಡುಪಾಗಿಟ್ಟಿದ್ದಾರೆ. ಸುಳ್ಳೇ ಕಾಂಗ್ರೆಸ್​ನನವರ ಮನೆ ದೇವರು ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ಹರಿಹಾಯ್ದಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಠಾಚಾರ ಆರೋಪದ ಮೇಲೆ ಎಲ್ಲರೂ ಜಾಮೀನಿನ ಮೇಲೆ ಇದ್ದಾರೆ. ಜಾಮೀನಿನ ಮೇಲೆ ಇದ್ದವ್ರು ರೇಟ್ ಕಾರ್ಡ್ ಬಿಡುಗಡೆ ಮಾಡ್ತಾರಾ ಎಂದು ಪ್ರಶ್ನಿಸಿದರು. ರೇಟು ಇತ್ಯಾದಿ ಬಗ್ಗೆ ಮಾತಾಡಿದ್ದಾರೆ, ಜನ ಇವರ ಸುಳ್ಳನ್ನು ನಂಬಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

2ಜಿ ಹಗರಣದಿಂದ ಇಲ್ಲಿ ರೀಡೂ ಪ್ರಕರಣದವರೆಗೂ, ಸೋಲಾರ್ ಹಗರಣದಲ್ಲಿ ಇದ್ದಾರೆ. ನೆಹರು ಕಾಲದಿಂದ ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಅಂದರೆ ಕಾಂಗ್ರೆಸ್​. ಇವರ ಕಾಲದಲ್ಲಿ ಸುಪ್ರೀಂ ಕೋರ್ಟ್​ನಿಂದ ಸಿಐಜಿವರೆಗೂ ಅನೇಕ ಸಂಸ್ಥೆಗಳಲ್ಲಿ ಇವರು ಭ್ರಷ್ಟಾಷಾರ ಮಾಡಿದ್ದಾರೆ ಅಂತ ಹೇಳಿವೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ​​ಪ್ರಣಾಳಿಕೆಯಲ್ಲಿರುವ ಬಜರಂಗದಳ ಬ್ಯಾನ್ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ ಮೊದಲು ಕ್ಷಮೆ ಕೇಳಲಿ – ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗು

ಕಾಂಗ್ರೆಸ್​ಗೆ ಭಯ ಎಂದ ಜೋಶಿ 

ಪ್ರಧಾನಿ ಮೋದಿ ರ‍್ಯಾಲಿಯಿಂದ ಕಾಂಗ್ರೆಸ್​ಗೆ ಭಯ ಶುರುವಾಗಿದೆ. ಕಾಂಗ್ರೆಸ್​ ನಾಯಕರು ಮೊದಲೇ ಭಯಗೊಂಡಿದ್ದರು. ಈಗ ಮೋದಿ, ಅಮಿತ್ ಶಾ ರ‍್ಯಾಲಿಯಿಂದ ನಡುಕು ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೆ. ಈ ಬಾರಿ ಬಿಜೆಪಿ 125-130 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.

H.K.ಪಾಟೀಲ್​ ವಿರುದ್ಧ ಪ್ರಲ್ಹಾದ್​​ ಜೋಶಿ ಕಿಡಿ 

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಒಂದು ಸ್ಥಾನ ಕಳೆದುಕೊಂಡಿದ್ದೆವು. ಈ ಬಾರಿ ಗದಗ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. H.K.ಪಾಟೀಲ್ ಯಾವ ರೀತಿ ನಡೆದುಕೊಂಡಿದ್ದಾರೆ ಗೊತ್ತಿದೆ. ಗದಗ ಕ್ಷೇತ್ರದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಹೆಚ್.ಕೆ.ಪಾಟೀಲ್ ಆ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಬಜರಂಗದಳದವರು ಏನು ಟೆರರಿಸ್ಟ್​ಗಳಾ? ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ

ಮೊದಲು ಕ್ಷಮೆ ಕೇಳಿ ಕ್ಯಾನ್ಸಲ್ ಮಾಡಲಿ

ಬಜರಂಗದಳವನ್ನ ನಿಷೇಧ ಮಾಡಿ ನೋಡಲಿ, ಜನ ಉತ್ತರ ಕೊಡುತ್ತಾರೆ. ಬಜರಂಗದಳ ದೇಶ ಭಕ್ತ ಸಂಘಟನೆ. ದೇಶ ಭಕ್ತ ಸಂಘಟನೆ ಬ್ಯಾನ್ ಮಾಡಿದ್ರೆ ಬಿಜೆಪಿ ವಿರೋಧ ಮಾಡುತ್ತೆ. ಕಾಂಗ್ರೆಸ್​​ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ, ಮೊದಲು ಕ್ಷಮೆ ಕೇಳಿ ಕ್ಯಾನ್ಸಲ್ ಮಾಡಲಿ ಎಂದು ಪ್ರಲ್ಹಾದ್​​ ಜೋಶಿ ಇತ್ತೀಚೆಗೆ ಹೇಳಿದ್ದರು.

ಬಜರಂಗದಳ ಹನುಮನ ಹೆಸರಲ್ಲೇ ನಡೆಯುವ ಸಂಘಟನೆ. ಹಿಂದೂಗಳ ಸಂಘಟನೆ ಮಾಡುತ್ತ ದೇಶ ಭಕ್ತಿ ಪಸರಿಸುವ ಸಂಘಟನೆ ಬಜರಂಗದಳ. ಡಿಕೆ ಶಿವಕುಮಾರ್​ ಮನೆಯಲ್ಲಿ ಪೂಜೆ ಮಾಡ್ತಾರಾ ಅಂತಾ ಯಾರೂ ಕೇಳಿಲ್ಲ. ಅಧಿಕಾರದ ಲಾಲಸೆಗೆ ತುಷ್ಟೀಕರಣದ ರಾಜಕಾರಣ ಮಾಡುವ ಭರದಲ್ಲಿ ಹಿಂದೂಗಳ ನಂಬಿಕೆಗೆ ಅಪಮಾನ ಮಾಡಿದರೆ ಸಹಿಸಲ್ಲ ಎಂದು ಗುಡುಗಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:19 pm, Fri, 5 May 23