ಕಾಂಗ್ರೆಸ್ ​​ಪ್ರಣಾಳಿಕೆಯಲ್ಲಿರುವ ಬಜರಂಗದಳ ಬ್ಯಾನ್ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ ಮೊದಲು ಕ್ಷಮೆ ಕೇಳಲಿ – ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗು

Bajrang Dal: ಕಾಂಗ್ರೆಸ್​​ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್​ ವಿಚಾರ ಅಡಕವಾಗಿರುವ ಹಿನ್ನೆಲೆಯಲ್ಲಿ ಬಜರಂಗದಳದಿಂದ ಹನುಮಾನ ಚಾಲಿಸಾ ಪಠಣೆ ಅಭಿಯಾನ ಹಮ್ಮಿಕೊಂಡಿರುವುದನ್ನು ಪ್ರಸ್ತಾಪಿಸಿದ ಸಚಿವ ಪ್ರಲ್ಹಾದ್ ಜೋಷಿ ಬಿಜೆಪಿ ಪಕ್ಷದ ವತಿಯಿಂದ ಅಭಿಯಾನಕ್ಕೆ  ಸಹಾಯ ಮಾಡ್ತೀವಿ ಎಂದರು.

ಕಾಂಗ್ರೆಸ್ ​​ಪ್ರಣಾಳಿಕೆಯಲ್ಲಿರುವ ಬಜರಂಗದಳ ಬ್ಯಾನ್ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ ಮೊದಲು ಕ್ಷಮೆ ಕೇಳಲಿ - ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗು
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ
Follow us
ಸಾಧು ಶ್ರೀನಾಥ್​
|

Updated on: May 03, 2023 | 7:52 PM

ಗದಗ: ಕಾಂಗ್ರೆಸ್ ಪಾರ್ಟಿ ಹಿಂದಿ ವಿರೋಧ ನೀತಿ ಹೊಂದಿದೆ ಅನ್ನೋದು ಸ್ಪಷ್ಟ. ಆರ್ಟಿಕಲ್ 370 ತೆಗೆದಾಗ ಪಾಕಿಸ್ತಾನ ಮತ್ತು ಕಾಂಗ್ರೆಸ್ ಪಕ್ಷದ ಭಾಷೆ ಒಂದೇ ಆಗಿತ್ತು. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಕಾಂಗ್ರೆಸ್, ಪಾಕಿಸ್ತಾನದ ಭಾಷೆ ಒಂದೇಯಾಗಿತ್ತು. ಪಾಕಿಸ್ತಾನದ ಜೊತೆ ಅಂಡರಸ್ಟ್ಯಾಂಡಿಂಗ್ ಇದೆ ಅನ್ನೋ ರೀತಿ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ತಳೆಯುತ್ತಿದೆ. ಬಾಟ್ಲಾ ಹೌಸ್ ಪ್ರಕರಣದಲ್ಲಿ‌ ಭಯೋತ್ಪಾದಕ ಸತ್ತಾಗ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅಂದು ರಾತ್ರಿ ನಿದ್ದೆ ಮಾಡಿರಲಿಲ್ಲ. ಪ್ರಕರಣದಲ್ಲಿ ಮೋಹನ್ ಸಿಂಗ್ ಶರ್ಮಾ ಹುತಾತ್ಮರಾಗಿದ್ದರು, ಅವರ ಬಗ್ಗೆ ಕಣ್ಣೀರು ಹಾಕಿರಲಿಲ್ಲ. ಟೆರೆರಿಸ್ಟ್ ಬಗ್ಗೆ ಕಣ್ಣೀರು ಹಾಕಿದವರು. ಮುಸಲ್ಮಾನರಿಗೆ ಮಾತ್ರ ಮೀಸಲಾತಿ ಕೊಡುತ್ತೇನೆ ಅನ್ನೋದು ದೊಡ್ಡ ಅಪರಾಧ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿ ಮತ ಬ್ಯಾಂಕ್ ಗಾಗಿ ಆ ಪಕ್ಷ ಈ ರೀತಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Union Minister for Parliamentary Affairs, Coal and Mines Pralhad Joshi) ಹೇಳಿದ್ದಾರೆ. ರಾಜ್ಯ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ (Karnataka Assembly Elections 2023) ಗದಗದಲ್ಲಿ (Gadag) ಅವರು ಇಂದು ಪ್ರಚಾರ ಭಾಷಣ ಮಾಡಿದರು.

ಬಜರಂಗದಳವನ್ನ ನಿಷೇಧ (Ban) ಮಾಡಿ ನೋಡಲಿ, ಜನ ಉತ್ತರ ಕೊಡುತ್ತಾರೆ. ಬಜರಂಗದಳ (Bajrang Dal) ದೇಶ ಭಕ್ತ ಸಂಘಟನೆ. ದೇಶ ಭಕ್ತ ಸಂಘಟನೆ ಬ್ಯಾನ್ ಮಾಡಿದ್ರೆ ಬಿಜೆಪಿ ವಿರೋಧ ಮಾಡುತ್ತೆ. ಕಾಂಗ್ರೆಸ್​​ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ… ಕ್ಷಮೆ ಕೇಳಿ (Apology) ಕ್ಯಾನ್ಸಲ್ ಮಾಡಲಿ.

ಇದನ್ನೂ ಓದಿ: Bajrang Dal Controversy: ಕಾಂಗ್ರೆಸ್​​ನಿಂದ ಬಜರಂಗದಳ ನಿಷೇಧ ಪ್ರಸ್ತಾವ ವಾಪಸ್?

ಬಜರಂಗದಳ ಹನುಮನ ಹೆಸರಲ್ಲೇ ನಡೆಯುವ ಸಂಘಟನೆ. ಹಿಂದೂಗಳ ಸಂಘಟನೆ ಮಾಡುತ್ತ ದೇಶ ಭಕ್ತಿ ಪಸರಿಸುವ ಸಂಘಟನೆ ಬಜರಂಗದಳ, ಡಿಕೆ ಶಿವಕುಮಾರ್​ ಮನೆಯಲ್ಲಿ ಪೂಜೆ ಮಾಡ್ತಾರಾ ಅಂತಾ ಯಾರೂ ಕೇಳಿಲ್ಲ. ಅಧಿಕಾರದ ಲಾಲಸೆಗೆ ತುಷ್ಟೀಕರಣದ ರಾಜಕಾರಣ ಮಾಡುವ ಭರದಲ್ಲಿ ಹಿಂದೂಗಳ ನಂಬಿಕೆಗೆ ಅಪಮಾನ ಮಾಡಿದರೆ ಸಹಿಸಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗಿದರು.

ಇದನ್ನೂ ಓದಿ: ಬಜರಂಗದಳ ನಿಷೇಧ: ಕಾಂಗ್ರೆಸ್​​ಗೆ​ ಚುರುಕು ಮುಟ್ಟಿಸಲು ಹಿಂದೂ ಸಂಘಟನೆಗಳಿಂದ ಹನುಮಾನ್ ಚಾಲೀಸಾ ಪಠಿಸಲು ಕರೆ

ಇನ್ನು ಕಾಂಗ್ರೆಸ್​​ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್​ ವಿಚಾರ ಅಡಕವಾಗಿರುವ ಹಿನ್ನೆಲೆಯಲ್ಲಿ ಬಜರಂಗದಳದಿಂದ ಹನುಮಾನ ಚಾಲಿಸಾ ಪಠಣೆ ಅಭಿಯಾನ ಹಮ್ಮಿಕೊಂಡಿರುವುದನ್ನು ಪ್ರಸ್ತಾಪಿಸಿದ ಸಚಿವ ಪ್ರಲ್ಹಾದ್ ಜೋಷಿ ಅವರು ಬಜರಂಗದಳ ಸ್ವತಂತ್ರ ಸಂಘಟನೆ. ಪ್ರತಿಭಟನೆ ಮಾಡಲು ಅವರಿಗೆ ಹಕ್ಕಿದೆ. ಬಿಜೆಪಿ ಪಕ್ಷದ ವತಿಯಿಂದ ನಮ್ಮ ಕೈಲಾದ ಸಹಾಯವನ್ನೂ ಮಾಡ್ತೀವಿ ಎಂದು ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್