64 ಕ್ಷೇತ್ರಗಳ ಟಿಕೆಟ್​ ಬೇಡಿಕೆ ಇಟ್ಟ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು, ಆ ಕ್ಷೇತ್ರಗಳು ಯಾವುವು? ಇಲ್ಲಿದೆ ಪಟ್ಟಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 15, 2023 | 6:26 PM

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇತ್ತ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಇನ್ನು ಕಾಂಗ್ರೆಸ್ ಲಿಂಗಾಯತ ನಾಯಕರು 64 ಕ್ಷೇತ್ರಗಳಿಗೆ ಟಿಕೆಟ್​ ಬೇಡಿಕೆ ಇಟ್ಟಿದ್ದು, ಆ ಕ್ಷೇತ್ರಗಳು ಈ ಕೆಳಗಿನಂತಿವೆ ನೋಡಿ.

64 ಕ್ಷೇತ್ರಗಳ ಟಿಕೆಟ್​ ಬೇಡಿಕೆ ಇಟ್ಟ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು, ಆ ಕ್ಷೇತ್ರಗಳು ಯಾವುವು? ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023)  ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.ಈಗಾಗಲೇ ಜನತಾ ದಳ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಈಗ ಕಾಂಗ್ರೆಸ್‌ (Congress) ಕೂಡ ಹುರಿಯಾಳುಗಳನ್ನ ಅಖಾಡಕ್ಕಿಳಿಸಲು ತಯಾರಾಗಿದೆ. ಈಗಾಗಲೇ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ 106 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಫೈನಲ್‌ ಮಾಡಿದೆ ಎನ್ನುವ ಮಾಹಿತಿ ಇದೆ. ಇನ್ನೊಂದೆಡೆ ವೀರಶೈವ ಲಿಂಗಾಯತ(veerashaiva lingayat ) ಸಮುದಾಯದ ಕಾಂಗ್ರೆಸ್​ ನಾಯಕರು ಸಭೆ ಮಾಡಿದ್ದು, 68 ಕ್ಷೇತ್ರಗಳಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಕ್ಷೇತ್ರಗಳ ಪಟ್ಟಿ ಮಾಡಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ಸ್ಟಾರ್ ನಟ ಕಾಂಗ್ರೆಸ್ ಸೇರ್ಪಡೆ ಫೈನಲ್​ ಆಯ್ತಾ? ಸುದೀಪ್​ಗೆ ಹೂಮಾಲೆ ಹಾಕಲು ಹೊರಟ ಕೈ ಹಿಂದೆ ಹತ್ತು ಹಲವು ಪ್ಲ್ಯಾನ್

ಹೌದು…ನಿನ್ನೆ(ಫೆ.15)ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ನಡೆ ಸಭೆಯಲ್ಲಿ 68 ಕ್ಷೇತ್ರಗಳ ಪಟ್ಟಿ ಮಾಡಿದೆ. ಕೆಟಗರಿ A(ಹಾಲಿ ಲಿಂಗಾಯತ ಶಾಸಕರು), B (ಕಳೆದ ಬಾರಿ ಪರಾಭವಗೊಂಡ ಲಿಂಗಾಯತ ಅಭ್ಯರ್ಥಿಗಳು), C (ಹೊಸದಾಗಿ ಟಿಕೆಟ್ ಬಯಸುತ್ತಿರುವ ಲಿಂಗಾಯತ ಆಕಾಂಕ್ಷಿಗಳು ) ಹೀಗೆ ಮೂರು ಕೆಟಗೆರಿಯಲ್ಲಿ ಲಿಂಗಾಯತ ಅಭ್ಯರ್ಥಿಗಳ ಪಟ್ಟಿ ಕೈ ಲಿಂಗಾಯತ ನಾಯಕರು ಸಿದ್ಧಪಡಿಸಿದ್ದು, 68ರ ಪೈಕಿ 64 ಕ್ಷೇತ್ರಗಳ ಲಿಸ್ಟ್ ಮಾಡಿ ಸ್ಕ್ರೀನಿಂಗ್ ಕಮಿಟಿಗೆ ನೀಡಿದೆ. ಅಲ್ಲದೇ ಈ ಎಲ್ಲಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದೆ. ಹಾಗಾದ್ರೆ, ಯಾವ್ಯಾವ ಕ್ಷೇತ್ರದಲ್ಲಿ ಲಿಂಗಾಯತ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಹಾಲಿ ಶಾಸಕರ ಕ್ಷೇತ್ರಗಳು

1. ದಾವಣಗೆರೆ ದಕ್ಷಿಣ, 2. ಭದ್ರಾವತಿ, 3. ಬೆಳಗಾವಿ ಗ್ರಾಮೀಣ, 4. ಚಿಕ್ಕೋಡಿ ಸದಲಗಾ, 5. ಬೈಲಹೊಂಗಲ. 6. ಬಸವನ ಬಾಗೇವಾಡಿ, 7. ಬಬಲೇಶ್ವರ, 8. ಇಂಡಿ, 9. ಜಮಖಂಡಿ, 10. ಅಫ್ಜಲ್‌ಪುರ , 11. ಶಹಾಪುರ, 12. ಭಾಲ್ಕಿ , 13. ಹುಮ್ನಾಬಾದ್, 14. ಕುಷ್ಟಗಿ

ಪರಾಭವಗೊಂಡಿರುವ ಅಭ್ಯರ್ಥಿಗಳ ಕ್ಷೇತ್ರಗಳು

1. ದಾಣಗೆರೆ ಉತ್ತರ, 2. ಚಿತ್ರದುರ್ಗ, 3. ತಿಪಟೂರು, 4. ಬೆಳಗಾವಿ ಉತ್ತರ, 5. ಕಾಗವಾಡ. 6. ಕಿತ್ತೂರು, 7. ರಾಮದುರ್ಗ, 8. ಧಾರವಾಡ, 9. ಮುದ್ದೇಬಿಹಾಳ, 10. ಸಿಂಧಗಿ, 11. ಬಾಗಲಕೋಟೆ, 12. ಹುನಗುಂದ, 13. ಬೀಳಗಿ, 14. ರೋಣ, 15. ಬ್ಯಾಡಗಿ, 16. ಹಿರೆಕೆರೂರು, 17. ಸೇಡಂ, 18. ಆಳಂದ, 19. ಬೀದರ್ ದಕ್ಷಿಣ, 20. ಸಿಂಧನೂರು, 21. ಯಲಬುರ್ಗಾ

ಹೊಸ ಆಕಾಂಕ್ಷಿಗಳು ಟಿಕೆಟ್ ಬಯಸುತ್ತಿರುವ ಕ್ಷೇತ್ರಗಳು

1. ರಾಜಾಜಿನಗರ, 2. ಚಿಕ್ಕಪೇಟೆ, 3. ತುಮಕೂರು ಸಿಟಿ, 4. ಚನ್ನಗಿರಿ, 5. ಶಿವಮೊಗ್ಗ, 6. ಶಿಕಾರಿಪುರ, 7. ಸಾಗರ
8. ಕೃಷ್ಣ ರಾಜ (ಮೈಸೂರು), 9. ಗುಂಡ್ಲುಪೇಟೆ, 10. ಮಡಿಕೇರಿ, 11. ಅರಸೀಕೆರೆ, 12. ಬೇಲೂರು, 13. ಚಿಕ್ಕಮಗಳೂರು,14. ತರೀಕೆರೆ, 15. ಕಡೂರು, 16. ಅಥಣಿ, 17. ಸವದತ್ತಿ, 18. ಅರಬಾವಿ, 19. ಗೋಕಾಕ್. 20. ಹುಬ್ಬಳ್ಳಿ-ಧಾರವಾಡ ಕೇಂದ್ರ. 21. ಹು-ಧಾ ಪಶ್ಚಿಮ, 22. ಕಲಘಟಗಿ, 23. ದೇವರ ಹಿಪ್ಪರಗಿ, 24. ತೇರದಾಳ, 25. ನರಗುಂದ, 26. ಶಿಗ್ಗಾವಿ , 27. ರಾಣೆಬೆನ್ನೂರು. 28. ಕಲಬುರಗಿ ದಕ್ಷಿಣ 29. ಯಾದಗಿರಿ.