ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ: ಮಹಿಳಾ ಇನ್ಸ್​​ಪೆಕ್ಟರ್​ ಅಮಾನತು

|

Updated on: May 09, 2023 | 3:40 PM

ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ ಹಿನ್ನೆಲೆ ಮಹಿಳಾ ಇನ್ಸ್​​ಪೆಕ್ಟರ್​​ ಅಮಾನತು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯಿಂದ ಆದೇಶ ಹೊರಡಿಸಲಾಗಿದೆ. ಭವ್ಯಾ  ಅಮಾನತುಗೊಳಗಾದ ಮಹಿಳಾ ಇನ್ಸ್​​ಪೆಕ್ಟರ್​.

ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ: ಮಹಿಳಾ ಇನ್ಸ್​​ಪೆಕ್ಟರ್​ ಅಮಾನತು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮತಗಟ್ಟೆ ತರಬೇತಿಯಲ್ಲಿ (polling booth training) ಉದ್ಧಟತನ ಆರೋಪ ಹಿನ್ನೆಲೆ ಮಹಿಳಾ ಇನ್ಸ್​​ಪೆಕ್ಟರ್​​ ಅಮಾನತು (suspended) ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯಿಂದ ಆದೇಶ ಹೊರಡಿಸಲಾಗಿದೆ. ಭವ್ಯಾ  ಅಮಾನತುಗೊಳಗಾದ ಮಹಿಳಾ ಇನ್ಸ್​​ಪೆಕ್ಟರ್​. ಮಂಗಳವಾರ ಅಂಬೇಡ್ಕರ್​ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಇನ್ಸ್​ಪೆಕ್ಟರ್ ಭವ್ಯ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ. ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ. ಆದರೆ ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ ಎಂದಿದ್ದಾರೆ.

ನೀವು ಹೇಳಿದಂತೆ ಕೇಳುವುದಕ್ಕೆ ನಾನು ನಿಮ್ಮ ಡಿಪಾರ್ಟ್ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ. ಯಾರಿಗಾದರೂ ಹೇಳಿಕೊಳ್ಳಿ ಎಂದಿದಕ್ಕೆ ಬಿಬಿಎಂಪಿ ಆಯುಕ್ತರಿಗೆ ಅಧಿಕಾರಿಗಳು ವಿಷಯ ತಿಳಿಸಿದ್ದಾರೆ. ಈ ಹಿನ್ನಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಅಮಾನತುಗೊಳಿಸಲಾಗಿದೆ.

ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾದ ಬೆಂಗಳೂರಿನ ಹೋಟೆಲ್​ಗಳು 

ಮತದಾನ ಮಾಡಿದ ಗ್ರಾಹಕರಿಗೆ ಬೆಳಗಿನ ಉಪಹಾರವನ್ನು ಉಚಿತವಾಗಿ ನೀಡಲು ಬೆಂಗಳೂರಿನ ಎರಡು ಪ್ರತಿಷ್ಠಿತ ಹೋಟೆಲ್​ಗಳು ನಿರ್ಧರಿಸಿದ ಬೆನ್ನೆಲೇ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ. ಉಚಿತ ಆಹಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಮಾತನಾಡಿ​ ಇದಕ್ಕೆ ನಾವು ಅನುಮತಿ ನೀಡುವುದಿಲ್ಲ. ಇಂತಹ ಆಫರ್​​ಗಳನ್ನು ಹೋಟೆಲ್​​ ಮಾಲಿಕರು ನೀಡಬಾರದು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣೆ ಅಕ್ರಮ ತಡೆಗೆ ತೆರೆದಿದ್ದ ಸಿವಿಜಿಲ್ ಆ್ಯಪ್​ಗೆ ಭರ್ಜರಿ ರೆಸ್ವಾನ್ಸ್; 6711 ದೂರು ಸಲ್ಲಿಕೆ

ಈ ಕುರಿತು ಸುತ್ತೋಲೆ ಹೊರಡಿಸಿದ ಚುನಾವಣಾ ಆಯೋಗ ಈಗಾಗಲೇ ಕೆಲವು ಪತ್ರಕೆಗಳಲ್ಲಿ ಕೆಲವೊಂದು ಹೋಟೆಲ್​​ಗಳ ಮುಂಭಾಗದಲ್ಲಿ 10/05/2023 ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್​​​ಗಳನ್ನು ಅಳವಡಿಸಿರುವುದು ಕಂಡುಬಂದಿದೆ.

ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್​​ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಮೇ.10ರ ಮತದಾನಕ್ಕೆ ಮಳೆ ಅಡ್ಡಿ ಆತಂಕ: ವಿಸ್ತರಣೆಯಾಗುತ್ತಾ ಮತದಾನದ ಸಮಯ? ಆಯುಕ್ತ ತುಷಾರ್​ ಗಿರಿನಾಥ್ ಸ್ಪಷ್ಟನೆ

ಈ ಬಗ್ಗೆ ನಗರದ ಎರಡು ಪ್ರತಿಷ್ಠಿತ ರೆಸ್ಟೋರೆಂಟ್‌ಗಳಾದ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಮಾಲೀಕರು ಮಾತನಾಡಿದ್ದು, ಈ ಆಫರ್​​ ರಾಜಕೀಯ ಹೊರತಾಗಿದೆ. 2018 ರಲ್ಲಿ, ಬೆಂಗಳೂರಿನಲ್ಲಿ ಶೇ 54.7 ರಷ್ಟು ನೀರಸ ಮತದಾನವಾಗಿತ್ತು. ಹೀಗಾಗಿ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರೀತಿ ನಾವು ಆಫರ್​ ನೀಡಿದ್ದೇವೆ ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ