ಚುನಾವಣೆ ಅಕ್ರಮ ತಡೆಗೆ ತೆರೆದಿದ್ದ ಸಿವಿಜಿಲ್ ಆ್ಯಪ್​ಗೆ ಭರ್ಜರಿ ರೆಸ್ವಾನ್ಸ್; 6711 ದೂರು ಸಲ್ಲಿಕೆ

ಚುನಾವಣಾ ಅಕ್ರಮದ ವಿರುದ್ದ ದೂರು ನೀಡಲು ತೆರೆದಿದ್ದ ಸಿವಿಜಿಲ್(cVIGIL)​ ಆ್ಯಪ್​ಗೆ ಭರ್ಜರಿ ರೆಸ್ವಾನ್ಸ್ ಬಂದಿದ್ದು, ಇಲ್ಲಿಯವರೆಗೆ 6711 ದೂರು ದಾಖಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆ ಅಕ್ರಮ ತಡೆಗೆ ತೆರೆದಿದ್ದ ಸಿವಿಜಿಲ್ ಆ್ಯಪ್​ಗೆ ಭರ್ಜರಿ ರೆಸ್ವಾನ್ಸ್; 6711 ದೂರು ಸಲ್ಲಿಕೆ
ಸಿವಿಜಿಲ್ ಆ್ಯಪ್
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 09, 2023 | 12:36 PM

ಬೆಂಗಳೂರು: ವಿಧಾನಸಭೆ ಚುನಾವಣಾ(Karnataka Assembly Election) ಕಣ ರಂಗೇರಿದ್ದು, ನಾಳೆ(ಮೇ.10) ಮತದಾನ ನಡೆಯಲಿದೆ. ರಾಜ್ಯದಲ್ಲಿ ರಾಜಕೀಯ ನಾಯಕರ ಬಂಡಾಯ ಒಂದೆಡೆಯಾದರೇ, ಮತ್ತೊಂದೆಡೆ ನಾಯಕರ ನಡೆ, ನುಡಿ ಮೇಲೆ ಗಮನವಿರಿಸಲು ಚುನಾವಣಾ ಆಯೋಗ (Election Commission) ಡಿಜಿಟಲ್​ ಕಣ್ಣಿಟ್ಟಿತ್ತು. ಹೌದು ಭಾರತದ ಚುನಾವಣಾ ಆಯೋಗ ಸಿವಿಜಿಲ್ (cVIGIL)​ ಆ್ಯಪ್​ವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದಾಗಿದೆ. ಹೀಗೆ ಆ್ಯಪ್​ ಮೂಲಕ ಇಲ್ಲಿಯವರೆಗೆ 6711 ದೂರು ದಾಖಲಾಗಿದೆ.

ಸಿವಿಜಿಲ್ ಮೂಲಕ ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ ಹಾಕುವ ಬಗ್ಗೆಯೇ ಹೆಚ್ಚಿನ ದೂರಿದ್ದು, ಉಡುಗೊರೆ, ಹಣ, ಮದ್ಯ ಹಂಚಿಕೆ ಬಗ್ಗೆಯೂ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 1348 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ನಮ್ಮ ನಡೆ ಮತಗಟ್ಟೆಯ ಕಡೆ: ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗದಿಂದ ವಿನೂತನ ಪ್ರಯತ್ನ

ಗ್ರೇಟರ್ ಬೆಂಗಳೂರಿನ 32 ವಿಧಾನಸಭಾ ಕ್ಷೆತ್ರದ ವ್ಯಾಪ್ತಿಯಲ್ಲಿ ದೂರು ದಾಖಲು

ಹೌದು ನಿನ್ನೆ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ‌ ಬಿದ್ದಿದೆ. ಇಂದು(ಮೇ.9) ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಚುನಾವಣೆಗೆ ಒಂದೇ ದಿನ ಬಾಕಿಯಿರುವ ಹಿನ್ನೆಲೆ ಮತ್ತಷ್ಟು ದೂರ ಸಲ್ಲಿಕೆ‌ ಸಾಧ್ಯತೆಯಿದ್ದು, ಸಿವಿಜಿಲ್ ಗೆ ಭರ್ಜರಿ ರೆಸ್ವಾನ್ಸ್ ಸಿಕ್ಕಿದೆ. ನಿನ್ನೆ(ಮೇ.8) ಒಂದೇ ದಿನ ರಾಜ್ಯದಲ್ಲಿ‌ 541 ದೂರು ದಾಖಲಾಗಿದೆ. ಕಳೆದ ವಾರದಲ್ಲಿ ದಾಖಲಾದ ದೂರು 640, ನಿನ್ನೆ 541, ಇಂದು 106, ಬಿಬಿಎಂಪಿ ಉತ್ತರ 365, ಬಿಬಿಎಂಪಿ ಸೆಂಟ್ರಲ್ 146, ಬಿಬಿಎಂಪಿ ದಕ್ಷಿಣ 99, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು ನಗರದಲ್ಲಿ 690 ದೂರುಗಳು ದಾಖಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಕಂಡರೆ cVIGIL App​​ ಮೂಲಕ ದೂರು ಸಲ್ಲಿಸಿ; ಆ್ಯಪ್ ಬಳಸುವುದು ಹೇಗೆ?

ಭಾರತೀಯ ಚುನಾವಣಾ ಆಯೋಗ ಮಾರ್ಚ್ 29 ರಂದು ಕರ್ನಾಟಕ ಚುನಾವಣೆ 2023ರ ದಿನಾಂಕಗಳನ್ನು ಪ್ರಕಟಿಸಿತ್ತು. ಕರ್ನಾಟಕ ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಘೋಷಣೆಯೊಂದಿಗೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಅದೇ ವೇಳೆ ನಾಗರಿಕರಿಂದ ಅನುಕೂಲಕರ ಮತಗಳನ್ನು ಸೆಳೆಯಲು ಯಾವುದೇ ನಗದು, ಉಚಿತ ಅಥವಾ ಯಾವುದನ್ನೂ ನೀಡದಂತೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಲಾಗಿತ್ತು.

ಇದನ್ನೂ ಓದಿ: ಧಾರವಾಡದಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಆ್ಯಪ್‌ ಮೂಲಕ 69 ದೂರು ದಾಖಲು

ಒಂದು ವೇಳೆ ಪಕ್ಷಗಳು ಅಥವಾ ವ್ಯಕ್ತಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಅವುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ನಾಗರಿಕರು cVIGIL  ಆ್ಯಪ್ ಬಳಸಿ ದೂರುಸಲ್ಲಿಸಬಹುದಾಗಿದ್ದು, ಇದರಲ್ಲಿ ವಿಡಿಯೊಗಳನ್ನು ಶೂಟ್ ಮಾಡಬಹುದು ಅಥವಾ ಕೃತ್ಯದ ಫೋಟೋಗಳನ್ನು ಸೆರೆಹಿಡಿಯಬಹುದು. ಇದಾದ ನಂತರ ತಕ್ಷಣವೇ ಅವುಗಳನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬಹುದು. ಈ ರೀತಿಯಾಗಿ, ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇದು ನಿರ್ಣಾಯಕ ಸಾಕ್ಷ್ಯವನ್ನು ನೀಡುತ್ತದೆ.

cVIGIL ಅಪ್ಲಿಕೇಶನ್‌ ಬಳಸುವುದು ಹೇಗೆ?

1. cVIGIL ಅಪ್ಲಿಕೇಶನ್‌ ಬಳಸಿ, ಜನರು ಮತಗಳನ್ನು ಗಳಿಸಲು ಕ್ಷೇತ್ರದ ನಾಗರಿಕರಿಗೆ ಅಭ್ಯರ್ಥಿ ಅಥವಾ ಅವರ ಅನುಯಾಯಿಗಳು ಹಣ ಅಥವಾ ಉಡುಗೊರೆಗಳನ್ನು ಹಸ್ತಾಂತರಿಸುವ ಚಿತ್ರವನ್ನು ತೆಗೆದುಕೊಳ್ಳಬಹುದು.

2. ಫೋಟೋ/ವೀಡಿಯೊ ಜೊತೆಗೆ, ಅಪ್ಲಿಕೇಶನ್ ರೇಖಾಂಶಗಳು ಮತ್ತು ಸ್ಪಾಟ್ ಅಕ್ಷಾಂಶಗಳೊಂದಿಗೆ ನಿಖರವಾದ ಜಿಯೊ ಲೊಕೇಶನ್ ಕೂಡಾ ಸಹ ಸೆರೆಹಿಡಿಯುತ್ತದೆ. 3. ನಾಗರಿಕರು ಅಪ್ಲಿಕೇಶನ್‌ನಲ್ಲಿ ದೂರಿನ ಜೊತೆಗೆ ಮಲ್ಟಿಮೀಡಿಯಾ ವಿಷಯವನ್ನು ಅಪ್‌ಲೋಡ್ ಮಾಡಿದ ನಂತರ ಸಂಹಿತೆ ಉಲ್ಲಂಘಿಸುವವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ ನಿಖರವಾದ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ.

4. ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಮಾಹಿತಿಯನ್ನು ನೀಡಿದರೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸಮಯಕ್ಕೆ ಸ್ಥಳಕ್ಕೆ ತಲುಪಬಹುದು.

5. ಸಾಕ್ಷ್ಯಗಳೊಂದಿಗೆ (ಲೆಕ್ಕವಿಲ್ಲದ ಉಡುಗೊರೆಗಳು / ನಗದು) ಅಪರಾಧಿಗಳನ್ನು ಸೆರೆ ಹಿಡಿದು ಶಿಕ್ಷೆಗೊಳಪಡಿಸಬಹುದು.

6. cVIGIL ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಎಂಸಿಸಿ ಉಲ್ಲಂಘನೆ ಪ್ರಕರಣದ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು

7. ಬಳಕೆದಾರರು ಇತರೆ ದೂರುಗಳಿಗಾಗಿ ರಾಷ್ಟ್ರೀಯ ಸಂಪರ್ಕ ಕೇಂದ್ರಕ್ಕೆ 1800111950 ಅಥವಾ ರಾಜ್ಯ ಸಂಪರ್ಕ ಕೇಂದ್ರಕ್ಕೆ 1950ಕ್ಕೆ ಕರೆ ಮಾಡಬಹುದು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ