ಕರ್ನಾಟಕ ವಿಧಾನ ಸಭಾ ಚುನಾವಣೆಗೆ (Karnataka Assembly Election 2023) ದಿನಾಂಕ ಘೋಷಣೆಯಾಗಿದ್ದು ಮೇ 10ರಂದು ನಡೆಯುವ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಆದ್ರೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷದಲ್ಲಿ ಅಸಮಾಧಾನದ ಬೆಂಕಿಯಾಡುತ್ತಿದೆ. ಹಾಲಿ, ಮಾಜಿ ಶಾಸಕರು, ಹೊಸ ಆಕಾಂಕ್ಷಿಗಳ ನಡುವೆ ಟಿಕೆಟ್ಗಾಗಿ (Ticket Fight) ಫೈಟ್ ಜೋರಾಗಿದೆ. ಇನ್ನು ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ನಡೆಯುತ್ತಿದೆ. ಇದರಿಂದ ಟಿಕೆಟ್ ಘೋಷಣೆ ಮಾಡುವುದು ಹೈ ಕಮಾಂಡ್ಗೆ ತಲೆ ನೋವಾಗಿದೆ. ಇನ್ನು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಚರ್ಚೆ ಮಾಡಿ ಟಿಕೆಟ್ ಘೋಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಟಿಕೆಟ್ ಪಕ್ಕ ಆದ ಅಭ್ಯರ್ಥಿಗಳು ಪ್ರಚಾರ ಶುರು ಮಾಡಿದ್ದಾರೆ. ಹಾಗೂ ದೇವರ ಮೊರೆ ಹೋಗುತ್ತಿದ್ದಾರೆ. ಬನ್ನಿ ರಾಜ್ಯ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಬೆಂಗಳೂರು: ನಗರದ ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ನಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೋಲಾರ ಜಿಲ್ಲಾಧ್ಯಕ್ಷರು ಕೋಲಾರ ಕ್ಷೇತ್ರದ ಟಿಕೆಟ್ಗಾಗಿ ಮೂವರು ಆಕಾಂಕ್ಷಿಗಳ ಹೆಸರು ಪ್ರಸ್ತಾಪಿಸಿದ್ದಾರೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ 3 ಆಕಾಂಕ್ಷಿಗಳ ಹೆಸರು ಪ್ರಸ್ತಾಪ ಮಾಡಲಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಫರ್ಧೆ ಮಾಡುವುದಾದರೆ ಅದನ್ನು ಆದ್ಯತೆಯಾಗಿ ತೆಗೆದುಕೊಳ್ಳುವುದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕೆಜಿಎಫ್ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೋಲಾರ ಸಂಸದ ಎಸ್. ಮುನಿಸ್ವಾಮಿ ಪತ್ನಿ ಶೈಲಜಾ ಹೆಸರು ಪ್ರಸ್ತಾಪಿಸಲಾಗಿದೆ.
ಬೆಂಗಳೂರು: ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಮನೆಗೆ ವಾಪಸ್ ಆಗಿದ್ದಾರೆ. ಇಂದು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿ ತಪಾಸಣೆ ನಡೆಸಿದ್ದರು, ಇದೀಗ ಅವರು ಮನೆಗೆ ವಾಪಸ್ ಆಗಿದ್ದಾರೆ.
ಬೆಂಗಳೂರು: ನಗರದ ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಚಾಮರಾಜನಗರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಸಚಿವ ವಿ.ಸೋಮಣ್ಣ ಹೆಸರು ಕೂಡ ಹೇಳಲಾಗಿದೆ. ಚಾಮರಾಜನಗರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳ ಹೆಸರು ಪ್ರಸ್ತಾಪವಾಗಿದೆ. ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕರು ಸೇರಿದಂತೆ ತಲಾ ಇಬ್ಬರು ಆಕಾಂಕ್ಷಿಗಳ ಹೆಸರುಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಬೆಂಗಳೂರು: ನಗರದ ಬೆಂಗಳೂರು ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವರುಣ ಅಕಾಂಕ್ಷಿಗಳ ಬಗ್ಗೆ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ. ವರುಣಾ ಕ್ಷೇತ್ರಕ್ಕೆ ಒಟ್ಟು ಐವರು ಬಿಜೆಪಿ ಆಕಾಂಕ್ಷಿಗಳ ಹೆಸರು ಉಲ್ಲೇಖ ಮಾಡಲಾಗಿದ್ದು, ವರುಣದಿಂದ ಕಣಕ್ಕಿಳಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆಯೂ ಪ್ರಸ್ತಾಪವಾಗಿದೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಅಮಿತ್ ಶಾ, ಯೋಗಿ ಆದಿತ್ಯನಾಥ್ರಂತಹ ನಾಯಕರು ಬಂದರೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ರಾಜ್ಯ ನಾಯಕರಿಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರು ತಿಳಿಸಿದ್ದಾರೆ. ಅಲ್ಲದೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಶಕ್ತಿ ಇದೆ. ಎಲ್ಲರೂ ಒಪ್ಪುವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲು ಸುಲಭ. ಚಾಮುಂಡೇಶ್ವರಿ ಅಭ್ಯರ್ಥಿ ವಿಚಾರದಲ್ಲಿ ಪಕ್ಷ ಸೂಕ್ತ ಗಮನ ಹರಿಸಬೇಕು ಅಂತಾ ಮೈಸೂರು ನಗರ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಅಭಿಪ್ರಾಯ ತಿಳಿಸಿದ್ದಾರೆ.
ಹಾವೇರಿ: ಮಾಜಿ ಶಾಸಕ, ಹಿರೇಕೆರೂರ ಕಾಂಗ್ರೆಸ್ ಮುಖಂಡ ಬಿ.ಎಚ್ ಬನ್ನಿಕೊಡ ಅವರ ನಿವಾಸಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಭೇಟಿ ನೀಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಬಿಸಿ ಪಾಟೀಲ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕ್ಷೇತ್ರದ ಅಭಿವೃದ್ದಿಗಾಗಿ ನಮ್ಮ ಜೊತೆ ಕೈ ಜೊಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬನ್ನಿಕೊಡ ಅವರು ಪಾಟೀಲ್ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಬನ್ನಿಕೊಡ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು, ಬನ್ನಿಕೊಡ ಸಹಕಾರಕ್ಕಾಗಿ ಮನೆಗೆ ಭೇಟಿ ಆಗಿದ್ದಾಗಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಆದಾಗಿನಿಂದ ನಾಲ್ಕೈದು ಬಾರಿ ಬನ್ನಿಕೊಡ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗಿದ್ದರೆ ಟಿಕೆಟ್ ಕೈ ತಪ್ಪಿದಕ್ಕೆ ಬನ್ನಿಕೊಡ ಬಿಜೆಪಿ ಸೇರುತ್ತಾರಾ? ಬಣಕಾರ ಸೋಲಿಸಲು ಒಂದಾಗುತ್ತಾರಾ ಪಾಟೀಲ್ ಮತ್ತು ಬನ್ನಿಕೊಡ? ಕಾದುನೋಡಬೇಕಿದೆ.
ಬೆಂಗಳೂರು ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಬಿಜೆಪಿ ಜಿಲ್ಲಾವಾರು ಕೋರ್ ಕಮಿಟಿ ಸಭೆ ಮುಂದುವರಿದಿದ್ದು, ಕೊಡಗು ಜಿಲ್ಲೆ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಬದಲಾವಣೆಗೆ ಸಲಹೆ ನೀಡಲಾಗಿದೆ. 2 ಕ್ಷೇತ್ರಗಳ ಅಭ್ಯರ್ಥಿ ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಲಿ ಶಾಸಕರ ಬದಲಾಗಿ ಯುವಕರಿಗೆ ಟಿಕೆಟ್ ಕೊಡಬೇಕೆಂದು ರಾಜ್ಯ ನಾಯಕರಿಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ಬೆಂಗಳೂರಿನಲ್ಲಿ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿವೆ. ಇದು ಕಳವಳಕಾರಿ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸರ್ಕಾರದಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಯುವುದು ಡೌಟು. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಲಿ ಎಂದರು. ಧರ್ಮ ರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿ ಬೆಳೆಸಿತ್ತು. ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆಯೇ ಸಾಕ್ಷಿ. ಹತ್ಯೆಯ ಹೊಣೆಯನ್ನು ಅಸಮರ್ಥ ಗೃಹ ಸಚಿವ ಆರಗರೇ ಹೊರಬೇಕು. ಅಸಮರ್ಥ, ಅದಕ್ಷ, ಬೇಜವಾಬ್ದಾರಿ ಗೃಹಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿಯಂತ್ರಣವೇ ಇಲ್ಲ. ಇಂಥ ಸಚಿವರಿಗೆ ರಾಜ್ಯದ ಶಾಂತಿ, ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ? ಕೂಡಲೇ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ಕಿತ್ತುಹಾಕಲಿ. ಗೋರಕ್ಷಣೆಯ ಹೆಸರಲ್ಲಿ ನಡೆದ ಕೊಲೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕಿದೆ ಎಂದರು.
ಬೆಂಗಳೂರು: ಅನುಮತಿ ಪಡೆಯದೇ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಸಭೆ ನಡೆಸುತ್ತಿದ್ದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ನಡೆಯುತ್ತಿದ್ದ ಸಭೆಯಲ್ಲಿ ರೇಣುಕಾಚಾರ್ಯ ಭಾಷಣ ಮಾಡುತ್ತಿದ್ದಾಗ ಎಂಟ್ರಿಕೊಟ್ಟ ಅಧಿಕಾರಿಗಳು, ಮೈಕ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ರೇಣುಕಾಚಾರ್ಯ ಅವರು ಭಾಷಣ ಮುಂದುವರಿಸಲು ಯತ್ನಿಸಿದ್ದಾರೆ. ಈ ಎಲ್ಲದರ ಬಗ್ಗೆ ಅಧಿಕಾರಿಗಳು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಕೊನೆಗೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸಭೆಯಲ್ಲಿದ್ದ ಜನರಿಗೆ ಊಟ ಮಾಡಲೂ ಅಧಿಕಾರಿಗಳು ಅವಕಾಶ ನೀಡಿಲ್ಲ. ಕ್ಯಾಟರಿಂಗ್ನವರು ತಂದಿದ್ದ ಊಟ ವಾಪಸ್ ಕಳುಹಿಸಲಾಗಿದೆ.
ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಈ ವಿಚಾರವಾಗಿ ಇಂದು ಸಂಜೆ ದಳಪತಿ ಸಭೆ ಕರೆದಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಸಂಜೆ ದೇವೇಗೌಡರು ಸಭೆ ಕರೆದಿದ್ದಾರೆ, ನಾನು ಕೂಡ ಹೋಗುತ್ತಿದ್ದೇನೆ. ದೇವೇಗೌಡರು ನೊಂದು ಮಾತನಾಡಿದ್ದಾರೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರಬಾರದು ಎಂದು ಹೇಳಿದ್ದಾರೆ. ಹೆಚ್.ಡಿ.ದೇವೇಗೌಡರ ಆರೋಗ್ಯ, ಆಯಸ್ಸು ನನಗೆ ಮುಖ್ಯ. ದೇವೇಗೌಡರು ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಅವರ ನಿರ್ಣಯಕ್ಕೆ ನಾವೆಲ್ಲೂ ತಲೆಬಾಗಿದ್ದೇವೆ. ದೇವೇಗೌಡರ ಮಧ್ಯಸ್ಥಿಕೆ ಎಲ್ಲದಕ್ಕೂ ತೆರೆ ಎಳೆಯಲಿದೆ. ಇಷ್ಟು ದಿನ ಚರ್ಚೆಯಲ್ಲಿದ್ದ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳುತ್ತದೆ. ಯಾವುದೇ ಗೊಂದಲವಿಲ್ಲದೆ ದೇವೇಗೌಡರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಡಿ.ತಮ್ಮಯ್ಯ ವಿರುದ್ಧದ ಅಸಮಾಧಾನದ ಕೂಗು ಮುಂದುವರಿದಿದೆ. ಟಿಕೆಟ್ ಆಕಾಂಕ್ಷಿಗಳು ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಆರಂಭಿಸಿದ್ದು, ನಿನ್ನೆಯ ಗಲಾಟೆ ಬಳಿಕ ಇಂದು ಮತ್ತೆ ಕಾಂಗ್ರೆಸ್ ಮುಖಂಡರ ಬಹಿರಂಗ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಆರು ಜನ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಬಂಡಾಯ ಸಭೆ ನಡೆಸಲಾಗಿದ್ದು, ನಮ್ಮ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ಕೊಡಬೇಕು. ಆರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಲ್ಲಿ ಕೆಲಸ ಮಾಡೋಣ ಎಂಬ ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ. ಅಲ್ಲದೆ, ಹೆಚ್.ಡಿ.ತಮ್ಮಯ್ಯ ಬಿಜೆಪಿ ಏಜೆಂಟ್ ಎಂದು ಆಕ್ರೋಶ ಹೊರಹಾಕಲಾಗಿದ್ದು, ತಮ್ಮಯ್ಯ ಕಾಂಗ್ರೆಸ್ ಸೇರಿರುವುದೇ ಬಿಜೆಪಿ ಗೆಲ್ಲಿಸಲು ಎಂದು ಆಕ್ರೋಶ ಹೊರಹಾಕಿದರು.
ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತ ಮುಖಂಡರೂ ಆಗಿರುವ ಮಾಜಿ ಶಾಸಕ ಶಫಿ ಅಹಮ್ಮದ್ (Shafi Ahmed) ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಲ್ಪಸಂಖ್ಯಾತರು ಟಿಕೆಟ್ ಕೇಳಿ ಪಡೆಯುವ ಪರಿಸ್ಥಿತಿಗೆ ಬಂದಿದ್ದೇವೆ ಎಂದರು. ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದೆ. ಆದರೂ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. 2ನೇ ಪಟ್ಟಿಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ತುಮಕೂರು ನಗರ ಕ್ಷೇತ್ರವನ್ನು ಪಕ್ಷದ ಮುಖಂಡರು ಲಘುವಾಗಿ ಪರಿಗಣಿಸಿದ್ದಾರೆ. ನಾವು ಗಂಭೀರವಾಗಿ ಹೇಳುತಿದ್ದೇವೆ ನಮಗಾದ ಅವಮಾನ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾವು ಅಲ್ಪಸಂಖ್ಯಾತರು ನಿಮ್ಮ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡಿ ಶಿಸ್ತಿನ ಸಿಪಾಯಿ ಆಗಿದ್ದೇವೆ. ತುಮಕೂರು ನಗರ ಕ್ಷೇತ್ರ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೀಸಲಾಗಿರಿಸಿದೆ. ಹಾಗಾಗಿ ಅಲ್ಪ ಸಂಖ್ಯಾತರಿಗೆ ಕೊಡುವಂತೆ ಮನವಿ ಮಾಡುತ್ತೇವೆ. ನಾವು ಟಿಕೆಟ್ ಬೇಡಿಪಡೆಯುವ ಮಟ್ಟಕ್ಕೆ ಕಾಂಗ್ರೆಸ್ ನಮಗೆ ತಂದು ನಿಲ್ಲಿಸಿದೆ ಎಂದರು
ಕಾರವಾರ: ಪಕ್ಷದ ಭಿನ್ನಾಭಿಪ್ರಾಯದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿದ್ದಾರೆ. ನನಗೆ ಗೆಲುವು ಸೋಲು ಮುಖ್ಯವಲ್ಲ. ಯಾರ್ಯಾರೋ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ, ಬಂದಿದ್ದಾರೆ. ನಾನೂ ಹಾಗೆ. ಹೆಚ್ಡಿ ದೇವೇಗೌಡ ಇರುವವರೆಗೂ ಪಕ್ಷ ಬಿಡುವುದಿಲ್ಲ ಎಂದು ನಾನು ಹೇಳಿಲ್ಲ. ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ನಡುವೆ ಸಂಬಂಧ ಚೆನ್ನಾಗಿರುತ್ತದೆ. ಆದರೆ ರಾಜಕೀಯವಾಗಿ ಅಲ್ಲ. ಜೆಡಿಎಸ್ ಪಕ್ಷದಲ್ಲಿ ನನಗೆ ಸಹಕಾರ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜ್ವಲ್ ನನಗೆ ಸವಾಲು ಹಾಕಿದ್ದಾರೆ, ನಾನು ಅವರಿಗೆ ಸವಾಲು ಹಾಕಲ್ಲ. ಜನಾಭಿಪ್ರಾಯದ ಮೇರೆಗೆ ಜೆಡಿಎಸ್ ಪಕ್ಷ ಬಿಟ್ಟಿದ್ದೇನೆ. ನಾನು ಕಾಂಗ್ರೆಸ್ ಸೇರಲಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಎಂದರು.
ಕಾರವಾರ: ಪಕ್ಷದ ಭಿನ್ನಾಭಿಪ್ರಾಯದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೇಳಿಕೆ ನೀಡಿದ ಅವರು, ನನಗೆ ಗೆಲುವು ಸೋಲು ಮುಖ್ಯವಲ್ಲ. ಹೆಚ್ಡಿ ದೇವೇಗೌಡ ಇರುವವರೆಗೂ ಪಕ್ಷ ಬಿಡುವುದಿಲ್ಲ ಎಂದು ನಾನು ಹೇಳಿಲ್ಲ. ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ನಡುವೆ ಸಂಬಂಧ ಚೆನ್ನಾಗಿರುತ್ತದೆ. ಆದರೆ ರಾಜಕೀಯವಾಗಿ ಅಲ್ಲ ಎಂದರು. ಜೆಡಿಎಸ್ ಪಕ್ಷದಲ್ಲಿ ನನಗೆ ಸಹಕಾರ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜ್ವಲ್ ನನಗೆ ಸವಾಲು ಹಾಕಿದ್ದಾರೆ, ನಾನು ಅವರಿಗೆ ಸವಾಲು ಹಾಕಲ್ಲ. ನಾನು ಕಾಂಗ್ರೆಸ್ ಸೇರುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತೇನೆ. ಜನಾಭಿಪ್ರಾಯದ ಮೇರೆಗೆ ಜೆಡಿಎಸ್ ಪಕ್ಷ ಬಿಟ್ಟಿದ್ದೇನೆ ಎಂದರು.
ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತ ಮುಖಂಡರೂ ಆಗಿರುವ ಮಾಜಿ ಶಾಸಕ ಶಫಿ ಅಹಮ್ಮದ್ (Shafi Ahmed) ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಲ್ಪಸಂಖ್ಯಾತರು ಟಿಕೆಟ್ ಕೇಳಿ ಪಡೆಯುವ ಪರಿಸ್ಥಿತಿಗೆ ಬಂದಿದ್ದೇವೆ ಎಂದರು. ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದೆ. ಆದರೂ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. 2ನೇ ಪಟ್ಟಿಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ತುಮಕೂರು ನಗರ ಕ್ಷೇತ್ರವನ್ನು ಪಕ್ಷದ ಮುಖಂಡರು ಲಘುವಾಗಿ ಪರಿಗಣಿಸಿದ್ದಾರೆ. ನಾವು ಗಂಭೀರವಾಗಿ ಹೇಳುತಿದ್ದೇವೆ ನಮಗಾದ ಅವಮಾನ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾವು ಅಲ್ಪಸಂಖ್ಯಾತರು ನಿಮ್ಮ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡಿ ಶಿಸ್ತಿನ ಸಿಪಾಯಿ ಆಗಿದ್ದೇವೆ. ತುಮಕೂರು ನಗರ ಕ್ಷೇತ್ರ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೀಸಲಾಗಿರಿಸಿದೆ. ಹಾಗಾಗಿ ಅಲ್ಪ ಸಂಖ್ಯಾತರಿಗೆ ಕೊಡುವಂತೆ ಮನವಿ ಮಾಡುತ್ತೇವೆ. ನಾವು ಟಿಕೆಟ್ ಬೇಡಿಪಡೆಯುವ ಮಟ್ಟಕ್ಕೆ ಕಾಂಗ್ರೆಸ್ ನಮಗೆ ತಂದು ನಿಲ್ಲಿಸಿದೆ ಎಂದರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಡಿ.ತಮ್ಮಯ್ಯ ವಿರುದ್ಧದ ಅಸಮಾಧಾನದ ಕೂಗು ಮುಂದುವರಿದಿದೆ. ಟಿಕೆಟ್ ಆಕಾಂಕ್ಷಿಗಳು ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಆರಂಭಿಸಿದ್ದು, ನಿನ್ನೆಯ ಗಲಾಟೆ ಬಳಿಕ ಇಂದು ಮತ್ತೆ ಕಾಂಗ್ರೆಸ್ ಮುಖಂಡರ ಬಹಿರಂಗ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಆರು ಜನ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಬಂಡಾಯ ಸಭೆ ನಡೆಸಲಾಗಿದ್ದು, ನಮ್ಮ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ಕೊಡಬೇಕು. ಆರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಲ್ಲಿ ಕೆಲಸ ಮಾಡೋಣ ಎಂಬ ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ. ಅಲ್ಲದೆ, ಹೆಚ್.ಡಿ.ತಮ್ಮಯ್ಯ ಬಿಜೆಪಿ ಏಜೆಂಟ್ ಎಂದು ಆಕ್ರೋಶ ಹೊರಹಾಕಲಾಗಿದ್ದು, ತಮ್ಮಯ್ಯ ಕಾಂಗ್ರೆಸ್ ಸೇರಿರುವುದೇ ಬಿಜೆಪಿ ಗೆಲ್ಲಿಸಲು ಎಂದು ಆಕ್ರೋಶ ಹೊರಹಾಕಿದರು.
ಕೊಪ್ಪಳ: ಗಂಗಾವತಿಯಲ್ಲಿ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಭಾಷಣ ಮಾಡುತ್ತಿದ್ದಾಗ ಪೊಲೀಸರು ಎಂಟ್ರಿ ಕೊಟ್ಟು ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದ ಸಮಯ ಮೀರಿ ಸಮಾವೇಶ ಮುಂದುವರೆಸಿದ ಹಿನ್ನೆಲೆ ಸಭೆಗೆ ಆಗಮಿಸಿದ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು, ಬಿ.ಎಲ್ ಸಂತೋಷ ಭಾಷಣದ ವೇದಿಕೆ ಆಗಮಿಸಿ ಕಾರ್ಯಕ್ರಮ ನಿಲ್ಲಿಸಿ ಎಂದು ಸೂಚಿಸಿದರು. ಭಾಷಣದ ವೇಳೆ ನೋಟಿಸ್ ನೀಡಿದರೆ ನೀವು ಹೆದರಬೇಡಿ, ನಾನು ಎದುರಿಸುತ್ತೇನೆ ಎಂದು ಬಿ.ಎಲ್.ಸಂತೋಷ್ ಹೇಳಿದರು. ಕೊನೆಗೆ ಅಧಿಕಾರಿಗಳ ಸೂಚನೆ ಮೇರೆಗೆ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮುಗಿಸಲಾಯಿತು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರಿಂದ ಮೋದಿ, ಮೋದಿ ಎಂದು ಘೋಷಣೆ ಕೂಗಲಾಯಿತು. ಬಿ.ಎಲ್ ಸಂತೋಷಗೆ ಶಾಸಕರು, ಸಚಿವರು, ಸಂಸದರು ಸಾಥ್ ನೀಡಿದರು.
ಮೈಸೂರು: ಕಾಂಗ್ರೆಸ್ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೀಸಲಾತಿ ಬಗ್ಗೆ ಬಿಜೆಪಿ ಗೊಂದಲ ನಿರ್ಮಾಣ ಮಾಡಿದೆ. ಮುಸ್ಲಿಂರಿಗೆ ಬಿಜೆಪಿ ಮೋಸ ಮಾಡಿದೆ ಎಂದರು. ನಾವು ಬಿಜೆಪಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೇವು ಎಂದು ಸಿದ್ದರಾಮಯ್ಯ ಅವರು ಬಾಯಿ ತಪ್ಪಿ ಹೇಳಿದ ಪ್ರಸಂಗವೂ ನಡೆಯಿತು. ಕೂಡಲೇ ತಪ್ಪಿನ ಅರಿವಾಗಿ ನಾವು ಜೆಡಿಎಸ್ನವರು ಸೇರಿ ಸಮ್ಮಿಶ್ರ ಸರಕಾರ ಮಾಡಿದ್ದೆವು ಎಂದರು.
ತುಮಕೂರು: ನಗರದಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತ ಮುಖಂಡರು ಕಿಡಿಕಾರಿದ್ದಾರೆ. ಅಲ್ಪಸಂಖ್ಯಾತರು ಟಿಕೆಟ್ ಕೇಳಿ ಪಡೆಯುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಮಾಜಿ ಶಾಸಕ ಶಫಿ ಅಹಮ್ಮದ್ ಹೇಳಿಕೆ ನೀಡಿದ್ದಾರೆ. ತುಮಕೂರು ನಗರ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದೆ. ಆದರೂ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. 2ನೇ ಪಟ್ಟಿಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್ಗೆ ಟಿಕೆಟ್ ನೀಡಬೇಕು ಎಂದರು. ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 8 ಅಭ್ಯರ್ಥಿಗಳ ಘೋಷಣೆಯಾಗಿದ್ದು, ಇನ್ನೂ ಮೂರು ಬಾಕಿ ಉಳಿಸಿಕೊಂಡಿದೆ. ತುಮಕೂರು ನಗರ ಕ್ಷೇತ್ರ ಗೆಲ್ಲಬೇಕಾದರೆ ಮಾಜಿ ಶಾಸಕ ರಫಿಕ್ ಅಹಮದ್ಗೆ ಕೊಡಿ ಎಂದು ಜಿ.ಪರಮೇಶ್ವರ ಬಳಿ ಹತ್ತಾರು ಬಳಿ ಕೇಳಿಕೊಂಡಿದ್ದೇವೆ. ಆದರೆ ತುಮಕೂರು ನಗರದ ಟಿಕೆಟ್ ಘೋಷಣೆ ಆಗದೇ ಇರುವುದು ನಮಗೆ ನಿರಾಸೆ ಉಂಟಾಗಿದೆ. ಪಕ್ಷದಿಂದ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅವಮಾನ ಆಗಿದೆ. ಇದು ಸಹಿಸಲಾರದ ಅವಮಾನವಾಗಿದೆ. ಪಕ್ಷಕ್ಕಾಗಿ ಇಷ್ಟೇಲ್ಲಾ ದುಡಿದರೂ ನಮ್ಮನ್ನು ಯಾವುದೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರ ಮನಸ್ಸಿಗೆ ಬಂದಹಾಗೆ ನಡೆದುಕೊಳ್ಳುತಿದ್ದಾರೆ. ಅದು ಆಗಕೂಡದು. ನಮ್ಮ ನಿರ್ಲಕ್ಷ್ಯಕ್ಕೆ ಇಡೀ ಪಕ್ಷವನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ. ಅಲ್ಪ ಸಂಖ್ಯಾತ ಸಮುದಾಯ ಬೆಳೆಯಲು ನಮಗೆ ಅವಕಾಶ ಕೊಡಬೇಕು ಎಂದರು.
ಹಾಸನ: ಕ್ಷೇತ್ರದ ಟಿಕೆಟ್ ಅನ್ನು ಭವಾನಿ ರೇವಣ್ಣಗೆ ನೀಡಬೇಕೆಂಬ ಒತ್ತಡ ಜೆಡಿಎಸ್ ಹೈಕಾಂಡ್ ಮೇಲೆ ಹೆಚ್ಚಾಗುತ್ತಿದೆ. ರೇವಣ್ಣ ಕುಟುಂಬಕ್ಕೆ ಹಾಸನ ಕ್ಷೇತ್ರದ ಶಾಸಕ ಪಂಥಾಹ್ವಾನ ನೀಡಿದ್ದಾರೆ. ಪ್ರೀತಂಗೌಡ ವಿರುದ್ಧ ಸೆಣಸಲು ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಹಾಸನ JDS ಮಹಿಳಾ ಕಾರ್ಯಕರ್ತೆ ಮನವಿ ಮಾಡಿದ್ದಾರೆ. ಸ್ವರೂಪ್ ಕುಟುಂಬಕ್ಕೆ ಆರು ಬಾರಿ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಸ್ವರೂಪ್ ತಂದೆ ಹೆಚ್.ಎಸ್.ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮಾಜಿ ಶಾಸಕರ ಪುತ್ರ ಸ್ವರೂಪ್ ಸಾಮಾನ್ಯ ಕಾರ್ಯಕರ್ತ ಹೇಗಾಗುತ್ತಾರೆ? ಭವಾನಿ ರೇವಣ್ಣ ಹಾಸನ ಕ್ಷೇತ್ರದ ಕಾರ್ಯಕರ್ತರ ನೋವಿಗೆ ಸ್ಪಂದಿಸಿದ್ದಾರೆ. ಸತತ ಎರಡು ತಿಂಗಳಿನಿಂದ ಕಾರ್ಯಕರ್ತರ ಸಂಪರ್ಕದಲ್ಲಿದ್ದು ಪಕ್ಷ ಸಂಘಟನೆ ಮಾಡಿದ್ದಾರೆ. ಹಾಗಾಗಿ ಪ್ರೀತಮ್ ಗೌಡರನ್ನು ಸೋಲಿಸಲು ಭವಾನಿ ರೇವಣ್ಣಗೆ ಹಾಸನ ಕ್ಷೇತ್ರದ ಟಿಕೆಟ್ ಕೊಡಿ ಎಂದು ಕಾರ್ಯಕರ್ತೆ ಚೈತ್ರಾ ಮನವಿ ಮಾಡಿದ್ದಾರೆ.
ಬೆಂಗಳೂರು: ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಮತ್ತೆ ಗರಂ ಆಗಿದೆ. ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತರಿಗೆ ಮಾನ್ಯತೆ ನೀಡದ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ನಲ್ಲಿ ಲಿಂಗಾಯತ ಮಠಾಧೀಶರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. 2ನೇ ಪಟ್ಟಿಯಲ್ಲೂ ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಚುನಾವಣೆಯಲ್ಲಿ ಇದರ ಸಾಧಕ-ಬಾಧಕ ಪಕ್ಷ ಎದುರಿಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಹಾಗೂ ಲಿಂಗಾಯತ ಸಮಾನ ಮನಸ್ಕರ ವೇದಿಕೆಯಿಂದ ಪತ್ರ ಬರೆದು ಎಚ್ಚರಿಕೆ ನೀಡಲಾಗಿದೆ.
ವಿಜಯಪುರ: ಒಳ ಮೀಸಲಾತಿ ಜಾರಿ ವಿರೋಧಿಸಿ ಚುನಾವಣೆ ಬಹಿಷ್ಕಾರ ಹಿನ್ನೆಲೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ತಾಂಡಾಕ್ಕೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ್ ಪವಾರ್, ಸಹಾಯಕ ಅಧಿಕಾರಿಗಳಾದ ರೇಖಾ, ಜೆ.ಪಿ.ಶೆಟ್ಟಿ, ಎಸ್ಜೆ ನಾಯಕ ಭೇಟಿ ನೀಡಿ, ಮೀಸಲಾತಿ ವಿಚಾರಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಕೆ ಮಾಡುವ ಯತ್ನ ನಡೆಸಿದ್ದಾರೆ. ಆದರೆ ಆಧಿಕಾರಿಗಳ ಮನವಿಗೆ ಒಪ್ಪದ ಹುಲ್ಲೂರು ತಾಂಡಾದ ನಿವಾಸಿಗಳು ಚುನಾವಣಾ ಬಹಿಷ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.
ಒಳ ಮೀಸಲಾತಿ ಜಾರಿ ವಿರೋಧಿ ಚುನಾವಣೆ ಬಹಿಷ್ಕಾರ ಹಿನ್ನೆಲೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ತಾಂಡಾಗೆ ಚುನಾವಣೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ್ ಪವಾರ್, ಸಹಾಯಕ ಅಧಿಕಾರಿಗಳಾದ ರೇಖಾ, ಜೆ.ಪಿ.ಶೆಟ್ಟಿ, S.J.ನಾಯಕ ಭೇಟಿ ನೀಡಿ ಮೀಸಲಾತಿ ವಿಚಾರಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಸಲು ಯತ್ನಿಸಿದ್ದಾರೆ. ಆಧಿಕಾರಿಗಳ ಮನವಿಗೆ ಒಪ್ಪದ ಹುಲ್ಲೂರು ತಾಂಡಾದ ನಿವಾಸಿಗಳು ಚುನಾವಣಾ ಬಹಿಷ್ಕಾರ ಮಾಡ್ತೇವೆ ಎಂದು ಪಟ್ಟುಹಿಡಿದಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ನಾನು ಪ್ರಚಾರ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು. ಈಗಾಗಲೇ 2-3 ಬಾರಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮತ್ತೆ ಪ್ರಚಾರಕ್ಕೆ ಹೋಗ್ತೇನೆ. ಪಕ್ಷ ಬಿಟ್ಟು ಹೋದವರು ಮತ್ತೆ ಬರಬಹುದು ಎಂದರು.
ಸಚಿವ ಡಾ.ಸುಧಾಕರ್ ಬೆಂಬಲಿಗ ಬಿಜೆಪಿ ಮುಖಂಡ ಬಿ.ಸತೀಶ್(56) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಕರಗ ಉತ್ಸವ ಹಿನ್ನೆಲೆ ಸಚಿವ ಡಾ.ಸುಧಾಕರ್ ಜತೆ ಧರ್ಮರಾಯಸ್ವಾಮಿ ದೇಗುಲಕ್ಕೆ ಸತೀಶ್ ಭೇಟಿ ನೀಡಿದ್ರು. ಇಂದು ಮುಂಜಾನೆ ಚಿಕ್ಕಬಳ್ಳಾಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಆಪ್ತನ ಮನೆ ಮೇಲೆ ಆದಾಯ, ವಾಣಿಜ್ಯ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿಯ ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಮನೆಯ ಮೇಲೆ ರೇಡ್ ಆಗಿದ್ದು ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ. ನೀಲಕಂಠಪ್ಪ ಮನೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹ ಆರೋಪ ಹಿನ್ನೆಲೆ ಅಧಿಕಾರಿಗಳು ದಾಖಲೆ ಪರಿಶೀಲಿಸಿ ತೆರಳಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರದೀಪ್ ಈಶ್ವರ್ ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರದೀಪ್ ನಿನ್ನೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಗರದ ಕಂದವಾರ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಆವರಣದಲ್ಲಿ ಸ್ಥಳೀಯ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಪೀಕರ್ ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 400ಕ್ಕೂ ಅಧಿಕ ಕಾರ್ಯಕರ್ತರ ಜೊತೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಸ್ಪೀಕರ್ ಕಾಗೇರಿ ನಿವಾಸಕ್ಕೆ ಜೆಡಿಎಸ್ ಶಾಸಕ ಭೇಟಿ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ, ಸವದತ್ತಿ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿ ಎರಡು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಂಡಾಯದಿಂದಲೇ ಕಾಂಗ್ರೆಸ್ ಸೋತಿತ್ತು. ಹೀಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎರಡು ಕ್ಷೇತ್ರಗಳ ಆಕಾಂಕ್ಷಿಗಳ ಸಭೆ ಕರೆದಿದ್ದಾರೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಧಾನ ಸಭೆ ಕರೆಯಲಾಗಿದೆ.
ಕಾರ್ಮಿಕ ಮಹಿಳೆಯರಿಗೆ ಬಸ್ ಪಾಸ್ ವಿತರಣೆ ಮಾಡದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೊಮ್ಮಾಯಿ ಯಾವಾಗಲೂ ಫೂಲ್ ಮಾಡುವ ಕೆಲಸ ಮಾಡಿದ್ದಾರೆ. ಕೋಲಿ ಸಮುದಾಯಕ್ಕೆ ಎಸ್ಟಿ ಮೀಸಲಾತಿಯ ಭರವಸೆ ಕೊಟ್ಟಿದ್ರು. ಆದ್ರೆ ರಾಜ್ಯ ಸರ್ಕಾರ ಕೋಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದೆವು. ಅಲ್ಪಸಂಖ್ಯಾತರ ಮೀಸಲಾತಿ ತೆಗೆದು 2% ಹೆಚ್ಚಳ ಮಾಡಿದ್ದಾರೆ. ನಮಗೆ ಬೇರೆಯವರ ಮೀಸಲಾತಿ ಬೇಡ. ಬಿಜೆಪಿಗೆ ಬೆಂಬಲ ಕೊಟ್ಟ ಸಮುದಾಯ ದಂಗೆ ಏಳುತ್ತಿದೆ. ಬಿಜೆಪಿ ನಾಯಕರು ಎಲ್ಲರಿಗೂ ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದರು.
ಇಂದೇ ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಬಗೆಹರಿಯಲಿದೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು, ಹೆಚ್ಡಿಡಿ, ಸಿ.ಎಂ.ಇಬ್ರಾಹಿಂ ಚರ್ಚಿಸಿ ತೀರ್ಮಾನ ಮಾಡ್ತೇವೆ. 2ನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಪಂಚರತ್ನ ಕಾರ್ಯಕ್ರಮ ಇರುವ ಹಿನ್ನೆಲೆ ನಾನು ಸಭೆಗೆ ಹೋಗುತ್ತಿಲ್ಲ. ಕಾರ್ಯಕರ್ತನಿಗೆ ಹಾಸನ ಟಿಕೆಟ್ ನೀಡಬೇಕು ಎಂಬ ಒತ್ತಡ ಇದೆ ಎಂದರು.
ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿಯಾಗಿದೆ. ಏಪ್ರಿಲ್ 4ರಂದು ಮಧ್ಯಾಹ್ನ 12.30ಕ್ಕೆ ದೆಹಲಿಯಲ್ಲಿ ಸಿಇಸಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ನ ಎರಡನೇ ಪಟ್ಟಿ ಘೋಷಣೆ ಸಂಬಂಧ ಸಭೆಯಲ್ಲಿ ಮಹತ್ವದ ಚರ್ಚೆ ಆಗಲಿದೆ.
ಬಿಜೆಪಿ ಟ್ವಿಟರ್, ಪತ್ರಿಕೆ, ಟಿವಿಗಳ ಸ್ಕ್ರೀನ್ ಮೇಲೆ ಹುಟ್ಟಿದ ಪಕ್ಷವಲ್ಲ. ಪಕ್ಷದ ಬಗ್ಗೆ ತಿಳಿಯಬೇಕಾದ್ರೆ ಪ್ರಧಾನಿ ಮೋದಿಜಿ ಅವರ ಭಾಷಣ ಕೇಳಬೇಕು ಎಂದು ಗಂಗಾವತಿಯ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ಅನಂದ ಸಿಂಗ್ ಹೇಳಿದರು. ಇತ್ತೀಚಿಗೆ ಅವರು ದೆಹಲಿಯಲ್ಲಿ ಮಾಡಿದ ಭಾಷಣ ಕೇಳಿದ್ರೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಹುಮ್ಮಸ್ಸು ಬರುತ್ತೆ. ಸಾಮಾನ್ಯ ಕಾರ್ಯಕರ್ತನಿಗೂ ಪ್ರಧಾನಿಯವರು ಮನಮಟ್ಟುವಂತೆ ಮಾತ್ನಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಥೆ ಮುಗಿದು ಹೋಗಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಂತ್ಯವಾಗುತ್ತದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ವಿಜಯ ಭಾವುಟ ಹಾರಿಸಲಿದೆ. ನಾವೆಲ್ಲರು ನಮ್ಮ ಪ್ರಧಾನಿ ಕೈಯಿ ಬಲಪಡಿಸಬೇಕಾಗಿದೆ ಎಂದರು.
ವರುಣದಲ್ಲಿ ಯಾರೇ ಎದುರಾಳಿ ನಿಂತರೂ ನನಗೆ ತೊಂದ್ರೆ ಇಲ್ಲ. ಯಾರನ್ನೂ ಯಾವ ಕ್ಷೇತ್ರದಲ್ಲೂ ಯಾರು ಕಟ್ಟಿ ಹಾಕಲು ಆಗಲ್ಲ. ಕಟ್ಟಿ ಹಾಕೋದು ಮತ್ತೊಂದು ನಾಯಕರ ಕೈಯಲ್ಲಿ ಇಲ್ಲ. ಮತದಾರ ಮಾತ್ರ ಆ ಕೆಲಸ ಮಾಡಬಹುದು ಅಷ್ಟೆ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಾನು ಈಗಲೂ ವರುಣ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ. ನಾಮಪತ್ರ ಸಲ್ಲಿಸಲು ಮಾತ್ರ ವರುಣಗೆ ಹೋಗುತ್ತೇನೆ ಅಷ್ಟೆ. ನನ್ನ ಎದುರಾಳಿ ಯಾರು ಅಂತಾ ಯಾವತ್ತೂ ಯೋಚನೆ ಮಾಡಲ್ಲ. ಯಾರಾದರೂ ಎದುರಾಳಿ ಆಗಲಿ, ನನಗೆ ತೊಂದರೆ ಇಲ್ಲ, ವರುಣ ಕ್ಷೇತ್ರದ ಜವಾಬ್ದಾರಿಯನ್ನು ಯತೀಂದ್ರ ನೋಡಿಕೊಳ್ಳುತ್ತಾರೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಶಿಗ್ಗಾವಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿ ಬೆಂಬಲಿಗನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಬಸವರಾಜ ಜಾಧವ ಎಂಬ ಬೆಂಬಲಿಗ ರಕ್ತದಿಂದ ಪತ್ರ ಬರೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿದ್ದಾನೆ.
ಚುನಾವಣಾ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ರಾಹು- ಕೇತು ಮೊರೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆಗೆ ಬೆಂಗಳೂರಿಂದ ತಿರುಪತಿಗೆ ತೆರಳಿ ಅಲ್ಲಿಂದ ಕಾಳಹಸ್ತಿಗೆ ತೆರಳಲಿದ್ದಾರೆ. ಕಾಳಹಸ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಹು- ಕೇತು ಶಾಂತಿ ಹೋಮ ಮಾಡಿಸಲಿದ್ದಾರೆ. ಬಳಿಕ ಚುನಾವಣಾ ಕಾರ್ಯಚಟುವಟಿಕೆಗಲ್ಲಿ ಬ್ಯೂಸಿ ಆಗಲಿದ್ದಾರೆ.
ಶ್ರೀನಿವಾಸ್ ‘ಕೈ’ ಸೇರ್ಪಡೆ ಬೆನ್ನಲ್ಲೇ JDSಗೆ ಮತ್ತೊಂದು ಆಘಾತ. ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಮಾಜಿ ಶಾಸಕ S.R.ಶ್ರೀನಿವಾಸ್ಗೆ ಗುಬ್ಬಿ ಪ.ಪಂ JDS ಸದಸ್ಯರು ಬಾಹ್ಯ ಬೆಂಬಲ ಸೂಚಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗುಬ್ಬಿ ಪ.ಪಂ ಜೆಡಿಎಸ್‌ನ 9 ಸದಸ್ಯರು ಕಾಂಗ್ರೆಸ್ಗೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ. ನಮಗೆ ಜೆಡಿಎಸ್ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ಗುಬ್ಬಿ ಜೆಡಿಎಸ್ ಅಭ್ಯರ್ಥಿ ನಾಗರಾಜ್ ಮೇಲೆ ಮಾತ್ರ ಅಸಮಾಧಾನ. ವಿವಿಧ ಸಭೆ, ಸಮಾರಂಭಗಳಿಗೆ ಆಹ್ವಾನಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದುಕೊಂಡೇ ಕಾಂಗ್ರೆಸ್ಗೆ ಬೆಂಬಲ ಕೊಡುತ್ತೇವೆ ಎಂದು ಸದಸ್ಯರು ತಿಳಿಸಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ದೌರ್ಜನ್ಯ, ದಬ್ಬಾಳಿಕೆ ಆರೋಪ ಮಾಡಿ ಕಪ್ಪು ಪಟ್ಟಿ ಧರಿಸಿಕೊಂಡು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ, ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಾ.ಅಶ್ವತ್ಥ್ ದೌರ್ಜನ್ಯ ನಡೆಸುತ್ತಿದ್ದಾರೆ. ಸ್ಯಾಂಕಿ ಕೆರೆ ಪರಿಸರದ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲೆ ಕೇಸ್ ಹಾಕಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೂತಿದ್ದೇವೆ. ರಾಜ್ಯದಲ್ಲಿ ಯುಪಿ ಮಾಡೆಲ್ ಆಫ್ ಡೆವಲಪ್ಮೆಂಟ್ ಬರ್ತಾ ಇದೆ. ಯುಪಿ ಮಾಡೆಲ್ ಈಗ ಬಂದಿದೆ. ಸರ್ಕಾರದ ವಿರುದ್ದ ಏನೂ ಮಾತನಾಡಬಾರದು, ಪ್ರಶ್ನೆ ಕೇಳಬಾರದು. ಪ್ರಶ್ನೆ ಮಾಡಿದರೆ ರಾಜಕೀಯವಾಗಿ ಮುಗಿಸುತ್ತೇವೆ ಅಂತ ಸಚಿವ ಅಶ್ವತ್ಥ ನಾರಾಯಣ ಮೂಲಕ ಮೆಸೇಜ್ ಪಾಸ್ ಮಾಡಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 60-70 ಜನರ ಮೇಲೆ ಎಫ್ಐಆರ್ ಮಾಡಿದ್ದಾರೆ. 30 ಸಾವಿರ ಜನ ನಾಗರೀಕರು ಸ್ಯಾಂಕಿ ಟ್ಯಾಂಕ್ ಬಳಿ ಫ್ಲೈ ಓವರ್ ಬೇಡ ಅಂತ ಪಿಟಿಷನ್ ಸಹಿ ಮಾಡಿದ್ದಾರೆ. ಸ್ಯಾಂಕಿ ಟ್ಯಾಂಕ್ ಬಳಿ ರಸ್ತೆ ಅಗಲೀಕರಣ ಮಾಡಬೇಡಿ ಅಂತ ಶಾಲೆ ಮಕ್ಕಳು ಬೊಮ್ಮಾಯಿ ಅಂಕಲ್ ಅಂತ ಪತ್ರ ಬರೆದಿದ್ದಾರೆ. ಮಕ್ಕಳ ಪತ್ರಕ್ಕೂ ಸಿಎಂ ಕಿವಿಗೊಟ್ಟಿಲ್ಲ. ಯಾಕೆ ಸಾರ್ವಜನಿಕರಿಗೆ ಕರೆದು ಸ್ಯಾಂಕಿ ಟ್ಯಾಂಕ್ ಫ್ಲೈ ಓವರ್ ಬಗ್ಗೆ ಚರ್ಚೆ ನಡೆಸಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕರಿಗೆ ಶಾಕ್. ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್ ಫೈಟ್ ದಿನೇ ದಿನೇ ತಾರಕಕ್ಕೇರುತ್ತಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ ಐದು ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಬಿಜೆಪಿಗೆ ತಲೆ ಬಿಸಿ ಉಂಟಾಗಿದೆ. ಟಿಕೆಟ್ ಕೈತಪ್ಪಿದ್ರೇ ಐದು ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಗಳು ಚಿಂತಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಮನವೊಲಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅತೀ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿರುವ ವರಿಷ್ಠರಿಗೆ ಬಂಡಾಯದ ಬಿಸಿ ತಟ್ಟಿದೆ.
ಮಾಜಿ ಸಚಿವ ಜಮೀರ್ ಅಹ್ಮದ್ ಜೊತೆ ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿರುವ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ.
ಮೈಸೂರಿನ ಗಾಂಧಿ ವೃತ್ತದಲ್ಲಿ ಇಂದು ‘ಸಂವಿಧಾನ ಬಚಾವೋ, ದೇಶ್ ಬಚಾವೋ’ ಹೆಸರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ ಆರೋಪಿಸಿ 2023ರ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಮೀಸಲಾತಿ ಅಸ್ತ್ರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಭಟನೆ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುಡುತಿನಿಯಲ್ಲಿ ಶಾಸಕ ಈ.ತುಕಾರಾಂಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ.ತುಕಾರಾಂ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸದೆ ಬರೀ ಹಿಂಬಾಲಕರ ಏಳಿಗೆ ಮಾಡಿದ್ದೀರಿ. ಹಿಂಬಾಲಕರ ಮತ ಸಾಕು, ನಮ್ಮ ವೋಟು ನಿಮಗ್ಯಾಕೆ ಎಂದು ಕ್ಲಾಸ್ ತೆಗೆದುಕೊಂಡರು. ಗ್ರಾಮಸ್ಥರ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ತುಕಾರಾಂ ತಲೆಚಚ್ಚಿಕೊಂಡರು. ತುಕಾರಾಂಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ವಿರುದ್ಧ ವಹ್ನಿಕುಲ ತಿಗಳ ಸಮುದಾಯ ಆಕ್ರೋಶ ಹೊರ ಹಾಕಿದೆ. ಈ ಬಾರಿಯ ಮಾಲೂರು ಟಿಕೆಟನ್ನು ವಿಜಯ್ ಕುಮಾರ್ ಗೆ ನೀಡುವಂತೆ ದ್ರೌಪದಮ್ಮ ದೇವಾಲಯದಲ್ಲಿ ಕರ್ಪೂರ ಹಚ್ಚಿ ಘೋಷಣೆ ಕೂಗಿ ಒತ್ತಾಯ ಮಾಡಿದ್ದಾರೆ. ಹಾಗೂ ಟಿಕೆಟ್ ನೀಡದಿದಲ್ಲಿ ತಿಗಳ ಸಮುದಾಯ ಬಿಜೆಪಿ ವಿರುದ್ದ ನಿಲ್ಲುವುದಾಗಿ ಹೊಸಕೋಟೆಯಲ್ಲಿ ವಹ್ನಿಕುಲ ತಿಗಳ ಸಮುದಾಯದ ರಾಜ್ಯಾಧ್ಯಕ್ಷ ಜಯರಾಜ್ ಎಚ್ಚರಿಕೆ ನೀಡಿದ್ದಾರೆ. ಸಮುದಾಯದ ಮುಖಂಡರ ಜೊತೆ ಕರ್ಪೂರ ಹಚ್ಚಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಜಿಲ್ಲೆಯಲ್ಲಿ ಹಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹10 ಲಕ್ಷ ಮೌಲ್ಯದ ಆಹಾರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆಗುಂಬೆ ಬಳಿ ಲಾರಿಯಲ್ಲಿ ಸಾಗಿಸುತ್ತಿದ್ದ 5 ಲಕ್ಷ ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದೆ. 3 ಲಗೇಜ್ ವಾಹನಗಳಲ್ಲಿ ಸಾಗಿಸ್ತಿದ್ದ 4.50 ಲಕ್ಷ ಮೌಲ್ಯದ ರಗ್ಗುಗಳು ವಶಕ್ಕೆ ಪಡೆಯಲಾಗಿದೆ. ಹಾಗೂ ದಾಖಲೆ ಇಲ್ಲದ 90 ಸಾವಿರ ಹಣ ವಶಕ್ಕೆ ಪಡೆದಿದ್ದಾರೆ.
ತುಮಕೂರು: ತಿಪಟೂರು ತಾಲೂಕಿನ ರಜತಾದ್ರಿಪುರ ಟೋಲ್ ಬಳಿ ದಾಖಲೆ ಇಲ್ಲದ 3 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಕಾರು ತಪಾಸಣೆ ವೇಳೆ ವಿವಿಧ ಬಗೆಯ ಬಟ್ಟೆ ಪತ್ತೆಯಾಗಿದ್ದು ಚುನಾವಣಾ ಸಂಚಾರಿ ಜಾಗೃತ ದಳದ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 4.50 ಲಕ್ಷ ಹಣ ಜಪ್ತಿ ಮಾಡಲಾಗಿದೆ. ತಪಾಸಣೆ ವೇಳೆ ಬೊಲೆರೊ ವಾಹನದಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದ್ದು ₹4.50 ಲಕ್ಷ ತೆಗೆದುಕೊಂಡು ಹೋಗ್ತಿದ್ದ ಮೆಹಬೂಬ್ಸಾಬ್ನನ್ನು ವಶಕ್ಕೆ ಪಡೆಯಲಾಗಿದೆ. ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಕೆಟ್ ಘೋಷಣೆ ಆಗಿದ್ದೆ ತಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಹಗಲು ರಾತ್ರಿ ನಿರಂತರ ಪ್ರಚಾರ ಶುರು ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಬೆಳಿಗ್ಗೆ ಆರು ಗಂಟೆಯಿಂದಲೇ ಪ್ರಚಾರ ಶುರು ಮಾಡುತ್ತಿದ್ದಾರೆ. ಅಗಲಿದ ಕಾರ್ಯಕರ್ತರ ಸಂಬಂಧಿಕರ ಅತ್ಯ ಸಂಸ್ಕಾರ, ಕಬ್ಬಡ್ಡಿ ಪಂದ್ಯಗಳ ಉದ್ಘಾಟನೆ, ಕುರಿಗಾಯಿಗಳ ಜೊತೆ ಮಾತು ಕತೆ ಹೀಗೆ ಹಗಲು ರಾತ್ರಿ ಎನ್ನದೆ ಸುತ್ತುತ್ತಿದ್ದಾರೆ.
ಇಂದು ಕೊಪ್ಪಳ ಜಿಲ್ಲೆ ಗಂಗಾವತಿಯ ಖಾಸಗಿ ರೆಸಾರ್ಟ್ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ. ಸಭೆಯಲ್ಲಿ ಕಾರ್ಯಕರ್ತರಿಗೆ ಡಿಜಿಟಲ್ ಪ್ರಚಾರದ ತಂತ್ರಗಾರಿಕೆ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತಿದ್ದು ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ.
ಹಾಸನ: ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಾವಿರಾರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೊಂದಿಗೆ ಶಿರಸಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ರಾಜೀನಾಮೆ ಪತ್ರ ನೀಡಿ ಕಾಂಗ್ರೆಸ್ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಆಲೂರಿನ ಖಾಸಗಿ ಹೋಟೆಲ್ನಲ್ಲಿ ಇಂದು 2ನೇ ದಿನದ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇಂದು ಕಲಬುರಗಿ ಜಿಲ್ಲೆಯ ಪದಾಧಿಕಾರಿಗಳ ಜೊತೆ ಬಿಜೆಪಿ ನಾಯಕರ ಚರ್ಚೆ ನಡೆಸಲಿದ್ದಾರೆ. ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
Published On - 9:03 am, Sun, 2 April 23