ಗಾಂಧಿ ನಗರ, ಜೂ.4: ಅಮಿತ್ ಶಾ (Amit Shah) 5 ಲಕ್ಷಗಳ ಮತದ ಅಂತರದಲ್ಲಿ ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಭಾರೀ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ಅವರು ಅಮಿತ್ ಶಾ ಮುಂದೆ ಸ್ಪರ್ಧಿಸಿದರು. 2014ರಲ್ಲಿ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ಷೇತ್ರದಿಂದ ಸ್ವರ್ಧಿಸಿದರು. ಇದಕ್ಕೂ ಮೊದಲು 1996ರಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕೂಡ ಈ ಕ್ಷೇತ್ರದಿಂದ ಸ್ವರ್ಧಿಸಿ ಗೆಲುವು ಸಾಧಿಸಿದರು. ಗಾಂಧಿ ನಗರ ಬಿಜೆಪಿ ಭದ್ರತಕೋಟೆ ಕೂಡ ಹೌದು.
ಮೇ 7 ರಂದು ಮೂರನೇ ಹಂತದ ಚುನಾವಣೆ ನಡೆಯಿತು. ಬಿಜೆಪಿ ಇಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿಕೊಂಡು ಬಂದಿದೆ. ದೇಶದ ಬೇರೆ ಬೇರೆ ಕಡೆ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಇದರ ಜತೆಗೆ ಕಾಂಗ್ರೆಸ್ ಮೈತ್ರಿಕೂಟ ಇಂಡಿಯಾ ಕೂಡ ಭಾರೀ ಪೈಪೋಟಿಯನ್ನು ನೀಡುತ್ತಿದೆ. ಗುಜರಾತ್‌ನ ಗಾಂಧಿನಗರ ನಗರ ಕ್ಷೇತ್ರದಿಂದ ಅಮಿತ್ ಶಾ ಎರಡನೇ ಭಾರೀ ಗೆಲುವು ಸಾಧಿಸಿದ್ದಾರೆ. ಇನ್ನು ಈ ಕ್ಷೇತ್ರದಿಂದ ಬೇರೆ ಬೇರೆ ಪಕ್ಷ ನಾಯಕರು ಈ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದರು.
ಇದನ್ನೂ ಓದಿ:ಮೊದಲ ಚುನಾವಣಾ ಗೆಲುವಿನತ್ತ ಪವನ್ ಕಲ್ಯಾಣ್: ಭಾರಿ ಮುನ್ನಡೆ
ಗುಜರಾತ್‌ನಲ್ಲಿ ಬಿಜೆಪಿ ಸುಮಾರು 25-26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಗುಜರಾತ್‌ನಲ್ಲಿ ತನ್ನ ಖಾತೆ ತೆರೆಯಲು ಹೆಣಗಾಡುತ್ತಿದೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Tue, 4 June 24