Karnataka Lok Sabha Election Results 2024 Highlights: ಕರ್ನಾಟಕದಲ್ಲಿ ಯಾರು ಗೆದ್ರು? ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ಸಂಪೂರ್ಣ ವಿವರ

| Updated By: ಗಂಗಾಧರ​ ಬ. ಸಾಬೋಜಿ

Updated on:Jun 04, 2024 | 7:34 PM

ಕರ್ನಾಟಕ ಲೋಕಸಭಾ ಚುನಾವಣೆ 2024 ಫಲಿತಾಂಶ Highlights: ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲಿ ಯಾರು ಗೆದ್ದರು? ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಎಷ್ಟು ಲೀಡ್? ಹೀಗೆ ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Lok Sabha Election Results 2024 Highlights: ಕರ್ನಾಟಕದಲ್ಲಿ ಯಾರು ಗೆದ್ರು? ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ಸಂಪೂರ್ಣ ವಿವರ
ಲೋಕಸಭಾ ಚುನಾವಣೆ

India General Election Highlights Counting and Result Updates in Kannada: ಬಹುನಿರೀಕ್ಷಿತ, ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಬಹು ಯಶಸ್ವಿಯೊಂದಿಗೆ 18ನೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ. ಲೋಕಸಭಾ ಚುನಾವಣಾ 2024 ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್​ 09 ಮತ್ತಯ ಜೆಡಿಎಸ್​ 02 ಸ್ಥಾನ ಪಡೆದುಕೊಂಡಿದೆ. ಸುಮಾರು 15 ಸ್ಥಾನಗಳಲ್ಲಿ ಗೆಲ್ಲುವುವ ವಿಶ್ವಾಸದಲ್ಲಿ ಕಾಂಗ್ರೆಸ್​​ ನಿರಾಸೆಯಾಗಿದೆ. ಇನ್ನು ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಬಾರಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸದಲ್ಲಿತ್ತು. ಆದ್ರೆ ಬಿಜೆಪಿ 25ರಿಂದ 17ಕ್ಕೆ ಕುಸಿದಿದೆ. ಇನ್ನು ಬಿಜೆಪಿಯ ಮಿತ್ರ ಪಕ್ಷ ಸ್ಪರ್ಧೆ ಮಾಡಿದ್ದ ಮೂರಲ್ಲಿ ಎರಡು ಸ್ಥಾನ ಗೆದ್ದು ಗಮನಾರ್ಹ ಸಾಧನೆ ಮಾಡಿದೆ.

LIVE NEWS & UPDATES

The liveblog has ended.
 • 04 Jun 2024 07:30 PM (IST)

  Karnataka Lok Sabha Election Results 2024 LIVE: 28 ಕೇತ್ರಗಳಲ್ಲಿ ಗೆದ್ದವರು ಇವರೇ ನೋಡಿ 

  ಕರ್ನಾಟಕ ಲೋಕಸಭೆ ಚುನಾವಣೆ ಫಲಿತಾಂಶ 2024ರ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

  1. ಬಾಗಲಕೋಟೆ ಕ್ಷೇತ್ರ: ಪಿಸಿ. ಗದ್ದಿಗೌಡರ್​-ಬಿಜೆಪಿ​
  2. ಬೆಂಗಳೂರು ಕೇಂದ್ರ ಕ್ಷೇತ್ರ: ಪಿ.ಸಿ.ಮೋಹನ್- ಬಿಜೆಪಿ
  3. ಬೆಂಗಳೂರು ಉತ್ತರ ಕ್ಷೇತ್ರ: ಶೋಭಾ ಕರಂದ್ಲಾಜೆ-ಬಿಜೆಪಿ
  4. ಬೆಂಗಳೂರು ದಕ್ಷಿಣ ಕ್ಷೇತ್ರ: ತೇಜಸ್ವಿ ಸೂರ್ಯ- ಬಿಜೆಪಿ
  5. ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್​-ಬಿಜೆಪಿ
  6. ಬೆಳಗಾವಿ ಕ್ಷೇತ್ರ: ಜಗದೀಶ್ ಶೆಟ್ಟರ್- ಬಿಜೆಪಿ
  7. ಬಳ್ಳಾರಿ ಕ್ಷೇತ್ರ: ಇ. ತುಕಾರಾಂ- ಕಾಂಗ್ರೆಸ್​
  8. ಬೀದರ್ ಕ್ಷೇತ್ರ: ಸಾಗರ್ ಈಶ್ವರ ಖಂಡ್ರೆ- ಕಾಂಗ್ರೆಸ್​
  9. ಬಿಜಾಪುರ ಕ್ಷೇತ್ರ: ರಮೇಶ್​ ಜಿಗಜಿಣಗಿ- ಬಿಜೆಪಿ
  10. ಚಾಮರಾಜನಗರ ಕ್ಷೇತ್ರ: ಸುನಿಲ್ ಬೋಸ್- ಕಾಂಗ್ರೆಸ್​
  11. ಚಿಕ್ಕಬಳ್ಳಾಪುರ ಕ್ಷೇತ್ರ: ಕೆ.ಸುಧಾಕರ್- ಬಿಜೆಪಿ
  12. ಚಿಕ್ಕೋಡಿ ಕ್ಷೇತ್ರ: ಪ್ರಿಯಾಂಕಾ ಸತೀಶ್ ಜಾರಕಿಹೊಳಿ- ಕಾಂಗ್ರೆಸ್​
  13. ಚಿತ್ರದುರ್ಗ ಕ್ಷೇತ್ರ: ಗೋವಿಂದ ಕಾರಜೋಳ- ಬಿಜೆಪಿ
  14. ದಕ್ಷಿಣ ಕನ್ನಡ ಕ್ಷೇತ್ರ: ಬ್ರಿಜೇಶ್ ಚೌಟಾ- ಬಿಜೆಪಿ
  15. ದಾವಣಗೆರೆ ಕ್ಷೇತ್ರ: ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್​
  16. ಧಾರವಾಡ ಕ್ಷೇತ್ರ: ಪ್ರಲ್ಹಾದ್​ ಜೋಶಿ- ಬಿಜೆಪಿ
  17. ಕಲಬುರಗಿ ಕ್ಷೇತ್ರ: ರಾಧಾಕೃಷ್ಣ-ಕಾಂಗ್ರೆಸ್​
  18. ಹಾವೇರಿ ಕ್ಷೇತ್ರ: ಬಸವರಾಜ ಬೊಮ್ಮಾಯಿ- ಬಿಜೆಪಿ
  19. ಕೋಲಾರ ಕ್ಷೇತ್ರ: ಎಂ ಮಲ್ಲೇಶ್ ಬಾಬು- ಜೆಡಿಎಸ್​
  20. ಕೊಪ್ಪಳ ಕ್ಷೇತ್ರ: ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್- ಕಾಂಗ್ರೆಸ್​
  21. ಮೈಸೂರು ಕ್ಷೇತ್ರ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​- ಬಿಜೆಪಿ
  22. ರಾಯಚೂರು ಕ್ಷೇತ್ರ: ಜಿ ಕುಮಾರ್ ನಾಯಕ್​- ಕಾಂಗ್ರೆಸ್​
  23. ಶಿವಮೊಗ್ಗ ಕ್ಷೇತ್ರ: ಬಿ.ವೈ ರಾಘವೇಂದ್ರ-ಬಿಜೆಪಿ
  24. ತುಮಕೂರು ಕ್ಷೇತ್ರ: ವಿ.ಸೋಮಣ್ಣ- ಬಿಜೆಪಿ
  25. ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ- ಬಿಜೆಪಿ
  26. ಉತ್ತರ ಕನ್ನಡ ಕ್ಷೇತ್ರ: ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ
  27. ಹಾಸನ ಕ್ಷೇತ್ರ: ಶ್ರೇಯಸ್​ ಪಟೇಲ್​-ಕಾಂಗ್ರೆಸ್
  28. ಮಂಡ್ಯ ಕ್ಷೇತ್ರ: ಹೆಚ್​ಡಿ ಕುಮಾರಸ್ವಾಮಿ-ಜೆಡಿಎಸ್​
 • 04 Jun 2024 07:20 PM (IST)

  Karnataka Lok Sabha Election Results 2024 LIVE: ಕರ್ನಾಟಕದಲ್ಲಿ ಯಾರು ಗೆದ್ರು? ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

  ಲೋಕಸಭಾ ಚುನಾವಣಾ 2024 ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್​ 09 ಮತ್ತಯ ಜೆಡಿಎಸ್​ 02 ಸ್ಥಾನ ಪಡೆದುಕೊಂಡಿದೆ. ಸುಮಾರು 15 ಸ್ಥಾನಗಳಲ್ಲಿ ಗೆಲ್ಲುವುವ ವಿಶ್ವಾಸದಲ್ಲಿ ಕಾಂಗ್ರೆಸ್​​ ನಿರಾಸೆಯಾಗಿದೆ. ಇನ್ನು ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಬಾರಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸದಲ್ಲಿತ್ತು. ಆದ್ರೆ ಬಿಜೆಪಿ 25ರಿಂದ 17ಕ್ಕೆ ಕುಸಿದಿದೆ. ಇನ್ನು ಬಿಜೆಪಿಯ ಮಿತ್ರ ಪಕ್ಷ ಸ್ಪರ್ಧೆ ಮಾಡಿದ್ದ ಮೂರಲ್ಲಿ ಎರಡು ಸ್ಥಾನ ಗೆದ್ದು ಗಮನಾರ್ಹ ಸಾಧನೆ ಮಾಡಿದೆ.

 • 04 Jun 2024 07:13 PM (IST)

  Karnataka Lok Sabha Election Results 2024 LIVE: ಕೇಂದ್ರದಲ್ಲಿ INDIA ಅಧಿಕಾರಕ್ಕೆ ಬರುತ್ತಾ?

  ಕೇಂದ್ರದಲ್ಲಿ INDIA ಅಧಿಕಾರಕ್ಕೆ ಬರುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ರಾಷ್ಟ್ರಪತಿ ಏನು ಮಾಡ್ತಾರೋ ಗೊತ್ತಿಲ್ಲ. ಯಾರನ್ನೇ ಕರೆದ್ರು ವಿಶ್ವಾಸಮತ ಸಾಬೀತು ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 • 04 Jun 2024 07:06 PM (IST)

  Karnataka Lok Sabha Election Results 2024 LIVE: ರಾಜ್ಯದಲ್ಲಿ ಮೈತ್ರಿ ಸಕ್ಸಸ್​ ಆಗಿಲ್ಲ

  ರಾಜ್ಯದಲ್ಲಿ ಮೈತ್ರಿ ಸಕ್ಸಸ್​ ಆಗಿಲ್ಲ. ಮೈತ್ರಿ ಸಕ್ಸಸ್​ ಆಗಿದ್ರೆ ಕಾಂಗ್ರೆಸ್​ ಇಷ್ಟು ಗೆಲ್ಲುತ್ತಿರಲಿಲ್ಲ. ರಾಜ್ಯದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸೀಟ್‌ ಗೆದ್ದಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮತ ಪ್ರಮಾಣವೂ ಹೆಚ್ಚಾಗಿದೆ. ಮೇಲ್ನೋಟಕ್ಕೆ ಗ್ಯಾರಂಟಿ ಯೋಜನೆಗಳು ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ.

 • 04 Jun 2024 06:55 PM (IST)

  Karnataka Lok Sabha Election Results 2024 LIVE: ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ

  ಸಿಎಂಗಳನ್ನು ಜೈಲಿಗೆ ಕಳಿಸಿದರು, ಇಡಿ, ಸಿಬಿಐ ಬಳಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಿದೆ. ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಭಾರತ್‌ ಜೋಡೋ ಯಾತ್ರೆ, ನ್ಯಾಯ್‌ ಯಾತ್ರೆಗೆ ಮನ್ನಣೆ ಸಿಕ್ಕಿದೆ. ರಾಹುಲ್ ಯಾತ್ರೆಗಳಿಂದಲೇ ಮೈತ್ರಿ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದಾರೆ. ಎರಡೂ ಕ್ಷೇತ್ರದಲ್ಲಿ ಗೆದ್ದಿರುವ ರಾಹುಲ್ ಗಾಂಧಿಗೆ ಅಭಿನಂದನೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಜನ ಮತ ನೀಡಿದ್ದಾರೆ ಎಂದರು.

 • 04 Jun 2024 06:52 PM (IST)

  Karnataka Lok Sabha Election Results 2024 LIVE: ಮೋದಿಗೆ ಪ್ರಧಾನಿಯಾಗಲು ನೈತಿಕತೆ ಇಲ್ಲ

  ಪ್ರಧಾನಿ ಮೋದಿಗೆ ಸೋಲುವ ಭೀತಿ ಇತ್ತು. ಹೀಗಾಗಿ ಧರ್ಮದ ಹೆಸರಿನಲ್ಲಿ ಪ್ರಧಾನಿ ಮೋದಿ ಮತ ಕೇಳಿದ್ದರು. ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಕೊಡುತ್ತಾರೆಂದು ಹೇಳಿದ್ದರು. ಆದರೆ ಚುನಾವಣೆಯಲ್ಲಿ ಇದ್ಯಾವುದೂ ವರ್ಕ್‌ಔಟ್ ಆಗಿಲ್ಲ. ಬಿಜೆಪಿಗೆ ಕಳೆದ ಬಾರಿಗಿಂತ ಸೀಟ್ ಕಡಿಮೆಯಾಗಿವೆ. ಪ್ರಧಾನಿ ಆಗಲು ನರೇಂದ್ರ ಮೋದಿಗೆ ಯಾವುದೇ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 • 04 Jun 2024 06:48 PM (IST)

  Karnataka Lok Sabha Election Results 2024 LIVE: ಈ ಬಾರಿ ಎಲ್ಲೂ ನರೇಂದ್ರ ಮೋದಿ ಅಲೆ ಇಲ್ಲ

  ಈ ಬಾರಿ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಬಂದಿಲ್ಲ. ಈ ಬಾರಿ ಎಲ್ಲೂ ನರೇಂದ್ರ ಮೋದಿ ಅಲೆ ಇಲ್ಲ. ಮೋದಿಯವರ ಜನಪ್ರಿಯತೆ ಕುಗ್ಗಿದೆ. ಈ ಫಲಿತಾಂಶದಿಂದ ಅದು ಸ್ಪಷ್ಟವಾಗಿದೆ. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 • 04 Jun 2024 06:43 PM (IST)

  Karnataka Lok Sabha Election Results 2024 LIVE: ನಿರೀಕ್ಷೆಯಂತೆ ಹೆಚ್ಚು ಸೀಟ್ ಗೆಲ್ಲಲು ಆಗಿಲ್ಲ: ಸಿದ್ದರಾಮಯ್ಯ  

  ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದು, ಕರ್ನಾಟಕ ಹಾಗೂ ದೇಶದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದಲ್ಲಿ ಮತದಾನ, ಮತ ಎಣಿಕೆ ವೇಳೆ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ನಿರೀಕ್ಷೆಯಂತೆ ರಾಜ್ಯದಲ್ಲಿ ಹೆಚ್ಚು ಸೀಟ್ ಗೆಲ್ಲಲು ಆಗಿಲ್ಲ ಎಂದಿದ್ದಾರೆ.

 • 04 Jun 2024 06:15 PM (IST)

  Karnataka Lok Sabha Election Results 2024 LIVE: ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

  ಲೋಕಸಭಾ ಚುನಾವಣಾ 2024 ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್​ 09 ಮತ್ತಯ ಜೆಡಿಎಸ್​ 02 ಸ್ಥಾನ ಪಡೆದುಕೊಂಡಿದೆ. ಸುಮಾರು 15 ಸ್ಥಾನಗಳಲ್ಲಿ ಗೆಲ್ಲುವುವ ವಿಶ್ವಾಸದಲ್ಲಿ ಕಾಂಗ್ರೆಸ್​​ ನಿರಾಸೆಯಾಗಿದೆ. ಇನ್ನು ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಬಾರಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸದಲ್ಲಿತ್ತು. ಆದ್ರೆ ಬಿಜೆಪಿ 25ರಿಂದ 17ಕ್ಕೆ ಕುಸಿದಿದೆ. ಇನ್ನು ಬಿಜೆಪಿಯ ಮಿತ್ರ ಪಕ್ಷ ಸ್ಪರ್ಧೆ ಮಾಡಿದ್ದ ಮೂರಲ್ಲಿ ಎರಡು ಸ್ಥಾನ ಗೆದ್ದು ಗಮನಾರ್ಹ ಸಾಧನೆ ಮಾಡಿದೆ.

 • 04 Jun 2024 05:52 PM (IST)

  Karnataka Lok Sabha Election Results 2024 LIVE: ಜನರ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ: ಡಿಕೆ ಶಿವಕುಮಾರ್

  ಜನರ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ ಎಂದು ಬೆಂಗಳೂರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​​ ಹೇಳಿದ್ದಾರೆ. ಕರ್ನಾಟಕದ ಜನತೆ ಪ್ರಜ್ಞಾವಂತರು, ಅದನ್ನು ಪ್ರಶ್ನೆ ಮಾಡಲ್ಲ. ಕರ್ನಾಟಕದಲ್ಲಿ ನಮಗೆ ಇನ್ನೂ ಹೆಚ್ಚಿನ ಸೀಟ್ ಗೆಲ್ಲುವ ನಿರೀಕ್ಷೆ ಇತ್ತು. ಸೋತ ಕ್ಷೇತ್ರಗಳಲ್ಲಿನ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

 • 04 Jun 2024 05:25 PM (IST)

  Karnataka Lok Sabha Election Results 2024 LIVE: ಮೃಣಾಲ್ ಸೋಲಿನ ಬಗ್ಗೆ ಸಾಹುಕಾರ್ ಶಾಕಿಂಗ್ ರಿಯಾಕ್ಷನ್‌

 • 04 Jun 2024 05:12 PM (IST)

  Karnataka Lok Sabha Election Results 2024 LIVE: ಕಲಬುರಗಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ

  ಕಾಂಗ್ರೆಸ್ ಭದ್ರಕೋಟೆಯನ್ನ ಮತ್ತೆ ಕಾಂಗ್ರೆಸ್ ಕಬ್ಜ ಮಾಡಿದೆ. 27,205 ಮತಗಳ ಅಂತರದಿಂದ ಕೈ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಜಯಭೇರಿ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ 625116 ಮತಗಳನ್ನು ಪಡೆದುಕೊಂಡಿದ್ದಾರೆ.

 • 04 Jun 2024 04:38 PM (IST)

  Karnataka Lok Sabha Election Results 2024 LIVE: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಅಂತಿಮ ಮತದಾನದ ವಿವರ

  ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಅಂತಿಮ ಮತದಾನದ ವಿವರ ಹೀಗಿದೆ. ವಿಜೇತ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪಡೆದ ಒಟ್ಟು ಮತಗಳು: 6,71,039 (6,67,441 +3,598 ಅಂಚೆ ಮತಗಳು). ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು: 6,02,640 (6,00,741+ 1,899 ಅಂಚೆ ಮತಗಳು) ಬಿಜೆಪಿ ಪಡೆದ ಒಟ್ಟು ಲೀಡ್: 68,399 ಮತಗಳು.

 • 04 Jun 2024 04:17 PM (IST)

  Karnataka Lok Sabha Election Results 2024 LIVE: ನನ್ನ ಕ್ಷೇತ್ರದ ಜನರಿಗೆ ಶಿರಬಾಗಿ ನಮಿಸ್ತೀನಿ: ತೇಜಸ್ವಿಸೂರ್ಯ

  ಎರಡನೇ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸತ್​​ನಲ್ಲಿ ಪ್ರತಿನಿಧಿಸುವ ಅವಕಾಶ ನೀಡಿದ್ದಾರೆ. 2.44 ಲಕ್ಷದ ಮತಗಳ ಅಂತರದಿಂದ ಗೆಲುವು ತಂದಿದ್ದಾರೆ. ಪ್ರಧಾನಿ ಮೋದಿಯವರು ಮತ್ತೆ ಆಡಳಿತ ಮಾಡಬೇಕು. ತೇಜಸ್ವಿಸೂರ್ಯ ಮತ್ತೆ ಸಂಸದರಾಗಬೇಕು ಅಂತಾ ಜನರು ಆರ್ಶಿವಾದ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಶಿರಬಾಗಿ ನಮಿಸುತ್ತೇನೆ ಎಂದು ತೇಜಸ್ವಿಸೂರ್ಯ ಹೇಳಿದ್ದಾರೆ.

 • 04 Jun 2024 04:01 PM (IST)

  Karnataka Lok Sabha Election Results 2024 LIVE: ಗ್ಯಾರಂಟಿ ಕಾಂಗ್ರೆಸ್​ ಕೈಹಿಡಿದಿಲ್ಲ: ಆರ್ ಅಶೋಕ್

  ಕರ್ನಾಟಕ ಫಲಿತಾಂಶವನ್ನ ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸರ್ಕಾರದಲ್ಲಿ 136 ಶಾಸಕರಿದ್ದಾರೆ. ದುರಹಂಕಾರದಿಂದ‌ ಆಡಳಿತ ನಡೆಸುತ್ತಿದ್ದರು. ಗ್ಯಾರಂಟಿ ಕೈ ಹಿಡಿದಿಲ್ಲ,‌ ಅವರ ಶಾಸಕರು‌ಕೂಡ ಕೈ ಹಿಡಿದಿಲ್ಲ. ಕಾಂಗ್ರೆಸ್ ‌ದುಡ್ಡು ಫಲ ನೀಡಿಲ್ಲ. ಡಿಕೆ ಸಹೋದರ ‌ಸುರೇಶ್ ಅವರೇ ಸೋಲನ್ನಪ್ಪಿದ್ದಾರೆ ಎಂದಿದ್ದಾರೆ.

 • 04 Jun 2024 03:32 PM (IST)

  Karnataka Lok Sabha Election Results 2024 LIVE: ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ; ವಿಶ್ವೇಶ್ವರ ಕಾಗೇರಿ

  ಈ ಗೆಲುವು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿ ಹೇಳಿದ್ದಾರೆ. ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಘಟಿತ ಪ್ರಯತ್ನದಿಂದ ಚುನಾವಣೆ ಯಶಸ್ಸಿಗೆ ಕಾರಣವಾಗಿದೆ. ವ್ಯಕ್ತಿ ಆಧಾರಿತ ಪಕ್ಷ ನಮ್ಮದಲ್ಲ ಎಂದು ಜನ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

 • 04 Jun 2024 03:29 PM (IST)

  Karnataka Lok Sabha Election Results 2024 LIVE: ಬೊಮ್ಮಾಯಿ ಗೆಲುವು ಹಿನ್ನಲೆ ಹಾವೇರಿಯಲ್ಲಿ ಸಂಭ್ರಮಾಚರಣೆ

  ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಗೆಲುವು ಹಿನ್ನಲೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ. ಹಾವೇರಿ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್​ ಶೋ ಮಾಡಿ ಬಣ್ಣ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

 • 04 Jun 2024 03:14 PM (IST)

  Karnataka Lok Sabha Election Results 2024 LIVE: ಹೆಚ್​ಡಿ ಕುಮಾರಸ್ವಾಮಿಗೆ 2,82,704 ಮತಗಳಿಂದ ಗೆಲುವು

  ಮಂಡ್ಯದಲ್ಲಿ ಅಂತಿಮ‌ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಹೆಚ್​ಡಿ ಕುಮಾರಸ್ವಾಮಿ 8,47,482 ಮತಗಳನ್ನು ಪಡೆದುಕೊಂಡಿದ್ದು, ಸ್ಟಾರ್ ಚಂದ್ರು- 5,64,778 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 2,82,704 ಮತಗಳಿಂದ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಅಂಚೆ ಮತ್ತು ಸೇವಾ ಮತಗಳ ಫಲಿತಾಂಶ ಬಾಕಿ ಇದೆ.

 • 04 Jun 2024 03:08 PM (IST)

  Karnataka Lok Sabha Election Results 2024 LIVE: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ

  ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದಿದ್ದು, ಬಿಜೆಪಿ ಅಭ್ಯರ್ಥಿ ಕಾರಜೋಳಗೆ 47958 ಮತಗಳಿಂದ ಜಯಶಾಲಿಯಾಗಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಗೆ ಸೋಲಾಗಿದೆ. ಗೋವಿಂದ ಕಾರಜೋಳಗೆ 681217 ಮತ, ಬಿ.ಎನ್.ಚಂದ್ರಪ್ಪಗೆ 634152 ಮತ ಪಡೆದುಕೊಂಡಿದ್ದಾರೆ.

 • 04 Jun 2024 02:24 PM (IST)

  Karnataka Lok Sabha Election Results 2024 LIVE: ಮೊದಲ ಬಾರಿ ಸ್ಪರ್ಧಿಸಿ ಗೆದ್ದು ಬೀಗಿದ ಡಾ ಮಂಜುನಾಥ್

  ಡಾ. ಸಿ ಎನ್ ಮಂಜುನಾಥ್ ಪ್ರಥಮ ಬಾರಿಗೆ ಸ್ಪರ್ಧಿಸಿ ಡಿಕೆ ಸುರೇಶ್​ ಅವರನ್ನು ಸೋಲಿಸಿದ್ದಾರೆ. ಮಂಜುನಾಥ್ ಅವರು 9,80,833 ಮತಗಳಿಸಿದ್ದು ಡಿಕೆ ಸುರೇಶ್ 7,50,886 ಮತ ಪಡೆದಿದ್ದಾರೆ. ಮೂಲಕ ಬಿಜೆಪಿ ಅಭ್ಯರ್ಥಿ 2,29,947 ಅಂತರದಲ್ಲಿ ಗೆದ್ದಿದ್ದಾರೆ.

 • 04 Jun 2024 01:30 PM (IST)

  Karnataka Lok Sabha Election Results 2024 LIVE: ಬಾಗಲಕೋಟೆ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ

  ಬಾಗಲಕೋಟೆ ಲೋಕಸಭಾ ‌ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಿದ್ದಾರೆ.

 • 04 Jun 2024 01:28 PM (IST)

  Karnataka Lok Sabha Election Results 2024 LIVE: ಬೀದರ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಭರ್ಜರಿ ಗೆಲುವು

  ಬೀದರ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಭರ್ಜರಿ ಗೆಲುವು. 1 ಲಕ್ಷ 25 ಸಾವಿರ ಅಧಿಕ ಮತಗಳಿಂದ ಕೇಂದ್ರ ಸಚಿವ ಭಗವಂತ ‌ಖೂಬಾ ವಿರುದ್ಧ ಸಾಗರ್ ಖಂಡ್ರೆ ಗೆದ್ದು ಬೀಗಿದ್ದಾರೆ. 26 ವರ್ಷದ ಸಾಗರ್ ಖಂಡ್ರೆ ದೇಶದ ಅತಿ ಚಿಕ್ಕ ಸಂಸದನಾಗಿ ಆಯ್ಕೆ ಆಗಿದ್ದಾರೆ. 2 ವರ್ಷ ಸಂಸದರಾಗಿ ಕೇಂದ್ರ ‌ಸಚಿವರಾಗಿದ್ದ ಖೂಬಾಗೆ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗಿದೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಮೊಮ್ಮಗ, ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ.

 • 04 Jun 2024 01:23 PM (IST)

  Karnataka Lok Sabha Election Results 2024 LIVE: ಐದನೇ ಬಾರಿಗೆ ಗೆದ್ದು ದಾಖಲೆ ಬರೆದ ಪ್ರಹ್ಲಾದ್ ಜೋಶಿ

  ಧಾರವಾಡ ಕ್ಷೇತ್ರದಲ್ಲೇ ಸತತ ಐದನೇ ಬಾರಿಗೆ ಗೆದ್ದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ದಾಖಲೆ ಬರೆದಿದ್ದಾರೆ. ಇದುವರೆಗೆ ನಾಲ್ಕು ಬಾರಿ ಮಾತ್ರ ಸತತವಾಗಿ ಗೆದ್ದಿದ್ದ ಉದಾಹರಣೆ ಇತ್ತು. ಆದ್ರೆ ಈಗ ಹೊಸ ದಾಖಲೆ ಬರೆದಿದ್ದಾರೆ. 80 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿರುದ್ಧ ಜಯಭೇರಿ ಭಾರಿಸಿದ್ದಾರೆ.

 • 04 Jun 2024 01:18 PM (IST)

  Karnataka Lok Sabha Election Results 2024 LIVE: ಆಸ್ಟ್ರೇಲಿಯಾದಲ್ಲೂ TV9 ಮೂಲಕ ರಿಸಲ್ಟ್ ವೀಕ್ಷಿಸಿದ ಕನ್ನಡಿಗರು

  ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಇಡೀ ವಿಶ್ವರ ಚಿತ್ತ ಭಾರತದತ್ತ ಇದೆ. ಆಸ್ಟ್ರೇಲಿಯಾದಲ್ಲೂ TV9 ಮೂಲಕ ಕನ್ನಡಿಗರು ಲೋಕಸಭಾ ಚುನಾವಣೆಯ ಫಲಿತಾಂಶ ವೀಕ್ಷಿಸಿದ್ದಾರೆ.

 • 04 Jun 2024 01:12 PM (IST)

  Karnataka Lok Sabha Election Results 2024 LIVE: NDAಗೆ ಕಡಿಮೆ ಸ್ಥಾನ, ಹೃದಯಾಘಾತದಿಂದ ವ್ಯಕ್ತಿ ಸಾವು

  ಲೋಕಸಭಾ ಚುನಾವಣೆಯಲ್ಲಿ NDAಗೆ ಕಡಿಮೆ ಸ್ಥಾನ ಹಿನ್ನೆಲೆ ಫಲಿತಾಂಶ ನೋಡಿ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ ಹಿರೇಮಠ ಎಂಬ ವ್ಯಕ್ತಿ ಮೃತ ದುರ್ದೈವಿ. ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದ ಶಿವಪ್ರಕಾಶ್, ಮನೆಯಲ್ಲಿ ಟಿವಿ ನೋಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

 • 04 Jun 2024 01:09 PM (IST)

  Karnataka Lok Sabha Election Results 2024 LIVE: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಗೆಲುವು

  ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 6ನೇ ಸಲ ಬಿಜೆಪಿ ಕಮಾಲ್ ಅರಳಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆಲವು ಸಾಧಿಸಿದ್ದಾರೆ. ವಲಸಿಗ ಎನ್ನುವ ಹಣೆಪಟ್ಟಿ ಇದ್ರು ಗೆದ್ದು ಬೀಗಿದ್ದಾರೆ. ಉತ್ತರ ಕರ್ನಾಟಕದ ಏಕೈಕ ಮಹಿಳಾ ಸಂಸದೆ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಿಸಿ ಜಗದೀಶ ಶೆಟ್ಟರ್​ಗೆ ವರಿಷ್ಠರು ಮಣೆ ಹಾಕಿದ್ದರು. ಕಾಂಗ್ರೆಸ್ ಪಕ್ಷ ಶೆಟ್ಟರ್ ವಿರುದ್ಧ ಮನೆ ಮಗ, ವಲಸಿಗ ಎನ್ನು ಅಸ್ತ್ರ ಪ್ರಯೋಗಿಸಿತ್ತು. ಜಗದೀಶ್ ಶೆಟ್ಟರ್ ಅಡ್ರಸ್ ಕೇಳಿದ್ದ ಹೆಬ್ಬಾಳ್ಕರ್ ಗೆ ಮುಖಭಂಗವಾಗಿದೆ. ಲಿಂಗಾಯತ, ಮರಾಠ ಮತದಾರರು ಮತ್ತೊಮ್ಮೆ ಬಿಜೆಪಿ ಕೈ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಭದ್ರಕೋಟೆ ಮತ್ತಷ್ಟು ಬೀಗಿಯಾಗಿದೆ.

 • 04 Jun 2024 01:05 PM (IST)

  Karnataka Lok Sabha Election Results 2024 LIVE: ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿಗೆ ಜಯಭೇರಿ

  ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಜಯಭೇರಿ ಭಾರಿಸಿದ್ದಾರೆ. 45,000 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಗೆಲುವಿನ ನಂತರ ಮಾತನಾಡಿದ ರಾಜಶೇಖರ್, ಎಲ್ಲಾ ಮುಖಂಡರು ಸೇರಿ ನನಗೆ ಟಿಕೆಟ್ ಕೊಡಿಸಿದ್ದರು. ನನ್ನ ಪರವಾಗಿ ಕೆಲಸ ಮಾಡಿ ಗೆಲ್ಲಿಸಿದ್ದಾರೆ. ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇನೆ. ಬಿಜೆಪಿ ಹವಾ ಇದೆ ಅಂತ ಎಲ್ಲಾರು ಹೇಳ್ತಿದ್ದರು. ಆದರೆ ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇನೆ ಎಂದು ತಿಳಿಸಿದ್ದಾರೆ.

 • 04 Jun 2024 01:02 PM (IST)

  Karnataka Lok Sabha Election Results 2024 LIVE: ಗೆಲುವಿನ ಮುನ್ಸೂಚನೆ ಸಿಗುತ್ತಿದ್ದಂತೆ ಜೋಶಿ ಟೆಂಪಲ್ ರನ್

  ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರಿಗೆ ಗೆಲುವಿನ ಮುನ್ಸೂಚನೆ ಸಿಗುತ್ತಿದ್ದಂತೆ ಟೆಂಪಲ್ ರನ್​ ಶುರು ಮಾಡಿದ್ದಾರೆ. ಧಾರವಾಡದ ನುಗ್ಗಿಕೇರಿ ಹುನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪ್ರಹ್ಲಾದ್ ಜೋಶಿಗೆ ಶಾಸಕ ಮಹೇಶ್ ತೆಂಗಿನಕಾಯಿ, ಮಾಜಿ ಶಾಸಕ ಅಮೃತ ದೇಸಾಯಿ ಸೇರಿ ಹಲವರು ಸಾಥ್​ ನೀಡಿದ್ದಾರೆ.

 • 04 Jun 2024 01:00 PM (IST)

  Karnataka Lok Sabha Election Results 2024 LIVE: ಮಂಡ್ಯ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸುವೆ-ಹೆಚ್​ಡಿಕೆ

  ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ಹಿನ್ನೆಲೆ ಹೆಚ್​ಡಿ ಕುಮಾರಸ್ವಾಮಿ ಅವರು ಬೆಂಗಳೂರು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮಂಡ್ಯ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸುವೆ. ಮೈತ್ರಿ ಅಭ್ಯರ್ಥಿಗಳನ್ನು ಆಶೀರ್ವದಿಸಿದ ಜನತೆಗೆ ಧನ್ಯವಾದ. ಎನ್​​ಡಿಎ ಸರ್ಕಾರದ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಅಪಪ್ರಚಾರದ ನಡುವೆ ಎನ್​ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಮೋದಿ ನೇತೃತ್ವದ ಸರ್ಕಾರ ರಚನೆಗೆ ಬಹುಮತ ಬರಲಿದೆ ಎಂದರು.

 • 04 Jun 2024 12:58 PM (IST)

  Karnataka Lok Sabha Election Results Live: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್​​ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 12:56 PM (IST)

  Karnataka Lok Sabha Election Results 2024 LIVE: ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ -ಸತೀಶ್ ಜಾರಕಿಹೊಳಿ

  ಚಿಕ್ಕೋಡಿಯಲ್ಲಿ ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ ಎಂದು ಟಿವಿ9ಗೆ ಸಚಿವ ಸತೀಶ್ ಜಾರಕಿಹೊಳಿ‌ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಪುತ್ರಿ ಗೆಲ್ತಾರೆ ಅನ್ನೋ ನೀರಿಕ್ಷೆ ಇತ್ತು. ಇನ್ನೇನು ಘೋಷಣೆಯೊಂದೆ ಬಾಕಿ ಇದೆ. ಪುತ್ರಿ ಗೆಲುವಿಗೆ ಗ್ಯಾರಂಟಿಗಳು ಕಾರಣವಾಗಿದೆ. ಬೆಳಗಾವಿಯಲ್ಲಿ ಮತದಾರ ಬಿಜೆಪಿ ಪರ ಇದಾರೆ, ಜನರ ತೀರ್ಪು ಒಪ್ಪ ಬೇಕು. ಎಕ್ಸಿಟ್ ಪೋಲ್ ಕೂಡಾ ಸುಳ್ಳಾಗಿವೆ ಎಂದರು.

 • 04 Jun 2024 12:45 PM (IST)

  Karnataka Lok Sabha Election Results 2024 LIVE: ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲುವು

  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ ತೀವ್ರ ಹಿನ್ನಡೆಯಾಗಿದೆ.

 • 04 Jun 2024 12:43 PM (IST)

  Karnataka Lok Sabha Election Results 2024 LIVE: ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು

  ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು.

 • 04 Jun 2024 12:38 PM (IST)

  Karnataka Lok Sabha Election Results 2024 LIVE: ಎರಡು ದಶಕಗಳ ಬಳಿಕ ಹಾಸನ ಗೆದ್ದ ಕಾಂಗ್ರೆಸ್, ಶ್ರೇಯಸ್ ಪಟೇಲ್​ಗೆ ಗೆಲುವು

  ಹಾಸನದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಎರಡು ದಶಕಗಳ ಬಳಿಕ ಕಾಂಗ್ರೆಸ್ ಸಂಸತ್ ಸ್ಥಾನ ಗೆದ್ದಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿಸುವ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್​ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರು ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ್ದಾರೆ. 1999 ರಲ್ಲಿ ದೇವೇಗೌಡರನ್ನು ಸೋಲಿಸಿದ ಪುಟ್ಟಸ್ವಾಮಿಗೌಡರ ಮೊಮ್ಮಗನಿಂದ ದೇವೇಗೌಡರ ಮೊಮ್ಮಗನಿಗೆ ಸೋಲು.

 • 04 Jun 2024 12:36 PM (IST)

  Karnataka Lok Sabha Election Results 2024 LIVE: ಮಂಡ್ಯ ಕ್ಷೇತ್ರದಲ್ಲಿ ಹೆಚ್​ಡಿಕೆ ಭಾರಿ ಮುನ್ನಡೆ

  ಮಂಡ್ಯ ಕ್ಷೇತ್ರದಲ್ಲಿ ಹೆಚ್​ಡಿ ಕುಮಾರಸ್ವಾಮಿಗೆ ಭಾರಿ ಮುನ್ನಡೆಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ -6,026,85 ಮತ ಪಡೆದಿದ್ದಾರೆ. ಸ್ಟಾರ್ ಚಂದ್ರು 3,81,158 ಮತ ಪಡೆದಿದ್ದು ಹೆಚ್.ಡಿ.ಕುಮಾರಸ್ವಾಮಿ 2,21,527 ಮತಗಳ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 12:26 PM (IST)

  Karnataka Lok Sabha Election Results 2024 LIVE: ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಅರಳಿದ ಕಮಲ, ಕಾಗೇರಿಗೆ ಗೆಲುವು

  ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಗೇರಿ 2,33,205 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 12:23 PM (IST)

  Karnataka Lok Sabha Election Results 2024 LIVE: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ

  ಚಿಕ್ಕಬಳ್ಳಾಪುರದಲ್ಲಿ 80,776 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ -4,19,118, ಕಾಂಗ್ರೆಸ್ ರಕ್ಷಾ ರಾಮಯ್ಯ -3,38,342 ಮತ.

 • 04 Jun 2024 12:04 PM (IST)

  Karnataka Lok Sabha Election Results 2024 LIVE: ಬೆಂಗಳೂರಿನ ಜೆಡಿಎಸ್ ಪಕ್ಷದ​ ಕಚೇರಿ ಬಳಿ ಸಂಭ್ರಮಾಚರಣೆ

  ಬೆಂಗಳೂರಿನ ಜೆಡಿಎಸ್ ಪಕ್ಷದ​ ಕಚೇರಿ ಬಳಿ ಸಂಭ್ರಮಾಚರಣೆ. ಸಿಹಿ ಹಂಚಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು ಡಾ.ಸಿ.ಎನ್.ಮಂಜುನಾಥ್, ಕುಮಾರಸ್ವಾಮಿ ಪರ ಘೋಷಣೆ ಕೂಗಿದ್ದಾರೆ.

 • 04 Jun 2024 11:59 AM (IST)

  Karnataka Lok Sabha Election Results 2024 LIVE: ಕೋಲಾರದಲ್ಲಿ ‌ಜೆಡಿಎಸ್ ಅಭ್ಯರ್ಥಿ ಭರ್ಜರಿ ಗೆಲುವು

  ಕೋಲಾರದಲ್ಲಿ ‌ಜೆಡಿಎಸ್ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಭರ್ಜರಿ ಗೆಲುವು ಸಾಧಿಸಿದ್ದಾರೆ. 45,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.

 • 04 Jun 2024 11:56 AM (IST)

  Karnataka Lok Sabha Election Results 2024 LIVE: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನತ್ತ

  ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ 63,008 ಮತಗಳ ಅಂತರ ಕಾಯ್ದುಕೊಂಡಿದ್ದು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

 • 04 Jun 2024 11:50 AM (IST)

  Karnataka Lok Sabha Election Results 2024 LIVE: ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಮುನ್ನಡೆ

  ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಮಣ್ಣಗೆ ಭರ್ಜರಿ ಮುನ್ನಡೆ. 16ನೇ ಸುತ್ತಿನಲ್ಲಿ 101476 ಮತಗಳ ಅಂತರ ಕಾಯ್ದುಕೊಂಡ ಸೋಮಣ್ಣ.

 • 04 Jun 2024 11:47 AM (IST)

  Karnataka Lok Sabha Election Results 2024 LIVE: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  ಶಿವಮೊಗ್ಗ ಲೋಕಸಭಾ ಕ್ಷೇತ್ರದ 13ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 13ನೇ ಸುತ್ತಿನಲ್ಲಿ ಬಿಜೆಪಿಗೆ ಮುನ್ನೆಡೆ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ – 4,02,905 ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ -2,78,929 ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ – 15,626 ಬಿಜೆಪಿ ಮುನ್ನಡೆ – 1,23,976

 • 04 Jun 2024 11:44 AM (IST)

  Karnataka Lok Sabha Election Results 2024 LIVE: 1 ಲಕ್ಷ ಮತಗಳ ಅಂತರದಿಂದ ಶೋಭಾ ಕರಂದ್ಲಾಜೆ ಮುನ್ನಡೆ

  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ – 3,72,422. ಕಾಂಗ್ರೆಸ್​​ನ ರಾಜೀವ್ ಗೌಡ -2,65,915 ಮತಗಳನ್ನು ಪಡೆದಿದ್ದು ಬಿಜೆಪಿ 1,06,507 ಮತಗಳ ಮುನ್ನಡೆ ಸಾಧಿಸಿದೆ.

 • 04 Jun 2024 11:40 AM (IST)

  Karnataka Lok Sabha Election Results 2024 LIVE: ಶ್ರೀರಾಮುಲುಗೆ ಭಾರೀ ಹಿನ್ನಡೆ

  ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಭಾರೀ ಹಿನ್ನಡೆ. 10ನೇ ಸುತ್ತಿನಲ್ಲೂ ಶ್ರೀರಾಮುಲುಗೆ ಹಿನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ – 5,24,034, ಬಿಜೆಪಿ – 4,45,908

 • 04 Jun 2024 11:38 AM (IST)

  Karnataka Lok Sabha Election Results 2024 LIVE: 396950 ಮತಗಳಿಂದ ಬಿಜೆಪಿ ಅಭ್ಯರ್ಥಿ ಯದುವೀರ್ ಮುನ್ನಡೆ

  ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಯದುವೀರ್ -3,96,950 ಮತ. ಕೈ ಅಭ್ಯರ್ಥಿ ಎಂ.ಲಕ್ಷ್ಮಣ್ -3,10,311 ಮತ

 • 04 Jun 2024 11:36 AM (IST)

  Karnataka Lok Sabha Election Results 2024 LIVE: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

  ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. 7ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 2,96,706 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.ಆರ್ ಪೂಜಾರಿ 2,28,310 ಮತ ಪಡೆದಿದ್ದಾರೆ.

 • 04 Jun 2024 11:29 AM (IST)

  Karnataka Lok Sabha Election Results 2024 LIVE: ಕಾರಜೋಳ ಮುನ್ನಡೆ, ಮತ ಎಣಿಕೆ ಕೇಂದ್ರದಿಂದ ಹೊರಟ ‘ಕೈ’ ಅಭ್ಯರ್ಥಿ ಚಂದ್ರಪ್ಪ

  ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಮುನ್ನಡೆ ಹಿನ್ನೆಲೆ ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ‘ಕೈ’ ಅಭ್ಯರ್ಥಿ. ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿ.ಎನ್.ಚಂದ್ರಪ್ಪ.

 • 04 Jun 2024 11:23 AM (IST)

  Karnataka Lok Sabha Election Results 2024 LIVE: ಡಾ.ಮಂಜುನಾಥ್ ಮುನ್ನಡೆ, ಕಾರ್ಯಕರ್ತರ ಸಂಭ್ರಮ

  ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತ ಹೆಚ್​ಡಿ ದೇವೇಗೌಡ ಅಳಿಯ ಡಾ.‌ಸಿ ಎನ್ ಮಂಜುನಾಥ್ 1,17,879 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮನೆ ಮಾಡಿದೆ.

 • 04 Jun 2024 11:20 AM (IST)

  Karnataka Lok Sabha Election Results 2024 LIVE: ಜನರ ಆರ್ಶೀವಾದದಿಂದ ಈ ಬಾರಿ ಕೂಡ ಗೆಲುವಾಗ್ತಿದೆ -ತೇಜಸ್ವಿ ಸೂರ್ಯ

  ದಕ್ಷಿಣ ಕ್ಷೇತ್ರದ ಜನರ ಆರ್ಶೀವಾದದಿಂದ ಈ ಬಾರಿ ಕೂಡ ಗೆಲುವಾಗ್ತಿದೆ. ತೇಜಸ್ವಿ ಸೂರ್ಯ ಮತ್ತೆ ಸಂಸದ ಆಗಬೇಕು ಅಂತಾ ಆರ್ಶೀವಾದ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸ್ತೀನೆ. ಮೊದಲಬಾರಿ ಗೆದ್ದಾಗ ಒಂದು ಲೆಟರ್ ಹೆಡ್ ಮಾಡೋದಕ್ಕೂ ಬರ್ತಿರಲಿಲ್ಲ. ಈ 5 ವರ್ಷ ಸಾಕಷ್ಟು ಕಲಿತಿದ್ದೇನೆ. ಇಡೀ ರಾಜ್ಯದ ಮತದಾರರು ಬಿಜೆಪಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ. 290 ಕ್ಷೇತ್ರದಲ್ಲಿ ಅಂತರದ ಡಿಫ್ರೆನ್ಸ್ ಇದೆ. ಇನ್ನೆರಡು ಗಂಟೆಯಲ್ಲಿ ಕ್ಲಿಯರ್ ಪಿಚ್ಚರ್ ಸಿಗುತ್ತೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿಯಾಗ್ತಾರೆ. ಹತ್ತು ವರ್ಷ ಹೇಗಿದ್ರೋ ಹಾಗೇ ಮುಂದುವರಿಸುತ್ತಾರೆ. ಒಂದು ವರ್ಷದ ಹಿಂದೆ ಸರ್ಕಾರ ಅಧಿಕಾರಕ್ಕೆ ಬಂದ್ರು ಕಾಂಗ್ರೆಸ್ ಕುಗ್ಗಿದೆ. ಒಂದೇ ವರ್ಷದಲ್ಲಿ ಜನಪ್ರಿಯತೆ ಕುಗ್ಗಿರೋದು ಅವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

 • 04 Jun 2024 11:04 AM (IST)

  Karnataka Lok Sabha Election Results 2024 LIVE: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ BJP 19, ಕಾಂಗ್ರೆಸ್​ಗೆ 9 ಸ್ಥಾನ

  ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ BJP 19, ಕಾಂಗ್ರೆಸ್​ 9, ಜೆಡಿಎಸ್ 2 ಸ್ಥಾನಗಳ ಮುನ್ನಡೆಯಲ್ಲಿದೆ.

 • 04 Jun 2024 11:02 AM (IST)

  Karnataka Lok Sabha Election Results 2024 LIVE: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ

  ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್​ ಅಭ್ಯರ್ಥಿ ಇ.ತುಕಾರಾಂಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಹಿನ್ನಡೆ

 • 04 Jun 2024 10:53 AM (IST)

  Karnataka Lok Sabha Election Results 2024 LIVE: ಕನಕಪುರದಲ್ಲಿ 6ನೇ ಸುತ್ತಿಗೆ ಕೇವಲ 4,390 ಲೀಡ್ ಪಡೆದ ಡಿ.ಕೆ. ಸುರೇಶ್

  ಕನಕಪುರದಲ್ಲಿ 6ನೇ ಸುತ್ತಿಗೆ ಕೇವಲ 4,390 ಲೀಡ್ ಪಡೆದ ಡಿ.ಕೆ. ಸುರೇಶ್. ಕನಕಪುರ ಹೊರತು ಪಡಿಸಿ ಬಹುತೇಕ ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್​ಗೆ ಹಿನ್ನಡೆಯಾಗಿದೆ.

 • 04 Jun 2024 10:49 AM (IST)

  Karnataka Lok Sabha Election Results 2024 LIVE: ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್​ಗೆ ಮುನ್ನಡೆ

  ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯ 16ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್ 155,626 ಮತ ಪಡೆದ್ರೆ, ಬಿಜೆಪಿ ಅಭ್ಯರ್ಥಿ 1,33,122 ಮತ ಪಡೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮನ್ಸೂಲ್ ಅಲಿ ಖಾನ್ 22,504 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 10:47 AM (IST)

  Karnataka Lok Sabha Election Results 2024 LIVE: ಕಾಂಗ್ರೆಸ್​ಗೆ ಹಿನ್ನಡೆ, ಡಿಕೆ ಶಿವಕುಮಾರ್ ನಿವಾಸಕ್ಕೆ ಸುರೇಶ್

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ಗೆ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ನಿವಾಸಕ್ಕೆ ಡಿಕೆ ಸುರೇಶ್ ಭೇಟಿ ನೀಡಿ ಚರ್ಚೆ ಮಾಡಿದ್ದಾರೆ.

 • 04 Jun 2024 10:44 AM (IST)

  Karnataka Lok Sabha Election Results 2024 LIVE: ಮಂಡ್ಯದತ್ತ ಪ್ರಯಾಣ ಬೆಳೆಸಿದ ಹೆಚ್​ಡಿ ಕುಮಾರಸ್ವಾಮಿ

  ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್​ಗೆ ಭಾರಿ ಮುನ್ನಡೆ ಹಿನ್ನೆಲೆ ಮಾಜಿ ಸಿಎಂ ಹೆಚ್​ಡಿಕೆ ಕೆಲವೇ ಹೊತ್ತಿನಲ್ಲಿ ಮಂಡ್ಯಕ್ಕೆ ತೆರಳಲಿದ್ದಾರೆ. ತಂದೆ, ತಾಯಿ ಆಶೀರ್ವಾದ ಪಡೆದು ಮಂಡ್ಯಕ್ಕೆ ತೆರಳಲಿದ್ದಾರೆ.

 • 04 Jun 2024 10:41 AM (IST)

  Karnataka Lok Sabha Election Results 2024 LIVE: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕೋಟ ಶ್ರೀನಿವಾಸ್ ಪೂಜಾರಿಗೆ ಒಂದು ಲಕ್ಷ ಮತಗಳ ಮುನ್ನಡೆ.

 • 04 Jun 2024 10:40 AM (IST)

  Karnataka Lok Sabha Election Results 2024 LIVE: ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

  ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಂಡಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್‌ ಮತ ಕೇಂದ್ರದಿಂದ ಹೊರಗೆ ತೆರಳಿದ್ದಾರೆ. ನಿರಂತರ 6 ಸುತ್ತುಗಳಲ್ಲಿ ಜಗದೀಶ್ ಶೆಟ್ಟರ್​ಗೆ ಮುನ್ನಡೆಯಾಗಿದೆ.

 • 04 Jun 2024 10:38 AM (IST)

  Karnataka Lok Sabha Election Results 2024 LIVE: ಪ್ರಜ್ವಲ್ ರೇವಣ್ಣಗೆ ಮುನ್ನಡೆ

  ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ 4028 ಮತಗಳ ಮುನ್ನಡೆಯಾಗಿದೆ. ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌ಗೆ ಹಿನ್ನಡೆ.

 • 04 Jun 2024 10:34 AM (IST)

  Karnataka Lok Sabha Election Results 2024 LIVE: ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ

  ಚಿಕ್ಕೋಡಿಯಲ್ಲಿ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಭರ್ಜರಿ ಮುನ್ನೆಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 47880 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಪ್ರಿಯಾಂಕಾ‌ ಜಾರಕಿಹೊಳಿ : 277513 ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ : 229633 ಒಟ್ಟು 22 ಸುತ್ತುಗಳು 14 ಸುತ್ತುಗಳ ಮತ ಎಣಿಕೆ ಬಾಕಿ

 • 04 Jun 2024 10:31 AM (IST)

  Karnataka Lok Sabha Election Results 2024 LIVE: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಮುನ್ನಡೆ

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಮುನ್ನಡೆ. 4ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ. ಬ್ರಿಜೇಶ್‌ ಚೌಟಗೆ 22 ಸಾವಿರ ಮತಗಳ ಮುನ್ನಡೆ. ಕಾಂಗ್ರೆಸ್‌ನ ಪದ್ಮರಾಜ್ ಪೂಜಾರಿಗೆ ಹಿನ್ನಡೆ.

 • 04 Jun 2024 10:29 AM (IST)

  Karnataka Lok Sabha Election Results 2024 LIVE: ಹೆಚ್​.ಡಿ.ಕುಮಾರಸ್ವಾಮಿಗೆ 1,04,000 ಮತಗಳ ಮುನ್ನಡೆ

  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಭಾರಿ ಮುನ್ನಡೆಯಾಗಿದೆ. ಜೆಡಿಎಸ್ ಅಭ್ಯರ್ಥಿ ಹೆಚ್​.ಡಿ.ಕುಮಾರಸ್ವಾಮಿ -2,42,805 ಮತಗಳು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು- 1,43,694 ಮತಗಳು ಹೆಚ್​ಡಿ ಕುಮಾರಸ್ವಾಮಿ 99,121 ಮತಗಳ ಮುನ್ನಡೆ

 • 04 Jun 2024 10:23 AM (IST)

  Karnataka Lok Sabha Election Results 2024 LIVE: ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಮುನ್ನಡೆ

  ಬೆಂಗಳೂರು ದಕ್ಷಿಣದಲ್ಲಿ ನಾಲ್ಕನೇ ಸುತ್ತಿನಲ್ಲಿಯೂ ತೇಜಸ್ವಿ ಸೂರ್ಯ ಮುನ್ನಡೆ ಸಾಧಿಸಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ತೇಜಸ್ವಿ ಸೂರ್ಯ- 92,840 ಸೌಮ್ಯ ರೆಡ್ಡಿ- 38,914 ಬಿಜೆಪಿ ಮುನ್ನಡೆ- 53,926

 • 04 Jun 2024 10:20 AM (IST)

  Karnataka Lok Sabha Election Results 2024 LIVE: ದಕ್ಷಿಣ ಕನ್ನಡದಲ್ಲಿ ಮೂರನೇ ಸುತ್ತಿನಲ್ಲಿ ಬಿಜೆಪಿಗೆ ಮುನ್ನಡೆ

  ದಕ್ಷಿಣ ಕನ್ನಡದಲ್ಲಿ ಮೂರನೇ ಸುತ್ತಿನಲ್ಲಿ ಬಿಜೆಪಿಗೆ ಮುನ್ನಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ – 1,33,896 ಕಾಂಗ್ರೆಸ್ ಪದ್ಮರಾಜ್ ಆರ್ ಪೂಜಾರಿ – 1,11,312 ಅಂತರ – 22,584 ನೋಟಾ – 4,549

 • 04 Jun 2024 10:17 AM (IST)

  Karnataka Lok Sabha Election Results 2024 LIVE: ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್​ಗೆ ಮುನ್ನಡೆ

  ಬೆಂಗಳೂರು ಕೇಂದ್ರದಲ್ಲಿ ಪರಿಸ್ಥಿತಿ ಬದಲಾಗಿದ್ದು ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ 90,699 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ 92,807 ಮತಗಳನ್ನು ಪಡೆದಿದ್ದು 2,108 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

 • 04 Jun 2024 10:14 AM (IST)

  Karnataka Lok Sabha Election Results 2024 LIVE: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲ ಬಿಜೆಪಿಗೆ 20, ಕಾಂಗ್ರೆಸ್​ಗೆ 5 ಸ್ಥಾನ

  ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-20, ಕಾಂಗ್ರೆಸ್​-5 ಮತ್ತು ಜೆಡಿಎಸ್ -3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

 • 04 Jun 2024 10:09 AM (IST)

  Karnataka Lok Sabha Election Results 2024 LIVE: ಚಿತ್ರದುರ್ಗದಲ್ಲಿ 6ನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ಬಿಜೆಪಿ

  ಚಿತ್ರದುರ್ಗದಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 18945 ಮತಗಳ ಮುನ್ನಡೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ -2,05,643 ಮತ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 1,86,698 ಮತ

 • 04 Jun 2024 10:06 AM (IST)

  Karnataka Lok Sabha Election Results 2024 LIVE: ಒಂಬತ್ತನೇ ಸುತ್ತಲ್ಲೂ ಮುನ್ನಡೆ ಸಾಧಿಸಿದ ಡಾ.ಮಂಜುನಾಥ್

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಒಂಭತ್ತನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿ ಮುನ್ನಡೆ ಸಾಧಿಸಿದೆ. ಡಾ.‌ಸಿ.ಎನ್. ಮಂಜುನಾಥ್ 58,560‌ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

  ಬಿಜೆಪಿ-ಡಾ.ಸಿ.ಎನ್. ಮಂಜುನಾಥ್ -1,80,959. ಕಾಂಗ್ರೆಸ್-ಡಿ.ಕೆ. ಸುರೇಶ್ 1,22,399. ಬಿಜೆಪಿ ಮತಗಳ ಮುನ್ನಡೆ 58,560

 • 04 Jun 2024 10:02 AM (IST)

  Karnataka Lok Sabha Election Results 2024 LIVE: ಮತ ಎಣಿಕೆ ವೇಳೆ ಮತ ಎಣಿಕಾ ಅಧಿಕಾರಿ ಅಸ್ವಸ್ಥ

  ಮತ ಎಣಿಕೆ ವೇಳೆ ಮತ ಎಣಿಕಾ ಅಧಿಕಾರಿ ಅಸ್ವಸ್ಥಗೊಂಡಿದ್ದಾರೆ. ವಿಜಯಪುರದ ಆದಿಲ್ ಶಾಹಿ ಸದನದಲ್ಲಿ ಕೌಂಟಿಂಗ್ ಸುಪರ್ ವೈಸರ್ ಆಗಿ ನೇಮಕಗೊಂಡಿದ್ದ ಅಧಿಕಾರಿ ಸಿದ್ದರಾಜ ದೊಡ್ಡಮನಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಸದ್ಯ ಪ್ರಾಥಮಿಕ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಸೈನಿಕ ಶಾಲೆಯ ಆವರಣದಲ್ಲೇ ಸ್ಥಾಪಿಸಲಾಗಿರುವ ಆಸ್ಪತ್ರೆಗೆ ರವಾನಿಸಲಾಗಿದೆ.

 • 04 Jun 2024 09:59 AM (IST)

  Karnataka Lok Sabha Election Results 2024 LIVE: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಯದುವೀರ್​ಗೆ 1,64,337 ಮತಗಳು ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 128,870 ಮತಗಳನ್ನು ಪಡೆದಿದ್ದು ಯದುವೀರ್ 35467 ಮತಗಳ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 09:54 AM (IST)

  Karnataka Lok Sabha Election Results 2024 LIVE: ಡಿಕೆ‌ ಸುರೇಶ್ ಭಾರಿ ಹಿನ್ನಡೆ, ಕನಕಪುರದಲ್ಲಿ ಖಾಕಿ ಕಟ್ಟೆಚ್ಚರ

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು 141,752 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ 91,286 ಮತಗಳನ್ನು ಪಡೆದಿದ್ದು 50,466 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಡಿಕೆ‌ ಸುರೇಶ್ ಭಾರಿ ಹಿನ್ನಡೆ ಹಿನ್ನೆಲೆ ಕನಕಪುರದಲ್ಲಿ ಖಾಕಿ ಕಟ್ಟೆಚ್ಚರ.

 • 04 Jun 2024 09:49 AM (IST)

  Karnataka Lok Sabha Election Results 2024 LIVE: ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಬಳಿ ಭದ್ರತೆ

  ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಬಳಿ ಹೆಚ್ಚಿನ ಭದ್ರತೆಗಾಗಿ 2 KSRPF ತುಕಡಿ ನಿಯೋಜನೆ ಮಾಡಲಾಗಿದೆ. ಎರಡೂ ಕಡೆಯ ರಸ್ತೆ ಬಂದ್ ಮಾಡಿ ಪೊಲೀಸರು ಭದ್ರತೆ ನೀಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

 • 04 Jun 2024 09:46 AM (IST)

  Karnataka Lok Sabha Election Results 2024 LIVE: ಬೆಂಗಳೂರು ಗ್ರಾ.ಕ್ಷೇತ್ರದಲ್ಲಿ ಡಾ.ಮಂಜುನಾಥ್​​ಗೆ ಮುನ್ನಡೆ

  ಬೆಂಗಳೂರು ಗ್ರಾ.ಕ್ಷೇತ್ರದಲ್ಲಿ ಡಾ.ಮಂಜುನಾಥ್​​ಗೆ ಮುನ್ನಡೆಯಾಗಿದೆ. 81,572 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​ಗೆ​ ಹಿನ್ನಡೆಯಾಗಿದೆ. 52,363 ಮತ ಪಡೆದಿದ್ದಾರೆ.

 • 04 Jun 2024 09:29 AM (IST)

  Karnataka Lok Sabha Election Results 2024 LIVE: ಕೊಪ್ಪಳ ಕ್ಷೇತ್ರದಲ್ಲಿ 2ನೇ ಹಂತದಲ್ಲಿ ಕಾಂಗ್ರೆಸ್​ಗೆ ಮುನ್ನಡೆ

  ಕೊಪ್ಪಳ ಕ್ಷೇತ್ರದಲ್ಲಿ 2ನೇ ಹಂತದಲ್ಲಿ ಕಾಂಗ್ರೆಸ್​ಗೆ ಮುನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಎರಡನೇ ಹಂತದಲ್ಲಿ 2 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಕೆ.ಬಸವರಾಜ್​ಗೆ ಹಿನ್ನಡೆಯಾಗಿದೆ.

 • 04 Jun 2024 09:27 AM (IST)

  Karnataka Lok Sabha Election Results 2024 LIVE: ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ. ಯದುವೀರ ಒಡೆಯರ್​ಗೆ 12072 ಮತಗಳ ಮುನ್ನಡೆ. ಯದುವೀರ 70855 ಮತ, ಎಂ.ಲಕ್ಷ್ಮಣ 58783 ಮತ

 • 04 Jun 2024 09:26 AM (IST)

  Karnataka Lok Sabha Election Results 2024 LIVE: ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಮುನ್ನಡೆ

  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ 27,993 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ 25010 ಮತಗಳನ್ನು ಗಳಿಸಿದ್ದಾರೆ. 2,983 ಮತಗಳಿಂದ ಬಿಜೆಪಿ ಮುನ್ನಡೆ.

 • 04 Jun 2024 09:20 AM (IST)

  Karnataka Lok Sabha Election Results 2024 LIVE: ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

  ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ. ಬಿಜೆಪಿ ಅಭ್ಯರ್ಥಿ ಕಾಗೇರಿ 42,156 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ 34042 ಮತಗಳನ್ನು ಪಡೆದಿದ್ದಾರೆ.

 • 04 Jun 2024 09:17 AM (IST)

  Karnataka Lok Sabha Election Results 2024 LIVE: 50 ಸಾವಿರ ಮತ ಪಡೆದು ಡಾ.‌ಸಿ ಎನ್ ಮಂಜುನಾಥ್ ಮುನ್ನಡೆ

  50 ಸಾವಿರ ಮತ ಪಡೆದು ಬಿಜೆಪಿ ಅಭ್ಯರ್ಥಿ ಡಾ.‌ಸಿ ಎನ್ ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ. 11,434 ‌ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​ಗೆ ಹಿನ್ನಡೆ.

 • 04 Jun 2024 09:15 AM (IST)

  Karnataka Lok Sabha Election Results 2024 LIVE: ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಯದುವೀರ್ ಒಡೆಯರ್​ಗೆ 7008 ಮತಗಳ ಮುನ್ನಡೆ. ಯದುವೀರ್ 58596 ಮತ, ಎಂ.ಲಕ್ಷ್ಮಣ 51588 ಮತ.

 • 04 Jun 2024 09:13 AM (IST)

  Karnataka Lok Sabha Election Results 2024 LIVE: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

  ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು 8,624 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೆಗೌಡ ಅವರು 7,474 ಮತಗಳನ್ನು ಪಡೆದಿದ್ದಾರೆ.

 • 04 Jun 2024 09:09 AM (IST)

  Karnataka Lok Sabha Election Results 2024 LIVE: ಬೆಂಗಳೂರು ಉತ್ತರ ಶೋಭ ಕರಂದ್ಲಾಜೆ ಮುನ್ನಡೆ

  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಅವರು ಮುನ್ನಡೆ ಸಾಧಿಸಿದ್ದಾರೆ. ಶೋಭ ಕರಂದ್ಲಾಜೆ 13,538 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ 6521 ಮತ ಪಡೆದಿದ್ದು ಶೋಭ ಕರಂದ್ಲಾಜೆ 7007 ಮತಗಳ ಅಂತರ ಕಾಯ್ದಿರಿಸಿದ್ದಾರೆ.

 • 04 Jun 2024 09:06 AM (IST)

  Karnataka Lok Sabha Election Results 2024 LIVE: ಡಾ.ಮಂಜುನಾಥ್‌ಗೆ 26000 ಮತಗಳ ಮುನ್ನಡೆ

  ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ. ಡಿಕೆ ಸುರೇಶ್ ವಿರುದ್ಧ 26000 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.

 • 04 Jun 2024 09:01 AM (IST)

  Karnataka Lok Sabha Election Results 2024 LIVE: ಬಳ್ಳಾರಿ, ಕಲಬುರಗಿಯಲ್ಲಿ ಬಿಜೆಪಿ ಮುನ್ನಡೆ

  ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮುನ್ನಡೆಗಳಿಸಿದ್ದಾರೆ. ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆಯಾಗಿದೆ. ಡಾ.ಉಮೇಶ್ ಜಾಧವ್​​ಗೆ​​ 1110 ಮತಗಳ ಮುನ್ನಡೆಯಾಗಿದೆ.

 • 04 Jun 2024 08:56 AM (IST)

  Karnataka Lok Sabha Election Results 2024 LIVE: ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರಗೆ ಮುನ್ನಡೆ

  ಶಿವಮೊಗ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ 15 ಸಾವಿರ ಮತಗಳ‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

 • 04 Jun 2024 08:51 AM (IST)

  Karnataka Lok Sabha Election Results 2024 LIVE: ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಕೈ- ಕಮಲ ನಡುವೆ ಬಿಗ್ ಫೈಟ್

  ಚಾಮರಾಜನಗರ ಲೋಕಸಭಾ ಅಖಾಡಕ್ಕೆ ಒಳಪಡುವ ವರುಣ ಕ್ಷೇತ್ರದಲ್ಲಿ ಕೈ- ಕಮಲ ನಡುವೆ ಬಿಗ್ ಫೈಟ್. NDAನ ಬಾಲರಾಜು- 2192 ಮತಗಳು ಪಡೆದಿದ್ದು ಕಾಂಗ್ರೆಸ್​ನ ಸುನಿಲ್ ಬೋಸ್​ 3528 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವೆ ಸಿಎಂ ಕ್ಷೇತ್ರದಲ್ಲಿ ತಿಕ್ಕಾಟ ಜೋರಾಗಿದೆ.

 • 04 Jun 2024 08:49 AM (IST)

  Karnataka Lok Sabha Election Results 2024 LIVE: ಚಿತ್ರದುರ್ಗದಲ್ಲಿ ಕಾಂಗ್ರೆಸ್​ಗೆ ಮುನ್ನಡೆ

  ಚಿತ್ರದುರ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 13029 ಮತ ಬಂದಿದೆ. ಹಾಗೂ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 11474 ಮತ ಸಿಕ್ಕಿದ್ದು 1555 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

 • 04 Jun 2024 08:44 AM (IST)

  Karnataka Lok Sabha Election Results 2024 LIVE: ಮತ ಎಣಿಕೆ ಕೇಂದ್ರಕ್ಕೆ ಪಿ.ಸಿ.ಮೋಹನ್ ಆಗಮನ

  ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಆಗಮಿಸಿದ್ದು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ. ಮೂರು ಬಾರಿ ಗೆದ್ದು ನಾಲ್ಕನೇ ಬಾರಿ ಕೂಡ ಗೆಲ್ಲುವ ಭರವಸೆ ಇದೆ. ಪ್ರಚಾರಕ್ಕೆ ತೆರಳಿದ್ದಾಗ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ದೇಶಕ್ಕೆ ಮೋದಿ ಭರವಸೆ, ಬೆಂಗಳೂರು ಸೆಂಟ್ರಲ್ ಗೆ ನಾನು. ಕಾಂಗ್ರೆಸ್ ಗ್ಯಾರಂಟಿ ಭರವಸೆ ಮುಂದೆ ಮೋದಿ ಅಲೆ ಹೆಚ್ಚಾಗಿದೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಅಂತರದ ಗೆಲುವಿನ ಬಗ್ಗೆ ಕಾದು ನೋಡಿ ಎಂದಿದ್ದಾರೆ.

 • 04 Jun 2024 08:40 AM (IST)

  Karnataka Lok Sabha Election Results 2024 LIVE: ರಾಜ್ಯ ಬಿಜೆಪಿ ಕಚೇರಿಯಲ್ಲಿ ಹೆಚ್ಚಿದ ಸಂಭ್ರಮ

  ರಾಜ್ಯ ಬಿಜೆಪಿ ಕಚೇರಿಯಲ್ಲಿ ಹೆಚ್ಚಿದ ಸಂಭ್ರಮ. ಅಂಚೆ ಮತ್ತು ಇವಿಎಮ್ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಸಂಭ್ರಮ ಹೆಚ್ಚಾಗಿದೆ. ಕಾರ್ಯಕರ್ತರ ಚಪ್ಪಾಳೆ ಹಾಕಿ ಸಂಭ್ರಮಿಸಿದ್ದಾರೆ. ಅದ್ರಲ್ಲೂ ಡಾ ಮಂಜುನಾಥ್ ಮುನ್ನಡೆ ಬರ್ತಿದ್ದಂತೆ ಹರ್ಷೋದ್ಘಾರ ಜೋರಾಗಿದೆ.

 • 04 Jun 2024 08:29 AM (IST)

  Karnataka Lok Sabha Election Results 2024 LIVE: ಹೆಚ್​ಡಿ ಕುಮಾರಸ್ವಾಮಿ ಟೆಂಪಲ್ ರನ್

  ಇಂದು ಲೋಕಸಭಾ ಕ್ಷೇತ್ರದ ಫಲಿತಾಂಶ ಹಿನ್ನೆಲೆ ಮಂಡ್ಯ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ ಅವರು ಆದಿ ಚುಂಚನಗಿರಿ ಮಠದಲ್ಲಿ ಗಂಗಾದೇಶ್ವರನಿಗೆ ಪೂಜೆ ಸಲ್ಲಿಸಿ ನಿರ್ಮಾಲನಂದ ಸ್ವಾಮಿಜಿ ಬಳಿ ಆಶೀರ್ವಾದ ಪಡೆದರು.

 • 04 Jun 2024 08:27 AM (IST)

  Karnataka Lok Sabha Election Results 2024 LIVE: ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಸುತ್ತಿನಲ್ಲಿ ಡಿಕೆ ಸುರೇಶ್ ಮುನ್ನಡೆ

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ‌ ಎಣಿಕೆ‌ ಕಾರ್ಯ ಮುಕ್ತಾಯವಾಗಿದ್ದು ಮೊದಲ‌ ಸುತ್ತಿನ ಮತ ಎಣಿಕೆಯಲ್ಲಿ ಡಿ‌ಕೆ‌ ಸುರೇಶ್ ಮುನ್ನಡೆಗಳಿಸಿದ್ದಾರೆ. ಡಾ.ಮಂಜುನಾಥ್ ಅವರಿಗೆ ಹಿನ್ನಡೆಯಾಗಿದೆ.

 • 04 Jun 2024 08:23 AM (IST)

  Karnataka Lok Sabha Election Results 2024 LIVE: ದಕ್ಷಿಣ ಕನ್ನಡ 1ನೇ ಸುತ್ತು ಪೂರ್ಣ

  ದಕ್ಷಿಣ ಕನ್ನಡದಲ್ಲಿ 1ನೇ ಸುತ್ತು ಪೂರ್ಣಗೊಂಡಿದ್ದು ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದು 2,836 ಮತ ಪಡೆದಿದ್ದಾರೆ. ಕಾಂಗ್ರೆಸ್ ಪದ್ಮರಾಜ್ ಆರ್ ಪೂಜಾರಿ 1,379 ಮತ ಪಡೆದಿದ್ದು 1,457 ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಾರೆ.

 • 04 Jun 2024 08:05 AM (IST)

  Lok Sabha Election Results Live: ಕಾರ್ತಿ ಚಿದಂಬರಂ ಕಾರೈಕುಡಿಯ ಕಾಳಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

  ತಮಿಳುನಾಡಿನ ಶಿವಗಂಗೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾರ್ತಿ ಚಿದಂಬರಂ ಅವರು ಶಿವಗಂಗೈ ಜಿಲ್ಲೆಯ ಕಾರೈಕುಡಿಯ ಕಾಳಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

 • 04 Jun 2024 08:04 AM (IST)

  Karnataka Lok Sabha Election Results 2024 LIVE: ಹೆಚ್.ಡಿ.ಕುಮಾರಸ್ವಾಮಿ‌ಗೆ ಆರಂಭಿಕ ಮುನ್ನಡೆ

  ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು ಮಂಡ್ಯ ಲೋಕಸಭಾ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ‌ಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ‌ ಹಿನ್ನಡೆಯಾಗಿದೆ.

 • 04 Jun 2024 08:03 AM (IST)

  Lok Sabha Election Results Live: ಅಂಚೆ ಮತ ಎಣಿಕೆ ಶುರು

  ಮೊದಲನೆಯದಾಗಿ ಅಂಚೆ ಮತ ಎಣಿಕೆ ಮಾಡಲಾಗುತ್ತಿದೆ.

 • 04 Jun 2024 08:02 AM (IST)

  Karnataka Lok Sabha Election Results 2024 LIVE: ಅಂಚೆ ಮತದಾನದಲ್ಲಿ ಬೆಂಗಳೂರು ಕೇಂದ್ರ ಬಿಜೆಪಿ ಅಭ್ಯರ್ಥಿ ಮುನ್ನಡೆ

  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ಅಂಚೆ ಮತದಾನದಲ್ಲಿ ಮುನ್ನಡೆಯಲ್ಲಿದ್ದಾರೆ. ಪ್ರಾರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ.

 • 04 Jun 2024 08:02 AM (IST)

  Lok Sabha Election Results Live: ಮತ ಎಣಿಕೆ ಆರಂಭ

  ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬ ಚಿತ್ರಣ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

 • 04 Jun 2024 08:00 AM (IST)

  Karnataka Lok Sabha Election Results 2024 LIVE: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್

  ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದೆ. ಕ್ಷೇತ್ರದ ADO ಹರೀಶ್ ಕುಮಾರ್ ರಿಂದ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.

 • 04 Jun 2024 07:53 AM (IST)

  Karnataka Lok Sabha Election Results 2024 LIVE: ಮತ‌ಎಣಿಕಾ‌ ಕೆಂದ್ರದಲ್ಲಿ ಟಿವಿ9 ವೀಕ್ಷಣೆ

  ರಾಮನಗರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತ ಎಣಿಕಾ ಕೇಂದ್ರದಲ್ಲಿ ಟಿವಿ9 ವೀಕ್ಷಣೆ.

 • 04 Jun 2024 07:52 AM (IST)

  Lok Sabha Election Results Live: ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ

  ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

 • 04 Jun 2024 07:51 AM (IST)

  Karnataka Lok Sabha Election Results 2024 LIVE: ತುಮಕೂರಿನಲ್ಲಿ ಅಂಚೆ ಮತ ಎಣಿಕೆ ಆರಂಭ

  ತುಮಕೂರಿನಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ. ತುಮಕೂರು ವಿವಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಮಾಡಲಾಗುತ್ತಿದೆ.

 • 04 Jun 2024 07:49 AM (IST)

  Karnataka Lok Sabha Election Results 2024 LIVE: ಸ್ಟ್ರಾಂಗ್ ರೂಮ್ ಕೀಯನ್ನ ಮನೆಯಲ್ಲಿ ಬಿಟ್ಟು ಬಂದ ಅಧಿಕಾರಿ

  ವಿಜಯಪುರದಲ್ಲಿ ಸ್ಟ್ರಾಂಗ್ ರೂಮ್ ಕೀಯನ್ನು ಮನೆಯಲ್ಲೇ ಬಿಟ್ಟು ಅಧಿಕಾರಿ ಯಡವಟ್ಟು ಮಾಡಿದ ಘಟನೆ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಸ್ಟ್ರಾಂಗ್ ರೂಮ್ ಕೀಯನ್ನು ಮನೆಯಲ್ಲೇ ಬಿಟ್ಟಿದ್ದು ಮತ್ತೆ ಕೀರಲು ಮನೆಗೆ ಓಡಿದ್ದಾರೆ.

 • 04 Jun 2024 07:24 AM (IST)

  Lok Sabha Election Results Live: ಮಧ್ಯಪ್ರದೇಶದಲ್ಲಿ ತೆರೆದ ಸ್ಟ್ರಾಂಗ್​ ರೂಂ

  ಮಧ್ಯಪ್ರದೇಶದಲ್ಲಿ ಸ್ಟ್ರಾಂಗ್​ ರೂಂ ಓಪನ್​ ಆಗಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ.

 • 04 Jun 2024 07:21 AM (IST)

  Karnataka Lok Sabha Election Results 2024 LIVE: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್

  ಚುನಾವಣಾ ಅಧಿಕಾರಿಗಳು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭವಿಷ್ಯ ಅಡಗಿರುವ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದು ಸುರತ್ಕಲ್ ಎನ್‌ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. 8 ಗಂಟೆಗೆ ಮತ ಎಣಿಕೆ ಆರಂಭ. ಏಜೆಂಟ್​ಗಳಿಗೆ ಸ್ಮಾರ್ಟ್ ವಾಚ್ ಹಾಕಿ ಒಳ ಹೋಗಲು ನಿರ್ಬಂಧ.

  Lok Sabha Election

 • 04 Jun 2024 07:18 AM (IST)

  Karnataka Lok Sabha Election Results 2024 LIVE: ಚುನಾವಣಾಧಿಕಾರಿ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ಓಪನ್

  ಬೆಂಗಳೂರಿನಲ್ಲಿ ಬಹುತೇಕ ಸ್ಟ್ರಾಂಗ್ ರೂಮ್​ಗಳು ಓಪನ್ ಆಗಿವೆ.

 • 04 Jun 2024 07:02 AM (IST)

  Karnataka Lok Sabha Election Results 2024 LIVE: ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್

  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭವಿಷ್ಯ ಅಡಗಿರುವ ಬೊಮ್ಮನಹಳ್ಳಿ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದೆ. ಏಜೆಂಟ್, ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದ್ದು ಕೌಂಟಿಂಗ್ ಹಾಲ್​ಗೆ ಇವಿಎಂ ರವಾನಿಸಲಾಗುತ್ತಿದೆ.

 • 04 Jun 2024 07:01 AM (IST)

  Lok Sabha Election Results Live: ಜಮ್ಮವಿನ ಮತಎಣಿಕೆ ಕೇಂದ್ರಕ್ಕೆ ಜಿತೇಂದ್ರ ಆಗಮನ

  ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಜಿತೇಂದ್ರ ಜಮ್ಮುವಿನ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.

 • 04 Jun 2024 06:58 AM (IST)

  Karnataka Lok Sabha Election Results 2024 LIVE: ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರಗಳ ಲೆಕ್ಕಾಚಾರ ಹೀಗಿದೆ

  ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ ಕರ್ನಾಟಕದ ಕ್ಷೇತ್ರಗಳೆಂದರೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ. ಈ ಹೈವೋಲ್ಟೇಜ್ ಕ್ಷೇತ್ರಗಳ ಲೆಕ್ಕಾಚಾರ ಹೀಗಿದೆ.

 • 04 Jun 2024 06:55 AM (IST)

  Karnataka Lok Sabha Election Results 2024 LIVE: ದೆಹಲಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆಗೆ ತಯಾರಿ

  ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಬಿಜೆಪಿ ಕಛೇರಿಗಳಲ್ಲಿ ಸಿಹಿ ತಂದು ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

 • 04 Jun 2024 06:51 AM (IST)

  Karnataka Lok Sabha Election Results 2024 LIVE: ಲೋಕಸಭಾ ಚುನಾವಣೆ ಫಲಿತಾಂಶ ನೋಡೋದು ಹೇಗೆ?

  ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್​ನಲ್ಲಿ ಮತ ಎಣಿಕೆಯ ಫಲಿತಾಂಶಗಳನ್ನು ನೋಡಬಹುದು. ಇವುಗಳು https://results.eci.gov.in/ ನಲ್ಲಿ ಮತ್ತು iOS ಮತ್ತು Android ಮೊಬೈಲ್​ಗಳಿಗೆ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.

  Lok Sabha Election Results: ಇಂದು ಲೋಕಸಭಾ ಚುನಾವಣೆ ಮತ ಎಣಿಕೆ; ಫಲಿತಾಂಶ ನೋಡೋದು ಹೇಗೆ?

 • 04 Jun 2024 06:48 AM (IST)

  Karnataka Lok Sabha Election Results 2024 LIVE: ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಟ್ರಾಂಗ್ ರೂಮ್ ಓಪನ್

  ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದೆ. 18 ಕೊಠಡಿಯಲ್ಲಿ 168 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಬಿಜೆಪಿಯಿಂದ ಡಾ.ಮಂಜುನಾಥ್, ಕಾಂಗ್ರೆಸ್ ನಿಂದ ಡಿಕೆ ಸುರೇಶ್ ಕಣದಲ್ಲಿದ್ದಾರೆ. ಮೊದಲಿಗೆ ಅಂಚೆ ಮತಗಳ ಎಣಿಕೆ.

 • 04 Jun 2024 06:41 AM (IST)

  Karnataka Lok Sabha Election Results 2024 LIVE: ದೇಶಾದ್ಯಂತ 64.2 ಕೋಟಿ ಜನರಿಂದ ಮತದಾನ

  2024ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 64.2 ಕೋಟಿ ಜನರು ಮತದಾನ ಮಾಡಿದ್ದು, ಅತಿ ಹೆಚ್ಚು ಮತದಾನದ ಮೂಲಕ ಭಾರತ ವಿಶ್ವದಾಖಲೆ ನಿರ್ಮಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು, 33 ಕೋಟಿ ಪುರುಷರಿಂದ ಒಟ್ಟು 64.2 ಕೋಟಿ ಮತದಾನ ನಡೆದಿದೆ. ಮತದಾನ ಏಳು ಹಂತಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ68 ಸಾವಿರ ಮೇಲ್ವಿಚಾರಣಾ ತಂಡಗಳು, 1.5 ಕೋಟಿ ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆ.

 • 04 Jun 2024 06:38 AM (IST)

  Karnataka Lok Sabha Election Results 2024 LIVE: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭ

  ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗ್ಗೆ 7:30ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಆಗಲಿದ್ದು 8:00 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 29 ಎಣಿಕೆ ಕೇಂದ್ರಗಳಲ್ಲಿ ಸಿದ್ಧತೆ ಪೂರ್ಣಗೊಂಡಿde. 13,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯದ 474 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

 • 04 Jun 2024 06:32 AM (IST)

  Karnataka Lok Sabha Election Results 2024 LIVE: ಬಸವರಾಜ ಬೊಮ್ಮಾಯಿ ಭವಿಷ್ಯ ಬರೆದಿರುವ ಮತದಾರ

  ಹಾವೇರಿ ಕ್ಷೇತ್ರದಿಂದ ಬೊಮ್ಮಾಯಿ ಸ್ಪರ್ಧಿಸಿದ್ರೂ ಅವರಿಗೆ ಕಾಂಗ್ರೆಸ್‌ನ ಆನಂದ ಗಡ್ಡದೇವರಮಠ ತೀವ್ರ ಸ್ಪರ್ಧೆ ಒಡ್ಡಿದಾರೆ. ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿಗಾಗಿ ಸೆಣೆಸಿದಾರೆ. ಕೇಂದ್ರದ ಯೋಜನೆಗಳು ಮತ್ತು ಮೋದಿ ನಾಮದ ಪ್ರಭಾವಳಿ ನೆಚ್ಚಿದ್ದಾರೆ ಬೊಮ್ಮಾಯಿ. ಆದರೆ, ಕಾಂಗ್ರೆಸ್‌ನ ಅಹಿಂದ ಮತಗಳು ಮತ್ತು ಗ್ಯಾರಂಟಿಯಿಂದಾಗಿ ಮಹಿಳೆಯರ ಬಲ ಕಾಂಗ್ರೆಸ್‌ಗೆ ಸಿಕ್ರೆ ತಾನು ಗೆಲ್ಲುವ ಉತ್ಸಾಹ ತೋರಿದ್ದಾರೆ ಆನಂದ ಗಡ್ಡದೇವರಮಠ.

 • 04 Jun 2024 06:32 AM (IST)

  Karnataka Lok Sabha Election Results 2024 LIVE: ಚಿಕ್ಕಬಳ್ಳಾಪುರದಲ್ಲಿ ಸಿದ್ದು ಶಿಷ್ಯಂದಿರ ಮಧ್ಯೆ ದೊಡ್ಡ ಕದನ

  ರಾಜ್ಯದ ಆರೋಗ್ಯ ಮಂತ್ರಿಯಾಗಿದ್ದ ಡಾ. ಕೆ ಸುಧಾಕರ್ ಹಾಗೂ ರಾಜ್ಯ ಕಾಂಗ್ರೆಸ್ ಯುವ ನಾಯಕ ರಕ್ಷಾ ರಾಮಯ್ಯ ನಡುವಿನ ಸ್ಪರ್ಧೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸೋಲು ಕಂಡಿದ್ದ ಸುಧಾಕರ್ ಭವಿಷ್ಯವನ್ನ ಈ ಚುನಾವಣೆ ನಿರ್ಧರಿಸಲಿದೆ. ಪ್ರದೀಪ್ ಈಶ್ವರ್ ಸೇರಿ ಜಿಲ್ಲಾ ಕೈ ನಾಯಕರೆಲ್ಲ ಬಿಜೆಪಿ ಅಭ್ಯರ್ಥಿ ಸುಧಾಕರ್‌ ವಿರುದ್ಧ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮೈತ್ರಿಯಿಂದ ಬಿಜೆಪಿಗೆ ಬಲ ಅನ್ನೋ ವಾತಾವರಣವಿದ್ರೂ ಯಲಹಂಕ ವಿಧಾನಸಭಾ ಕ್ಷೇತ್ರವೇ ನಿರ್ಣಾಯಕವಾಗಲಿದೆ ಅನ್ನೋ ಮಾತು ಕೇಳಿ ಬರ್ತಿವೆ.

 • 04 Jun 2024 06:31 AM (IST)

  Karnataka Lok Sabha Election Results 2024 LIVE: ಮೈಸೂರಿನಲ್ಲಿ ಲಕ್ಷ್ಮಣನಿಗಿಂತ ಸಿದ್ದ‘ರಾಮ'ನಿಗೇ ಸವಾಲು

  ರಾಜವಂಶಸ್ಥ ಯದುವೀರ್ ಒಡೆಯರ್, ಬಿಜೆಪಿ ಅಭ್ಯರ್ಥಿಯಾಗಿರುವುದಕ್ಕಾಗಿ ಮೈಸೂರು-ಕೊಡಗು ಲೋಕ ಕ್ಷೇತ್ರ ಈ ಬಾರಿ ಗಮನ ಸೆಳೆದಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಎಂ ಲಕ್ಷ್ಮಣ್ ಕಣದಲ್ಲಿದ್ದಾರೆ. ಒಕ್ಕಲಿಗ ಅಭ್ಯರ್ಥಿಗೇ ಕಾಂಗ್ರೆಸ್‌ ಮಣೆಹಾಕಲು ಕಾರಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ ಸಮುದಾಯದ ಮತದಾರರಿದ್ದಾರೆ. ಆದರೆ, ಹಾಲಿ ಸಂಸದ ಪ್ರತಾಪ ಸಿಂಹಗೆ ಟಿಕೆಟ್‌ ಮಿಸ್‌ ಆಗಿ ರಾಜಮನೆತನದ ಯದುವೀರ್‌ಗೆ ಮಣೆ ಹಾಕಿದ್ರಿಂದ ಈ ಕ್ಷೇತ್ರ ಹೆಚ್ಚು ಚರ್ಚೆಯಲ್ಲಿದೆ.

 • 04 Jun 2024 06:30 AM (IST)

  Karnataka Lok Sabha Election Results 2024 LIVE: ಸೀನಿಯರ್‌-ಜ್ಯೂ. ಖರ್ಗೆ ಪ್ರತಿಷ್ಠೆ.. MP ಡಾ. ಉಮೇಶ್‌ಗೆ ಉತ್ಸಾಹ

  ಗುಲಬರ್ಗಾ ಲೋಕಸಭಾ ಅಖಾಡ ಈ ಸಾರಿ ಮತ್ತೊಮ್ಮೆ ರಾಜ್ಯದ ಜನರನ್ನ ಗಮನ ಸೆಳೆದಿದೆ. ಕಳೆದ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಮಲ್ಲಕಾರ್ಜುನ್‌ ಖರ್ಗೆ ಅವರನ್ನೇ ಸೋಲಿಸಿದ್ದ ಬಿಜೆಪಿಯ ಡಾ. ಉಮೇಶ್‌ ಜಾಧವ್‌ ಈ ಸಾರಿ ಮತ್ತೆ ಅದಷ್ಟ ಪರೀಕ್ಷೆಗಿಳಿದಿದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿಗೆ ಟಿಕೆಟ್‌ ಕೊಡಿಸಿದಾರೆ. ಎಐಸಿಸಿ ಅಧ್ಯಕ್ಷ ಸೀನಿಯರ್‌ ಖರ್ಗೆ, ಜ್ಯೂನಿಯರ್‌ ಜಿಲ್ಲಾ ಉಸ್ತುವಾರಿ ಸಚಿವ ಇಬ್ಬರಿಗೂ ಪ್ರತಿಷ್ಠೆಯಾಗಿದ್ದು, ರಾಧಾಕೃಷ್ಣ ದೊಡ್ಡಮನಿ ಗೆಲ್ಲಿಸುವ ಪಣ ತೊಟ್ಟಿದಾರೆ. ಅದರಲ್ಲೂ ಖರ್ಗೆ ಅವರ ಭಾವನಾತ್ಮಕ ಮಾತು ಕಾಂಗ್ರೆಸ್‌ಗೆ ವರವಾದ್ರೂ ಅಚ್ಚರಿ ಇಲ್ಲ. ಆದರೆ, ಉಮೇಶ್ ಜಾಧವ್‌ ಮಾತ್ರ ಮತ್ತೊಮ್ಮೆ ಗೆಲ್ಲುವ ವಿಶ್ವಾಸ ಹೊಂದಿದಾರೆ.

 • 04 Jun 2024 06:29 AM (IST)

  Karnataka Lok Sabha Election Results 2024 LIVE: ಪೇಡೆ ತಿಂತಾರಾ ಜೋಶಿ.. ಅಸೂಟಿಗೆ ಲಾಡ್‌‘ಗಾಡ್‌'!

  ಧಾರವಾಡ ಕ್ಷೇತ್ರದಲ್ಲಿ 2004ರಿಂದಲೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಗೆಲ್ಲುತ್ತಾ ಬಂದಿದಾರೆ. ಆದರೆ, ಈ ಬಾರಿ ಅಹಿಂದ ಯುವ ಮುಖ ವಿನೋದ್‌ ಅಸೂಟಿ ಕಾಂಗ್ರೆಸ್‌ನಿಂದ ಕಣಕ್ಕಳಿದಿದ್ದು, ಜೋಶಿ ಜೋಶ್‌ಗೆ ಒಂದಿಷ್ಟು ಪೆಟ್ಟು ಕೊಟ್ಟಿದಾರೆ. ಕಾಂಗ್ರೆಸ್‌ ಗೆಲ್ಲಿಸಲು ಲಾಡ್‌ ಶಕ್ತಿಮೀರಿ ಪ್ರಯತ್ನಿಸಿದಾರೆ. ಆದರೆ, ಕೇಂದ್ರ ಸಚಿವ ಜೋಶಿ ಮಾತ್ರ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದಾರೆ. 6 ಲಕ್ಷಕ್ಕೂ ಅಧಿಕದಷ್ಟಿರುವ ಲಿಂಗಾಯತ ಮತಬ್ಯಾಂಕ್‌ ಈ ಸಾರಿ ಯಾರ ಪರ ಹೆಚ್ಚು ಒಲವು ತೋರಿದೆಯೋ ಅವರೇ ಗೆಲ್ತಾರೆ.

 • 04 Jun 2024 06:27 AM (IST)

  Karnataka Lok Sabha Election Results 2024 LIVE: ಬೆಳಗಾವಿ ಶೆಟ್ಟರ್‌ ಭವಿಷ್ಯ.. ಲಕ್ಷ್ಮೀ-ಸತೀಶ್‌ ಜುಗಲ್‌ಬಂದಿ ಬಲ

  ಬೆಳಗಾವಿಯಲ್ಲಿ 20ವರ್ಷ ಕಟ್ಟಿದ ಕೋಟೆ ಭೇದಿಸಲು ಕಾಂಗ್ರೆಸ್‌ ನಾಯಕರು ಒಟ್ಟಾಗಿದ್ದರು. ಬಿಜೆಪಿಯ ಜಗದೀಶ್ ಶೆಟ್ಟರ್‌, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್‌ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದಾರೆ. ವೈಯಕ್ತಿಕ ಸಾಮರ್ಥ್ಯಕ್ಕಿಂತ ಪಕ್ಷದ ನಾಯಕರ ವರ್ಚಸ್ಸು, ಪಕ್ಷಗಳ ಕೊಡುಗೆ ಅವಲಂಬಿಸಿದ್ದಾರೆ. ಶೆಟ್ಟರ್‌ ಸಿಎಂ ಆಗಿ, 2 ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. 2014ರಲ್ಲಿ ಲಕ್ಷ್ಮಿ ಹೆಬ್ಬಾಳಕರ್‌, 2021ರ ಬೈ ಎಲೆಕ್ಷನ್‌ನಲ್ಲಿ ಸತೀಶ್‌ ಜಾರಕಿಹೊಳಿ ಇದೇ ಕ್ಷೇತ್ರದಲ್ಲಿ ಸೋತಿದ್ದವರು. ಈಗ ಇಬ್ಬರೂ ಸಚಿವರಾಗಿದ್ದು, ಈ ಬಾರಿ ದುಪ್ಪಟ್ಟು ಶಕ್ತಿಯೊಂದಿಗೆ ಕಾಂಗ್ರೆಸ್‌ ಗೆಲ್ಲಿಸಲು ಹೋರಾಡಿದಾರೆ. ಶಾಸಕ ಲಕ್ಷ್ಮಣ ಸವದಿ ಅವರಿಂದ ಮೃಣಾಲ್‌ಗೆ ಹೆಚ್ಚಿನ ಧೈರ್ಯ. ಶೆಟ್ಟರ್‌ ಅಳಿವು ಉಳಿವನ್ನೇ ಈ ಕ್ಷೇತ್ರದ ಜನರು ಈಗಾಗಲೇ ನಿರ್ಧರಿಸಿದಾರೆ.

 • 04 Jun 2024 06:26 AM (IST)

  Karnataka Lok Sabha Election Results 2024 LIVE: ಬಂಗಾರಪ್ಪ-ಯಡಿಯೂರಪ್ಪ ಫ್ಯಾಮಿಲಿ ಪ್ರತಿಷ್ಠೆ ಮಧ್ಯೆ ಈಶ್ವರಪ್ಪ

  ಶಿವಮೊಗ್ಗದಲ್ಲಿ ಚುವಾವಣೆ ಅಂದ್ರೆ ಮಾಜಿ ಸಿಎಂಗಳಾದ ಯಡಿಯೂರಪ್ಪ-ಎಸ್.ಬಂಗಾರಪ್ಪ ಕುಟುಂಬದ ಮಧ್ಯೆದ ಹೋರಾಟ. ಆದರೆ, ಆ ಚಿತ್ರಣ ಈ ಬಾರಿ ಮಾಜಿ ಸಚಿವ ಈಶ್ವರಪ್ಪ ಬದಲಿಸಿದಾರೆ. ರಾಘವೇಂದ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ, ನಟ ಶಿವರಾಜಕುಮಾರ್‌ ಪತ್ನಿ ಗೀತಾ ಎದುರಾಳಿ. 2009ರ ಲೋಕ ಚುನಾವಣೆ ಬಳಿಕ ಪ್ರತಿ ಚುನಾವಣೆ ಬಿಎಸ್‌ವೈ-ಬಂಗಾರಪ್ಪ ಫ್ಯಾಮಿಲಿ ಮಧ್ಯೆ ಹೋರಾಟ ನಡೀತಿದೆ. ಪ್ರತಿ ಬಾರಿಯೂ ಬಂಗಾರಪ್ಪ ಕುಟುಂಬಕ್ಕೆ ಸೋಲಾಗುತ್ತಿದೆ. ಈ ಬಾರಿ ಸಚಿವ ಮಧು ಸಹೋದರಿ ಗೆಲ್ಲಿಸುವ ಪಣತೊಟ್ಟಿದ್ದಾರೆ. ಈಶ್ವರಪ್ಪ ಪಕ್ಷೇತರನಾಗಿ ತೊಡೆ ತಟ್ಟಿದ್ದಾರೆ. 4ನೇ ಬಾರಿ ಸಂಸದನಾಗುವ ಉತ್ಸಾಹದಲ್ಲಿ ರಾಘವೇಂದ್ರ ಇದ್ರೆ, ಹಿಂದಿನ ಚುನಾವಣಾ ಸೇಡು ತೀರಿಸಿಕೊಳ್ಳುವ ಹಂಬಲ ಮಧು ಬಂಗಾರಪ್ಪಗೆ. ಈಶ್ವರಪ್ಪ ಹಿಂದುತ್ವ ತನ್ನ ಕೈಹಿಡಿದಿದೆ ಅಂತಿದಾರೆ.

 • 04 Jun 2024 06:24 AM (IST)

  Karnataka Lok Sabha Election Results 2024 LIVE: ಸಕ್ಕರೆ ನಾಡಿನಲ್ಲಿ ಕುಮಾರಸ್ವಾಮಿಗೆ ಸಿಗುತ್ತಾ ‘ಸಿಹಿ’?

  2019ರ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತಾ ಸ್ಪರ್ಧೆ ಕಾರಣಕ್ಕೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿತ್ತು. ಕಾಂಗ್ರೆಸ್ ಜೆಡಿಎಸ್​ಗೆ ಸೆಡ್ಡು ಹೊಡೆದು ಸ್ವಾಭಿಮಾನದ ಪಣದೊಂದಿಗೆ ಗೆದ್ದು ಸಂಸತ್ ಪ್ರವೇಶಿಸಿದ್ದರು. ಅಂದು ಕುಮಾರಸ್ವಾಮಿ ಪುತ್ರ ನಿಖಿಲ್ ಸುಮಲತಾ ವಿರುದ್ಧ ಸೋತಿದ್ದರು. ಆದ್ರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಣಕ್ಕಿಳಿಯೋ ಮೂಲಕ ಮಂಡ್ಯ ಲೋಕಕಣದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಮಂಡ್ಯ ಕ್ಷೇತ್ರದಿಂದ ಎನ್​​ಡಿಎ ಅಭ್ಯರ್ಥಿಯಾಗಿ ಹೆಚ್​ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

 • 04 Jun 2024 06:23 AM (IST)

  Karnataka Lok Sabha Election Results 2024 LIVE: ಬೆಂಗಳೂರು ಗ್ರಾಮಾಂತರದಲ್ಲಿ ಹ್ಯಾಟ್ರಿಕ್ ಬಾರಿಸ್ತಾರಾ ಡಿ.ಕೆ. ಸುರೇಶ್?

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರೋ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ.ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿಬಿಟ್ಟಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಡಿಕೆ ಸುರೇಶ್ ಕಾಂಗ್ರೆಸ್​​ನಿಂದ ಮೂರನೇ ಬಾರಿಗೆ ಸ್ಪರ್ಧೆ ಮಾಡ್ತಿದ್ದಾರೆ.

 • Published On - Jun 04,2024 6:20 AM

  Follow us
  ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
  ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
  ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
  ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
  ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
  ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
  ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
  ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
  ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
  ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
  ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
  ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
  ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
  ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
  ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
  ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
  ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
  ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
  ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
  ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ