ಲೋಕಸಭಾ ಚುನಾವಣೆ ಪಲಿತಾಂಶ: ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಎನ್ ಡಿಎಗೆ ಮುನ್ನಡೆ ಸಿಕ್ಕಿಲ್ಲ, ಆದರೆ ಮತ್ತೊಮ್ಮೆ ಮೋದಿ ಅನ್ನೋದು ನಿಜವಾಗಿದೆ: ಸಿಟಿ ರವಿ

ಲೋಕಸಭಾ ಚುನಾವಣೆ ಪಲಿತಾಂಶ: ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಎನ್ ಡಿಎಗೆ ಮುನ್ನಡೆ ಸಿಕ್ಕಿಲ್ಲ, ಆದರೆ ಮತ್ತೊಮ್ಮೆ ಮೋದಿ ಅನ್ನೋದು ನಿಜವಾಗಿದೆ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 04, 2024 | 11:53 AM

ಲೋಕಸಭಾ ಚುನಾವಣೆ ಪಲಿತಾಂಶ: 2014 ಮತ್ತು 2019 ರ ಚುನಾವಣೆ ಸಂದರ್ಭದಲ್ಲೂ ಬೆಳಗಿನ 11 ಗಂಟೆ ಹೊತ್ತಿಗೆ ಇದೇ ರೀತಿಯ ವಾತಾವರಣವಿತ್ತು, ಆದರೆ ಮಧ್ಯಾಹ್ನವಾಗುತ್ತಿದಂತೆಯೇ ಎನ್ ಡಿ ಎ ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ಹಿರಿಯ ಬಿಜಿಪಿ ನಾಯಕ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಸಿಟಿ ರವಿ (CT Ravi ) ಮತ್ತೊಮ್ಮೆ ಮೋದಿ (Modi Again) ಎಂದುಕೊಂಡಿದ್ದ ಜನರ ನಿರೀಕ್ಷೆ ನಿಜವಾಗುತ್ತಿದೆ, ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯ ಸ್ಥಾನಗಳಲ್ಲಿ (expected number of seats) ಮುನ್ನಡೆ ಇನ್ನೂ ಲಭ್ಯವಾಗಿಲ್ಲ. 300 ರಿಂದ 350 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಸಂಖ್ಯೆಯಲ್ಲಿ ಕೊಂಚ ಹಿನ್ನಡೆಯಾಗಬಹುದು ಆದರೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವ ಮಾತಿಗೆ ಜನ ಮನ್ನಣೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿದರು. ಅದಾಗ್ಯೂ, ಈಗಲೇ ಯಾವುದನ್ನೂ ನಿರ್ಧಾರಿತವಾಗಿ ಹೇಳಲಾಗಲ್ಲ, ಒಂದು ಗಂಟೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ ಅವರು, 2014 ಮತ್ತು 2019 ರ ಚುನಾವಣೆ ಸಂದರ್ಭದಲ್ಲೂ ಬೆಳಗಿನ 11 ಗಂಟೆ ಹೊತ್ತಿಗೆ ಇದೇ ರೀತಿಯ ವಾತಾವರಣವಿತ್ತು, ಆದರೆ ಮಧ್ಯಾಹ್ನವಾಗುತ್ತಿದಂತೆಯೇ ಎನ್ ಡಿ ಎ ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ಹಿರಿಯ ಬಿಜಿಪಿ ನಾಯಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ: ಯತೀಂದ್ರ ವಿರುದ್ಧ ಸಿಟಿ ರವಿ ಆಕ್ರೋಶ