ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ: ಯತೀಂದ್ರ ವಿರುದ್ಧ ಸಿಟಿ ರವಿ ಆಕ್ರೋಶ

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಕೆಂಡಕಾರಿದ್ದಾರೆ. ಯತೀಂದ್ರ ವಿರುದ್ದ ವಾಗ್ದಾಳಿ ನಡೆಸಿರುವ ರವಿ, ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಂದ ಇನ್ನೇನು ನಿರೀಕ್ಷೆ ಮಾಡಬಹುದು ಎಂಬರ್ಥದಲ್ಲಿ ಟೀಕೆ ಮಾಡಿದ್ದಾರೆ.

ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ: ಯತೀಂದ್ರ ವಿರುದ್ಧ ಸಿಟಿ ರವಿ ಆಕ್ರೋಶ
| Updated By: ಗಣಪತಿ ಶರ್ಮ

Updated on: Mar 29, 2024 | 11:41 AM

ಬೆಂಗಳೂರು, ಮಾರ್ಚ್​ 29: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗೂಂಡಾ, ರೌಡಿ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಮಾಡಿರುವ ಟೀಕೆಗೆ ಬಿಜೆಪಿ ನಾಯಕ ಸಿಟಿ ರವಿ (CT Ravi) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ. ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ಎಂದು ಯತೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1982ರಲ್ಲಿಯೇ ಅಮಿತ್ ಶಾ ಬಿಜೆಪಿಯ ಬೂತ್ ಅಧ್ಯಕ್ಷರಾಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು‌ ಎಂದು ಯತೀಂದ್ರ ವಿರುದ್ಧ ರವಿ ಕೆಂಡಕಾರಿದ್ದಾರೆ.

ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಆ್ಯಕ್ಟ್ ಕೇಸ್ ಹಾಕಿದ್ದರು. ಹಾಗಾದ್ರೆ, ನಾನು ಗೂಂಡಾನಾ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಯತೀಂದ್ರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂಥವರಿಗೆ ಬಡವರ ಕಷ್ಟ ಕಾಣಿಸುತ್ತದೆಯೇ? ಚುನಾವಣೆ ಮುಗಿದ ಮೇಲೆ ಇವರೆಲ್ಲ ಎಲ್ಲಿರುತ್ತಾರೋ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ

ಏನು ಹೇಳಿದ್ದರು ಯತೀಂದ್ರ ಸಿದ್ದರಾಮಯ್ಯ?

ಚಾಮರಾಜನಗರದ ಹನೂರಿನಲ್ಲಿ ಗುರುವಾರ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ಗುಜರಾತ್‌ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರೊಬ್ಬ ‘ಗೂಂಡಾ, ರೌಡಿ’ ಎಂದು ಟೀಕಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಬಿಜೆಪಿ ಅಧಿಕಾರಾವಧಿಯ ಎಲ್ಲ ಹಗರಣಗಳನ್ನು ಬಯಲು ಮಾಡುತ್ತೇವೆ: ಶಿವಕುಮಾರ್
ಬಿಜೆಪಿ ಅಧಿಕಾರಾವಧಿಯ ಎಲ್ಲ ಹಗರಣಗಳನ್ನು ಬಯಲು ಮಾಡುತ್ತೇವೆ: ಶಿವಕುಮಾರ್
ಬಿಜೆಪಿ ಸದಸ್ಯರಿಗೆ ನಿಮ್ಮ ನಾಯಕರ ಮಾತನ್ನಾದರೂ ಕೇಳಿಸಿಕೊಳ್ಳಿ ಎಂದ ಡಿಕೆಶಿ
ಬಿಜೆಪಿ ಸದಸ್ಯರಿಗೆ ನಿಮ್ಮ ನಾಯಕರ ಮಾತನ್ನಾದರೂ ಕೇಳಿಸಿಕೊಳ್ಳಿ ಎಂದ ಡಿಕೆಶಿ
ಸದನ ಪ್ರವೇಶಿಸುವ ಮೊದಲು ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದು ಯಾಕೆ ಗೊತ್ತಾ?
ಸದನ ಪ್ರವೇಶಿಸುವ ಮೊದಲು ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದು ಯಾಕೆ ಗೊತ್ತಾ?
ದೂದ್ ಗಂಗಾ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಕಬ್ಬುಬೆಳೆ ಹಾಳು
ದೂದ್ ಗಂಗಾ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಕಬ್ಬುಬೆಳೆ ಹಾಳು
ಸಿದ್ದರಾಮಯ್ಯ 3.16 ಎಕರೆ ಜಮೀನನ್ನು ದಲಿತನಿಗೆ ವಾಪಸ್ಸು ಮಾಡಲಿ: ಯತ್ನಾಳ್
ಸಿದ್ದರಾಮಯ್ಯ 3.16 ಎಕರೆ ಜಮೀನನ್ನು ದಲಿತನಿಗೆ ವಾಪಸ್ಸು ಮಾಡಲಿ: ಯತ್ನಾಳ್
Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
ಬೇರೆ ಸಿಎಂಗಳ ಅವಧಿಯಲ್ಲಿ ನಡೆದ ಮುಡಾ ಅಕ್ರಮಗಳ ತನಿಖೆಯೂ ನಡೆಯಲಿ: ಯತ್ನಾಳ್
ಬೇರೆ ಸಿಎಂಗಳ ಅವಧಿಯಲ್ಲಿ ನಡೆದ ಮುಡಾ ಅಕ್ರಮಗಳ ತನಿಖೆಯೂ ನಡೆಯಲಿ: ಯತ್ನಾಳ್
‘ಜೈಲಲ್ಲಿ ದರ್ಶನ್ ನನ್ನ ತಬ್ಬಿಕೊಂಡರು’; ಮಾಜಿ ಖೈದಿಯ ಮಾತು
‘ಜೈಲಲ್ಲಿ ದರ್ಶನ್ ನನ್ನ ತಬ್ಬಿಕೊಂಡರು’; ಮಾಜಿ ಖೈದಿಯ ಮಾತು