Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೊಕೇಶನ್ ಪತ್ತೆ!

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೊಕೇಶನ್ ಪತ್ತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2024 | 12:01 PM

ಯತ್ನಾಳ್ ಎಲ್ಲಿದ್ದಾರೆ ಅಂತ ಪತ್ತೆಯಾಗಿದೆ, ಅಸಲಿಗೆ ಅದು ಪತ್ತೆಯಲ್ಲ, ತಮ್ಮ ಲೊಕೇಶನ್ ಅನ್ನು ಖುದ್ದು ಅವರೇ ಶೇರ್ ಮಾಡಿದ್ದಾರೆ! ವಿಜಯಪುರ ನಗರಕ್ಕೆ ಹತ್ತಿರದಲ್ಲಿರುವ ಕಗ್ಗೋಡ ಎಂಬಲ್ಲಿ ಒಂದು ಗೋರಕ್ಷಾ ಕೇಂದ್ರವಿದ್ದು ಶಾಸಕರು ಅಲ್ಲಿದ್ದಾರೆ ಮತ್ತು ಗೋಸೇವೆಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯಪುರ: ಲೋಕಸಭಾ ಚುನಾವಣೆ (Lok Sabha polls) ಘೋಷಣೆಯಾಗಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿ ಪ್ರಚಾರ ಕಾರ್ಯ ರಂಗೇರುತ್ತಿದ್ದರೂ ರಾಜ್ಯದ ಪ್ರಮುಖ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಎಲ್ಲೂ ಕಾಣಿಸದೆ ಹೋಗಿದ್ದು ಕನ್ನಡಿಗರಲ್ಲಿ ಗೊಂದಲ ಮೂಡಿಸಿತ್ತು. ಆದು ಸಹಜವೇ. ಸದಾ ಸುದ್ದಿಯಲ್ಲಿರಬಯಸುವ ರಾಜಕಾರಣಿಯೊಬ್ಬ ಚುನಾವಣೆಯಂಥ ಮಹತ್ವದ ಸಂದರ್ಭದಲ್ಲಿ ನಾಪತ್ತೆಯಾದರೆ (go missing) ಅದು ಹಲವಾರು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗುತ್ತದೆ. ಅಂದಹಾಗೆ, ಯತ್ನಾಳ್ ಎಲ್ಲಿದ್ದಾರೆ ಅಂತ ಪತ್ತೆಯಾಗಿದೆ, ಅಸಲಿಗೆ ಅದು ಪತ್ತೆಯಲ್ಲ, ತಮ್ಮ ಲೊಕೇಶನ್ ಅನ್ನು ಖುದ್ದು ಅವರೇ ಶೇರ್ ಮಾಡಿದ್ದಾರೆ! ವಿಜಯಪುರ ನಗರಕ್ಕೆ ಹತ್ತಿರದಲ್ಲಿರುವ ಕಗ್ಗೋಡ ಎಂಬಲ್ಲಿ ಒಂದು ಗೋರಕ್ಷಾ ಕೇಂದ್ರವಿದ್ದು ಶಾಸಕರು ಅಲ್ಲಿದ್ದಾರೆ ಮತ್ತು ಗೋಸೇವೆಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಬ್ಬ ಕೋಚ್ ನ ಹಾಗೆ ಟೀ ಶರ್ಟ್, ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿರುವ ಅವರು ಕೇಂದ್ರದಲ್ಲಿರುವ ಹಸುಗಳಿಗೆ ಮೇವು ಮತ್ತು ಕ್ಯಾಟಲ್ ಫೀಡ್ ನೀಡುತ್ತಿರುವುದನ್ನು ಮತ್ತು ಅಕಳು ಮತ್ತು ಕರುಗಳ ಮೈಸವರುತ್ತಾ ಅವುಗಳೊಂದಿಗೆ ಮೌನ ಸಂಭಾಷಣೆಯಲ್ಲಿ ತೊಡಗಿರುವುದನ್ನು ಫೋಟೋಗಳಲ್ಲಿ ನೋಡಬಹುದು. ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ವಿಜಯಪುರ ಶಾಸಕ ಸದ್ಯಕ್ಕೆ ಯುದ್ಧವಿರಾಮ ಘೋಷಿಸಿರುವಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸವರಾಜ ಬೊಮ್ಮಾಯಿಯನ್ನು ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ