ದೆಹಲಿ ಮೇ 25: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಮತ್ತು ಯುಎಸ್ ಚುನಾವಣಾ ತಜ್ಞ ಇಯಾನ್ ಬ್ರೆಮ್ಮರ್ ನಂತರ, ರಾಜಕಾರಣಿ ಯೋಗೇಂದ್ರ ಯಾದವ್ (Yogendra Yadav) ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಯೋಗೇಂದ್ರ ಯಾದವ್ ಅವರ ಲೆಕ್ಕಾಚಾರ ಪ್ರಕಾರ ಈ ಬಾರಿ ಕಾಂಗ್ರೆಸ್ 100 ಸ್ಥಾನಗಳನ್ನು ದಾಟಬಹುದು. ಬಿಜೆಪಿ ಗೆಲ್ಲಬಹುದು ಎಂದು ಹೇಳಿರುವ ಪ್ರಶಾಂತ್ ಕಿಶೋರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರಗಳಾಗುತ್ತಿವೆ. ಆದಾಗ್ಯೂ, ಪ್ರಶಾಂತ್ ಕಿಶೋರ್, ಯಾದವ್ ಅವರ ಚುನಾವಣಾ ಲೆಕ್ಕಾಚಾರವನ್ನು ಬೆಂಬಲಿಸಿದ್ದಾರೆ. ಯಾದವ್ ಪ್ರಕಾರ, ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲುತ್ತವೆ. ಅಂದರೆ ಎನ್‌ಡಿಎ ಒಟ್ಟು 275 ಮತ್ತು 305 ಸ್ಥಾನಗಳನ್ನು ಗಳಿಸಬಹುದು.
“ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವರಲ್ಲಿ ವಿಶ್ವಾಸಾರ್ಹ ವ್ಯಕ್ತಿ , ಯೋಗೇಂದ್ರ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯ “ಅಂತಿಮ ಮೌಲ್ಯಮಾಪನ” ಹಂಚಿಕೊಂಡಿದ್ದಾರೆ. ಯೋಗೇಂದ್ರ ಜಿ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಎನ್‌ಡಿಎ ಮಿತ್ರಪಕ್ಷಗಳು 35-45 ಸ್ಥಾನಗಳನ್ನು ಪಡೆಯಬಹುದು.ಅಂದರೆ ಬಿಜೆಪಿ/ಎನ್‌ಡಿಎ 275-305 ಸ್ಥಾನ ಗಳಿಸಬಹುದು. ದೇಶದಲ್ಲಿ ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ. ಈಗಿರುವ ಸರ್ಕಾರದಲ್ಲಿ ಬಿಜೆಪಿ/ಎನ್‌ಡಿಎ 303/323 ಸ್ಥಾನಗಳನ್ನು ಹೊಂದಿದೆ. (ಎನ್‌ಡಿಎ ಭಾಗವಾಗಿ ಶಿವಸೇನಾ 18 ಸ್ಥಾನಗಳನ್ನು ಗೆದ್ದುಕೊಂಡಿದೆ ಆದರೆ ಈಗ ಅವರೊಂದಿಗೆ ಇಲ್ಲ). ಈಗ ಯಾರ ಸರ್ಕಾರ ರಚನೆಯಾಗುತ್ತಿದೆ ಎಂದು ನೀವೇ ನಿರ್ಣಯಿಸಿ. ಯಾರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಜೂನ್ 4 ರಂದು ತಿಳಿಯಲಿದೆ ಎಂದು ಪ್ರಶಾಂತ್ ಕಿಶೋರ್ ಎಕ್ಸ್ ನಲ್ಲಿ ಬರೆದಿದ್ದಾರೆ.
देश में चुनाव और सामाजिक राजनीतिक विषयों की समझ रखने वालों में एक विश्वसनीय चेहरा @_YogendraYadav जी ने 2024 Lok Sabha elections का अपना “फ़ाइनल आकलन” साझा किया है।
योगेन्द्र जी के मुताबिक इन चुनावों में बीजेपी को 240-260 और एनडीए की साथी दलों को 35-45 सीटें मिल सकती हैं। मतलब… pic.twitter.com/B1E3NaBEKa
— Prashant Kishor (@PrashantKishor) May 24, 2024
ಕಾಂಗ್ರೆಸ್ 85 ರಿಂದ 100 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವ ಆಶಯ ಹೊಂದಿರುವ ಇಂಡಿಯಾ ಬ್ಲಾಕ್ 120-135 ಸ್ಥಾನಗಳಿಗೆ ಇಳಿಯುವ ಸಾಧ್ಯತೆಯಿದೆ ಎಂದಿದ್ದಾರೆ ಯೋಗೇಂದ್ರ ಯಾದವ್. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು.
ಕಿಶೋರ್, ಈ ವಾರ ಸಂದರ್ಶನವೊಂದರಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲದ ಕಾರಣ ಬಿಜೆಪಿ ಆರಾಮವಾಗಿ ಬಹುಮತದ ಅಂಕವನ್ನು ದಾಟುತ್ತದೆ ಎಂದು ಹೇಳಿದ್ದರು.
ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕ ಕೋಪದ ಬಗ್ಗೆ ನಾವು ಕೇಳಿಲ್ಲ ಎಂದು ಪ್ರಶಾಂತ್ ಕಿಶೋರ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಏತನ್ಮಧ್ಯೆ ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ ’370 ಸ್ಥಾನ’ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂಡಿಯಾ ಬಣಕ್ಕೆ ನಿರ್ಣಾಯಕ ಜನಾದೇಶ ಸಿಕ್ಕಿದೆ, ಗೆದ್ದ 3 ದಿನಗಳಲ್ಲಿ ಪ್ರಧಾನಿ ಹೆಸರು ಘೋಷಣೆ: ಜೈರಾಮ್ ರಮೇಶ್
ಬಿಜೆಪಿ 295 ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಮೆರಿಕದ ರಾಜಕೀಯ ವಿಜ್ಞಾನಿ ಇಯಾನ್ ಬ್ರೆಮ್ಮರ್ ಅಭಿಪ್ರಾಯ ಪಟ್ಟಿದ್ದಾರೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಲೋಕಸಭಾ ಸ್ಥಾನಗಳನ್ನು ಗೆದ್ದು, ಹಿಂದಿ ಹೃದಯ ರಾಜ್ಯಗಳಲ್ಲಿ ‘ಮೋದಿ ಅಲೆ’ ಸೃಷ್ಟಿಸಿತ್ತು. 370 ಸ್ಥಾನಗಳನ್ನು ಗೆಲ್ಲಬೇಕಾದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ