ಹೈದರಾಬಾದ್ ಮೇ 11:ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತೆಲಂಗಾಣದಲ್ಲಿ (Telangana) ನಾವು 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ದಕ್ಷಿಣ ಭಾರತದಲ್ಲಿ ಬಿಜೆಪಿ (BJP) ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, “ಎನ್‌ಡಿಎ ಮತ್ತು ಬಿಜೆಪಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಭರ್ಜರಿ ಗೆಲುವು ಸಾಧಿಸಲಿದೆ. ಜೂನ್ 4 ರಂದು ಫಲಿತಾಂಶ ಬಂದಾಗ, ದಕ್ಷಿಣ ಭಾರತದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯಾಗಲಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾವು ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದೇವೆ ಎಂದು ಹೇಳಿದ್ದಾರೆ.
“ಲೋಕಸಭಾ ಚುನಾವಣೆಯ 3 ಹಂತಗಳಲ್ಲಿ, ಎನ್‌ಡಿಎ ಸುಮಾರು 200 ಸ್ಥಾನಗಳನ್ನು ತಲುಪಿದೆ. 4 ನೇ ಹಂತವು ಎನ್‌ಡಿಎಗೆ ತುಂಬಾ ಒಳ್ಳೆಯದು. ಈ ಹಂತದಲ್ಲಿ ನಾವು ಗರಿಷ್ಠ ಯಶಸ್ಸನ್ನು ಪಡೆಯುತ್ತೇವೆ. ನಾವು ನಮ್ಮ ಗುರಿಯಾದ ‘400 ಪಾರ್’ (400ಕ್ಕಿಂತ ಹೆಚ್ಚು ಸೀಟು) ಕಡೆಗೆ ಸಾಗುತ್ತೇವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಎನ್‌ಡಿಎ ಮತ್ತು ಬಿಜೆಪಿ ಮುನ್ನಡೆ ಸಾಧಿಸಲಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.ನಾವು ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ.
ಈ ಚುನಾವಣೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ, ಒಂದು ಕಡೆ ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಎನ್‌ಡಿಎ ಮತ್ತೊಂದು ಕಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟವಿದೆ. ಒಂದೆಡೆ ವಿಹಾರಕ್ಕೆಂದು ಬ್ಯಾಂಕಾಕ್, ಥಾಯ್ಲೆಂಡ್ ಗೆ ತೆರಳುವ ರಾಹುಲ್ ಗಾಂಧಿ ಇನ್ನೊಂದೆಡೆ ಮೋದಿ, ದೀಪಾವಳಿಯಂದು ಒಂದು ದಿನ ಬಿಡುವು ಮಾಡಿಕೊಂಡು ಯೋಧರೊಂದಿಗೆ ಹಬ್ಬ ಆಚರಿಸುತ್ತಾರೆ. ಒಂದು ಕಡೆ, ಇಂಡಿಯಾ ಮೈತ್ರಿಕೂಟ ತುಷ್ಟೀಕರಣ ರಾಜಕೀಯ ಮಾಡುತ್ತದೆ. ಮತ್ತೊಂದೆಡೆ, ಎನ್‌ಡಿಎ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತದೆ. ನೀವು ಈ ಎರಡು ಗುಂಪುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ”ಒಂದೆಡೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭ್ರಷ್ಟಾಚಾರ ಮತ್ತು 12 ಲಕ್ಷ ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿದ್ದರೆ, ಇನ್ನೊಂದೆಡೆ 23 ವರ್ಷ ಮುಖ್ಯಮಂತ್ರಿಯಾಗಿದ್ದರೂ, 10 ವರ್ಷ ಪ್ರಧಾನಿಯಾಗಿದ್ದರೂ 25 ಪೈಸೆಯಷ್ಟು ಭ್ರಷ್ಟಾಚಾರದ ಆರೋಪ ಮಾಡದ ನರೇಂದ್ರ ಮೋದಿ. ಬೇಸಿಗೆ ಬಂದ ತಕ್ಷಣ ಕೆಲ ನಾಯಕರು ಥಾಯ್ಲೆಂಡ್, ಬ್ಯಾಂಕಾಕ್ ಗೆ ರಜಾಕಾಲ ಕಳೆಯಲು ಹೋಗುತ್ತಾರೆ. ಇನ್ನೊಂದೆಡೆ ಕಳೆದ 23 ವರ್ಷಗಳಿಂದ ದೀಪಾವಳಿ ದಿನವೂ ರಜೆ ತೆಗೆದುಕೊಳ್ಳದ ನರೇಂದ್ರ ಮೋದಿ, ದೀಪಾವಳಿಯಂದು ಗಡಿಯಲ್ಲಿ ದೇಶವನ್ನು ರಕ್ಷಿಸುವ ಸೈನಿಕರೊಂದಿಗೆ ಆಚರಿಸುತ್ತಾರೆ ಎಂದಿದ್ದಾರೆ.
#WATCH | Vikarabad, Telangana: Union Home Minister addresses a public meeting and says, "This election is divided into two groups. On one side, we have the NDA, which is moving forward under the leadership of Narendra Modi. On the other side, we have the INDI alliance, which is… pic.twitter.com/iG79QzDFIs
— ANI (@ANI) May 11, 2024
ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ರೇವಂತ್ ರೆಡ್ಡಿ ತೆಲಂಗಾಣವನ್ನು ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಮಾಡಿದ್ದಾರೆ, ಪ್ರಧಾನಿ ಮೋದಿ ತೆಲಂಗಾಣದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಕಳುಹಿಸಿದ್ದಾರೆ, ನಿಮ್ಮ ಹಳ್ಳಿಗಳಿಗೆ ಏನಾದರೂ ಸಿಕ್ಕಿದೆಯೇ?” ಎಂದು ಕೇಳಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿದೆ. ಇದು ಸಂವಿಧಾನ ಬಾಹಿರವಾಗಿದೆ. ರಾಜ್ಯದಲ್ಲಿ ನಮಗೆ 10 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಿ. ನಾವು ಮುಸ್ಲಿಮರ ಈ 4 ಶೇಕಡಾ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಮತ್ತು ಅದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ನೀಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ ಖುಷಿಪಡಬೇಕಾಗಿಲ್ಲ, ಮೋದಿಜೀ ಅವರ ಅವಧಿ ಪೂರ್ಣಗೊಳಿಸುತ್ತಾರೆ: ಅಮಿತ್ ಶಾ
ವಿಕಾರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ಅವರಿಗೆ (ಇಂಡಿಯಾ ಮೈತ್ರಿಕೂಟ) ಪ್ರಧಾನಿ ಅಭ್ಯರ್ಥಿ ಇಲ್ಲ, ಅವರ ಪ್ರಧಾನಿ ಯಾರು ಎಂದು ಪತ್ರಕರ್ತರು ಕೇಳಿದಾಗ, ನಮ್ಮ ನಾಯಕರು ಸರದಿಯಂತೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು. ನಾನು ಅವರನ್ನು ಕೇಳಲು ಬಯಸುತ್ತೇನೆ, ಕೋವಿಡ್ ಬಂದರೆ, ಜಿ 20 ರ ಸಮಯದಲ್ಲಿ ದೇಶವನ್ನು ಯಾರು ಮುನ್ನಡೆಸುತ್ತಾರೆ? ಜಗತ್ತಿನ 5ನೇ ದೊಡ್ಡ ಆರ್ಥಿಕತೆ ಯಾರಿಗಾದರೂ ಈ ದೇಶವನ್ನು ಮುಂದೆ ಕೊಂಡೊಯ್ಯಲು ಸಾಧ್ಯವಾದರೆ ಅದು ನಮ್ಮ ನಾಯಕ ನರೇಂದ್ರ ಮೋದಿ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ